ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬಿಗ್ ಬಿ ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್‍ಪತಿ 11ನೇ ಆವೃತ್ತಿಯ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಬಬಿತಾ ತಾಡೆ ಅವರು 1 ಕೋಟಿ ಗೆದ್ದು ಕೋಟ್ಯಧಿಪತಿಯಾಗಿದ್ದಾರೆ. ಸರ್ಕಾರಿ ಶಾಲೆಯೊಂದರಲ್ಲಿ ಬಿಸಿಯೂಟ ತಯಾರಕಿಯಾಗಿ ಕೆಲಸ ಮಾಡುತ್ತಿರುವ ಮಹಾರಾಷ್ಟ್ರ ಮೂಲದ ಅಮರಾವತಿಯವರಾದ ಬಬಿತಾ ತಾಡೆ ಕೆಬಿಸಿ 11ರಲ್ಲಿ ಕೋಟ್ಯಧಿಪತಿಯಾಗಿ ಹೊರಹೊಮ್ಮೆದ್ದಾರೆ. ಪ್ರತಿದಿನ ಸರಿ ಸುಮಾರು 450 ಕ್ಕೂ ಅಧಿಕ ಮಕ್ಕಳಿಗೆ ಇತರೆ ಅಡುಗೆ ಸಹಾಯಕಿಯರ ಜೊತೆ ಸೇರಿ ಊಟ ಸಿದ್ದಪಡಿಸುತ್ತಾರೆ. ಪ್ರತಿ ತಿಂಗಳು 1,500 ರೂ. ಸಂಬಳ ಪಡೆಯುತ್ತಿದ್ದ ಬಬಿತಾ ಅವರು ಈಗ ಕೆಬಿಸಿ 11ನೇ ಆವೃತ್ತಿ ಕಾರ್ಯಕ್ರಮದಿಂದ ಕೋಟ್ಯಧಿಪತಿ ಆಗಿದ್ದಾರೆ.

80 ಸಾವಿರದ ಪ್ರಶ್ನೆಗೆ ಬಬಿತಾ ಅವರು ತಮ್ಮ ಮೊದಲ ಲೈಫ್‍ಲೈನ್ ಬಳಸಿದ್ದರು. ಆ ಪ್ರಶ್ನೆಯೂ ಪುರಾಣ ಕಥೆಗೆ ಸಂಬಂಧಿಸಿದಾಗಿತ್ತು. ಅದಕ್ಕೆ ಅವರು ಆಡಿಯನ್ಸ್ ಪೋಲ್ ಆಯ್ಕೆ ಮಾಡಿಕೊಂಡಿದ್ದರು. ಬಳಿಕ ತಮ್ಮ 1.6 ಲಕ್ಷ ರೂ. ಪ್ರಶ್ನೆಗೆ ಬಬಿತಾ ಅವರು ತಮ್ಮ ಎರಡನೇ ಲೈಫ್‍ಲೈನ್ ಬಳಸಿಕೊಂಡಿದ್ದರು. ಆಗ 50:50 ಆಯ್ಕೆ ಮಾಡಿಕೊಂಡು ಸರಿಯಾದ ಉತ್ತರ ಕೊಟ್ಟಿದ್ದರು. ಬಳಿಕ 50 ಲಕ್ಷದ ಪ್ರಶ್ನೆಗೆ ಅವರು ತಮ್ಮ ಮೂರನೇ ಲೈಫ್‍ಲೈನ್ ಉಪಯೋಗಿಸಿಕೊಂಡರು. ಬಳಿಕ ಕೊನೆ ಹಂತ 1 ಕೋಟಿ ಪ್ರಶ್ನೆಗೆ ಎಕ್ಸಪರ್ಟ್ ಲೈಫ್‍ಲೈನ್ ತೆಗೆದುಕೊಂಡು ಕೋಟ್ಯಧಿಪತಿಯಾದರು.

“ಮೊಘಲ್ ದೊರೆ ಬಹದ್ದೂರ್ ಷಾ ಜಾಫರ್ ಅವರ ಆಸ್ಥಾನದಲ್ಲಿ ಯಾವ ಕವಿ 1857ರ ದಂಗೆಯ ಕುರಿತಾದ ತಮ್ಮ ವೈಯಕ್ತಿಕ ದಸ್ತಾನ್-ಎ-ಗದರ್ ನ್ನು ಬರೆದಿದ್ದಾರೆ?” ಇದು ಬಬಿತಾ ಅವರ 1 ಕೋಟಿಗೆ ಬಿಗ್ ಬಿ ಕೇಳಿದ ಪ್ರಶ್ನೆಯಾಗಿತ್ತು. ಅಂತಿಮವಾಗಿ ಬಬಿತಾ ಅವರಿಗೆ ಜಾಕ್ ಪಾಟ್ ಪ್ರಶ್ನೆಯಾಗಿ “ಈ ಕೆಳಗಿನ ಯಾವ ರಾಜ್ಯಗಳಲ್ಲಿನ ಅಧಿಕ ರಾಜ್ಯಪಾಲರು ಭಾರತದ ರಾಷ್ಟ್ರಪತಿಗಳಾಗಿದ್ದಾರೆ” ಎಂದು ಕೇಳಲಾಗಿತ್ತು. ಆಗ ಅವರಿಗೆ ಉತ್ತರ ಖಚಿತವಿರದಿದ್ದ ಕಾರಣಕ್ಕೆ ಅವರು ಆಟವನ್ನು ಬಿಡಲು ನಿರ್ಧರಿಸಿದರು. ಈ ಸಂದರ್ಭದಲ್ಲಿ ಅಮಿತಾಬ್ ಯಾವ ಉತ್ತರ ಸರಿ ಇರಬಹುದು ಎಂದು ಕೇಳಿದಾಗ ಅವರು ಬಿಹಾರ ಎಂದು ಉತ್ತರಿಸಿದರು. ಆದರೆ ಬಬಿತಾ ಅವರ ಉತ್ತರ ಸರಿಯಾಗಿತ್ತು. ಒಂದು ವೇಲೆ ಬಬಿತಾ ಅವರು ಆಟವನ್ನು ಬಿಡದೆ ಮುಂದುವರಿಸಿದ್ದರೆ ಇಂದು 7 ಕೋಟಿಯ ಒಡತಿಯಾಗುತ್ತಿದ್ದರು.

ತಿಂಗಳಿಗೆ 1,500 ರೂ. ಸಂಬಳ ಪಡೆಯುತ್ತಿದ್ದ ಬಿಸಿಯೂಟ ತಯಾರು ಮಾಡುವ ಸಿಬ್ಬಂದಿ 1 ಕೋಟಿ ರೂ. ಗೆದ್ದಿದ್ದಕ್ಕೆ ಅಮಿತಾಬ್ ಬಚ್ಚನ್ ಕೂಡ ಖುಷಿಯಾದರು. ಬಬಿತಾ ಅವರು 3.2 ಲಕ್ಷ ರೂ. ಗೆದ್ದಾಗ ಈ ಹಣವನ್ನು ಏನು ಮಾಡುತ್ತಿರಿ ಎಂದು ಬಿಗ್ ಬಿ ಕೇಳಿದ್ದರು. ಈ ಹಣದಿಂದ ನಾನು ಮೊಬೈಲ್ ಖರೀದಿಸುತ್ತೇನೆ ಎಂದು ಬಬಿತಾ ಅವರು ಹೇಳಿದ್ದರು. ಇದನ್ನು ನೆನಪಿಟ್ಟುಕೊಂಡು ಬಿಗ್‍ಬಿ ಬಬಿತಾ ಅವರಿಗೆ ಹೊಸ ಮೊಬೈಲ್ ಉಡುಗೊರೆಯಾಗಿ ನೀಡಿದ್ದಾರೆ. ಬಬಿತಾ ಅವರು ಕೆಬಿಸಿ 11 ಕಾರ್ಯಕ್ರಮದಲ್ಲಿ ಕೇವಲ 1 ಕೋಟಿಯ ಮಾತ್ರವಲ್ಲ ಪ್ರೇಕ್ಷಕರ ಮನಸ್ಸನ್ನು ಕೂಡ ಗೆದ್ದಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಚಿಕ್ಕ ಮಕ್ಕಳು ಆಟಿಕೆಗಳ ಜೊತೆ ಆಟವಾಡುವುದು ಸಹಜ. ಆದ್ರೆ ಅಮೇರಿಕಾದ 6 ವರ್ಷದ ಈ ಪೋರ ತಾನು ಆಟವಾದುವುದರ ಮೂಲಕವೇ ಕೋಟಿಗಳ ಸಂಪಾದನೆ ಮಾಡಿದ್ದಾನೆ ಎಂದರೆ ನೀವ್ ನಂಬಲೇಬೇಕು.
ಹಿಂದೂ ಸಂಸ್ಕೃತಿ ಎಂದರೆ ಜಗತ್ಪ್ರಸಿದ್ಧ ಸಂಸ್ಕೃತಿ ಎಂಬುದರಲ್ಲಿ ಸಂಶಯವಿಲ್ಲ. ಹಿಂದೂ ಧರ್ಮದ ಆಚರಣೆಗಳು ಯಾವ ರೀತಿ ಜಗತ್ತು ಒಪ್ಪಿಕೊಂಡಿವೆ ಎಂದರೆ ಮನುಷ್ಯರು ಮಾತ್ರವಲ್ಲದೆ ಇಡೀ ಪ್ರಕೃತಿಯೇ ಸನಾತನ ಧರ್ಮದ ಆಚರಣೆಗೆ ಒಳಪಡುತ್ತದೆ. ಕಣ ಕಣದಲ್ಲೂ ದೇವರನ್ನು ಕಾಣುವ ಹಿಂದೂ ಧರ್ಮ, ಕಲ್ಲು, ಮಣ್ಣು, ನೀರು, ಬೆಂಕಿ, ಪ್ರಾಣಿ ಪಕ್ಷಿ, ಗಿಡ ಮರ, ಹೀಗೆ ಎಲ್ಲಾ ಜೀವಿಗಳಲ್ಲೂ ದೇವರನ್ನು ಕಾಣುವ ಧರ್ಮ ಒಂದಿದ್ದರೆ ಅದು ಹಿಂದೂ ಧರ್ಮ ಮಾತ್ರ ಎಂಬುದು ಸ್ಪಷ್ಟ. ಭೂಮಿಯ ಯಾವುದೇ ಮೂಲೆಗೆ ಹೋದರೂ ಅಲ್ಲಿ…
ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾ ಬೆನ್(100) ಕೊನೆಯುಸಿರೆಳೆದಿದ್ದಾರೆ. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು, ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ತಮ್ಮ ತಾಯಿ 100 ನೇ ವಯಸ್ಸಿನಲ್ಲಿ ನಿಧನರಾಗಿದ್ದಾಗಿ ಪ್ರಧಾನಿ ಮೋದಿ ಟ್ಟಿಟ್ ಮೂಲಕ ತಿಳಿಸಿದ್ದಾರೆ. ಹೀರಾ ಬೆನ್ ಕಳೆದೆರಡು ದಿನದಿಂದ ಅಹ್ಮದಾಬಾದ್ ನ ಯುನ್ ಮೆಹ್ತಾ ಆಸ್ಪತ್ರೆಗೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯದಲ್ಲಿ ಏರುಪೇರಾದ ಕಾರಣ ಎರಡು ದಿನಗಳ ಹಿಂದೆ ಅವರನ್ನು ಗುಜರಾತ್ ನ ಅಹಮದಾಬಾದ್ ನಲ್ಲಿರುವ ಯುಎನ್ ಮೆಹ್ತಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆರೋಗ್ಯದಲ್ಲಿ…
ಇವರು ಇನ್ನೇನು ಕೆಲವೇ ದಿನಗಳಲ್ಲಿ ಮದುವೆಯಾಗಿ ಸತಿ-ಪತಿಗಳಾಗಬೇಕಿತ್ತು.ಆದ್ರೆ ಪ್ರಧಾನಿ ನರೇಂದ್ರ ಮೋದಿ ವಿಚಾರವಾಗಿ ಇವರಿಬ್ಬರಲ್ಲಿ ಚರ್ಚೆಯಾಗಿದ್ದು, ಇವರ ವಾದ ಪ್ರತಿವಾದಗಳು ತಾರಕಕ್ಕೇರಿ, ಜಗಳದಲ್ಲಿ ಕೊನೆಯಾಗಿ ಇವರ ಮದುವೆಯೇ ರದ್ದಾಗಿದೆ.
ಬಾಲಿವುಡ್ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ‘ಮೈ ಲವ್ ಲೆಟರ್ ಟು ಶ್ರೀದೇವೀಸ್ ಫ್ಯಾನ್ಸ್’ ಎಂಬ ಹೆಸರಿನಲ್ಲಿ,ತಮ್ಮ ಫೇಸ್ಬುಕ್ ವಾಲ್’ನಲ್ಲಿ ಬಹುಭಾಷಾ ನಟಿ ಶ್ರೀದೇವಿ ಬದುಕಿನ ಬಗ್ಗೆ ಕೆಲವು ಮಾಹಿತಿಗಳನ್ನು ತೆರೆದಿಟ್ಟಿದ್ದಾರೆ.
ರಾಜಕೀಯ ಮುಖಂಡರು ತಾವು ಏನು ಹೇಳುತ್ತಿದ್ದೇವೆ ಎಂಬ ಪರಿವೆ ಇಲ್ಲದೇ ಇಲ್ಲ ಸಲ್ಲದ ವಿವಾಧತ್ಮಕ ಹೇಳಿಕೆಗಳನ್ನು ಕೊಡುವುದರಲ್ಲಿ ಮೊದಲಿಗರಾಗಿರುತ್ತಾರೆ. ಈಗ ಹಿಂದೂಗಳು ಹಿಂಸಾಚಾರ ಮಾಡುತ್ತಾರೆ ಎಂಬುದನ್ನ ಈ ಹಿಂದೂ ಧರ್ಮದ ಈ ಮಹಾಕಾವ್ಯಗಳಿಗೆ ಹೋಲಿಕೆ ಮಾಡುವುದರ ಮುಖಾಂತರ ವಿವಾದ ಸೃಷ್ಟಿಸಿದ್ದಾರೆ. ಹಿಂದೂಗಳು ಹಿಂಸಾಚಾರ ಮಾಡ್ತಾರೆ ಎಂಬುದಕ್ಕೆ ರಾಮಾಯಣ-ಮಹಾಭಾರತವೇ ಸಾಕ್ಷಿ ಎಂದು ಹೇಳುವ ಮೂಲಕ ಸಿಪಿಐ ಮುಖ್ಯ ಕಾರ್ಯದರ್ಶಿ ಸೀತಾರಾಮ್ ಯಚೂರಿ ವಿವಾದ ಸೃಷ್ಟಿಸಿದ್ದಾರೆ. ಹಿಂದೂಗಳು ಶಾಂತಿ ಪ್ರಿಯರು ಆದ್ರೆ ಕೆಲ ಧರ್ಮದವರು ಹಿಂಸಾಚಾರದಲ್ಲಿ ತೊಡಗಿದ್ದಾರೆ ಎಂದು ಕೆಲ ಬಿಜೆಪಿ…