ಸುದ್ದಿ

ವಾಟ್ಸಾಪ್ ಪ್ರಿಯರಿಗೊಂದು ಶಾಕಿಂಗ್ ನ್ಯೂಸ್…! 2020 ಕ್ಕೆ ಕೊನೆಯಾಗುತ್ತೆ ಈ ಆ್ಯಪ್…!! ಯಾವುದು ಗೊತ್ತೇ,.?

58

ವಾಟ್ಸಾಪ್ ಬಳಕೆದಾರರಿಗೆ ಬಿಗ್ ಶಾಕ್! ಫೇಸ್‌ಬುಕ್ ಒಡೆತನದ ವಾಟ್ಸಾಪ್ ತನ್ನ ಅಪ್ಲಿಕೇಶನ್‌ನಲ್ಲಿ ಬದಲಾವಣೆ ತರುವ ಉದ್ದೇಶ ಹೊಂದಿದ್ದು, ಫೆಬ್ರವರಿ 1, 2020ರ ಬಳಿಕ ಕೆಲ ಮೊಬೈಲ್‌ಗಳಿಗೆ ತನ್ನ ಸೌಲಭ್ಯವನ್ನು ನಿಲ್ಲಿಸಲು ಕಂಪನಿ ತೀರ್ಮಾನಿಸಿದೆ.

ಪ್ರಪಂಚದ ಜನಪ್ರಿಯ ಸಂದೇಶ ರವಾನೆ ಮಾಡುವ ವೇದಿಕೆಗಳಲ್ಲಿ ವಾಟ್ಸಾಪ್ ಹೆಚ್ಚು ಜನಮೆಚ್ಚುಗೆ ಪಡೆದುಕೊಂಡಿದೆ. ಇದೀಗ ವಾಟ್ಸಾಪ್ ಪ್ರಿಯರಿಗೆ ಒಂದ ಕಹಿ ಸುದ್ದಿ ಬಂದಿದ್ದು ಕೆಲ ಮೊಬೈಲ್‌ಗಳಲ್ಲಿ ವಾಟ್ಸಾಪ್ ಸೇವೆ ಬಂದ್ ಆಗಲಿದೆ ಎಂದು ಕೇಳಿ ಬಂದಿದೆ. ಸಾಮಾಜಿಕ ಜಾಲತಾಣದ ದೈತ್ಯ ಮಾದ್ಯಮವಾಗಿ ಬೆಳೆದಿರುವ ವಾಟ್ಸಾಪ್​ ಹೊಸ ವರ್ಷದಿಂದ ತನ್ನ ಕೆಲ ಗ್ರಾಹಕರಿಗೆ ಶಾಕ್​ ನೀಡಲು ಮುಂದಾಗಿದೆ.

ಫೆಬ್ರವರಿ 1, 2020ರ ನಂತರ ಆಂಡ್ರಾಯ್ಡ್ ಆವೃತ್ತಿ 2.3.7 ಮತ್ತು ಅದಕ್ಕಿಂತ ಹಿಂದಿನ ಆವೃತ್ತಿ ಬಳಕೆದಾರರು ಹಾಗೂ ಐಒಎಸ್ 8 ಮತ್ತು ಅದಕ್ಕಿಂತಲೂ ಹಳೆಯ ಆವೃತ್ತಿ ಓಎಸ್ ಬಳಕೆದಾರರು ಬಳಸುತ್ತಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸ್ಆಪ್ ಸೇವೆ ಶೀಘ್ರವೇ ಸ್ಥಗಿತಗೊಳ್ಳುತ್ತಿದೆ.

ದೀರ್ಘಕಾಲದವರೆಗೆ ಹೊಸ ಆಂಡ್ರಾಯ್ಸ್ ಆಪರೇಟಿಂಗ್ ಆವೃತ್ತಿಗೆ ಅಪ್‌ಗ್ರೇಡ್ ಮಾಡದ ಸ್ಮಾರ್ಟ್‌ಫೋನ್ ಬಳಕೆದಾರರಿಗೂ ಹಾಗೂ ಪ್ರಸ್ತುತ ಐಒಎಸ್ 8 ಬಳಸುತ್ತಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸ್ಆಪ್ ತನ್ನ ಕೆಲಸವನ್ನು ನಿಲ್ಲಿಸುತ್ತಿರುವುದಾಗಿ ಘೋಷಿಸಿದ್ದು ಈ ಮೇಲಿನ ಮೊಬೈಲ್‌ಗಳಿಗೆ ಜೂನ್‌ ಅಂತ್ಯದಿಂದ ಸರ್ವಿಸ್‌ ಸ್ಥಗಿತಗೊಳ್ಳುತ್ತದೆ ಎಂದು ವಾಟ್ಸಾಪ್‌ ತನ್ನ ಬ್ಲಾಗ್‌ನಲ್ಲಿ ಬರೆದುಕೊಂಡಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸಿನಿಮಾ

    ನಿಮ್ಮ ಮನೆ ಮನೆಗೆ “ಕಿಲಾಡಿ ಕುಟುಂಬ” ಬರುತ್ತಿದೆ! ಏನು ಅಂತ ಗೊತ್ತಾಗಬೇಕಾದರೆ ಈ ಲೇಖನಿ ಓದಿ……

    ಇತ್ತೀಚೆಗಷ್ಟೇ ಮುಕ್ತಾಯಗೊಂಡ ಕಾಮಿಡಿ ಕಿಲಾಡಿಗಳು ಎಂಬ ಜನಪ್ರಿಯ ಕಾರ್ಯಕ್ರಮದ ಮೂಲಕ ಕನ್ನಡ ನಾಡಿನ ಕಿರುತೆರೆಯಲ್ಲಿ ಹೊಸ ಕ್ರೇಜ್‌ ಹುಟ್ಟಿಸಿದ್ದ ಜೀ ಕನ್ನಡ ವಾಹಿನಿ ಮತ್ತೊಂದು ವಿಶೇಷ ಕಾರ್ಯಕ್ರಮವೊಂದನ್ನು ವೀಕ್ಷಕರ ಮುಂದಿಡುತ್ತಿದೆ

  • ವಿಚಿತ್ರ ಆದರೂ ಸತ್ಯ

    ಈ ಗ್ರಾಮದಲ್ಲಿ, ಮೊದಲು ಮಕ್ಕಳು, ಆಮೇಲೆ ಮದುವೆ..!ತಿಳಿಯಲು ಇದನ್ನು ಓದಿ…

    ಅವಿವಾಹಿತ ಜೋಡಿಯೊಂದು ಮುಂದಿನ ಜೀವನವನ್ನು ಜೊತೆಯಾಗಿ ಕಳೆಯುವ ನಿರ್ಧಾರ ಕೈಗೊಂಡಾಗ ಇಬ್ಬರೂ ಮುಂದಿನ ಜೀವನದ ಸಾಧಕ ಬಾಧಕಗಳ ಬಗ್ಗೆ ಯೋಚಿಸಬೇಕಾಗುತ್ತದೆ. ಯಾವ ಸಮಾಜ ತಮ್ಮನ್ನು ಸ್ವೀಕರಿಸುತ್ತದೆ ಎಂಬುದರಿಂದ ಹಿಡಿದು ಇತರ ಸವಾಲುಗಳನ್ನೂ ಎದುರಿಸಬೇಕಾಗುತ್ತದೆ.

  • ಆರೋಗ್ಯ

    ಬೆಂಡೆಕಾಯಿಯ ಆರೋಗ್ಯಕರ ಪ್ರಯೋಜನಗಳು ಏನೆಂದು ನಿಮಗೆ ಗೊತ್ತೇ? ಓದಿರಿ

    ಇಂಗ್ಲಿಷಿನಲ್ಲಿ ಲೇಡಿಸ್ ಫಿಂಗರ್ ಮತ್ತು ಸ್ಪ್ಯಾನಿಷ್ ಭಾಷೆಯಲ್ಲಿ ಗೂಂಬೊ ಎಂದು ಕರೆಯುತ್ತಾರೆ. ಬೆಂಡೆಯ ಉಗಮಸ್ಥಾನ ಆಫ್ರಿಕಾ ಖಂಡದ ಉಷ್ಣವಲಯವೆಂದು ಸಸ್ಯ ವಿಜ್ಞಾನಿಗಳ ಅಭಿಪ್ರಾಯ. 1216ಕ್ಕಿಂತ ಪೂರ್ವದಲ್ಲಿ ಯೂರೊಪಿಯನ್ನರು ಇದನ್ನು ಬೆಳೆಸುತ್ತಿದ್ದರು. ಅಲ್ಲಂದೀಚೆಗೆ ಇದನ್ನು ಉಷ್ಣವಲಯ ಮತ್ತು ಸಮಶೀತೋಷ್ಣವಲಯಗಳೆರಡರಲ್ಲೂ ಬೆಳೆಸಲಾಗುತ್ತದೆ. ಇದು ಸುಮಾರು 2 ಮೀ. ಎತ್ತರದವರೆಗೆ ಬೆಳೆಯುತ್ತದೆ. ಸಾಮಾನ್ಯವಾಗಿ ಕವಲೊಡೆಯದಿರದ ಉದ್ದನೆಯ ನೀಳವಾದ ಕಾಂಡ ಮತ್ತು ತಾಯಿ ಬೇರು ಸಮೂಹ ಇರುವುವು. ಕಾಂಡದ ಮೇಲೆ ಸಣ್ಣ ರೋಮಗಳಿವೆ. ಕಾಂಡದಲ್ಲಿ ಸರಳವಾದ ಮತ್ತು ಅಂಗೈಯಾಕೃತಿ ಹೋಲುವ ಅನೇಕ ಎಲೆಗಳಿವೆ….

  • ಸುದ್ದಿ

    ಕಾರ್ಖಾನೆಯ ಕ್ಯಾಂಟೀನ್ ಊಟ ತಿಂದು 100ಕ್ಕೂ ಹೆಚ್ಚು ಮಹಿಳಾ ನೌಕರರು ಅಸ್ವಸ್ಥ..!

    ಕಾರ್ಖಾನೆಯ ಕ್ಯಾಂಟೀನ್ ಆಹಾರ ಸೇವಿಸಿದ 100ಕ್ಕೂ ಹೆಚ್ಚು ಮಹಿಳಾ ನೌಕರರು ಹೊಟ್ಟೆ ನೋವು, ವಾಂತಿ, ಬೇಧಿಯಿಂದ ಅಸ್ವಸ್ಥಗೊಂಡು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆ ನಡೆದಿದೆ. ತಾಲ್ಲೂಕಿನ ಕೈಗಾರಿಕಾ ವಸಾಹತು ಪ್ರದೇಶದ ಅಂಚೇಪಾಳ್ಯದ ಬಳಿ ಇರುವ ಇಂಡೋ ಸ್ಪಾನಿಶ್ ಕಾರ್ಖಾನೆಯಲ್ಲಿ ಈ ದುರಂತ ಸಂಭವಿಸಿದೆ. ನೌಕರರಿಗೆ ನಿನ್ನೆ ಮಧ್ಯಾಹ್ನ ಊಟದ ವ್ಯವಸ್ಥೆ ಇದ್ದು ಅನ್ನ ಮತ್ತು ಮೊಳಕೆಕಾಳು ಸಾಂಬಾರ್ ನೀಡಲಾಗಿತ್ತು. ಊಟ ಮುಗಿದ ಕೆಲವು ನಿಮಿಷಗಳ ನಂತರ 40ಕ್ಕೂ ಹೆಚ್ಚು ಮಹಿಳೆಯರು ಹೊಟ್ಟೆ ನೋವೆಂದು ಒದ್ದಾಡಿದ್ದಾರೆ….

  • ಸಿನಿಮಾ

    ವಿಶ್ವದ ಎಲ್ಲಾ ಕನ್ನಡಿಗರಿಗೆ ಮನರಂಜನೆ ನೀಡುತ್ತಿದ್ದ “ಮಜಾ ಟಾಕೀಸ್”ಬಂದ್ ಆಗಲಿದೆಯಾ?ಇದು ನಿಜನಾ?ತಿಳಿಯಲು ಈ ಲೇಖನ ಓದಿ…

    ಮಜಾ ವಿತ್ ಸುಜಾ ಯಶಸ್ಸಿನ ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ, ಲೊಕೇಶ್ ಪ್ರೊಡಕ್ಷನ್ಸ್ ಮೂಲಕ ಮಜಾ ಟಾಕೀಸ್ ಪಯಣ ಶುರುಮಾಡಿದ್ದ ಸೃಜನ್ ಲೋಕೇಶ್ ಇದೀಗ, ನಗುವಿನ ತೆರೆ ಎಳೆಯಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

  • ಆರೋಗ್ಯ

    ಹೆಚ್ಚಾಗಿ ಲಟಿಕೆ ತೆಗೆಯುವ ಅಭ್ಯಾಸ ಇದೆಯಾ, ಹಾಗಾದರೆ ಅಪಾಯ ತಪ್ಪಿದಲ್ಲ.

    ಲಟಿಕೆ ತಗೆಯದ ವ್ಯಕ್ತಿ ಯಾರು ಇಲ್ಲ ಎಂದು ಹೇಳಿದರೆ ತಪ್ಪಾಗಲ್ಲ, ಚಿಕ್ಕ ಮಕ್ಕಳಿಂದ ಹಿಡಿದು ಮುದುಕರ ತನಕ ಲಟಿಕೆ ಎಲ್ಲರೂ ತೆಗೆಯುತ್ತಾರೆ, ಇನ್ನು ಕೆಲವರು ಕೈ ಕಾಲು ಬೆರಳುಗಳ ನೋವಿನಿಂದ ಲಟಿಕೆ ತೆಗೆದರೆ ಇನ್ನು ಕೆಲವರು ಲಟಿಕೆಯ ಶಬ್ದವನ್ನ ಕೇಳಲು ಲಟಿಕೆ ತೆಗೆಯುತ್ತಾರೆ. ಇನ್ನು ಕೆಲವರಿಗೆ ಈ ಲಟಿಕೆ ತೆಗೆಯುವುದು ಒಂದು ತರಾ ಚಟ ಆಗಿದೆ ಎಂದು ಹೇಳಿದರೆ ತಪ್ಪಾಗಲ್ಲ, ಹೌದು ಕೆಲವು ಜನರು ಇಡೀ ಹೊತ್ತು ಕೈ ಮತ್ತು ಕಾಲುಗಳ ಲಟಿಕೆ ತೆಗೆಯುತ್ತಲೇ ಇರುತ್ತಾರೆ ಮತ್ತು…