ಸುದ್ದಿ

ಮನೆ ಬಾಗಿಲಿಗೆ ʼಈರುಳ್ಳಿʼಯನ್ನು ಅತಿ ಕಡಿಮೆ ದರದಲ್ಲಿ ತಲುಪಿಸಲು ಮುಂದಾದ ಸರ್ಕಾರ….!

42

ಈರುಳ್ಳಿ ಬೆಲೆ ದುಬಾರಿಯಾಗಿ ಸರ್ಕಾರವೇ ಉರುಳಿರುವ ಉದಾಹರಣೆಗಳು ನಮ್ಮ ಇತಿಹಾಸದ ಪುಟಗಳಲ್ಲಿದೆ. ಈ ಘಟನೆಗಳಿಂದ ಎಚ್ಚೆತ್ತುಕೊಂಡಂತಿರುವ ದೆಹಲಿ ಸರ್ಕಾರ ಸಾಮಾನ್ಯ ಜನರಿಗೆ ಈರುಳ್ಳಿಯನ್ನು ಕಡಿಮೆ ಬೆಲೆಯಲ್ಲಿ ತಲುಪಿಸಲು ಮುಂದಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಕೆಜಿ ಈರುಳ್ಳಿಗೆ ನಲವತ್ತು ರೂಪಾಯಿಗಳಿಂದ ಎಪ್ಪತ್ತು ರೂಪಾಯಿವರೆಗೆ ಏರಿಕೆ ಕಂಡಿದೆ. ಈ ಬೆಳವಣಿಗೆ ಗ್ರಾಹಕರಿಗೆ ಹೊರೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಸರಕಾರ ಈರುಳ್ಳಿಯನ್ನು ಮೊಬೈಲ್ ವ್ಯಾನ್ ಮೂಲಕ ಕಡಿಮೆ ದರದಲ್ಲಿ ಜನರಿಗೆ ತಲುಪಿಸಲು ಚಿಂತನೆ ನಡೆಸಿದೆ.

ಪ್ರತಿ ಕೆಜಿಗೆ 24 ರೂಪಾಯಿಯಂತೆ ತಲುಪಿಸುವ ಉದ್ದೇಶದಿಂದ, ಈರುಳ್ಳಿಯನ್ನು ಸಂಗ್ರಹಿಸುತ್ತಿದ್ದೇವೆ ಮತ್ತು ಅವುಗಳನ್ನು ಮೊಬೈಲ್ ವ್ಯಾನ್ ಮೂಲಕ ನಗರದಾದ್ಯಂತ ಗರಿಷ್ಠ ಪ್ರದೇಶಗಳಿಗೆ ತಲುಪಿಸಲು ಪ್ರಯತ್ನಿಸುತ್ತೇವೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.

ದೆಹಲಿಯಲ್ಲಿ ಸೇಬು ಬೆಲೆಗಿಂತ ಈರುಳ್ಳಿ ಬೆಲೆ ದುಬಾರಿಯಾಗಿರುವುದು ಕಂಡು ಬಂದಿದೆ. ಸಗಟು ಖರೀದಿಯಲ್ಲಿ ಪ್ರತಿ ಕೆಜಿ ಸೇಬಿಗೆ 30-40 ರೂಪಾಯಿವರೆಗೆ ಮಾರಾಟವಾಗುತ್ತಿದೆ ಎನ್ನಲಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಬ್ಯಾಂಕ್

    2000 ರೂಪಾಯಿ ಮುಖಬೆಲೆ ನೋಟು ಚಲಾವಣೆಯನ್ನು ಹಿಂಪಡೆದ ಭಾರತೀಯ ರಿಸರ್ವ್ ಬ್ಯಾಂಕ್ !

    ದೇಶಾದ್ಯಂತ ಎರಡು ಸಾವಿರ ರೂಪಾಯಿ ನೋಟ್‌ ಚಲಾವಣೆಯನ್ನು ಹಿಂಪಡೆಯಲು ನಿರ್ಧರಿಸಲಾಗಿದೆ. ಈ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ ಮಾಹಿತಿ ನೀಡಿದೆ. ಈ ವರ್ಷ ಸೆಪ್ಟೆಂಬರ್‌ 30ವರೆಗೂ ನೋಟು ವಿನಿಮಯಕ್ಕೆ ಕಾಲಾವಕಾಶ ನೀಡಲಾಗಿದೆ. ಮೇ 23 ರಿಂದ ಸಮೀಪದ ಬ್ಯಾಂಕ್‌ಗಳಿಗೆ ತೆರಳಿ ಸಾರ್ವಜನಿಕರು ನೋಟು ಬದಲಾವಣೆ ಮಾಡಿಕೊಳ್ಳಬಹುದು. ಇದಕ್ಕಾಗಿ ಬ್ಯಾಂಕ್‌ಗಳಲ್ಲಿ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ. ದೇಶಾದ್ಯಂತ 2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧಾರ. 2023 ಸೆಪ್ಟೆಂಬರ್ 30 ರೊಳಗೆ ಅವುಗಳನ್ನು ವಿನಿಮಯ…

  • ಆಧ್ಯಾತ್ಮ

    ಕೃಷ್ಣನ ಜನ್ಮದ ಹಿಂದೆ ಅಡಗಿರುವ ಆ ರಹಸ್ಯ ಏನು ಗೊತ್ತಾ?ಕೃಷ್ಣ ಕಾರಾಗೃಹದಲ್ಲೇ ಜನಿದಿದ್ದು ಏಕೆ?ತಿಳಿಯಲು ಈ ಲೇಖನಿ ಓದಿ…

    ಭಗವಾನ್ ಮಹಾವಿಷ್ಣುವಿನ ಎ೦ಟನೆಯ ಅವತಾರವಾಗಿ ಶ್ರೀ ಕೃಷ್ಣನು ಅ೦ದು ರೋಹಿಣಿ ನಕ್ಷತ್ರದಲ್ಲಿ ಚ೦ದ್ರೋದಯ ಸಮಯದಲ್ಲಿ ಮಥುರಾದ ವಸುದೇವ ಮತ್ತು ದೇವಕಿಯರ ಮಗನಾಗಿ ಜನಿಸಿದ. ಅ೦ತೆಯೇ ಮಧ್ಯರಾತ್ರಿಯಲ್ಲಿ ಶ್ರೀ ಕೃಷ್ಣ ದೇವಾಲಯಗಳಲ್ಲಿ ಶ್ರೀ ಕೃಷ್ಣನ ಜನನದ ಅ೦ಗವಾಗಿ ವಿಶೇಷ ಪೂಜೆ, ಪುನಸ್ಕಾರ, ಅಭಿಷೇಕ ಹಾಗೂ ಧಾರ್ಮಿಕ ಪ್ರವಚನಗಳು ಜರುಗುತ್ತವೆ

  • ಸುದ್ದಿ

    ಆನ್ಲೈನ್ ಬ್ಯಾಂಕಿಂಗ್‌ನಲ್ಲಿ ಮೋಸಕ್ಕೆ ಒಳಗಾಗುವ ಮುನ್ನ ಇದನ್ನೊಮ್ಮೆ ನೋಡಿ,.!

    ಇತ್ತೀಚಿನ ದಿನಗಳಲ್ಲಿ ಎಲ್ಲರೂ ಆನ್ಲೈನ್ ಬ್ಯಾಂಕಿಂಗ್ ಸೇವೆಗಳನ್ನು ಬಳಸುತ್ತಿದ್ದಾರೆ, ತಂತ್ರಜ್ಙಾನ ಬೆಳೆಯುತ್ತಿದ್ದಂತೆ  ಬ್ಯಾಂಕಿಂಗ್ ವ್ಯವಹಾರಗಳು  ಸಹ ಎಲ್ಲರಿಗೂ  ಸುಲಭವಾಗುತ್ತಿದೆ. ಹಾಗೆಯೇ  ಇಂಟರ್ನೆಟ್   ಹ್ಯಾಕಿಂಗ್ , ಮೊಬೈಲ್ ಬ್ಯಾಂಕಿಂಗ್ ಸೇವೆಗಳು ಸಾರ್ವಜನಿಕರಿಗೆ ಹೆಚ್ಚು ಉಪಯುಕ್ತವಾಗುತ್ತಿವೆ.ಸಮಯದ ಉಳಿತಾಯದ ಜೊತೆಗೆ ಸುಲಭವಾಗಿ ಹಣದ ವರ್ಗಾವಣೆ, ಬಿಲ್ ಪಾವತಿಯನ್ನು ಮಾಡಬಹುದಾಗಿದೆ. ಆದರೆ ಕೆಲ ನಿಯಮಗಳನ್ನು ಪಾಲಿಸದಿದ್ದರೆ ಮೋಸಕ್ಕೂ ಒಳಗಾಗಬೇಕಾಗುತ್ತದೆ. ಬ್ಯಾಂಕಿನಲ್ಲಿ ಸಾಲುಗಟ್ಟಿ ನಿಂತು ಹಣ ಪಾವತಿ  ಮಾಡುವುದು, ಹಣವನ್ನು  ಹಿಂತೆಗೆದುಕೊಳ್ಳುತ್ತಿದ್ದ ಕಾಲ ಬದಲಾಗಿದೆ. ATM ಮಷಿನ್ ಗಳು ಬಂದ ಮೇಲಂತೂ ಜನರು ಹಣವನ್ನು…

  • ಸುದ್ದಿ

    ‘ಸೋಷಿಯಲ್ ಮೀಡಿಯಾ’ ಬಳಸುವ ಮುನ್ನಾ ಬಾರಿ ಎಚ್ಚರದಿಂದಿರಿ..!ಯಾಕೆ ಗೊತ್ತಾ?

    ಸೋಷಿಯಲ್‌ ಮೀಡಿಯಾಗಳಿಗೆ ಲಗಾಮು ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ. ಪ್ರಚೋದನೆ, ಸುಳ್ಳು ಸುದ್ದಿ, ಮಾನಹಾನಿ ಮತ್ತು ದೇಶದ್ರೋಹಿಗಳಂಥ ಪೋಸ್ಟ್‌ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕಾಗಿ ಜನವರಿ 15ರಿಂದ ಹೊಸ ನಿಯಮ ಜಾರಿಗೆ ತರುತ್ತಿದೆ ನಮ್ಮ ಭಾರತ. ಈ ಬಗ್ಗೆ ಸುಪ್ರೀಕೋರ್ಟ್‌ಗೆ ಇಂದು ವರದಿ ಕೂಡ ಸಲ್ಲಿಸಿದೆ. ಸೋಷಿಯಲ್ ಮೀಡಿಯಾ ಪ್ರೊಫೈಲ್‌ಗಳ ಡೀಕ್ರಿಪ್ಟ್ ಮಾಡಿದ ಡೇಟಾ ಹಂಚಿಕೊಳ್ಳುವ ಬೇಡಿಕೆಗೆ ಸಂಬಂಧಿಸಿದಂತೆ ಮದ್ರಾಸ್, ಬಾಂಬೆ ಮತ್ತು ಮಧ್ಯಪ್ರದೇಶದ ಹೈಕೋರ್ಟ್‌ಗಳಲ್ಲಿ ಬಾಕಿ ಇರುವ ಎಲ್ಲಾ ಪ್ರಕರಣಗಳನ್ನು ಸುಪ್ರೀಂಕೋರ್ಟ್ ವರ್ಗಾಯಿಸಿಕೊಂಡಿದೆ. ರಾಷ್ಟ್ರೀಯ ಭದ್ರತೆ…

  • ಗ್ಯಾಜೆಟ್

    ಫೇಸ್ಬುಕ್’ನಲ್ಲಿ ವೈರಲ್ ಆಗುತ್ತಿರುವ ಈ BFF ಸಂದೇಶದ ಅಸಲಿ ಕಹಾನಿ ಏನು ಗೊತ್ತಾ..?ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

    ಸಾಮಾಜಿಕ ಜಾಲತಾಣ ಫೇಸ್ಬುಕ್’ನ್ನು ಉಪಯೋಗಿಸುವವರ ದಿನೇ ದಿನೇ ಹೆಚ್ಚಾಗುತ್ತಿದೆ.ಇದರ ಜೊತೆಗೆ ಅನೇಕ ಸುಳ್ಳು ಸುದ್ದಿಗಳು ಹರಡುವುದು ಸಾಮಾನ್ಯವಾಗಿದೆ. ಇದಲ್ಲಿ ಇತ್ತೀಚಿಗೆ ಒಂದು ಸುದ್ದಿ ಫೇಸ್ಬುಕ್’ನಲ್ಲಿ ವೈರಲ್ ಆಗುತ್ತಿದೆ.ಇದು ಫೇಸ್ಬುಕ್’ಗೆ ಸಂಬಂದಪಟ್ಟ ವಿಷಯವೇ ಆಗಿದೆ.ಈ ಸುದ್ದಿಯ ನಿಜವಾದ ಸತ್ಯ ತಿಳಿಯದ ಫೇಸ್ಬುಕ್’ಸ್ನೇಹಿತರು ಒಬ್ಬರಿಂದ ಒಬ್ಬರಿಗೆ ಆ ಸಂದೇಶವನ್ನು ಕಳುಹಿಸುತ್ತಿದ್ದಾರೆ. BFF ಮ್ಯಾಜಿಕ್ ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜ್ಯೂಕರ್’ರ್ಬರ್ಗ್ ಮತ್ತು ಟೀಮ್ ಅವವರವರ ಫೇಸ್ಬುಕ್ ಖಾತೆಗಳನ್ನು ಸುರಕ್ಷಿತವಾಗಿಡಲು BFF ಕಂಡು ಹಿಡಿದಿದ್ದಾರೆ ಎಂಬ ಸಂದೇಶಗಳು ಫೇಸ್ಬುಕ್ ಜಗತ್ತಿನಲ್ಲಿ ಓಡಾಡುತ್ತಿದ್ದು BFF…