ಸುದ್ದಿ

‘ವಾಟ್ಸಾಪ್’:ನಿಮ್ಮ ಖಾಸಗಿ ವಿಷಯಗಳನ್ನು ಬಹಿರಂಗಪಡಿಸಬಹುದು ಎಚ್ಚರ…!

453

ವಾಟ್ಸಾಪ್ ಅತ್ಯಂತ ಜನಪ್ರಿಯ ಮೆಸೇಜಿಂಗ್ ಆ್ಯಪ್. ಜಗತ್ತಿನಾದ್ಯಂದ ಸುಮಾರು 1.5 ಬಿಲಿಯನ್ ವಾಟ್ಸಾಪ್ ಬಳಕೆದಾರರಿದ್ದಾರೆ. ವಾಟ್ಸಾಪ್ ಬಳಕೆದಾರರಿಗೆ ಶಾಕಿಂಗ್ ಸುದ್ದಿಯೊಂದಿದೆ.ನಿಮಗೆ ಮುಜುಗರ ಹುಟ್ಟಿಸುವಂತಹ ಖಾಸಗಿ ಕ್ಷಣಗಳನ್ನು ಬಹಿರಂಗಪಡಿಸಬಲ್ಲ ದೋಷವೊಂದು ವಾಟ್ಸಾಪ್ ನಲ್ಲಿ ಕಂಡು ಬಂದಿದೆ.

ಆಕಸ್ಮಿಕವಾಗಿ ಯಾವುದಾದ್ರೂ ಮೆಸೇಜ್ ಕಳಿಸಲ್ಪಟ್ಟಲ್ಲಿ ಅದನ್ನು ಅಳಿಸಿಹಾಕಲು ಡಿಲೀಟ್ ಫಾರ್ ಎವರಿವನ್ ಎಂಬ ಆಪ್ಷನ್ ಇದೆ.ಆದ್ರೆ ನೀವು ಡಿಲೀಟ್ ಮಾಡಿದ ಮೇಲೂ ಆ ಮೆಸೇಜ್ ನ ಅವಶೇಷಗಳು ಉಳಿದುಕೊಳ್ಳುತ್ತಿವೆಯಂತೆ. ಐಫೋನ್ ಹಾಗೂ ಆಂಡ್ರಾಯ್ಡ್ ಡಿವೈಸ್ ಗಳಲ್ಲಿ ಈ ಫೀಚರ್ ಕಾರ್ಯನಿರ್ವಹಿಸುವ ವಿಧಾನದಲ್ಲಿನ ವ್ಯತ್ಯಾಸವೇ ಇದಕ್ಕೆ ಕಾರಣ.

ಶಿತೇಶ್ ಸಚನ್ ಎಂಬ ಸಂಶೋಧಕ ವಾಟ್ಸಾಪ್ ನಲ್ಲಿರೋ ಈ ದೋಷವನ್ನು ಪತ್ತೆ ಮಾಡಿದ್ದಾರೆ. ಡಿಲೀಟ್ ಮಾಡಿದ ಮೇಲೂ ಮೀಡಿಯಾ ಫೈಲ್ ಗಳು ಹಾಗೇ ಉಳಿದುಕೊಳ್ಳುತ್ತವೆ ಎಂಬುದನ್ನು ಶಿತೇಶ್ ಬಹಿರಂಗಪಡಿಸಿದ್ದಾರೆ.

ಡಿಲೀಟ್ ಫಾರ್ ಎವರಿವನ್ ಅನ್ನೋದು ಮೆಸೇಜ್ ಡಿಲೀಟ್ ಮಾಡಲು ಇರುವ ಆಪ್ಷನ್. ಇದು ಮೀಡಿಯಾ ಫೈಲ್ಸ್ ಅಥವಾ ಮೆಸೇಜ್ ಅನ್ನು ಶಾಶ್ವತವಾಗಿ ಅಳಿಸಿಹಾಕುತ್ತದೆ ಎಂಬ ಗ್ಯಾರಂಟಿಯಿಲ್ಲ. ವಾಟ್ಸಾಪ್ ಮೆಸೇಜ್ ಕಾಣಿಸದಂತೆ ಡಿಲೀಟ್ ಮಾಡುವುದಷ್ಟೇ ಅದರ ಉದ್ದೇಶ  ಅಂತಾ ವಾಟ್ಸಾಪ್ ಸ್ಪಷ್ಟಪಡಿಸಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ಮಹಾಲಯ ಅಮಾವಾಸ್ಯೆ ಕಳೆದು ಒಂದು ತಿಂಗಳ ನಂತರ ದಸರಾ ಯಾಕೆ ಬರುತ್ತಿದೆ !

    ಭಾರತೀಯ ಪ್ರಜೆಗಳಲ್ಲಿ ಬಹು ಸಂಖ್ಯಾತರು ಎನಿಸಿಕೊಂಡ ಹಿಂದೂ ಧರ್ಮೀಯರು ಪ್ರತೀ ಮಾಸದಲ್ಲಿ ಯಾವುದಾದರು ಎಳೆಯಲ್ಲಿ ಧಾರ್ಮಿಕ ಹಬ್ಬವನ್ನು ಆಚರಣೆ ಮಾಡುವುದು ಸಂಪ್ರದಾಯ ಮತ್ತು ಇದನ್ನು ಮೈಗೂಡಿಸಿಕೊಂಡು ಬಂದಿದ್ದಾರೆ ಕೂಡ.ಸಾಮಾನ್ಯವಾಗಿ ಎಲ್ಲಾ ಜನಾಂಗದವರು ಆಚರಿಸುವ ಪಿತೃಪಕ್ಷ ಮಹಾಲಯ ಅಮಾವಾಸ್ಯೆ ಮುಗಿದ ತಕ್ಷಣ ನವರಾತ್ರಿ ಆರಂಭವಾಗಿ ಹತ್ತನೇಯ ದಿನ ದಸರಾ ಆಚರಣೆ ಮಾಡುವುದು ನಿಯಮವಾಗಿದೆ.ಆದರೆ ಈ ವರ್ಷ ಅಶ್ವಿಜ ಮಾಸ ಅಧಿಕ ಬಂದಿರುವುದರಿಂದ ಅಂದರೆ ನಿಜ ಅಶ್ವಿಜ, ಅಧಿಕ ಅಶ್ವಿಜ ಎಂದು ಎರಡು ಮಾಸಗಳು ಬಂದಿರುವುದರಿಂದ ದಸರಾ ಹಬ್ಬ ಮಹಾಲಯ…

  • ಸುದ್ದಿ

    ಕಾಲೇಜುಗಳಲ್ಲಿ ಹುಡುಗ-ಹುಡುಗಿ ಒಟ್ಟಾಗಿ ಓಡಾಡುತ್ತಿದ್ದೀರಾ ಹಾಗಾದರೆ ಇದನ್ನು ನೀವು ತಪ್ಪದೇ ತಿಳಿದುಕೊಳ್ಳಬೇಕು,..!!

    ಇಸ್ಲಾಮಾಬಾದ್,  ಇನ್ನುಮುಂದೆ ಕಾಲೇಜು ಕ್ಯಾಂಪಸ್‌ಗಳಲ್ಲಿ ಹುಡುಗ-ಹುಡುಗಿ ಒಟ್ಟಾಗಿ ಓಡಾಡುವಂತಿಲ್ಲ ಎಂದು ಪಾಕಿಸ್ತಾನದ ವಿಶ್ವವಿದ್ಯಾಲಯವೊಂದು ಸುತ್ತೋಲೆ ಹೊರಡಿಸಿದೆ. ಸದಾ ಹೊಸ ಹೊಸ ಕಾನೂನು ಕಟ್ಟಳೆಗಳಿಂದ ಸುದ್ದಿಯಲ್ಲಿರುವ ಪಾಕಿಸ್ತಾನ ಈಗ ಹೊಸ ಕಾನೂನನ್ನು ಜಾರಿಗೆ ತಂದಿದ್ದು, ವಿದ್ಯಾರ್ಥಿಗಳಿಗೆ ತಲೆನೋವಾಗಿದೆ. ಆದರೆ ಪಾಕಿಸ್ತಾನದ ಖೈಬರ್-ಪಖ್ತುಂಕ್ವಾ ಪ್ರದೇಶದ ಚಾರ್ಸಡ್ಡದಲ್ಲಿರುವ ವಿಶ್ವವಿದ್ಯಾಲಯವೊಂದು ವಿಚಿತ್ರ ಸುತ್ತೋಲೆ ಹೊರಡಿಸುವ ಮೂಲಕ ಅಚ್ಚರಿ ಮೂಡಿಸಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. ಹುಡುಗ-ಹುಡುಗಿ ಒಟ್ಟಿಗೆ ಓಡಾಡುವುದು ಇಸ್ಲಾಮಿಕ್ ಸಂಸ್ಕೃತಿಯಲ್ಲ ಹೀಗಾಗಿವಿದ್ಯಾರ್ಥಿಗಳು ಇಂತಹ ಚಟುವಟಿಕೆಗಳಿಂದ ದೂರ ಇರಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಕಾಲೇಜ್ಕ್ಯಾಂಪಸ್‍ನಲ್ಲಿ…

  • ರಾಜಕೀಯ

    2014ರ ಏಪ್ರಿಲ್‌‌ನಿಂದ 2017ರವರೆಗೆ ಮೋದಿ ಸರ್ಕಾರ ವ್ಯಯಿಸಿದ್ದು ಎಷ್ಟು ಸಾವಿರ ಕೋಟಿ ಹಣ ಗೊತ್ತಾ..?ತಿಳಿಯಲು ಈ ಲೇಖನ ಓದಿ ..

    ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೂರೂವರೆ ವರ್ಷದಲ್ಲಿ ಪ್ರಚಾರಕ್ಕಾಗಿ 3,755 ಕೋಟಿ ರೂಪಾಯಿ ವ್ಯಯಿಸಿದೆ ಎಂಬ ವಿಚಾರ ಮಾಹಿತಿ ಹಕ್ಕು ಕಾಯ್ದೆ ಅಡಿ ಸಲ್ಲಿಸಿದ್ದ ಅರ್ಜಿಯಿಂದ ಬಯಲಿಗೆ ಬಂದಿದೆ.

  • ಸಿನಿಮಾ

    ಐಟಿ ದಾಳಿಯ ಬಳಿಕ ಹುಬ್ಬಳ್ಳಿಯಲ್ಲಿ ನಡೆದ ನಟಸಾರ್ವಭೌಮ ಚಿತ್ರದ ಚಿತ್ರದ ಆಡಿಯೋ ರಿಲೀಸ್ ವೇಳೆ ಅಪ್ಪು ಹೇಳಿದ್ದೇನು ಗೊತ್ತೇ?

    ಹುಬ್ಬಳ್ಳಿ ನಗರದ ನೆಹರೂ ಮೈದಾನದಲ್ಲಿ ನಟಸಾರ್ವಭೌಮ ಚಿತ್ರದ ಆಡಿಯೋ ರಿಲೀಸ್ ಆಯೋಜಿ ಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್ ಹುಬ್ಬಳಿಯ ಜೊತೆಗಿನ ತಮ್ಮ ನಂಟನ್ನು ಬಿಚ್ಚಿಟ್ಟರು. ಅವರು “ಹುಟ್ಟಿದರೆ ಕನ್ನಡನಾಡಲಿ ಹುಟ್ಟಬೇಕು” ಹಾಡು ಹಾಡುವ ಮೂಲಕ‌ ಎಲ್ಲರನ್ನು ರಂಜಿಸಿದರು. ಕೊನೆಗೆ ಮಾತನಾಡಿದ ಅವರು, ಹುಬ್ಬಳ್ಳಿಗೆ ಬಂದೊಡನೆ ಸಿದ್ದಾರೂಢರ ಮಠಕ್ಕೆ ತೆರಳಿ ದರ್ಶನ ಪಡೆದೆ. ಈ ನಗರಕ್ಕೆ ಆಗಾಗ ಬರುತ್ತಲೇ ಇರುತ್ತೇನೆ. ದೊಡ್ಮನೆ ಹುಡುಗ ಚಿತ್ರದ ದೃಶ್ಯಗಳನ್ನು ನಾಲ್ಕು ದಿನಗಳ‌ಕಾಲ‌ ಇಲ್ಲೇ ಮಾಡಲಾಗಿತ್ತು ಎಂದರು. ಹುಬ್ಬಳ್ಳಿ ಜನರ…

  • Information, karnataka, ಆರೋಗ್ಯ, ಜೀವನಶೈಲಿ

    ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

  • ಸುದ್ದಿ

    14 ಕೋಟಿ ಬೆಲೆ ಬಾಳುವ ಕೋಣವನ್ನು ನೀವೆಂದಾದರೂ ನೋಡಿದ್ದೀರಾ?ಇದರ ವಿಶೇಷತೆ ಏನು ಗೊತ್ತಾ?

    ಅಬ್ಬಬ್ಬಾ ಎಂದರೆ ಒಂದು ಕೋಣದ ಬೆಲೆ ಎಷ್ಟಿರಬಹುದು? ಒಂದು3 ಲಕ್ಷ , ಇಲ್ಲಾ 10 ಲಕ್ಷ. ಆದರೆ ಈ ಕೋಣದ ಬೆಲೆ ಕೇಳಿದರೆ ನಿಮಗೆ ತಲೆ ತಿರುಗಿ ಬೀಳುವುದು ಖಂಡಿತ ಕೋಣ ವ್ಯಾಪಾರದ ಪುಷ್ಕರ್ ಮೇಳದಲ್ಲಿ ಕಂಗೊಳಿಸಿದ ಈ ಕೋಣದ ಬೆಲೆ ಬರೋಬ್ಬರಿ 14 ಕೋಟಿ ರೂ.! ಪುಷ್ಕರ್ ಜಾತ್ರಗೆ ಬಂದ 14 ಕೋಟಿರೂ. ಮೌಲ್ಯದ  ಭೀಮ ಕೋಣ ಇದೀಗ ದೇಶದೆಲ್ಲೆಡೆ ಸುದ್ದಿಮಾಡ್ತಿದೆ. ಆರು ವರ್ಷದ ಕೋಣವಾಗಿದ್ದು, 1,300 ಕೆ.ಜಿ.ತೂಕ ಹೊಂದಿದೆ. ಈ ವಿಶಿಷ್ಟ ಕೋಣವನ್ನು ಜೋಧಪುರದಿಂದ…