ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮಾರ್ಗೋವಾ: ಆ ಹುಡುಗ ತನ್ನ 14ನೇ ವಯಸ್ಸಿಗೆ ಮುಸುರೆ ತಿಕ್ಕುವ ಕೆಲಸ ಮಾಡಿಕೊಂಡಿದ್ದ. 24ನೇ ವಯಸ್ಸಿಗೆ ಮರ್ಸಿಡೆಸ್ ಕಾರು ಖರೀದಿಸಿ, ಪ್ರವಾಸೋದ್ಯಮದಲ್ಲಿ ಯಶಸ್ವಿ ಬ್ಯುಸಿನೆಸ್‌ಮ್ಯಾನ್ ಆಗಿ ಬೆಳೆದ ಆ ವ್ಯಕ್ತಿ ಈಗ ಗೋವಾ ರಾಜ್ಯದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ.

ಗುರುವಾರ ಫತೋರ್ಡಾದ ಡಾನ್ ಬಾಸ್ಕೊ ಕಾಲೇಜ್ ಆಫ್ ಎಂಜಿನಿಯರಿಂಗ್‌ನ, ಕಂಪ್ಯೂಟರ್ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಮುಂದೆ, ಚಿಂದಿ ಆಯುವ ಬದುಕಿಂದ ಆರಂಭವಾಗಿ- ಸಿರಿವಂತನಾಗಿ ಬೆಳೆದ ತಮ್ಮ ಬದುಕಿನ ಕಥೆಯನ್ನು ತೆರೆದಿಟ್ಟರು ಸಚಿವ ಮೈಕೆಲ್ ಲೋಬೊ . ಎರಡು ದಿನಗಳ ತಾಂತ್ರಿಕ ಕಾರ್ಯಕ್ರಮ ‘Inspirus 2K19‘ಉದ್ಘಾಟನಾ ಸಮಾರಂಭದಲ್ಲಿ ಮಾಡಿದ ಭಾಷಣದಲ್ಲಿ ಲೋಬೊ ಅವರ ಟೇಕ್ಅವೇ ಸಂದೇಶ ಹೀಗಿತ್ತು -“ನಿಮ್ಮ ಕನಸುಗಳನ್ನು ಅನುಸರಿಸಿ. ಎಷ್ಟು ಸಮಯ ತೆಗೆದುಕೊಂಡರೂ (ಅವುಗಳನ್ನು ಅರಿತುಕೊಳ್ಳಲು), ಅವುಗಳಿಂದ ವಿಮುಖರಾಗಬೇಡಿ”.

ಪುಟ್ಟ ವಯಸ್ಸಿನಲ್ಲಿ ತಾನು ಕಂಡ ದೈತ್ಯ ಕನಸುಗಳು ತನ್ನ ಜೀವನವನ್ನು ಹೇಗೆ ರೂಪಿಸಿದವು ಎಂಬುದರ ಕುರಿತು ಲೋಬೊ ಮಾತನಾಡಿದರು. ಹೊಟೇಲ್‌ನಲ್ಲಿ ಪಾತ್ರೆ ತಿಕ್ಕುವ ಕೆಲಸ ಮಾಡಿದ ದಿನಗಳನ್ನು ನೆನಪಿಸಿಕೊಂಡ ಲೋಬೊ,”ನನಗೆ ಈಗಲೂ ನೆನಪಿದೆ, ಆಗ ನನಗೆ 14 ವರ್ಷ. ಒಬ್ಬ ಉದ್ಯಮಿ ಮರ್ಸಿಡಿಸ್‌ನಲ್ಲಿ ರೆಸ್ಟೋರೆಂಟ್‌ಗೆ ಬರುತ್ತಿದ್ದರು. ಆಗ ನಾನು ನನ್ನಲ್ಲೇ ಹೇಳಿಕೊಂಡೆ, ‘ಒಂದು ದಿನ ನಾನು ಸಹ ಇಂತಹ ಕಾರಿನ ಒಡೆಯನಾಗುತ್ತೇನೆ. ನಾನು ಬಹಳ ಚಿಕ್ಕ ವಯಸ್ಸಿನಲ್ಲೇ ಈ ಕನಸನ್ನು ಸಾಧಿಸಿದೆ.24 ನೇ ವಯಸ್ಸಿನಲ್ಲೇ ಮರ್ಸಿಡಿಸ್ ಖರೀದಿಸಿದೆ”.

ಎಸ್‌ಎಸ್‌ಸಿಯಲ್ಲಿದ್ದಾಗ ಕುಟುಂಬದ ಭಾರ ಹೊತ್ತ ನಾನು ಹೊಟೇಲ್‌ನಲ್ಲಿ ದುಡಿಯಲು ಆರಂಭಿಸಿದೆ. ಮೊದಲು ಪಾತ್ರೆ ತೊಳೆಯುವವನಾಗಿ, ಬಳಿಕ ವೇಟರ್, ಸ್ಟೀವಾರ್ಡ್,ನಂತರ ಸಹಾಯಕ ವ್ಯವಸ್ಥಾಪಕನಾಗಿ ಬೆಳೆಯುತ್ತ ಹೋದೆ. ಬಳಿಕ ನನ್ನದೇ ಆದ ನನ್ನ ಸ್ವಂತ ರೆಸ್ಟೋರೆಂಟ್ ಅನ್ನು ಪ್ರಾರಂಭಿಸಿದೆ. ಇಂದು ನಾನು4-5 ರೆಸ್ಟೋರೆಂಟ್, ಹೋಟೆಲ್, ರೆಸಾರ್ಟ್‌ಗಳ ಮಾಲೀಕ ಹೊಂದಿದ್ದೇನೆ. ಶಾಸಕನಾಗುವ ಮೊದಲೇ ಇದೆಲ್ಲವನ್ನು ಸಂಪಾದಿಸಿದ್ದು”, ಎಂದು ಲೋಬೊ ಹೇಳಿದರು.
ಯುವ ಟೆಕ್ಕಿಗಳಿಗೆ ಲೋಬೊ ಅವರು ನೀಡಿದ ಉಪನ್ಯಾಸವು ಹಾಸ್ಯ ಮತ್ತು ವ್ಯಂಗ್ಯದ ರಸದೂತಣವಾಗಿತ್ತು. ಯಾವುದೇ ಮೂಲಭೂತ ಶೈಕ್ಷಣಿಕ ಪದವಿಯನ್ನು ಸಹ ಪಡೆಯದೆ ತಾನು ಯಶಸ್ಸನ್ನು ಸಾಧಿಸಿದ್ದೇನೆ ಎಂದು ಒಪ್ಪಿಕೊಂಡ ಲೋಬೊ,X, XI ಮತ್ತು XI ತರಗತಿಯನ್ನು ಎರಡನೇ ದರ್ಜೆಯಲ್ಲಿ ಪಾಸು ಮಾಡಿದೆ. ಅಗತ್ಯ ಹಾಜರಾತಿ ಇಲ್ಲದಿದ್ದುದರಿಂದ ಕೊನೆಯ ವರ್ಷದ ಪರೀಕ್ಷೆ ಬರೆಯಲು ನನ್ನ ಪ್ರಾಂಶುಪಾಲರು ನನಗೆ ಅವಕಾಶ ನೀಡಲಿಲ್ಲ. ಇಲ್ಲದಿದ್ದರೆ ನಾನು ಉತ್ತೀರ್ಣನಾಗಿರುತ್ತಿದ್ದೆ ಮತ್ತದು ಎರಡನೇ ದರ್ಜೆಯಲ್ಲಿಯೇ ಆಗಿರುತ್ತಿತ್ತು. ನಾನು ನಿಜಕ್ಕೂ ಬುದ್ಧಿವಂತ, ಶಿಕ್ಷಕರು ಹೇಳಿಕೊಟ್ಟಿದ್ದೆಲ್ಲ ನೇರವಾಗಿ ನನ್ನ ತಲೆಯೊಳಗೆ ಇಳಿಯುತ್ತಿತ್ತು ಎಂದಾಗ ವಿದ್ಯಾರ್ಥಿ ಸಮೂಹ ನಗೆಗಡಲಲ್ಲಿ ತೇಲಿತು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಜಮ್ಮು ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯಿಂದ ೪೫ ಜನ ಸೈನಿಕರು ಹುತಾತ್ಮರಾಗಿದ್ದು, ಈ ರಕ್ಕಸರ ಕೃತ್ಯಕ್ಕೆ ಪ್ರತೀಕಾರ ಕೈಗೊಳ್ಳಲೇಬೇಕು ಎಂದು ಪ್ರಧಾನಿ ಮೋದಿಯನ್ನು ಎಲ್ಲರೂ ಒತ್ತಾಯಿಸುತ್ತಿದ್ದಾರೆ. ಈ ನಡುವೆ ಸಾಮಾಜಿಕ ಹೋರಾಟಗಾರ ಅಣ್ಣಾ ಅಜಾರೆ ಅವರು ಹೇಳಿರುವ ಮಾತು ಎಂತಹವರಲ್ಲೂ ರಕ್ತ ಕುದಿಯುವಂತೆ ಮಾಡಿದೆ.ನಮ್ಮ ಯೋಧರಿಗೆ ಸಹಾಯ ಮಾಡಲು ಸೇನಾ ವಾಹನದ ಡ್ರೈವರ್ ಆಗಿ ಕೆಲಸ ಮಾಡಲು ಶಕ್ತಿ ನನಗೆ ಇದೆ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಹೇಳಿದ್ದಾರೆ. ಲೋಕಪಾಲ ಮಸೂದೆ ಜಾರಿಗೆ ಒತ್ತಾಯಿಸಿ ಉಪವಾಸ…
ಕೈಯಲ್ಲಿ ಊಟ ಮಾಡುವುದು ನಮ್ಮ ಹಿಂದಿನ ಕಾಲದಿಂದಲೂ ರೂಡಿಯಲ್ಲಿದೆ, ಆದರೆ ಇದು ಕೇವಲ ರೂಡಿಯಲ್ಲ, ಇದು ನಮ್ಮ ಸಂಪ್ರದಾಯ. ಇತ್ತೀಚಿಗೆ ದೊಡ್ಡ ದೊಡ್ಡ ನಗರಗಳಲ್ಲಿ ಕೈಯಲ್ಲಿ ಊಟ ಮಾಡುವುದೇ ಮರೆಯಾಗಿದೆ. ಚಮಚಗಳನ್ನ ಬಳಕೆ ಮಾಡುವುದೇ ಹೆಚ್ಚಾಗಿದೆ. ಅನಿವಾರ್ಯವಾಗಿ ಕೈಯಲ್ಲಿ ತಿನ್ನುವವರು
ಒಂದೆಲಗ ಅಥವಾ ಬ್ರಾಹ್ಮೀ ಎಲೆ ಇದಕ್ಕೆ ದಕ್ಷಿಣ ಕನ್ನಡದ ಕಡೆ ತಿಮರೆ ಎಂದು ಕರೆಯುತ್ತಾರೆ. ಒಂದೆಲಗ ಎಂದರೆ ಒಂದು ಎಲೆ ಉಳ್ಳ ಸಸಿ ಎಂದರ್ಥ. ಇದರಲ್ಲಿರುವ ಮದ್ದಿನ ಗುಣ ಅಸಾಮಾನ್ಯವಾದದ್ದು. ಅದು ಏನೆಂದು ತಿಳಿದರೆ ನಿಮಗೆ ಆಗುತ್ತೆ ನೋಡಿ ಆಶ್ಚರ್ಯ.
ನಿಮ್ಮ ಜ್ಞಾನಕ್ಕೆ ಮತ್ತಷ್ಟು ಬಲ KAS ಅಥವಾ ಕೋಟ್ಯಾದಿ ಪತಿಗೆ ಇದು ತುಂಬ ಸಹಾಯ ಮಾಡಲಿದೆ ಲೇಖನ ಓದಿ.
ನಮ್ಮ ದೇಶದ ಸಂಪೂರ್ಣ ಮಾಹಿತಿ ಹೆಮ್ಮೆಯಿಂದ ಶೇರ್ ಮಾಡಿ ಫ್ರೆಂಡ್ಸ್
ಕಿರಿಕ್ ಪಾರ್ಟಿಯ ನಟಿ ರಶ್ಮಿಕಾ ಮಂದಣ್ಣರ ಹವಾ ಈಗ ಟಾಲಿವುಡ್ ನಲ್ಲಿ ತುಂಬಾ ಜೋರಾಗಿದೆ.ಗೀತಾ ಗೋವಿಂದಂ ಚಿತ್ರದ ಯಶಸ್ವಿ ನಂತರ ಯುವನಟರಿಂದ ಹಿಡಿದು ಸ್ಟಾರ್ ಹೀರೋಗಳ ಸಿನಿಮಾಗಳಿವರೆಗೂ ರಷ್ಮಿಕಾರವರೆ ಬೇಕು ಎನ್ನುವಷ್ಟರ ಮಟ್ಟಿಗೆ ಇವರ ಹವಾ ಕ್ರಿಯೇಟ್ ಆಗಿದೆ.
ಇದೇ ತಿಂಗಳ ಇಪ್ಪತ್ತೊಂಬತ್ತನೇ ತಾರೀಕು ವೈಕುಂಠ ಏಕಾದಶಿ ಹಾಗೂ ಮೂವತ್ತರಂದು ಮುಕ್ಕೋಟಿ ದ್ವಾದಶಿ ಇದೆ. ಸೂರ್ಯನು ಉತ್ತರಾಯಣಕ್ಕೆ ಬದಲಾಗುವ ಮೊದಲು ಬರುವ ಧನುರ್ಮಾಸದ ಶುದ್ಧ ಏಕಾದಶಿಯನ್ನೇ ವೈಕುಂಠ ಏಕಾದಶಿ ಅಥವಾ ಮುಕ್ಕೋಟಿ ಏಕಾದಶಿ ಎನ್ನುತ್ತಾರೆ. ಸೂರ್ಯನು ಧನುಸ್ಸುನಲ್ಲಿ ಪ್ರವೇಶಿಸಿದ ಅನಂತರ ಮಕರ ಸಂಕ್ರಮಣದವರೆಗೆ ನಡೆಯುವ ಮಾರ್ಗ ಮಧ್ಯೆ ಮುಕ್ಕೋಟಿ ಏಕಾದಶಿ ಬರುತ್ತದೆ.