ಸುದ್ದಿ

ನಾಯಿ ಸಾಕಾಣಿಕೆ ಇಂದ ಹೃದಯ ಆರೋಗ್ಯವಾಗಿ ಇರುತ್ತಂತೆ!

83

ಕೆಲವರಿಗೆ ನಾಯಿ ಎಂದರೆ ಅಪಾರ ಪ್ರೀತಿ. ಅವರು ಹೋದಲ್ಲಿ ಬಂದಲ್ಲಿ ಎಲ್ಲಾ ಕಡೆ ನಾಯಿ ಜೊತೆಗಿರಬೇಕು. ಇನ್ನು ಕೆಲವರು ನಾಯಿ ಎಂದರೆ ಮೂಗು ಮುರಿಯುತ್ತಾರೆ. ಆದರೆ ನಾಯಿ ಸಾಕುವುದರಿಂದ ಹೃದಯದ ಆರೋಗ್ಯ ಚೆನ್ನಾಗಿರುತ್ತದೆ.

ಹಾಗೂ ಅವರಲ್ಲಿ ಹೃದಯ ಸಂಬಂಧಿ ರೋಗಗಳೂ ಕಡಿಮೆ ಎಂದು ಸಮೀಕ್ಷೆಯೊಂದು ಹೇಳುತ್ತಿದೆ. ಅದರಲ್ಲೂ ನಗರಗಳಲ್ಲಿ ನಾಯಿ ಸಾಕುವುದರಿಂದ ಆ ಮನೆಯವರಿಗೆ ಪ್ರಯೋಜನ ಹೆಚ್ಚು ಎಂದು ವಿಜ್ಞಾನಿಗಳ ತಂಡವೊಂದು ಹೇಳಿದೆ. ಹಲವಾರು ಸಮೀಕ್ಷೆಗಳ ಪ್ರಕಾರ ನಾಯಿ ಮಾಲಿಕರಿಗೆ ರಕ್ತದೊತ್ತಡ ಕಡಿಮೆ ಇರುತ್ತದೆ.

ಕಾರಣ ಸಾಕಿದ ನಾಯಿಯನ್ನು ಹೊರಗಡೆಗೆ ಕರೆದುಕೊಂಡು ಹೋಗುವ ನೆವದಲ್ಲಾದರೂ ಅದರ ಯಜಮಾನ ಅಥವಾ ಮನೆಯವರು ಒಂದಷ್ಟು ವಾಕ್ ಮಾಡುತ್ತಾರೆ. ನಾಯಿ ಓಡಿದರೆ ಅವರೂ ಓಡುತ್ತಾರೆ. ಇದರಿಂದ ದೈಹಿಕ ಚಟುವಟಿಕೆ ಸಿಗುತ್ತದೆ. ಜತೆಗೆ ಮನಸ್ಸಿಗೆ ಒಂದಷ್ಟು ಆನಂದವೂ ಸಿಗುತ್ತದೆ.

ಇದರಿಂದ ದೇಹಕ್ಕೆ, ಹೃದಯಕ್ಕೆ ಬಹಳಷ್ಟು ಲಾಭವಾಗುತ್ತದೆ ಎಂದು ಹೇಳಲಾಗಿದೆ. ಹಾಗೆಯೇ ದೇಹದಲ್ಲಿ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ. ರಕ್ತದೊತ್ತಡ ಕಡಿಮೆಯಾಗುತ್ತದೆ ಎಂದೂ ಹೇಳಿದ್ದಾರೆ. ಸೈಂಟ್ ಅನ್ನೆ ವಿವಿಯ ಸಂಶೋಧಕರ  ತಂಡ 2 ಸಾವಿರ ಮಂದಿಯನ್ನು ನಾಯಿ ಹೊಂದಿದವರು ಮತ್ತು ಹೊಂದದವರು ಎಂದು ಪ್ರತ್ಯೇಕಿಸಿ ಸಮೀಕ್ಷೆ ನಡೆಸಿ ಈ ಅಭಿಪ್ರಾಯಕ್ಕೆ ಬಂದಿದೆ.

ವೈಜ್ಞಾನಿಕ ಸಮೀಕ್ಷೆಯಲ್ಲಿ ಪಾಲ್ಗೊಂಡವರೆಲ್ಲ 24 ರಿಂದ 65 ವರ್ಷ ವಯಸ್ಸಿನವರು. ಇವರಿಗೆ ಹೃದಯದ ಸಮಸ್ಯೆಯಿದ್ದು, ನಾಯಿಯನ್ನು ವಾಕಿಂಗ್ ಮಾಡಿಸುವ, ಅದರೊಂದಿಗೆ ಆಡುವ ಇತ್ಯಾ ದಿ ಕ್ರಿಯೆಗಳಿಂದ ಹೃದಯ ಹೆಚ್ಚು ಗೆಲುವಾಗಲು ಕಾರಣವಾಗಿದೆ ಎಂದು ಹೇಳಿದ್ದಾರಂತೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ