ಸುದ್ದಿ

ಇನ್ಮುಂದೆ ಫೇಸ್​ಬುಕ್​ ಬಳಕೆ ಮಾಡಲು ಆಧಾರ್ ಕಾರ್ಡ್ ಕಡ್ಡಾಯ,!? ನಕಲಿ ಲೈಕ್, ಕಮೆಂಟ್, ಶೇರ್​ಗೆ ಬರಲಿದೆ ಕುತ್ತು,.!!

33

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆಗಳು ಹೆಚ್ಚುತ್ತಿವೆ. ಒಬ್ಬ ವ್ಯಕ್ತಿ ಎರಡು, ಮೂರು ಫೇಸ್ ಬುಕ್ ಖಾತೆ ಓಪನ್ ಮಾಡಿಕೊಂಡಿದ್ದಾರೆ.  ನಕಲಿ ಫೇಸ್ಬುಕ್​ ಖಾತೆಗಳಿಂದ ಸಾಕಷ್ಟು ವಂಚನೆ ಪ್ರಕರಣಗಳು ಬೆಳಕಿಗೆ ಬಂದಿವೆ. ಇದನ್ನು ತಡೆಯಲು ಫೇಸ್ ಬುಕ್ ಸೇರಿ ಇತರೆ ಸಾಮಾಜಿಕ ಜಾಲತಾಣ ಬಳಕೆದಾರರ ಪ್ರೊಫೈಲ್​ಗೆ ಆಧಾರ್ ಸಂಖ್ಯೆ ಜೋಡಣೆ ಮಾಡಬೇಕು ಎಂದು ಮದ್ರಾಸ್, ಬಾಂಬೆ ಹಾಗೂ ಮಧ್ಯ ಪ್ರದೇಶದ ಹೈಕೋರ್ಟ್​ನಲ್ಲಿ ಸಲ್ಲಿಕೆಯಾಗಿರೋ ಆರ್ಜಿಗಳನ್ನು ಸುಪ್ರೀಂಕೋರ್ಟ್​ಗೆ ವರ್ಗಾಯಿಸಲು ಕೋರಿರುವ ಅರ್ಜಿ ವಿಚಾರಣೆಗೆ ಸರ್ವೋಚ್ಚ ನ್ಯಾಯಾಲಯ ಸಮ್ಮತಿಸಿದೆ.

ಈ ಕಾನೂನನ್ನು ಜಾರಿಗೆ ತರುವುದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಯೋತ್ಪಾದಕರ ಪರ ನಿಲ್ಲುವ ಮತ್ತು ವದಂತಿಗಳನ್ನು ಹಬ್ಬಿಸುವ ಘಟನೆಗಳನ್ನು ತಡೆಯಬಹುದು. ಈ  ಹಿನ್ನೆಲೆಯಲ್ಲಿ ಫೇಸ್ ಬುಕ್ ಗೆ ಬಳಕೆದಾರರ ಆಧಾರ್ ಸಂಖ್ಯೆ ನಮೂದಿಸಬೇಕು. ಆಗ ಇಂಥಹ ಕೃತ್ಯ ನಡೆಸುವವರನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ಅಲ್ಲದೆ, ಸಾಮಾಜಿಕ ಜಾಲತಾಣದ ಮೂಲಕ ರಾಷ್ಟ್ರವಿರೋಧಿ ಮತ್ತು ಸಮಾಜವಿರೋಧಿ ಚಟುವಟಿಕೆಗಳ ನಡೆಯುವುದಕ್ಕೆ ಕಡಿವಾಣ ಹಾಕಲು ಸಾಧ್ಯ ಎಂಬುದು ಅರ್ಜಿದಾರರ ಅಭಿಪ್ರಾಯವಾಗಿದೆ .

ಸಾಮಾಜಿಕ ಜಾಲತಾಣದ ಖಾತೆಗೆ ಆಧಾರ್​ ಲಿಂಕ್​ ಮಾಡುವ ವಿಚಾರಕ್ಕೆ ಸಂಬಂಧಿಸಿ  ಅ.13ರ ಒಳಗೆ ಅಭಿಪ್ರಾಯ ತಿಳಿಸುವಂತೆ ಸುಪ್ರೀಂಕೋರ್ಟ್ ಕೇಂದ್ರಸರ್ಕಾರ, ಗೂಗಲ್​, ಟ್ವಿಟ್ಟರ್, ಯೂಟ್ಯೂಬ್​ಗೆ ​ನಿರ್ದೇಶನ ನೀಡಿದೆ.

ದೀಪಕ್​ ಗುಪ್ತಾ ಹಾಗೂ ಅನಿರುದ್ಧ ಬೋಸ್​ ಅವರನ್ನೊಳಗೊಂಡ ಪೀಠ ಅರ್ಜಿಗಳ ವಿಚಾರಣೆಗೆ ಒಪ್ಪಿಗೆ ಸೂಚಿಸಿದ್ದು. ಈ ವಿಚಾರ ಮದ್ರಾಸ್​ ಹೈಕೋರ್ಟ್​​ನಲ್ಲಿದೆ. ಹೀಗಾಗಿ ನಾವು ವಿಚಾರಣೆ ನಡೆಸುತ್ತೇವೆ. ಆದರೆ ಅಂತಿಮ ತೀರ್ಪನ್ನು ನೀಡುವುದಿಲ್ಲ ಎಂದು ಪೀಠ ನೋಟಿಸ್ ನೀಡಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಲೈಂಗಿಕ ಕಿರುಕಳ ನೀಡುತಿದ್ದ ಕಾಮುಕ ಮಾವನ ಹಿಡಿಯಲು ಸೊಸೆ ಮಾಡಿದ ಚಾಣಾಕ್ಷ ಪ್ಲ್ಯಾನ್…..!

    ತನ್ನ ಸೊಸೆಗೆ ಲೈಂಗಿಕ ಕಿರುಕಳ ನೀಡಿದ ಆರೋಪದ ಮೇಲೆ 50 ವರ್ಷದ ಆಟೋ ಚಾಲಕನನ್ನು ಮುಂಬೈ ವಿಹಾರ್ ಪೊಲೀಸರು ಬಂಧಿಸಿದ್ದಾರೆ.  ಮಾವನಿಂದಲೇ ಶೋಷಣೆ ಆಗುತ್ತಿರುವ ಬಗ್ಗೆ ಮಹಿಳೆ ತನ್ನ ಗಂಡನ ಬಳಿ ಹೇಳಿಕೊಂಡಿದ್ದಳು. ಆದರೆ ಗಂಡ ಆಕೆಯ ಮಾತನ್ನು ನಂಬಿರಲಿಲ್ಲ. ಹಾಗಾಗಿ ಮಹಿಳೆ ಸಾಕ್ಷಿ ಸಮೇತ ಮಾವನನ್ನು ಹಿಡಿದಕೊಡುವ ನಿರ್ಧಾರಕ್ಕೆ ಬಂದಿದ್ದರು. ಅಡುಗೆ ಕೋಣೆಯಲ್ಲಿ ಮೊಬೈಲ್ ಕ್ಯಾಮರಾ ಫಿಕ್ಸ್ ಮಾಡಿದಳು. ಮಾವ ಆಕೆಯ ಮೇಲೆ ಶೋಷಣೆ ಮಾಡಲು ಆಗಮಿಸಿದ.  ಆಕೆ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಬಂದವ ಸೊಸೆಯ…

  • ಸುದ್ದಿ

    ಮದುವೆಯಾದ ಮೊದಲ ರಾತ್ರಿಯ ನಂತರ ಬೆಳಿಗ್ಗೆ ಮನೆ ಬಿಟ್ಟ ವಧು!ಅಸಲಿ ವಿಷಯ ನೀವು ಅಂದುಕೊಂಡ ಹಾಗೆ ಇಲ್ಲ….

    ಮಗಳಿಗೋ ಮಗನಿಗೋ ಮದುವೆ ಮಾಡಬೇಕಾದರೆ ಹಲವಾರು ಕಡೆ ವಿಚಾರಿಸಿ ಎರಡೂ ಕುಟುಂಬಗಳ ಕಡೆ ವಿಚಾರಿಸಿ ಮದುವೆ ಮಾಡುತ್ತಾರೆ. ಹೆಣ್ಣು ಗಂಡು ಚೆನ್ನಾಗಿ ಬಾಳಬೇಕೆಂಬ ಬಯಕೆಯಿಂದ ಹೀಗೆ ಮಾಡುತ್ತಾರೆ. ಆದರೆ ಇಲ್ಲಿ  ಮದುವೆಯೊಂದು ಮುರಿದು ಬಿದ್ದಿದೆ. ಮೊದಲ ರಾತ್ರಿ ಕಣ್ಣೀರಿನಲ್ಲಿ ಕೈತೊಳೆದ ವಧು ಬೆಳಿಗ್ಗೆ ಗಂಡನ ಮನೆ ತೊರೆದಿದ್ದಾಳೆ. ಎರಡು ದಿನ ರೂಮಿನಲ್ಲಿ ಬಂಧಿಯಾಗಿದ್ದ ವರ ಹಾಗೂ ಆತನ ತಂದೆ-ತಾಯಿ ಈಗ ಆಸ್ಪತ್ರೆ ಸೇರಿದ್ದಾರೆ. ಜನವರಿ 22ರಂದು ಧೀರಜ್ ಮದುವೆ ತನು ಜೊತೆ ನಡೆದಿತ್ತು. ಜನವರಿ 23ರಂದು ತನು ಗಂಡನ…

  • ಸ್ಪೂರ್ತಿ

    ಐಎಎಸ್ ಅಧಿಕಾರಿ ಕನಸನ್ನು ಹೊತ್ತ ಈ ಮಹಿಳೆಯ ಕತೆ ಅತ್ಯಂತ ರೋಚಕ ಮತ್ತು ಎಲ್ಲರಿಗೂ ಸ್ಪುರ್ತಿಯೂ ಕೂಡ..!ತಿಳಿಯಲು ಈ ಲೇಖನ ಓದಿ…

    ನಿಮ್ಮ ಗುರಿಯನ್ನು ತಲುಪಲು ಶ್ರಮ ಪಡಬೇಕು. ಶ್ರಮ ಪಟ್ಟಾಗಲೇ ಅದಕ್ಕೆ ಪ್ರತಿಫಲ ಸಿಗುವುದು. ಗಂಡ ಇಲ್ಲದ ಈ 22 ವರ್ಷದ ಹೆಣ್ಣು ತಾನು ಆಟೋ ಓಡಿಸಿ ತನ್ನ ಚಿಕ್ಕ ಮಗುವಿನೊಂದಿಗೆ ಜೀವನ ಸಾಗಿಸುತ್ತಿದ್ದಾಳೆ .

  • ಸುದ್ದಿ

    ಖೋಟಾನೋಟು ಚಲಾವಣೆ ಮಾಡುತ್ತಿದ್ದ ವಿದೇಶಿ ಪ್ರಜೆ ಬಂಧನ, 33 ಲಕ್ಷ ರೂ ವಶ, ಬೆಂಗಳೂರಿನ ಬಾಣಸವಾಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…!

    ಬೆಂಗಳೂರು: ನಗರದಲ್ಲಿ ಖೋಟಾನೋತು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ಆಫ್ರಿಕಾ ಪ್ರಜೆಯೊಬ್ಬನನ್ನು ಸಿಸಿಬಿ ಪೋಲೀಸರು ಬಂಧಿಸಿದ್ದು ಆರೋಪಿಯಿಂದ 2 ಸಾವಿರ ಮುಖಬೆಲೆಯ 33.70 ಲಕ್ಷ ರೂ. ಖೋಟಾನೋತು ವಶಕ್ಕೆ ಪಡೆದಿದ್ದಾರೆ. ಬಂಧಿತನನ್ನು ಕ್ಯಾಮರೂನ್ ದೇಶದ ಡಿಯೊಡೊನೆ ಕ್ರಿಸ್ಪೊಲ್(35) ಎಂದು ಗುರುತಿಸಲಾಗಿದೆ.ಈತ ಬಾಣಸವಾಡಿ ಸುಬ್ಬಯ್ಯನ ಪಾಳ್ಯದಲ್ಲಿ ವಾಸವಾಗಿದ್ದ.ಈತನೊಡನೆ ಇನ್ನೂ ಹಲವರು ಈ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದರೆನ್ನಲಾಗಿದೆ. ಈ ಸಂಬಂಧ ತನಿಖೆ ತೀವ್ರಗೊಳಿಸಿರುವ ಪೋಲೀಸರು ಇನ್ನಷ್ಟು ತೀವ್ರವಾಗಿ ತನಿಖೆ ಕೈಗೊಂಡಿದ್ದಾರೆ. ಬಂಧಿತ ಕ್ರಿಸ್ಪೊಲ್ನ ಮನೆ ಮೇಲೆ ದಾಳಿ ಮಾಡಿದ್ದ ಪೋಲೀಸರು ಖೋತಾನೋತಿನ ಜತೆಗೆ…

  • ಆರೋಗ್ಯ

    ಧೂಮಪಾನ ಮತ್ತು ತಂಬಾಕು ಸೇವನೆಯಿಂದ ಆಗುವ ತೊಂದರೆಗೆ ಬಾಳೆಹಣ್ಣು ರಾಮಬಾಣ.!

    ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆ ಮಾತಿನಂತೆ ನಾವು ತಿನ್ನುವ ಆಹಾರದ ಮೇಲೆ ನಮ್ಮ ಆರೋಗ್ಯದ ಸ್ಥಿತಿಗತಿ ನಿರ್ಧರಿತವಾಗುತ್ತದೆ. ಊಟದ ವಿಷಯದಲ್ಲಿ ನಾವು ಎಷ್ಟು ಕಾಳಜಿ ವಹಿಸುತ್ತೇವೋ ಹಾಗೆಯೇ ನಾವು ಸೇವಿಸುವ ಹಣ್ಣುಗಳ ಬಗ್ಗೆಯೂ ಮುತುವರ್ಜಿ ವಹಿಸಬೇಕಾಗುತ್ತಾದೆ.ಬಾಳೆಹಣ್ಣಿನಲ್ಲಿ ಹೇರಳವಾದ ವಿಟಮಿನ್‌ಗಳು, ಕಾರ್ಬೋಹೈಡ್ರೇಟ್ಸ್. ನಾರಿನಾಂಶ, ಕ್ಯಾಲ್ಸಿಯಂ, ಪ್ರೋಟೀನ್, ಎಲ್ಲದಕ್ಕಿಂತಲೂ ಮುಖ್ಯವಾಗಿ ಪೊಟ್ಯಾಶಿಯಂನ್ನು ಹೊಂದಿರುವುದರಿಂದ ಇದು ಹೃದ್ರೋಗ ಹಾಗೂ ರಕ್ತದೊತ್ತಡದ ತೊಂದರೆಯುಳ್ಳವರಿಗೆ ಉಪಕಾರಿಯೆನಿಸಿದೆ. ಬಾಳೆಹಣ್ಣು ಧಾರ್ಮಿಕ ವಿಧಿವಿಧಾನಗಳಲ್ಲಿ ಅತಿಥಿ ಸತ್ಕಾರಗಳಲ್ಲಂತೂ ಬಾಳೆ ಇಲ್ಲದಿರುವುದೇ ಇಲ್ಲ. ರಕ್ತಹೀನತೆಯಿಂದ…