ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬೆಂಗಳೂರು: ನಮ್ಮ ಮೆಟ್ರೋ ಎರಡನೇ ಹಂತಕ್ಕೆ ಸಿಎಂ ಯಡಿಯೂರಪ್ಪ ಗರಂ ಆಗಿದ್ದಾರೆ. ಐಟಿ ಕಾರಿಡಾರ್ನಲ್ಲಿ ಮೊದಲು ಮೆಟ್ರೋ ಮುಗಿಸುವಂತೆ ಕಟ್ಟಪ್ಪಣೆ ಹೊರಡಿಸಿದ್ದಾರೆ. ಆದರೆ ಸಿಎಂ ಮುಂದೆ ತಲೆಯಾಡಿಸಿ ಬಂದಿರೋ ಅಧಿಕಾರಿಗಳು, ಈಗ ತಲೆಮೇಲೆ ಕೈ ಹೊತ್ತು ಕುಳಿತಿದ್ದಾರೆ.
ಬೆಂಗಳೂರು ಅಭಿವೃದ್ಧಿ ಖಾತೆಯನ್ನು ತಮ್ಮ ಬಳಿಯೇ ಉಳಿಸಿಕೊಂಡಿರೋ ಸಿಎಂ ಯಡಿಯೂರಪ್ಪ, ನಗರಕ್ಕೆ ಸಂಬಂಧಿಸಿದ ಒಂದೊಂದೇ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸ್ತಿದ್ದಾರೆ. ಇದೇ ರೀತಿ BMRCL ಸಭೆ ನಡೆಸಿದಾಗ ಮೆಟ್ರೋ ಎರಡನೇ ಹಂತದ ಪ್ರಗತಿಗೆ ಸಿಎಂ ತೀವ್ರ ಅಸಮಾದಾನ ವ್ಯಕ್ತಪಡಿಸಿದ್ದಾರೆ. ಯಾವ ಮಾರ್ಗ ಮುಖ್ಯ, ಯಾವುದು ಮುಖ್ಯವಲ್ಲ ಅಂತ ಗೊತ್ತಿಲ್ವಾ ನಿಮ್ಗೆ ಅಂತ ಅಧಿಕಾರಿಗಳ ಮೇಲೆ ರೇಗಾಡಿದ್ದಾರೆ.
ಮೆಟ್ರೋ ಅಧಿಕಾರಿಗಳ ಮೇಲೆ ಸಿಎಂ ರೇಗಾಡುವುದಕ್ಕೆ ಮುಖ್ಯ ಕಾರಣ, ಹೆಚ್ಚು ಬೇಡಿಕೆ ಇರೋ ಐಟಿ ಕಾರಿಡಾರ್ಗಳಲ್ಲೇ ಮೆಟ್ರೋ ಕಾಮಗಾರಿ ವಿಳಂಬವಾಗಿ ಸಾಗ್ತಿರೋದು. ಮುಖ್ಯವಾಗಿ ಬೈಯಪ್ಪನಹಳ್ಳಿ – ವೈಟ್ ಫೀಲ್ಡ್ ಮಾರ್ಗದಲ್ಲಿ ಕಾಮಗಾರಿ ನಿಧಾನಗತಿಯಲ್ಲಿ ಸಾಗ್ತಿದೆ. ಹೀಗಾಗಿ ಮೊದಲು ಐಟಿ ಬಿಟಿ ಕಾರಿಡಾರ್ನಲ್ಲೇ ಮೆಟ್ರೋ ಮುಗಿಸಲು ಸಿಎಂ ಸೂಚಿಸಿದ್ದಾರೆ. ಆದರೆ ಸಿಎಂ ಮುಂದೆ ಎಲ್ಲವನ್ನೂ ಒಪ್ಪಿಕೊಂಡಿರೋ ಅಧಿಕಾರಿಗಳು, ಈಗ ತಲೆಕೆಡಿಸಿಕೊಂಡು ಕುಳಿತಿದ್ದಾರೆ. ಹೇಗಪ್ಪಾ ಡೆಡ್ ಲೈನ್ ಒಳಗೆ ಕಾಮಗಾರಿ ಮುಗಿಸೋದು ಅಂತ ಟೆನ್ಷನ್ಗೆ ಒಳಗಾಗಿದ್ದಾರೆ.
ಬೈಯಪ್ಪನಹಳ್ಳಿ ಟು ವೈಟ್ ಫೀಲ್ಡ್ ಮಾರ್ಗದಲ್ಲಿ ಇನ್ನೂ ಹೇಳಿಕೊಳ್ಳುವಂತಾ ಕೆಲಸ ಆಗಿಲ್ಲ. ಕೆಆರ್ ಪುರಂ ನಲ್ಲಿ ಮೆಟ್ರೋಗೆ ಇನ್ನೂ ಸಾಕಷ್ಟು ಅಡೆತಡೆಗಳು ಎದುರಾಗ್ತಲೇ ಇದೆ. ಹೀಗಾಗಿ ಸಿಎಂ ಹೇಳಿದಂತೆ 2021ಕ್ಕೆ ಈ ಮಾರ್ಗ ಮುಗಿಸೋದು ಕಷ್ಟ ಅಂತ ಮೆಟ್ರೋ ಅಧಿಕಾರಿಗಳಿಗೆ ತಲೆನೋವಾಗಿದೆ.
ಪ್ರಯಾಣಿಕರ ಬೇಡಿಕೆ ಆಧಾರದ ಮೇಲೆ ಐಟಿ ಕಾರಿಡಾರ್ನಲ್ಲಿ ಮೆಟ್ರೋ ಕಾಮಗಾರಿ ಮುಗಿಸಬೇಕಾಗಿದೆ. ಆದರೆ ಸದ್ಯದ ಪರಿಸ್ಥಿತಿ ನೋಡಿದರೆ, ಸಿಎಂ ಏನೇ ಸೂಚನೆ ಕೊಟ್ರೂ ಬೈಯಪ್ಪನಹಳ್ಳಿ ಟು ವೈಟ್ ಫೀಲ್ಡ್ ಮಾರ್ಗದ ಮೆಟ್ರೋ 2021ಕ್ಕೆ ಮುಗಿಯೋದು ಸಾಧ್ಯವೇ ಇಲ್ಲ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕ್ರಿಕೆಟ್ ಬಹುತೇಕರ ಕನಸು. ಆದ್ರೆ ಅಂತರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯುವುದು ಸುಲಭದ ಕೆಲಸವಲ್ಲ. ಕ್ರೀಡೆ ಗೊತ್ತಿಲ್ಲದವರಿಗೂ ಕ್ರಿಕೆಟ್ ಜಗತ್ತಿನಲ್ಲಿ ಕೆಲಸ ಸಿಗುತ್ತದೆ. ಒಳ್ಳೆ ವಿದ್ಯಾಭ್ಯಾಸ ಹೊಂದಿರುವವರು ಕ್ರಿಕೆಟ್ ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಂಡು ಲಕ್ಷಾಂತರ ರೂಪಾಯಿ ಗಳಿಕೆ ಮಾಡ್ತಿದ್ದಾರೆ. ಬ್ಯಾಟಿಂಗ್, ಬೌಲಿಂಗ್ ಮಾತ್ರವಲ್ಲ, ಮೈದಾನದಲ್ಲಿ ಹಾಗೂ ಮೈದಾನದ ಹೊರಗೆ ಕ್ರಿಕೆಟ್ ಗೆ ಸಂಬಂಧಿಸಿದ ಅನೇಕ ಕೆಲಸಗಳಿವೆ. ಪಂದ್ಯದ ತೀರ್ಪುಗಾರನಾಗಿ ನೀವು ಕೆಲಸ ಮಾಡಬಹುದು. ಪ್ರತಿ ಪಂದ್ಯಕ್ಕೆ 30 ಸಾವಿರ ರೂಪಾಯಿ ನೀಡಲಾಗುತ್ತದೆ. ಐಸಿಸಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ…
ನಿಮಗೆ ಆಟಂಬಾಂಬ್ ಗೊತ್ತು, ಹೈಡ್ರೋಜನ್ ಬಾಂಬು ಬಗ್ಗೆ ಗೊತ್ತು. ಆದರೆ ನೀವು ವಾಟರ್ ಬಾಂಬ್ ಬಗ್ಗೆ ಕೇಳಿದ್ದೀರಾ! ಅದರಲ್ಲಿ ಕೂಡ ನೀರಾವರಿಗೆ ಅಂತ ಕಟ್ಟಿರೋ ಡ್ಯಾಮ್, ಲಕ್ಷಾಂತರ ಜನರ ಆತಂಕಕ್ಕೆ ಎಡೆಮಾಡಿಕೊಟ್ಟಿದೆ, ಎಂಬುದರ ಬಗ್ಗೆ ನಿಮಗೆ ಗೊತ್ತಾದ್ರೆ ಶಾಕ್ ಆಗ್ತೀರಾ… ಅದಕ್ಕಿಂತ ಹೆಚ್ಚಾಗಿ ನೀರನ್ನು ಬಳಸುತ್ತಿರುವ ಕೇರಳ ರಾಜ್ಯ ಡ್ಯಾಮ್ ಕಟ್ಟಿರುವ ಜನರ ಜೀವಗಳನ್ನು ಪಣಕ್ಕಿಟ್ಟು ಆಟ ಆಡುತ್ತಿದೆ ಅಂದ್ರೆ ನಿಮಗೆ ನಂಬದೆ ಇರೋಕ್ಕೆ ಆಗಲ್ಲ.ಹೀಗೆ ಜನರ ಜೀವನದ ಜೊತೆ ಆಟವಾಡುತ್ತಿರುವ ಅಪಾಯಕಾರಿ ಡ್ಯಾಮ್ ಎಲ್ಲಿದೆ ಗೊತ್ತಾ?ನಮ್ಮ…
ಬೆಂಗಳೂರು: ಮಾಜಿ ಸಚಿವ, ಗಣಿಧಣಿ ಜನಾರ್ದನ ರೆಡ್ಡಿ ಅವರು ತಮ್ಮ ಪತ್ನಿ ಲಕ್ಷ್ಮಿ ಅರುಣಾ ಅವರಿಗಾಗಿ ಮಾವಿನ ಮರ ಏರಿದ ವಿಡಿಯೋವೊಂದನ್ನು ತಮ್ಮ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿ ಬಾಲ್ಯದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಖಾಸಗಿ ಕಾರ್ಯಕ್ರಮವೊಂದರ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದಲ್ಲಿರುವ ತಮ್ಮ ಮಾವನ ಮನೆಗೆ ಜನಾರ್ದನ ರೆಡ್ಡಿ ಅವರು ತಮ್ಮ ಕುಟುಂಬದೊಡನೆ ತೆರೆಳಿದ್ದರು. ಈ ವೇಳೆ ಪತ್ನಿ ಜೊತೆಗೆ ಮಾವನವರ ತೋಟಕ್ಕೆ ಭೇಟಿ ನೀಡಿದ್ದರು. ಆಗ ಅಲ್ಲಿದ್ದ ಮಾವಿನ ಮರವನ್ನು ಹತ್ತಿ ಪತ್ನಿಗಾಗಿ ಮಾವಿನ ಕಾಯಿಯನ್ನು ಕಿತ್ತುಕೊಟ್ಟಿದ್ದಾರೆ. ಜೊತೆಗೆ ತಮ್ಮ…
ದೇವರು ಭೂಮಿ ಮತ್ತು ಸ್ವರ್ಗಗಳನ್ನು 6 ದಿನದಲ್ಲಿ ನಿರ್ಮಿಸಿದ ಮತ್ತು ಉಳಿದ ಅಗತ್ಯ ವಸ್ತುಗಳನ್ನು 7ನೇ ದಿನದಂದು ನಿರ್ಮಿಸಿದ ಅನ್ನೋದನ್ನ ಜಗತ್ತಿನ 14 ಮಿಲಿಯನ್ ಜನ ಈಗಲೂ ನಂಬುತ್ತಾರೆ ಅನ್ನೋದನ್ನು ನಾನು ನನ್ನ ಹಿಂದು,ಮುಸ್ಲಿಂ,ಕ್ರಿಶ್ಚಿಯನ್ ಮತ್ತು ಯಹೂದಿ ಗೆಳೆಯರಲ್ಲಿ ಹೇಳ್ದಾಗ ಯಹೂದಿ ಗೆಳೆಯನನ್ನು ಬಿಟ್ಟು ಉಳಿದವರೆಲ್ಲ ಹೊಟ್ಟೆ ಹುಣ್ಣಾಗುವಂತೆ ನಕ್ಕರು.
ಈಗಂತೂ ಚಳಿಗಾಲ. ಏನಾದರೂ ಸ್ಪೈಸಿ ಸ್ಪೈಸಿ ತಿನ್ನಲೇ ಬೇಕು ಅನ್ನಿಸದೆ ಇರೋದಿಲ್ಲ. ಅದರಲ್ಲೂ ನಾನ್ವೆಜ್ ತಿನ್ನುವವರು ಚಿಕನ್ ನಲ್ಲಿ ವಿಧ ವಿಧವಾದ ಸ್ಪೈಸಿಯಾದ ಕಬಾಬ್, ಚಿಕನ್ ಫ್ರೈ ಮಾಡಿ ತಿನ್ನುತ್ತಾರೆ. ಆದರೆ ಇನ್ನೂ ಏನಾದರೂ ಸ್ಪೆಷಲ್ ಮಾಡಬೇಕು ಎನ್ನಿಸಿದರೆ ಈ ಚಳಿಗಾಲದಲ್ಲಿ ಅದೂ ಹಳ್ಳಿ ಶೈಲಿಯಲ್ಲಿ ಚಿಕನ್ ಚಾಪ್ಸ್ ಮಾಡಿ ತಿನ್ನಿ.. ಆದರೆ ಮಾಡೋದು ಹೇಗೆ ಗೊತ್ತಿಲ್ಲ ಎಂದರೆ ಚಿಕನ್ ಚಾಪ್ಸ್ ಮಾಡುವ ವಿಧಾನ ಇಲ್ಲಿದೆ ನೋಡಿ… ಚಿಕನ್ ಚಾಪ್ಸ್ ಮಾಡಲು ಬೇಕಾಗುವ ಸಾಮಾಗ್ರಿಗಳು ಈರುಳ್ಳಿ –…
ಕಿರುತೆರೆ ನಟಿಯ ಮನೆಗೆ ನುಗ್ಗಿದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಮದುವೆಯಾಗುವಂತೆ ಒತ್ತಾಯಿಸಿದ ಘಟನೆ ಚೆನ್ನೈನಲ್ಲಿ ನಡೆದಿದೆ. ನಟಿ ರಿತಿಕಾ ತಮ್ಮ ತಂದೆ ಜೊತೆ ಚೆನ್ನೈನ ವಡಪಳನಿಯಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದರು. ಈ ವೇಳೆ ಅವರಿದ್ದ ಅಪಾರ್ಟ್ಮೆಂಟ್ಗೆ ಬಂದು ಎಂಜಿನಿಯರಿಂಗ್ ವಿದ್ಯಾರ್ಥಿ ಭರತ್ ಬಾಗಿಲು ತಟ್ಟಿದ್ದಾನೆ. ರಿತಿಕಾ ಅವರ ತಂದೆ ಬಾಗಿಲು ತೆರೆದ ತಕ್ಷಣ ಮನೆಯೊಳಗೆ ನುಗ್ಗಿ, ರಿತಿಕಾರನ್ನು ತನಗೆ ಕೊಟ್ಟು ಮದುವೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾನೆ. ಯುವಕನ ಮಾತು ಕೇಳಿ ರಿತಿಕಾ ತಂದೆಗೆ ಶಾಕ್ ಆಗಿದೆ. ಬಳಿಕ ಇಬ್ಬರ ನಡುವೆ…