ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ತಲೆಹೊಟ್ಟು ಎಲ್ಲ ರೀತಿಯ ವಯೋಮಾನದವರನ್ನು ಕಾಡುವ ಸಮಸ್ಯೆ. ಮಾರುಕಟ್ಟೆಯಲ್ಲಿ ಸಿಗುವ ಯಾವೆಲ್ಲ ಎಣ್ಣೆ ಹಾಗೂ ಶ್ಯಾಂಪೂ ಗಳನ್ನು ಪ್ರಯೋಗ ಮಾಡಿದ್ರೂ ತಲೆಹೊಟ್ಟು ಹೋಗ್ತಾಯಿಲ್ಲ ಎನ್ನುವವರಿದ್ದಾರೆ. ಸ್ವಚ್ಛತೆಯ ಕೊರತೆ, ಹಾರ್ಮೋನ್ ವ್ಯತ್ಯಾಸ ಹಾಗೂ ಈಗಿನ ಹಾರ ಪದ್ಧತಿ ಇದಕ್ಕೆ ಬಹು ಮುಖ್ಯ ಕಾರಣವಾಗುತ್ತದೆ. ಸಮಾರಂಭಗಳಿಗೆ ಹೋದಾಗ ಇದರಿಂದ ಕೆಲವೊಮ್ಮೆ ಮುಜುಗರ ಪಡುವ ಪರಿಸ್ಥಿತಿ ಉಂಟಾಗುತ್ತದೆ. ತಲೆಹೊಟ್ಟಿಗೆ ಮನೆಯಲ್ಲಿರುವ ವಸ್ತು ಬಳಸಿ ಮದ್ದು ತಯಾರಿಸಬಹುದು.
ಮೆಂತ್ಯ :-
ತಲೆಹೊಟ್ಟಿನಿಂದ ಮುಕ್ತಿ ಪಡೆಯಲು ಎರಡು ಚಮಚ ಮೆಂತ್ಯೆ ಕಾಳನ್ನು ರಾತ್ರಿ ಪೂರ್ತಿ ನೀರಿನಲ್ಲಿ ನೆನೆಹಾಕಿ. ಬೆಳಿಗ್ಗೆ ಎದ್ದ ನಂತ್ರ ಇದನ್ನು ಮಿಕ್ಸಿ ಮಾಡಿ ಮಿಶ್ರಣವನ್ನು ತಲೆಯ ಬುಡಕ್ಕೆ ಹಚ್ಚಿಕೊಳ್ಳಿ. 30 ನಿಮಿಷ ಬಿಟ್ಟು ತಲೆ ಸ್ನಾನ ಮಾಡಿದ್ರೆ ತಲೆಹೊಟ್ಟು ಕಡಿಮೆಯಾಗಲಿದೆ. ವಾರಕ್ಕೆ 2-3 ಬಾರಿ ಈ ಕೆಲಸ ಮಾಡಬೇಕಾಗುತ್ತದೆ.
ಮೊಸರು :-
ಒಳ್ಳೆಯ ಮೊಸರಿನಲ್ಲಿ ತಲೆ ಹೊಟ್ಟು ನಿವಾರಿಸುವ ಶಕ್ತಿ ಇದೆ. ಮೊಸರನ್ನು ತಲೆಗೆ ಹಚ್ಚಿಕೊಳ್ಳಿ. 30 ನಿಮಿಷ ಬಿಟ್ಟು ತಲೆ ಸ್ನಾನ ಮಾಡಿ.
ಬೀಟರೋಟ್ :-
ಬೀಟರೋಟ್ ಸಿಪ್ಪೆ ತೆಗೆದು ಸಣ್ಣದಾಗಿ ಕಟ್ ಮಾಡಿ ಬಿಸಿನೀರಿನಲ್ಲಿ ಬೇಯಿಸಿ. ನಂತ್ರ ಆ ನೀರಿನಿಂದ ತಲೆಯ ಬುಡವನ್ನು ಮಸಾಜ್ ಮಾಡಿ. ರಾತ್ರಿ ತಲೆಗೆ ಮಸಾಜ್ ಮಾಡಿ ಬೆಳಿಗ್ಗೆ ಎದ್ದ ತಕ್ಷಣ ಬಿಸಿಬಿಸಿ ನೀರಿನಲ್ಲಿ ತಲೆ ಸ್ನಾನ ಮಾಡಿ. ಪದೇ ಪದೇ ಇದನ್ನು ಬಳಸಿದ್ರೆ ಬೇಗ ತಲೆಹೊಟ್ಟು ಕಡಿಮೆಯಾಗಲಿದೆ.
ಕಡಲೆಹಿಟ್ಟು :-
ಒಂದು ಚಮಚ ಕಡಲೇ ಹಿಟ್ಟಿಗೆ ಮೊಸರು ಸೇರಿಸಿ ಮಿಕ್ಸ್ ಮಾಡಿ. ಅದನ್ನು ತಲೆಗೆ ಹಚ್ಚಿಕೊಂಡು 10 ನಿಮಿಷ ಬಿಡಿ. ನಂತ್ರ ತಲೆ ಸ್ನಾನ ಮಾಡಿ.
ಅಲೋವೇರಾ ಜೆಲ್ :-
ಅಲೋವೇರಾ ಜೆಲ್ ತಲೆಗೆ ಹಚ್ಚಿಕೊಂಡು ಕೆಲ ಸಮಯ ನಂತ್ರ ತಲೆ ಸ್ನಾನ ಮಾಡಿ. ತಲೆ ಹೊಟ್ಟು ಕಡಿಮೆಯಾಗುವ ಜೊತೆಗೆ ಹೊಳಪು ಬರುತ್ತದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇತ್ತೀಚಿನ ಯುವಕ ಯುವತಿಯರಿಗೆ ಮಕ್ಕಳಿಗೆ ಮನೆಯ ತಿಂಡಿಗಳಿಗಿಂತ ಹೊರಗೆ ಸಿಗುವ ತಿಂಡಿಗಳೇ ಹೆಚ್ಚು ಇಷ್ಟ, ಅದರಲ್ಲೂ ಪಾನಿ ಪುರಿಯ ಹೆಸರು ತುಂಬಾನೇ ಫೇಮಸ್. ಪಾನಿ ಪುರಿ ಎಂಬ ಹೆಸರು ಕೇಳಿದರೆ ಬಾಯಲ್ಲಿ ನೀರು ಬರುವುದು ಸಾಮಾನ್ಯ, ಪಾನಿ ಪುರಿ ಎಂದರೆ ಸಾಮಾನ್ಯವಾಗಿ ಹೆಚ್ಚಿನ ಜನರು ಇಷ್ಟ ಪಡುತ್ತಾರೆ, ಆದರೆ ಅದನ್ನೇ ಮನೆಯಲ್ಲಿ ಮಾಡಿ ತಿನ್ನದೇ, ಹೊರಗೆ ತಿನ್ನುತ್ತಾರೆ, ಪಾನಿ ಪುರಿಯನ್ನ ಅವರು ಹೇಗೆ ಮಾಡಿರುತ್ತಾರೆ ಎಂದು ತಿಳಿದಿರಲ್ಲ. ಮನೆಯಲ್ಲಿ ನಾವು ಬಿಸ್ಲೇರಿ ನೀರನ್ನೇ ಸೇವಿಸುತ್ತೇವೆ ಆದರೆ…
ಭಾರತದಲ್ಲಿ ರಾಮ ಅಥವಾ ಶಿವನ ಹೆಸರು ಸರ್ವೇ ಸಾಮಾನ್ಯ. ಇಂದು ರಾಮ ನವಮಿ ಇಲ್ಲಿದೆ ರಾಮನ ೧೦೮ ನಾಮದೇಯ. ಇದರಲ್ಲಿ ನಿಮಗೆಷ್ಟು ತಿಳಿದಿದೆ ಅಥವಾ ನಿಮಗೆ ತಿಳಿದ ಮತ್ತಷ್ಟು ನಾಮದೇಯ ವನ್ನು ನಮಗೆ ತಿಳಿಸಿ.
ಬೆಂಗಳೂರು, ಕೇಂದ್ರ ಸರ್ಕಾರದ ಹೊಸ ಮೋಟಾರು ವಾಹನ ಕಾಯ್ದೆಗೆ ಹಲವು ವಾಹನ ಸವಾರರು ಈ ಕಾಯ್ದೆಯ ವಿರುದ್ಧ ಧ್ವನಿ ಎತ್ತಿದ್ದರು. ಇದರ ಬೆನ್ನಲೆಯಲ್ಲಿ ಇಂದು ರಾಜ್ಯ ಸರ್ಕಾರ ಹೊಸ ಟ್ರಾಫಿಕ್ ಫೈನ್ ಇಳಿಕೆ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಹೇಳಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಜರಾತ್ ಮಾದರಿಯಲ್ಲಿ ರಾಜ್ಯದಲ್ಲೂ ಟ್ರಾಫಿಕ್ ಫೈನ್ ಇಳಿಕೆ ಬಗ್ಗೆ ಇಂದು ಚರ್ಚೆ ನಡೆಯುತ್ತಿದೆ ಎಂದ ಅವರು, ನಮ್ಮ ಅಧಿಕಾರಿಗಳ ಚರ್ಚೆ ನಡೆಸಿದ…
ರಾಜ್ಯದಲ್ಲಿ ತಮ್ಮದೇ ಸರ್ಕಾರ ಇದ್ದರೂ ಕೇವಲ ಒಂದು ಸ್ಥಾನ ಗೆದ್ದ ಕಾಂಗ್ರೆಸ್ ಪಕ್ಷಕ್ಕೆ ಪುನಶ್ಚೇತನ ಕೊಡಲು ಕಾಂಗ್ರೆಸ್ ಹೈ ಕಮಾಂಡ್ ಮುಂದಾಗಿದೆ. ರಾಜ್ಯ ಉಸ್ತುವಾರಿ ಬದಲಾವಣೆ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಚಿಂತನೆ ಆರಂಭವಾಗಿದೆ ಎಂಬುದಾಗಿ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭ್ಯವಾಗಿದೆ. ಕೆಪಿಸಿಸಿಯ ಜವಾಬ್ದಾರಿ ಹೊರಲು ಟ್ರಬಲ್ ಶೂಟರ್ ಡಿ.ಕೆ ಶಿವಕುಮಾರ್ ಸೂಕ್ತ ಅನ್ನೋದು ಹೈ ಕಮಾಂಡ್ ನಂಬಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ನೇರವಾಗಿ ಡಿ.ಕೆ ಶಿವಕುಮಾರ್ ಬಳಿ ಮಾತನಾಡಿದೆ. ಈ ಮೂಲಕ ಪರೋಕ್ಷವಾಗಿ…
ಹತ್ತನೇ ತರಗತಿ ಓದಿ, ಒಂದು ಡಿಗ್ರಿ ತಗೊಳಷ್ಟರಲ್ಲಿ ಸಾಕಾಗಿ ಹೋಗಿರುತ್ತೆ.ಆದ್ರೆ ಈ ವ್ಯಕ್ತಿ ಭಾರತದಲ್ಲಿರೋ ಹಲವಾರು ಡಿಗ್ರಿ (ಪದವಿ)ಗಳನ್ನು ಮಾಡಿ ಮುಗಿಸಿದ್ದಾರೆ.ಇವರು ಎಷ್ಟು ಓದಿದ್ದಾರೆಂದ್ರೆ ಇವರು ಹೆಸರು ಲಿಮ್ಕಾಬುಕ್ ಆಫ್ ರೆಕಾರ್ಡ್ಸ್ ನಲ್ಲಿ ರೆಕಾರ್ಡ್ ಆಗಿದೆ.
ಅಚಾನಕ್ಕಾಗಿ ಯಾರಾದರೂ ದುಡ್ ಸಿಕ್ರೆ ಏನ್ ಮಾಡ್ತಾರೆ? ಕಿಸೆಗೆ ಹಾಕಿಕೊಂಡು ನಡೆದೇ ಬಿಡ್ತಾರೆ. ಆದರೆ ಇಲ್ಲೊಬ್ಬ ಕಂಡಕ್ಟರ್ ತನ್ನ ಬಸ್ ನಲ್ಲಿ ಸಿಕ್ಕ ಒಂದು ಲಕ್ಷ ರೂ. ಹಣವನ್ನು ಸಂಬಂಧಪಟ್ಟವರಿಗೆ ತಲುಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಸುಭದ್ರ ಎಂಬ ಪ್ರಯಾಣಿಕರು ಎಸ್ಟೀಂ ಮಾಲ್ ಬಳಿ ಬಸ್ ಇಳಿಯುವಾಗ ಹಣದ ಬ್ಯಾಗ್ ಮರೆತು ಬಸ್ ನಲ್ಲಿ ಬಿಟ್ಟು ಇಳಿದಿದ್ದರು.ಅನಾಥವಾಗಿ ಬಿದ್ದಿದ್ದ ಬ್ಯಾಗನ್ನು ಪರಿಶೀಲಿಸಿದ ಕಂಡಕ್ಟರ್ ಯಲ್ಲಪ್ಪ ಬೆಟಗೇರಿ, ಪರಿಶೀಲನೆ ನಡೆಸಿದಾಗ ಅದರಲ್ಲಿ ಹಣ ಇರುವುದು ಕಂಡುಬಂದಿದೆ. ಅಷ್ಟರಲ್ಲಾಗಲೇ ಆತಂಕಗೊಂಡಿದ್ದ ಸುಭದ್ರ…