ಸುದ್ದಿ

ಮಾರಕ ಕಾಯಿಲೆಯಾದ ಏಡ್ಸ್ ಮತ್ತು ಕ್ಯಾನ್ಸರ್‌ಗೆ ಔಷಧಿಯನ್ನು ಕಂಡುಹಿಡಿದು ಎಲ್ಲರ ಮೆಚ್ಚುಗೆ ಪಡೆದ ರೈತ…!

136

ಕ್ಯಾನ್ಸರ್ ಕಾಯಿಲೆ ಜೊತೆಗೆ ಮಾರಕ ಕಾಯಿಲೆಯಾದ ಎಚ್ಐವಿ ಏಡ್ಸ್‌ಗೂ ಕೂಡ ರಾಮಬಾಣವೊಂದನ್ನು ಗಡಿಜಿಲ್ಲೆಯ ರೈತನೊಬ್ಬ ಕಂಡುಹಿಡಿದಿದ್ದು ಸಾವಿನ ಅಂತಿಮ ಕ್ಷಣಗಳ ಎಣಿಸುವ ಎಚ್ಐವಿ ಸೋಂಕಿತರಿಗೆ ಆಶಾಕಿರಣವಾಗಿದ್ದಾರೆ. ಮಹೇಶ್ ಕುಮಾರ್ ಎಂಬ ರೈತ ಹಲವಾರು ವರ್ಷಗಳಿಂದ ತಮ್ಮ ಮನೆಯ ಮುಂದೆ ಬೆಳೆದ ಒಂದು ಮರದ ಎಲೆಗಳಿಂದ ಕ್ಯಾನ್ಸರ್ ಪೀಡಿತರಿಗೆ ಚಿಕಿತ್ಸೆ ಕೊಡುತ್ತಾ ಬಂದಿದ್ದಾರೆ. ಸದ್ಯ ಈಗ ಅದೇ ಎಲೆಯಗಳಲ್ಲೇ ಎಚ್.ಐ.ವಿ ಏಡ್ಸ್ ಸೋಂಕಿತರಿಗೂ ಕೂಡ ಚಿಕಿತ್ಸೆ ನೀಡುತ್ತಿದ್ದು, ಸೋಂಕಿತರಿಂದ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗತೊಡಗಿದೆ.

ಎಷ್ಟೋ ಮಂದಿ ಮಾರಣಾಂತಿಕ ಕಾಯಿಲೆಗೆ ಬಲಿಯಾಗುವ ಬದಲು ಕಾಯಿಲೆ ಬಂದಿದೆ ಎಂದು ತಿಳಿದಾಗಲೇ ಕೊರಗಿ ಮೃತಪಡುವಂತಹ ಕಾಯಿಲೆಗಳಲ್ಲಿ ಒಂದು ಎಚ್ಐವಿ ಏಡ್ಸ್. ವಿಜ್ಞಾನಿಗಳೂ ಕೂಡ ಏಡ್ಸ್ನನ್ನು ಸಂಪೂರ್ಣವಾಗಿ ಗುಣಪಡಿಸುವಲ್ಲಿ ಇನ್ನೂ ಸಫಲವಾಗದಿರುವುದು ಕಣ್ಮುಂದೆಯೇ ಇರುವಾಗಲೇ ನಮ್ಮ ರೈತ ಮುಖಂಡ ಮಹೇಶ್ ಕುಮಾರ್ ಅದಕ್ಕೊಂದು ರಾಮಬಾಣವನ್ನು ಕಂಡುಹಿಡಿದಿದ್ದಾರೆ. ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿ ಸಮೀಪದ ಹೆಗ್ಗವಾಡಿಪುರದ ಸಾವಯವ ರೈತ ಮತ್ತು ಚಳವಳಿಗಾರ ಹನುಮಫಲದ ಮೂಲಕ ಎಚ್ಐವಿ ಸೋಂಕಿಗೆ ರಾಮಬಾಣ ಆವಿಷ್ಕರಿಸಿದ್ದಾರೆ.

ಈಗಾಗಲೇ ಕ್ಯಾನ್ಸರ್ ರೋಗಕ್ಕೆ ಹನುಮಫಲದ ಮೂಲಕ ಹಲವರನ್ನು ಗುಣಪಡಿಸಿರುವ ಮಹೇಶ್ ಕುಮಾರ್ ಎಚ್ಐವಿ ಸೋಂಕಿಗೂ ಕೂಡ ಹನುಮಫಲದ ಮೂಲಕವೇ ಮದ್ದು ಕಂಡುಹಿಡಿದಿದ್ದು ಈಗಾಗಲೇ ಗೌಪ್ಯವಾಗಿ ನೂರಾರು ಮಂದಿ ಇದರ ಲಾಭ ಪಡೆದಿದ್ದಾರೆ. ಬಿಳಿರಕ್ತ ಕಣಗಳ ಸಂಖ್ಯೆ ಹೆಚ್ಚಿಸಿಕೊಂಡು ಸೋಂಕಿನ ಬಾಧೆಯಿಂದ ಬಿಡುಗಡೆಯಾಗುತ್ತಿದ್ದಾರೆ. 16 ಹನುಮಫಲದ ಎಲೆ ಮತ್ತು ಕೆಲವು ಬೇರುಗಳನ್ನು 4 ಲೀಟರ್ ನೀರಿನಲ್ಲಿ ಕುದಿಸುತ್ತಾ 1 ಲೀಟರ್ ಮಾಡಿಕೊಳ್ಳಬೇಕು ಅದನ್ನು ಬೆಳಗ್ಗೆ ಸಂಜೆ ನಿಯಮಿತವಾಗಿ 50 ml. ಯಂತೆ 80 ದಿನ ಸೇವಿಸುತ್ತಾ ಬಂದರೇ ಕ್ಯಾನ್ಸರ್ ಕೋಶಗಳೇ ಇಲ್ಲದಂತಾಗುತ್ತದೆ‌. ಶೇ.99 ಮಂದಿಗೆ ಗುಣಮುಖವಾಗಿದೆ, ಯಾವುದೇ ಹಣದಾಸೆಯಿಲ್ಲದೇ ಹಿಮಾಲಯದ ಗುರುಗಳ ಮಾತಿನಂತೆ ಈ ಸೇವೆ ಮಾಡುತ್ತಿದ್ದು ಕೊನೇ ಹಂತದ ಕ್ಯಾನ್ಸರ್ ರೋಗಿಗಳೂ ಚೇತರಿಕೆ ಕಂಡಿದ್ದಾರೆ ಎಂಬುದು ರೈತ ಮಹೇಶ್ ಕುಮಾರ್ ಮಾತು.

35 ಸಾವಿರ ಮಂದಿಗೆ ಔಷಧಿ ವಿತರಣೆ! : ಕಳೆದ 8 ವರ್ಷಗಳಿಂದ ಕ್ಯಾನ್ಸರ್ ರೋಗಿಗಳಿಗೆ ದೇಶದ ನಾನಾ ಭಾಗಗಳಲ್ಲಿನ 35 ಸಾವಿರಕ್ಕೂ ಹೆಚ್ಚು ಕ್ಯಾನ್ಸರ್ ರೋಗಿಗಳಿಗೆ ಹನುಮಫಲದ ಔಷದಿ ನೀಡಿದ್ದು ಕೆಲವು ದಿನಗಳಿಂದೀಚೆಗೆ ನೂರಾರು ಎಚ್ಐವಿ ಪೀಡಿತರಿಗೂ ಕೂಡ ಔಷದಿ ನೀಡುತ್ತಾ ಬಂದಿದ್ದಾರೆ. ಇವರ ಸೇವೆಯು ಸಂಪೂರ್ಣ ಉಚಿತವಾಗಿದ್ದು ಆತ್ಮತೃಪ್ತಿ ಮತ್ತು ಆರೋಗ್ಯವಂತ ಸಮಾಜ ನಿರ್ಮಾಣ ಇವರ ಕನಸಾಗಿದೆ.
ದೂರದ ಬಾಂಬೆ, ದೆಹಲಿಯಿಂದಲೂ ಪ್ರತಿನಿತ್ಯ ಒಂದಿಲ್ಲೊಬ್ಬರು ಇಲ್ಲಿಗೆ ಬಂದು ಚಿಕಿತ್ಸೆ ಪಡೆದು ಹೋಗುತ್ತಿದ್ದಾರೆ. ಜೊತೆಗೆ ಇಲ್ಲಿಂದ ಹೋದ ನಂತರ ಮತ್ತೆ ಅವರ ಆರೋಗ್ಯದಲ್ಲಿ ಚೇತರಿಕೆಯೂ ಕೂಡ ಆಗಿರುವ ರಿಪೋರ್ಟ್ ಕಾರ್ಡ್ ಕಳಿಸಿಕೊಟ್ಟು,ಕೆಲವರು ತಮ್ಮ ಆರೋಗ್ಯದಲ್ಲಾದ ಬದಲಾವಣೆಯನ್ನು ಕಂಡುಕೊಂಡಿದ್ದಾರೆ.

ಒಟ್ನಲ್ಲಿ ಡಾಕ್ಟರ್ ಅಂತ ಹೇಳಿಕೊಂಡು ಅದೆಷ್ಟೋ ಮಂದಿ ಜನರ ಬಳಿ ಹಣ ಲಪಟಾಯಿಸುವ ಈ ಕಾಲದಲ್ಲಿ ಯಾವ ಫಲಾಪೇಕ್ಷೇ ಇಲ್ಲದೆ ಕಷ್ಟ ಹೇಳಿಕೊಂಡು ಬರುವ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ಕೊಡುವ ಈ ಅನ್ನದಾತನಿಗೆ ಒಂದು ಸಲಾಂ ಹೇಳಲೇಬೇಕು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ