ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಾವು ಪ್ರತಿದಿನ ನಡೆಯುತ್ತೇವೆ. ಆದರೆ, ಹೀಗೆ ಸುಮ್ಮನೆ ನಡೆಯೋಕೆ ಯಾರಾದ್ರೂ ದುಡ್ಡು ಕೊಡ್ತಾರಾ? ನಾವು ಕೊಡ್ತೀವಿ ಅಂತಿದಾವೆ ಈ ವಾಕಿಂಗ್ ಆ್ಯಪ್‌ಗಳು. ಮತ್ತೇಕೆ ತಡ? ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ, ವಾಕ್ ಮಾಡೋಕೆ ಶುರು ಹಚ್ಕೊಳ್ಳಿ… ಹಣ ಮತ್ತು ಆರೋಗ್ಯ ಎರಡೂ ಗಳಿಸಿ. ವ್ಯಾಯಾಮ, ವಾಕಿಂಗ್, ರನ್ನಿಂಗ್- ಯಾವುದೇ ಆಗಲಿ, ನಮ್ಮ ಆರೋಗ್ಯಕ್ಕಾಗಿ, ಖುಷಿಗಾಗಿ ಮಾಡುತ್ತೇವೆ ಅಲ್ಲವೇ? ಆದರೆ, ಅದಕ್ಕೂ ಯಾರಾದರೂ ಹಣ ಕೊಡ್ತಾರೆ ಅಂದ್ರೆ? ಡಬಲ್ ಖುಷಿ ಆಗ್ದೇ ಇರುತ್ತಾ?

ಇದಕ್ಕಾಗಿ ನೀವು ಹೆಚ್ಚೇನು ಕಷ್ಟ ಪಡಬೇಕಾಗಿಲ್ಲ. ಈ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡ್ರೆ ಸಾಕು. ಹಾಗಂತ ಹಣ ಮಾಡೋಕಂತಾನೇ ವಾಕ್ ಮಾಡ್ಬೇಡಿ, ಏಕೆಂದರೆ ಇದು ನಿಮ್ಮ ಪಾಕೆಟ್ ಮನಿಯಾಗುತ್ತದೆಯೇ ಹೊರತು ಸ್ಯಾಲರಿಯಲ್ಲ. ಈ ಆ್ಯಪ್‌ಗಳ ನಡುವೆ ಹಲವು ಒಂದೇ ತರ ಇದ್ದರೂ ರಿವಾರ್ಡ್ ಪಾಯಿಂಟ್ಸ್ ಕೊಡುವುದರಲ್ಲಿ, ಪೇಮೆಂಟ್ ವಿಧಾನಗಳಲ್ಲಿ ವ್ಯತ್ಯಾಸವಿದೆ. ಇಷ್ಟಕ್ಕೂ ನೀವು ಇದನ್ನು ಡೌನ್‌ಲೋಡ್ ಮಾಡಿಕೊಂಡರೆ ಏನಾಗುತ್ತಂದ್ರೆ, ನಿಮಗೂ ವಾಕಿಂಗ್‌ಗೆ ಮೂಡ್ ಬರುತ್ತದೆ, ರಿವಾರ್ಡ್‌ನಿಂದಾಗಿ ನಿಮ್ಮ ಗೆಳೆಯರನ್ನೂ ಫಿಟ್ನೆಸ್ ಕಡೆ ಸೆಳೆಯುತ್ತೀರಿ ಅಲ್ಲದೆ, ಸುಮ್ಮನೇ ದಿನಾ ಮಾಡುವ ಕೆಲಸಕ್ಕೇ ಯಾರೋ ದುಡ್ಡು ಕೊಡ್ತಾರಂದ್ರೆ ಖುಷೀನೇ ತಾನೇ? ಅವೆಲ್ಲ ಏನು, ಯಾವ ಅಪ್ಲಿಕೇಶನ್‌ಗಳಿವು ಎಂದು ನೋಡಿ ಬರೋಣ.

1. ಸ್ವೆಟ್‌ಕಾಯ್ನ್ :ಇದು ವಾಕ್ ಮಾಡಲು ದುಡ್ಡು ನೀಡುವ ಆ್ಯಪ್‌ಗಳಲ್ಲಿ ಬಹಳ ಜನಪ್ರಿಯವಾದುದು. ಇದು ಫೋನ್‌ನಲ್ಲಿ ರನ್ ಮೋಡ್‌ನಲ್ಲಿದ್ದರೆ ಸಾಕು, ನೀವು ದಿನದಲ್ಲಿ ಎಷ್ಟು ಹೆಜ್ಜೆ ನಡೆದಿರು ಎಂಬುದನ್ನಿದು ಲೆಕ್ಕ ಹಾಕುತ್ತಿರುತ್ತದೆ. ಓಡಿದರೆ ಬಹಳ ಬೇಗ ಹೆಚ್ಚು ಸ್ವೆಟ್‌ಕಾಯಿನ್ಸ್ ಪಡೆಯಬಹುದು. ಈ ಕರೆನ್ಸಿಯನ್ನುರಿವಾರ್ಡ್ ಅಥವಾ ಕ್ಯಾಶ್ ಆಗಿ ಪಡೆದುಕೊಳ್ಳಬಹುದು. ಗಿಫ್ಟ್ ಕಾರ್ಡ್ ಆಯ್ಕೆ ಕಡಿಮೆ ಇದೆ. ಆದರೆ, 20,000 ಸ್ವೆಟ್‌ಕಾಯಿನ್ಸ್ ಒಟ್ಟು ಮಾಡಿದರೆ ಪೇಪಲ್ ಮೂಲಕ 1 ಸಾವಿರ ಡಾಲರ್ ಹಣವನ್ನು ಪಡೆಯಬಹುದು. ನೆನಪಿರಲಿ, ಇದು ನೀವು ಮನೆಯೊಳಗೆ ನಡೆದ ಹೆಜ್ಜೆಗೆಲ್ಲ ಲೆಕ್ಕ ಕೊಡೋಲ್ಲ. ಏನಿದ್ದರೂ ಹೊರಾಂಗಣದಲ್ಲೇ ನಡೆಯಬೇಕು. ಫೋನ್‌ನ ಜಿಪಿಎಸ್ ಬಳಸಿಕೊಳ್ಳುತ್ತದೆ. ಈ ಅಪ್ಲಿಕೇಶನ್ ಬಳಸಿ ನಿಮ್ಮ ದೈನಂದಿನ ಖರ್ಚಷ್ಟನ್ನಾದರೂ ವರ್ಷದಲ್ಲಿ ಪಡೆಯಬಹುದು.
2. ಲೈಫ್ ಕಾಯಿನ್ : ಇದು ಕೂಡಾ ಸ್ವೆಟ್‌ಕಾಯಿನ್‌ನಂತೆಯೇ ಕೆಲಸ ಮಾಡುತ್ತದೆ. ಇಲ್ಲಿ ಕೂಡಾ ಲೈಫ್‌ಕಾಯಿನ್ ಬದಲಾಗಿ ಕರೆನ್ಸಿ ಎಕ್ಸ್‌ಚೇಂಜ್ ಮಾಡಿಕೊಳ್ಳಬಹುದು. ಇದನ್ನು ಗಿಫ್ಟ್ ಕಾರ್ಡ್, ಕ್ರೀಡಾ ವಸ್ತುಗಳು, ಆ್ಯಪಲ್ ಐಫೋನ್ ಎಕ್ಸ್, ಆ್ಯಪಲ್ ಏರ್‌ಪಾಡ್ಸ್, ಆ್ಯಪಲ್ ವಾಚ್, ಹಾಗೂ ಅಮೇಜಾನ್, ಪೇಪಲ್‌ನಲ್ಲಿ ಬ್ಯಾಲೆನ್ಸ್ ಆಗಿ ಬದಲಾಯಿಸಿಕೊಳ್ಳಬಹುದು. ಇದರ ಅಂಬಾಸಿಡರ್ ಪ್ರೋಗ್ರಾಂನ ಸದಸ್ಯರಾದರೆ ಮತ್ತಷ್ಟು ಹಣವನ್ನು ಗಳಿಸಬಹುದು.

3. ಅಚೀವ್‌ಮೆಂಟ್ :ವಾಕಿಂಗ್, ಸ್ವಿಮ್ಮಿಂಗ್,. ಬೈಕಿಂಗ್ ಅಥವಾ ಸುಮ್ಮನೆ ಆಟವಾಡುವುದಕ್ಕೆ ಈ ಆ್ಯಪ್ ನಿಮಗೆ ಹಣ ನೀಡುತ್ತದೆ. ರಿಜಿಸ್ಟರ್ ಮಾಡಿದ್ದಕ್ಕೆ 6 ಪಾಯಿಂಟ್ಸ್, ಅಲ್ಲದೆ, ಪ್ರತಿದಿನ ನಿಮ್ಮ ಫುಡ್ ಇಂಟೇಕ್, ನಿದ್ರಾ ಸೈಕಲ್, ತೂಕಇಳಿಕೆ, ಸಾಧನೆಗಳನ್ನು ಸೋಷ್ಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುವುದಕ್ಕೂ ಪಾಯಿಂಟ್ಸ್ ನೀಡುತ್ತದೆ. ಪ್ರತಿದಿನ ನಿಮ್ಮ ಚಟುವಟಿಕೆಗಳನ್ನು ಈ ಆ್ಯಪ್‌ನಲ್ಲಿ ಹಾಕುವುದಕ್ಕೆ ಗರಿಷ್ಠ 80 ಪಾಯಿಂಟ್ಸ್ ಹಾಗೂ ನಡಿಗೆಗೆ ಮತ್ತಷ್ಟು ಪಾಯಿಂಟ್ಸ್ ಸಿಗುತ್ತದೆ. 10000 ಪಾಯಿಂಟ್ಸ್‌ಗೆ 10 ಡಾಲರ್ ನೀಡಲಾಗುತ್ತದೆ.
4. ಸ್ಟೆಪ್‌ಬೆಟ್ : ಇದೂ ಕೂಡಾ ವಾಕಿಂಗ್‌ಗೆ ಹಣ ನೀಡುವ ಪಾಪುಲರ್ ಆ್ಯಪ್. ನಿಮ್ಮ ವರ್ಕೌಟ್ ರೂಟಿನ್‌ನಿಂದ ಹಣ ಗಳಿಸಬೇಕೆಂದರೆ ಇದು ನಿಮಗೆ ಪರ್ಫೆಕ್ಟ್ ಆ್ಯಪ್. ಇದರಲ್ಲಿ ನೀವು ಗುರಿ ಸಾಧಿಸಿ ಹಣ ಪಡೆಯಲೂ ಅವಕಾಶವಿದೆ, ಗುರಿ ಸಾಧಿಸದೆ ಹೋದರೆ ಹಣ ಕಳೆದುಕೊಳ್ಳಲೂಬೇಕಾಗುತ್ತದೆ. ಪ್ರೊಫೈಲ್ ಸೆಟ್ ಮಾಡಿದ ಕೂಡಲೇ ಆ್ಯಪ್ ನಿಮ್ಮ ಫಿಟ್ನೆಸ್ ಲೆವೆಲ್ ಅಳೆಯುತ್ತದೆ. ಪ್ರತಿ ವಾರ ಹಣ ಗೆಲ್ಲಲು ಒಂದಿಷ್ಟು ಗುರಿಗಳನ್ನು ನೀಡುತ್ತದೆ. ಸುಮಾರು 40 ಡಾಲರ್ ಹಣ ನೀವಿಲ್ಲಿ ಬೆಟ್ ಕಟ್ಟಬೇಕು. ಗುರಿ ಸಾಧಿಸದೆ ಹೋದರೆ ಇಷ್ಟನ್ನು ಕಳೆದುಕೊಳ್ಳಬೇಕಾಗುತ್ತದಲ್ಲ ಎಂಬ ಭಯಕ್ಕೇ ವರ್ಕೌಟ್ ಮಾಡೇಮಾಡುತ್ತೀರಿ.
5.ಹೈಜಿ : ಹೈಜಿ ಆ್ಯಪ್ ಡೌನ್‌ಲೋಡ್ ಮಾಡಿಕೊಂಡ ಬಳಿಕ ಹತ್ತಿರದ ಮೆಡಿಕಲ್ ಸ್ಟೋರ್ ಅಥವಾ ದೊಡ್ಡ ಆಹಾರ ಮಳಿಗೆಯಲ್ಲಿ ಉಚಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬಹುದು. ಆ ಮೂಲಕ ನಿಮ್ಮ ತೂಕ, ಬಿಪಿ, ಪಲ್ಸ್, ಹೆಜ್ಜೆಗಳು, ಬಿಎಂಐ, ಜಿಮ್ ಚೆಕ್ ಇನ್, ಬಾಡಿ ಫ್ಯಾಟ್ ಎಲ್ಲವನ್ನೂ ಹೈಜಿಗೆ ಅಪ್ಡೇಟ್ ಮಾಡಿ ಟ್ರ್ಯಾಕ್ ಮಾಡಬಹುದು. ಇಲ್ಲಿ ಕೂಡಾ ನಡೆಯಲು, ಟಾಸ್ಕ್ ಕಂಪ್ಲೀಟ್ ಮಾಡಲುಪಾಯಿಂಟ್ಸ್ ಸಿಗುತ್ತವೆ. ಅವನ್ನು ಹಣವಾಗಿ ರಿಡೀಮ್ ಮಾಡಿಕೊಳ್ಳಬಹುದು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹಿಂದೂ ದೇವರುಗಳ ಭಾವಚಿತ್ರಗಳನ್ನು ಬಳಸಿಕೊಂಡು ಇತ್ತೀಚೆಗೆ ಇ – ಕಾಮರ್ಸ್ ಜಾಲತಾಣದ ಪ್ರಮುಖ ಅಮೆಜಾನ್‌ನಲ್ಲಿ ಶೂ, ರಗ್‌ಗಳು ಹಾಗೂ ಟಾಯ್ಲೆಟ್ ಸೀಟ್ ಕವರ್‌ಗಳನ್ನು ಮಾರಾಟ ಮಾಡಲಾಗುತ್ತಿದೆ. ಈ ಹಿನ್ನೆಲೆ ಅಮೆಜಾನ್ ವಿರುದ್ಧ ಹಲವು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇ – ಕಾಮರ್ಸ್ ಜಾಲತಾಣದ ಪ್ರಮುಖ ಅಮೆಜಾನ್ ಮತ್ತೆ ಟೀಕೆಗೆ ಗುರಿಯಾಗಿದೆ. ಈ ಬಾರಿ ಹಿಂದೂ ದೇವರ ಭಾವಚಿತ್ರಗಳುಳ್ಳ ಟಾಯ್ಲೆಟ್ ಸೀಟ್ ಕವರ್‌ಗಳನ್ನು, ಶೂಗಳನ್ನು ಹಾಗೂ ರಗ್‌ಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ. ಹಿಂದೂ ದೇವರುಗಳ ಭಾವಚಿತ್ರಗಳನ್ನು ಬಳಸಿಕೊಂಡು ಇತ್ತೀಚೆಗೆ…
ಸೆಲ್ಫಿ ಫೋಟೋ, ಇದರ ಬಗ್ಗೆ ನಿಮಗೆ ಹೇಳೋ ಅವಶ್ಯಕತೆಯಿಲ್ಲ. ಇವತ್ತಿನ ದಿನಗಳಲ್ಲಿ ಅಸ್ಟೊಂದು ಕ್ರೇಜ್ ಆಗಿದೆ ಈ ಸೆಲ್ಫಿ. ಅದರಲ್ಲೂ ಈ ನಮ್ಮ ಯುವ ಸುಮೂಹದಲ್ಲಿ ಹೆಚ್ಚಾಗಿದೆ. ಎಲ್ಲಿ ಚೆಂದ ಕಾಣುತ್ತೋ ಅಲ್ಲಿ ಸೆಲ್ಫಿ ಫೋಟೋ ತೆಗೆದುಕೊಳ್ಳತಾರೆ.
ಎಲ್ಲಿ ನೋಡಿದರು ಸೆಲ್ಫಿ ಸೆಲ್ಫಿ ಅದರಲ್ಲೂ ಚಂದ ಚಿಹ್ನದ ಕಾಣುವ ಹೊಲದಲ್ಲಿ ಗಿಡ ಮರಗಳ ಮದ್ಯೆ ಹೀಗೆ ಎಲ್ಲಿ ಅಂದರೆ ಅಲ್ಲಿ ಸೆಲ್ಫಿ ಕ್ರೇಜ್.
ಪ್ರತಿ ವರ್ಷದಂತೆ ಜನವರಿ ತಿಂಗಳಿನಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕಿನ ಅಡಿಯಲ್ಲಿ ಅರ್ಜಿ ಆಹ್ವಾನಿಸಲಿದ್ದಾರೆ
ನೆನಪಿನಲ್ಲಿಟ್ಟುಕೊಳ್ಳಬೇಕಾದ ಪ್ರಮುಖ ವಿಷಯಗಳು: ನಮ್ಮ ಆರೋಗ್ಯ ಉತ್ತಮ ವಾಗಿರಲು ಇವು ಮುಖ್ಯ 1. ಬಿಪಿ: 120/80 2. ನಾಡಿ: 70 – 100 3. ತಾಪಮಾನ: 36.8 – 37 4. ಉಸಿರು: 12-16 5. ಹಿಮೋಗ್ಲೋಬಿನ್: ಪುರುಷ -13.50-18 ಹೆಣ್ಣು – 11.50 – 16 6. ಕೊಲೆಸ್ಟ್ರಾಲ್: 130 – 200 7. ಪೊಟ್ಯಾಸಿಯಮ್: 3.50 – 5 8. ಸೋಡಿಯಂ: 135 – 145 9. ಟ್ರೈಗ್ಲಿಸರೈಡ್ಗಳು: 220 10. ದೇಹದಲ್ಲಿನ ರಕ್ತದ…
ಈಗಂತೂ ಈ ಜಗತ್ತಿನಲ್ಲಿ ಒಬ್ಬರೊನ್ನೊಬ್ಬರು ನಂಬುವುದು ತುಂಬಾ ಕಷ್ಟ. ಯಾರ ಮೇಲೂ ಯಾರಿಗೂ ನಂಬಿಕೆ ಅನ್ನುವುದೇ ಇಲ್ಲ.ಇದಕ್ಕೆ ಕಾರಣಗಳು ಬೇಕಾದಷ್ಟು ಇವೆ. ನಮ್ಮಲ್ಲಿರುವ ಅಥವಾ ಬೇರೆಯವರಲ್ಲಿರುವ ಕೆಲವೊಂದು ನ್ಯೂನತೆಗಳು ಬೇರೆಯವರನ್ನು ನಂಬದಂತೆ ಮಾಡಿರುತ್ತವೆ.
ಕರ್ನಾಟಕದ ರಾಜಕೀಯ ದೆಹಲಿಯಲ್ಲೂ ಜೋರು ಸದ್ದು ಮಾಡುತ್ತಿದೆ. ಸೋಮವಾರವೂ ಲೋಕಸಭೆಯಲ್ಲಿ ಪ್ರತಿಧ್ವನಿಸಿದ್ದ ಕರ್ನಾಟಕದ ರಾಜಕೀಯ ನಾಟಕ, ಇಂದು ಸಹ ಲೋಕಸಭೆಯಲ್ಲಿ ಕೋಲಾಹಲ ಎಬ್ಬಿಸಿದೆ. ಆ ಪರೇಷನ್ ಕಮಲ ಮತ್ತು ಶಾಸಕರ ಕುದುರೆ ವ್ಯಾಪಾರ ನಡೆಯುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಸಂಸದರು ಲೋಕಸಭೆಯಿಂದ ಹೊರನಡೆದು, ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ರಾಜಕೀಯದ ಬಗ್ಗೆ ಮಾತನಾಡಿದ ಲಕಾಂಗ್ರೆಸ್ ನ ಲೋಕಸಭೆ ನಾಯಕ ಅಧೀರ್ ರಂಜನ್ ಚೌಧರಿ, “ಕುದುರೆ ವ್ಯಾಪಾರ ಮೊದಲು ನಿಲ್ಲಬೇಕು. ಇದು ರಾಜಕೀಯಕ್ಕೆ ಒಳಿತಲ್ಲ” ಎಂದರು. ಈ ಕುರಿತು…