ಸುದ್ದಿ

‘ಲೈಫ್ ಬಿಗಿನ್ಸ್ ಅಟ್90’ ಎಂಬ ಮಾತನ್ನು ಸ್ಕೂಬಾ ಡೈವಿಂಗ್ಸ್ ನಲ್ಲಿ ವಿಶ್ವದಾಖಲೆ ಸೃಷ್ಟಿಸಿದ ಅಜ್ಜ..!

22

ಸಾಧನೆ ಮತ್ತು ಸಾಹಸಕ್ಕೆ ವಯೋಮಾನ ಎಂದಿಗೂ ಅಡ್ಡಿಯಲ್ಲ ಎಂಬುದು ಈ ಜಗತ್ತಿನಲ್ಲಿ ಅನೇಕ ಬಾರಿ ಸಾಬೀತಾಗಿದೆ. ವಯೋವೃದ್ದರೊಬ್ಬರು ಈ ಹಿಂದೆ ತಾವೇ ಸೃಷ್ಟಿಸಿದ ವಿಶ್ವ ದಾಖಲೆಯನ್ನು ತಾವೇಮುರಿದು ಗಮನಸೆಳೆದಿದ್ದಾರೆ. ಬನ್ನಿ ಈ ಕಿಲಾಡಿತಾತನನ್ನು ನಾವೀಗ ಭೇಟಿ ಮಾಡೋಣ..

ಎರಡನೇ ವಿಶ್ವ ಯುದ್ಧದ ಮಾಜಿಯೋಧ ಹಾಗೂ 96 ವರ್ಷದ ಸಾಹಸಿವೂಲೇ ತಮ್ಮ ಜನ್ಮದಿನವನ್ನು ವಿಶಿಷ್ಟವಾಗಿ ಆಚರಿಸಿಕೊಂಡರು ಸ್ಕೂಬಾ ಡೈವಿಂಗ್ ಮಾಡಿತಮ್ಮ ವಿಶ್ವ ದಾಖಲೆಯನ್ನು ಈ ವಯೋವೃದ್ದರು ಮುರಿದಿದ್ಧಾರೆ. ವಿಶ್ವದ ಅತ್ಯಂತ ಹಿರಿಯ ಸ್ಕೂಬಾ ಡೈವರ್ ಎಂದೇ ಖ್ಯಾತಿಪಡೆದಿರುವ ಇವರು ಸತತ ಮೂರನೇವರ್ಷ ಈ ಸಾಧನೆ ಮಾಡಿದ್ದಾರೆ.

ಸೈಪ್ರಸ್‍ನ ನೌಕಾ ದುರಂತದ ಸ್ಥಳದಲ್ಲಿ ವೂಲೇ ಸ್ಕೂಬಾ ಡೈವಿಂಗ್ಮಾಡಿದರು. ಇವರು ನೀರಿನಲ್ಲಿ ಮುಳುಗಿದ ಆಳ 15 ಅಂತಸ್ತುಗಳ ಎತ್ತರದ ಕಟ್ಟಡಕ್ಕೆ ಸಮ.ಇವರು ನೀರಿನೊಳಗೆ 42.4 ಮೀಟರ್‍ಗಳಷ್ಟು ಆಳಕ್ಕೆ ಡೈವ್ ಮಾಡಿ ಅಲ್ಲಿ 48 ನಿಮಿಷಗಳಕಾಲ ಇದ್ದರು. ಕಳೆದ ವರ್ಷಈ ಸಾಹಸಿ ಅಜ್ಜ40.6 ಮೀಟರ್‍ಗಳಷ್ಟು ಆಳಕ್ಕೆ ಇಳಿದು44 ನಿಮಿಷಗಳ ಕಾಲ ಈಜಾಡಿದ್ದರು. ನಾನು ಈಗಲೂ ಸದೃಢವಾಗಿದ್ದೇನೆ. ಮುಂದಿನ ವರ್ಷ ಮತ್ತೊಂದು ಹೊಸ ದಾಖಲೆ ನಿರ್ಮಿಸುತ್ತೇನೆ ಎಂದು ವಿಶ್ವಾಸ ತುಂಬಿದ ಮಾತುಗಳಲ್ಲಿ ಹೇಳುತ್ತಿದ್ದಾರೆ.

ಸಾಹಸ ಮತ್ತು ಸಾಧನೆಗೆ ವಯಸ್ಸಿನ ಹಂಗಿಲ್ಲ ಎಂಬುದನ್ನು ಸಾಬೀತು ಮಾಡಿರುವ ಈವಯೋವೃದ್ದರು 2017 ಮತ್ತು 2018ರಲ್ಲಿ ತಾವೇ ನಿರ್ಮಿಸಿದ್ದದಾಖಲೆಗಳನ್ನು ಈಗ ಮತ್ತಷ್ಟು ಉತ್ತಮಪಡಿಸಿಕೊಂಡಿದ್ದಾರೆ.ವಾಯುವ್ಯ ಇಂಗ್ಲೆಂಡ್‍ನ ಪೋರ್ಟ್ ಸನ್‍ಲೈಟ್ ಪ್ರದೇಶದವರಾದ ಈಸದೃಢ ಅಜ್ಜ ಈಗ ಸೈಪ್ರಸ್‍ನಲ್ಲಿ ನೆಲೆಸಿದ್ದಾರೆ. ದ್ವಿತೀಯ ಮಹಾ ಸಂಗ್ರಾಮದಲ್ಲಿ ಇವರು ರೇಡಿಯೋ ಆಪರೇಟರಾಗಿ  ಕಾರ್ಯನಿರ್ವಹಿಸಿದ್ದರು. ವೂಲೀ ಜೀವನ ಸಾಧನೆ ಕುರಿತ ಲೈಫ್ ಬಿಗಿನ್ಸ್ ಅಟ್90 ಎಂಬ ಸಾಕ್ಷ್ಯಚಿತ್ರವು. ಬೊಸ್ನಿಯಾ ಮತ್ತು ಹರ್ಜೆಗೋವಿನಾ ಚಲನಚಿತ್ರೋತ್ವದಲ್ಲಿ ಪ್ರದರ್ಶನವಾಗಲಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ