ವಿಜ್ಞಾನ

ಐಐಟಿ ಪ್ರಯೋಗ ಯಶಸ್ವಿಗೊಂಡಿದ್ದು, ಇನ್ಮುಂದೆ ಕೋಳಿಯ ಬದಲು ಗಿಡದಲ್ಲಿ ಮೊಟ್ಟೆಗಳು ಬೆಳೆಯಲಿವೆ ,.!

84

ನವದೆಹಲಿ, ಇಷ್ಟು ದಿನ ಮೊಟ್ಟೆ ಮಾಂಸಾಹಾರಿಯೋ,ಸಸ್ಯಾಹಾರಿಯೋ ಎಂಬ ವಾದ, ಪ್ರತಿವಾದಗಳು ಯಥೇಚ್ಚವಾಗಿ ನಡೆಯುತ್ತಿದ್ದವು. ಕೆಲವರು ಕೋಳಿಯ ಭ್ರೂಣವಾಗಿರುವುದರಿಂದ ಇದು ಮಾಂಸಾಹಾರ ಎಂದು ಹೇಳಿದರೆ, ಅದುಪೂರ್ತಿ ಕೋಳಿಯ ರೂಪು ಪಡೆದುಕೊಳ್ಳದ ಕಾರಣ ಅದು ಸಸ್ಯಾಹಾರಿ ಎಂದು ವಾದಿಸುವವರು ಅಧಿಕ ಸಂಖ್ಯೆಯಲ್ಲಿದ್ದರು. ಆದರೆ ಈಗ ಈ ಎಲ್ಲ ವಾದ ಪ್ರತಿವಾದಗಳಿಗೆ ಬ್ರೇಕ್​ ಹಾಕುವ ಮೂಲಕ ಶುದ್ಧ ಸಸ್ಯ ಜನ್ಯ ಮೊಟ್ಟೆಯನ್ನು ಬೆಳೆಯಬಹುದಾಗಿದೆ!

ದೆಹಲಿಯ ಇಂಡಿಯನ್​ ಇನ್​ಸ್ಟಿಟ್ಯೂಟ್​ ಆಫ್​ಟೆಕ್ನಾಲಜಿಯ (ಐಐಟಿ) ಸಂಶೋಧಕರು ಗಿಡದಲ್ಲಿಮೊಟ್ಟೆಯನ್ನು ಬೆಳೆದಿದ್ದಾರೆ. ನಾನ್​ ಸಾಯ್​, ಗ್ಲುಟೆನ್​ಮುಕ್ತವಾಗಿರುವ ಈ ಮೊಟ್ಟೆಯನ್ನು ದೆಹಲಿಐಐಟಿಯಲ್ಲಿ ಆಯೋಜನೆಗೊಂಡಿದ್ದ ಕೈಗಾರಿಕಾ ದಿನ-2019ರಲ್ಲಿ ಮೊದಲಬಾರಿಗೆ ಪ್ರದರ್ಶಿಸಲಾಯಿತು. ಈ ಮೊಟ್ಟೆಗಳು ಕೋಳಿಮೊಟ್ಟೆಯ ಆಕಾರದ ಬದಲು ಕ್ಯೂಬ್​(ಘನ) ಆಕಾರದಲ್ಲಿ ಲಭಿಸಲಿವೆ. ಇವನ್ನು ಸುಲಭವಾಗಿ ಪುಡಿಮಾಡಿ, ನೀರಿನಲ್ಲಿ ಬೆರೆಸಿ ಸಾಸ್​ಪಾನ್​ನಲ್ಲಿ ಹಾಕಿ ಆಮ್ಲೆಟ್​ಮಾಡಿಕೊಂಡು ತಿನ್ನಬಹುದಾಗಿದೆ! ಇದಕ್ಕೂ ಕೋಳಿ ಮೊಟ್ಟೆಗಳಿಂದತಯಾರಿಸುವ ಆಮ್ಲೆಟ್​ನಷ್ಟೇ ವೆಚ್ಚವಾಗಲಿದೆಯಂತೆ!

ಹೆಸರುಬೇಳೆಆಧಾರಿತ ಮೊಟ್ಟೆ! : ಹೌದು. ದೆಹಲಿ ಐಐಟಿಯಗ್ರಾಮೀಣಾಭಿವೃದ್ಧಿ ಮತ್ತು ತಂತ್ರಜ್ಞಾನ ವಿಭಾಗದಸಹಾಯಕ ಪ್ರೊಫೆಸರ್​ ಕಾವ್ಯಾ ದಾಶೋಹರ ಅವರಪ್ರಕಾರ ಹೆಸರುಬೇಳೆ ಬೆಳೆ ಆಧಾರಿತವಾಗಿ ಸಸ್ಯಾಹಾರಮೊಟ್ಟೆಯನ್ನು ಬೆಳೆಯಲಾಗಿದೆ.

ಭಾರತೀಯರು ಸಾಮಾನ್ಯವಾಗಿ ಬೇಳೆಕಾಳುಗಳ ಮೂಲಕ ಅಗತ್ಯವಾದ ಪೌಷ್ಟಿಕಾಂಶಗಳನ್ನು ಪಡೆದುಕೊಳ್ಳುತ್ತಾರೆ. ಹಾಗಾಗಿ, ನಾವು ಈ ನಿಟ್ಟಿನಲ್ಲಿ ಪ್ರಯೋಗಗಳನ್ನು ಆರಂಭಿಸಿದೆವು. ಹೆಸರುಬೇಳೆಯಲ್ಲಿ ಕೋಳಿ ಮೊಟ್ಟೆಯ ಬಿಳಿ ಭಾಗದಲ್ಲಿರುವಷ್ಟೇ ಪೌಷ್ಟಿಕಾಂಶ ಇರುವುದು ಖಚಿತವಾಯಿತು. ಆದ್ದರಿಂದ, ಹೆಸರುಬೇಳೆ ಗಿಡ ಆಧಾರಿತವಾದ ಸಸ್ಯಾಹಾರ ಮೊಟ್ಟೆಯನ್ನು ಬೆಳೆಯಲು ಮುಂದಾದೆವು ಎಂದು ತಿಳಿಸಿದರು. ಕೋಳಿ ಮೊಟ್ಟೆಯಲ್ಲಿ ಕೊಲೆಸ್ಟ್ರಾಲ್​ ಹಾಗೂ ಅಲರ್ಜಿ ಸಮಸ್ಯೆಗಳು ಇರುತ್ತವೆ. ಆದರೆ, ಸಸ್ಯಾಹಾರದ ಮೊಟ್ಟೆಯಲ್ಲಿ ಈ ಸಮಸ್ಯೆಗಳಿಲ್ಲ. ಜತೆಗೆ ಕೋಳಿ ಮೊಟ್ಟೆ ತಿನ್ನದೇ ಇರುವವರು ಸಸ್ಯಾಹಾರ ಮೊಟ್ಟೆಯನ್ನು ತಿಂದು, ಕೋಳಿ ಮೊಟ್ಟೆಯಲ್ಲಿ ದೊರೆಯುತ್ತಿದ್ದ ಎಲ್ಲ ಪೌಷ್ಟಿಕಾಂಶಗಳನ್ನು ಪಡೆದುಕೊಳ್ಳಬಹುದು ಎಂದರು. (ಏಜೆನ್ಸೀಸ್​)

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • Health

    ಬೊಜ್ಜನ್ನು ಕರಗಿಸಿ ತೂಕವನ್ನು ಕಡಿಮೆ ಮಾಡುವ ರುಚಿಕರ ಹಣ್ಣುಗಳು.

    ದಿನನಿತ್ಯ ವ್ಯಾಯಾಮ, ಡಯಟ್, ಕಟ್ಟುನಿಟ್ಟಾದ ಆಹಾರ ಮಾಡಿದರೂ ಸಹ ಬೊಜ್ಜು ಕರಗುವುದಿಲ್ಲ. ಹಲವು ಪ್ರಯತ್ನ ಮಾಡಿದರು ಕೆಲವರಿಗೆ ಬೊಜ್ಜು ಕರಗಿಸಲು ಹಾಗುವುದಿಲ್ಲ. ಆದರೆ ಕೆಲವು ಹಣ್ಣುಗಳನ್ನು ಸೇವಿಸಿದರೆ ತೂಕ ಕಡಿಮೆ ಮಾಡಬಹುದು ಎಂದು ಇತ್ತೀಚಿನ ಅಧ್ಯಯನಗಳು ತಿಳಿಸಿದೆ. ಹೌದು ನಿಮಗೆ ಇಷ್ಟವಾದ ರುಚಿಕರವಾದ ಕೆಲವು ಹಣ್ಣುಗಳಿಂದ ಬೊಜ್ಜನ್ನು ಕರಗಿಸಿ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರ ಜೊತೆಗೆ ಈ ಹಣ್ಣುಗಳಲ್ಲಿ ನಮ್ಮ ದೇಹಕ್ಕೆ ಬೇಕಾದ ಆರೋಗ್ಯಕರ ಫೈಬರ್ ಮತ್ತು ಪೋಷಕಾಂಶಗಳಿರುತ್ತವೆ. ಈಗ ನಾವು ದಿನನಿತ್ಯ ಸೇವನೆ…

  • ಉಪಯುಕ್ತ ಮಾಹಿತಿ

    ಪ್ರಪಂಚದ ಮೊದಲ ವರ್ಲ್ಡ್ ಮ್ಯಾಪ್ ಕಂಡುಹಿಡಿದದ್ದು ಯಾರೂ ಗೊತ್ತಾ..?ಗೊತ್ತಾದ್ರೆ ತುಂಬಾ ಹೆಮ್ಮೆ ಪಡ್ತೀರಾ!ಮುಂದೆ ಓದಿ…

    ಇಡೀ ಭೂಮಿ ಕೌತುಗಳ ಆಗರ, ಭಾರತ ಹಾಗು ಇಲ್ಲಿನ ಹಿಂದೂ ಧರ್ಮವನ್ನು ಇಂದು ಇಡೀ ವಿಶ್ವದಾದ್ಯಂತ ಇರುವ ಬಹತೇಕ ದೇಶಗಳು ಸಂಶೋಧನೆ ಮಾಡುತಿದ್ದಾವೆ..! ಶ್ರೀ ಕೃಷ್ಣನ ದ್ವಾರಕೆಯ ಒಂದು ಪ್ರಾಂತ್ಯ ಸ್ಯಾಟಲೈಟ್ ನಿಂದ ನೋಡಿದರೆ ಕೃಷ್ಣನಿಗೆ ಪ್ರಿಯವಾದ ನವಿಲುಗರಿಯಂತೆಯೇ ಕಾಣುತ್ತದೆ. ಮಾನಸ ಸರೋವರ ಹೃದಯದ ಆಕಾರದಲ್ಲಿರುವುದು, ಕುಕ್ಕೆ ಸುಬ್ರಹ್ಮಣ್ಯದಲ್ಲಿರುವ ಕುಮಾರ ಪರ್ವತ ಸರ್ಪಗಳ ಹೆಡೆಯನ್ನೇ ಹೋಲುವುದು.

  • ಸುದ್ದಿ

    ಬರದಿಂದ ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ಮೊರೆ ಹೋದ ರೈತರು…..!

    ಜಿಲ್ಲೆಯ ನವಲಗುಂದದಲ್ಲಿ ಮುಂಗಾರು ಮಳೆ ನಂಬಿ ಬಿತ್ತನೆ ಮಾಡಿದ್ದ ರೈತರು ಈಗ ತಮ್ಮ ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್‌ಗಳು ಮೊರೆ ಹೋಗಿದ್ದಾರೆ. ಹೌದು. ಸಾವಿರಾರು ರೂಪಾಯಿ ಖರ್ಚು ಮಾಡಿ ರೈತರು ಬಾಡಿಗೆ ನೀರು ತರಿಸಿ ತಮ್ಮ ಬೆಳೆಗಳು ಉಸಿರಾಡುವಂತೆ ಮಾಡುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ನವಲಗುಂದ ತಾಲೂಕಿನಲ್ಲಿ ಭೀಕರ ಬರ ಇದೆ. ಈ ಸಲ ಮೇ ಅಂತ್ಯದಲ್ಲಿ ಸ್ವಲ್ಪ ಮಳೆಯಾಗಿತ್ತು. ಇದನ್ನು ನಂಬಿದ ರೈತರು, ಬಿ.ಟಿ. ಹತ್ತಿ ಮತ್ತು ಹೆಸರು ಬಿತ್ತನೆ ಮಾಡಿದ್ದರು. ಬೆಳೆ ಮೊಳಕೆಯೊಡೆದು ಈಗ ನೆಲ…

  • ಉಪಯುಕ್ತ ಮಾಹಿತಿ

    ನಿಮಗೆ ಗೊತ್ತಿರುವ ಮೆಕ್ಕೆಜೋಳದ ರೇಷ್ಮೆಯ ಉಪಯೋಗಗಳು..!ತಿಳಿಯಲು ಈ ಲೇಖನ ಓದಿ…

    ನಾವು ಮೆಕ್ಕೆಜೋಳದ ರೇಷ್ಮೆಯನ್ನು ಹಾಗೇ ತಿನ್ನಬಹುದು ಅಥವಾ ನೀರಿನೊಂದಿಗೆ ಬೆರೆಸಿ ದ್ರಾವಣ ರೂಪದಲ್ಲಿ ಕುಡಿಯಬಹುದು ಅಥವಾ ನಿಂಬೇ ಪಾನೀಯವಾಗಿ ಸೇವಿಸಬಹುದು ನೀವು ಮೆಕ್ಕೆಜೋಳದ ರೇಷ್ಮೆಯನ್ನು ಒಂದು ದಿನ ನೀರಿನಲ್ಲಿ ನೆನೆಸಿ ಸೂರ್ಯನ ಬಿಸಿಲಿನಲ್ಲಿ ಇಟ್ಟು ಅಂದೇ ರಾತ್ರಿ ಜೇನುತುಪ್ಪದೊಂದಿಗೆ ಸೇರಿಸಿ ಬೇಕಾದಾಗ ಕುಡಿಯಬಹುದು.

  • ಸುದ್ದಿ

    ಪ್ರೇಯಸಿಗಾಗಿ ಸಿಡ್ನಿಯಿಂದ ಬಂದ ಪಾಗಲ್ ಪ್ರೇಮಿ..ಪ್ರಿಯಕರನಿಗೆ ಕಾದಿತ್ತು ಶಾಕ್ ..!ಏನು ಗೊತ್ತಾ?

    ಇದೊಂದು ಪಾಗಲ್‌ ಪ್ರೇಮಿಯ ಕಥೆ. ಮ್ಯಾಟ್ರಿಮೋನಿಯಲ್ಲಿ ಹುಡುಗಿಯ ಭಾವಚಿತ್ರ ನೋಡಿಕೊಂಡು ಮದುವೆಯಾದರೆ ಅವಳನ್ನೇ ಆಗುತ್ತೇನೆ. ಬೇಕೇ ಬೇಕು ಅವಳೇ ಬೇಕೆಂದು ಯುವತಿಯ ಮನೆ ಎದುರು ಕಳೆದ ನಾಲ್ಕು ದಿನಗಳಿಂದ ಸಾಫ್ಟ್‌ವೇರ್‌ ಎಂಜಿನಿಯರ್‌ನೊಬ್ಬ ಧರಣಿ ನಡೆಸು. ನಡೆಸುತ್ತಿರುವ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಪ್ರಸ್ತುತ ಪ್ರೀತಿಗಾಗಿ ಆಸ್ಟ್ರೇಲಿಯಾದಲ್ಲಿ ವಾಸವಾಗಿರುವ ಅನಿವಾಸಿ ಭಾರತೀಯ ಆಂಧ್ರ ಮೂಲದ ಚಕ್ರವರ್ತಿ ಎಂಬ ಯುವನೋರ್ವ ರಾಜ್ಯದ ಹುಬ್ಬಳ್ಳಿ ಮೂಲದ ಶ್ವೇತಾ ಎಂಬ ಹುಡುಗಿ ಬೇಕು. ‘ನೀನು ಇಲ್ಲ ಅಂದ್ರೆ ಬೇರೇನು ಇಲ್ಲ. ನನ್ನ ಮದುವೆ ಮಾಡಿಕೊಳ್ಳಿ…