ಸುದ್ದಿ

ಚಾಲಕರಿಗೆ ದುಬಾರಿ ದಂಡ ವಿಧಿಸುವ ಬದಲು ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಲು ಒತ್ತು ನೀಡಿ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸವಾಲೆಸೆದ ಸ್ಯಾಂಡಲ್​ವುಡ್​ ನಟಿ..!

61

ದೇಶದಲ್ಲಿ ಜಾರಿಯಾದ ಹೊಸ ಟ್ರಾಫಿಕ್‌ ದಂಡದ ಕುರಿತಾಗಿ ಸಾಕಷ್ಟು ಚರ್ಚೆಗಳು, ಪರ-ವಿರೋಧದ ಮಾತುಗಳು ಕೇಳಿಬರುತ್ತಿದೆ. ಅದರಲ್ಲೂ ಹೊಂಡ-ಗುಂಡಿಗಳಿಂದ ತುಂಬಿರುವ ರಸ್ತೆಗಳನ್ನು ಸರಿಪಡಿಸುವ ಜವಾಬ್ದಾರಿ ಕೂಡಾ ಸರ್ಕಾರಕ್ಕೆ ಇದೆ.  ಸಂಚಾರ ನಿಯಮ ಉಲ್ಲಂಘಿಸಿದ ಬೈಕ್‌ ಸವಾರರು, ವಾಹನಗಳ ಚಾಲಕರಿಗೆ ದುಬಾರಿ ದಂಡ ವಿಧಿಸುವ ಬದಲು ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಲು ಒತ್ತು ನೀಡಿ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ನಟಿ ಸೋನು ಗೌಡ ಸವಾಲು ಹಾಕಿದ್ದಾರೆ.

ಜನಸಾಮಾನ್ಯರು ಕಷ್ಟಪಟ್ಟು ಹಣ ಸಂಪಾದಿಸುತ್ತಾರೆ. ಅಧಿಕ ದಂಡ ವಿಧಿಸಿ ಅವರ ಜೀವನವನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಬೇಡಿ ಎಂದು ಟ್ವೀಟ್‌ ಮಾಡಿದ್ದಾರೆ. ಇಷ್ಟನ್ನು ಬರೆದು ಅವರು ಸುಮ್ಮನಾಗಿಲ್ಲ. ಸವಾರನೊಬ್ಬ ಗುಂಡಿಯಲ್ಲಿ ಆಯತಪ್ಪಿ ಬೈಕ್‌ ಸಮೇತ ನೆಲಕ್ಕೆ ಬಿದ್ದಿರುವ ಹಾಗೂ ಆತನನ್ನು ಮಹಿಳೆಯೊಬ್ಬರು ರಕ್ಷಿಸಲು ಮುಂದಾಗುತ್ತಿರುವ ಫೋಟೊವನ್ನೂ ಅಪ್‌ಲೋಡ್‌ ಮಾಡಿದ್ದಾರೆ.

ಆ ಫೋಟೊದಲ್ಲಿ ಕುಡಿದು ಚಾಲನೆಗೆ ₹ 10,000, ಜಂಪಿಂಗ್ ಟ್ರಾಫಿಕ್ ಲೈಟ್‌ಗೆ ₹ 5,000. ಮೊಬೈಲ್ ಫೋನ್ ಬಳಕೆಗೆ ₹ 5,000, ಅತಿವೇಗಕ್ಕೆ ₹ 5,000 ಹಾಗೂ ಸೀಟ್‍ಬೆಲ್ಟ್ ಧರಿಸದಿದ್ದರೆ ₹ 1,000 ದಂಡ ವಿಧಿಸಲಾಗುತ್ತದೆ. ಸವಾರರಿಗೆ ಗುಂಡಿಗಳಿಂದ ತೊಂದರೆಯಾದರೆ ಹೊಣೆ ಯಾರು? ಆ ಗುಂಡಿಗಳಿಂದ ತೊಂದರೆ ಅನುಭವಿಸುವ ನಾವು ಸರ್ಕಾರಕ್ಕೆ ಎಷ್ಟು ದಂಡ ಹಾಕಬೇಕು? ಎಂದು ಪ್ರಶ್ನಿಸಿದ್ದಾರೆ.

ಸೋನು ಗೌಡ ಕನ್ನಡ ಚಿತ್ರರಂಗ ಪ್ರವೇಶಿಸಿದ್ದು ‘ಇಂತಿ ನಿನ್ನ ಪ್ರೀತಿಯ’ ಚಿತ್ರದ ಮೂಲಕ. ಹಲವು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಈ ಹಿಂದೆ ಸೋನು ನಗರದಲ್ಲಿನ ರಸ್ತೆ ಗುಂಡಿಗಳ ವಿರುದ್ಧ ಮತ್ಸ್ಯಕನ್ಯೆ ವೇಷಧರಿಸಿ ಪ್ರತಿಭಟನೆಯನ್ನೂ ನಡೆಸಿದ್ದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸಾಧನೆ, ಸ್ಪೂರ್ತಿ

    ಮಂಗಳೂರಿನಿಂದ, ಬೆಂಗಳೂರಿಗೆ ಕೇವಲ 4 ಗಂಟೆ 32 ನಿಮಿಷದಲ್ಲಿ ಕ್ರಮಿಸಿ, ಹಸುಗೂಸು ಜೀವ ಉಳಿಸಿದ ಅಂಬುಲೆನ್ಸ್ ಚಾಲಕ.

    ನಲ್ವತ್ತು ದಿನಗಳ ಹಸುಗೂಸನ್ನು ಹೃದಯದ ಶಸ್ತ್ರಚಿಕಿತ್ಸೆಗಾಗಿ ಮಂಗಳೂರಿನಿಂದ ಬೆಂಗಳೂರಿಗೆ ಝೀರೋ ಟ್ರಾಫಿಕ್ ನಲ್ಲಿ ಅಂಬುಲೆನ್ಸ್ ನಲ್ಲಿ ರವಾನಿಸಲಾಗಿದೆ. ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿದ್ದ ಮಗುವಿಗೆ ತುರ್ತಾಗಿ ಶಸ್ತ್ರಚಿಕಿತ್ಸೆ ಆಗಬೇಕಿತ್ತು. ಅದಕ್ಕಾಗಿ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ಮಗುವನ್ನು ರವಾನಿಸಲಾಗಿದೆ. ಚಾಲಕ ಹನೀಫ್ ಅವರು ಮಂಗಳೂರಿನಿಂದ ಆಂಬುಲೆನ್ಸ್ ಮೂಲಕ ಝೀರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ಮಗುವನ್ನು ಕೇವಲ ಆರು ಗಂಟೆಯಲ್ಲಿ ಬೆಂಗಳೂರು ತಲುಪಿಸಿದ್ದಾರೆ. ಬೆಳ್ತಂಗಡಿ ತಾಲೂಕಿನ ಉಜಿರೆ ಮೂಲದ ಸೈಫುಲ್ ಅಜ್ಮಾನ್ ಎನ್ನುವ ಈ ಮಗುವಿಗೆ…

  • ಸುದ್ದಿ

    30 ಕಿ ಮೀ ದೂರದಲ್ಲಿರುವಆಸ್ಪತ್ರೆಗೆ ಕೇವಲ 18 ನಿಮಿಷಗಳಲ್ಲಿ ರಕ್ತ ರವಾನೆ : ಯಶಶ್ವಿಯಾಗಿ ನಡೆದ ಡ್ರೋನ್ ಪ್ರಯೋಗ……..

    ಡ್ರೋನ್ ಮೂಲಕ ಕೇವಲ 18 ನಿಮಿಷದಲ್ಲಿ 30 ಕಿ.ಮೀ ಸಂಚರಿಸಿ ರಕ್ತದ ಮಾದರಿಯನ್ನು ನೀಡಿದ ಘಟನೆ ಮೊದಲ ಬಾರಿಗೆ ಉತ್ತರಾಖಂಡದಲ್ಲಿ ನಡೆದಿದೆ.ನಂದಗೋನ್‍ನ ಜಿಲ್ಲಾಸ್ಪತ್ರೆಯಿಂದ ರಕ್ತದ ಮಾದರಿಯನ್ನು ಡ್ರೋನ್ ಮೂಲಕ ತೇರಿಯಲ್ಲಿರುವ ಆಸ್ಪತ್ರೆಗೆ ಕಳುಹಿಸಲಾಗಿದೆ. ಮೊದಲ ಪ್ರಯತ್ನದಲ್ಲೇ ಇದು ಸಫಲವಾಗಿದ್ದು, ಇದು ಭಾರತದ ಆರೋಗ್ಯದ ಸೇವೆಯಲ್ಲಿ ಇದೊಂದು ದೊಡ್ಡ ಹೆಜ್ಜೆ ಆಗಲಿದೆ. ಡ್ರೋನ್ ನಂದಗೋನದಿಂದ ತೇರಿ ನಡುವಿನ 30 ಕಿ.ಮೀ ದೂರವನ್ನು 18 ನಿಮಿಷದಲ್ಲಿ ಡ್ರೋನ್ ಕ್ರಮಿಸಿದೆ. ಡ್ರೋನ್ ಪ್ರತಿ ಗಂಟೆಗೆ 100 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮಥ್ರ್ಯ…

  • ಉಪಯುಕ್ತ ಮಾಹಿತಿ

    ಉಪ್ಪಿಂದ ಆಗೋವ ಈ 10 ಉಪಯೋಗಗಳ ಬಗ್ಗೆ ನಿಮಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ ..

    ಉಪ್ಪು ತುಂಬಾನೇ ಅಗ್ಗದ ವಸ್ತು ಆದ್ರೂ ಉಪ್ಪಿಗಿಂತ ರುಚಿಯಿಲ್ಲ ಅನ್ನೋದು ತುಂಬಾ ಸತ್ಯ . ಈಗ ನಾವು ಇಲ್ಲಿ ಹೇಳೋ ವಿಷಯಗಳನ್ನ ಕೇಳಿದರೆ ನಿಮಗೆ ಉಪ್ಪನ್ನ ಎಷ್ಟು ಹೊಗಳಿದ್ರೂ ಸಾಲ್ದು ಅನ್ನಿಸೋದ್ರಲ್ಲಿ ಆಶ್ಚರ್ಯ ಇಲ್ಲ.

  • ಸುದ್ದಿ

    ನೂತನ ಸಚಿವರ ಲೀಸ್ಟ್ ರಿಲೀಸ್ ಆಗಿದ್ದು, 17 ಮಂದಿಗೆ ಸಚಿವ ಸ್ಥಾನ ಸಿಕ್ಕಿದೆ,..ಯಾರೆಂದು ತಿಳಿಯಿರಿ,..?

    ಬಿಜೆಪಿ ವಲಯದಿಂದ ನೂತನ ಸಚಿವರ ಲೀಸ್ಟ್ ರಿಲೀಸ್ ಆಗಿದ್ದು, 17 ಮಂದಿಗೆ ಸಚಿವ ಸ್ಥಾನ ಸಿಕ್ಕಿದೆ. ಅಲ್ಲದೇ, ಅಥಣಿ ಮಾಜಿ ಶಾಸಕ ಲಕ್ಷ್ಮಣ್ ಸವದಿಗೂ ಕೂಡ ಸಚಿವ ಸ್ಥಾನ ಸಿಕ್ಕಿರೋದು ವಿಶೇಷ. 1.ಗೋವಿಂದ ಕಾರಜೋಳ: ಮುಧೋಳ್, ಬಾಗಲಕೋಟೆ,  2.ಅಶ್ವಥ್ ನಾರಾಯಣ: ಮಲ್ಲೇಶ್ವರಂ, ಬೆಂಗಳೂರು3.ಲಕ್ಷ್ಮಣ ಸವದಿ: ಅಥಣಿ ಮಾಜಿ ಶಾಸಕ                       4.ಕೆ.ಎಸ್ ಈಶ್ವರಪ್ಪ: ಶಿವಮೊಗ್ಗ5.ಆರ್ ಅಶೋಕ್: ಪದ್ಮನಾಭನಗರ,    6.ಜಗದೀಶ್ ಶೆಟ್ಟರ್: ಧಾರವಾಡ ಸೆಂಟ್ರಲ್, (ಹುಬ್ಬಳ್ಳಿ- ಧಾರವಾಡ)7 ಶ್ರೀರಾಮುಲು: ಮೊಳಕಾಲ್ಮೂರು, ಚಿತ್ರದುರ್ಗ              8. ಸುರೇಶ್ ಕುಮಾರ್: ರಾಜಾಜಿನಗರ9.ಸಿ.ಟಿ ರವಿ: ಚಿಕ್ಕಮಗಳೂರು     …

  • ಉಪಯುಕ್ತ ಮಾಹಿತಿ

    ನಿಮ್ಮ ಮೂಗಿನ ಮೇಲಿನ ಬ್ಲಾಕ್ ಹೆಡ್ಸ್ ಅನ್ನು ಸುಲಭವಾಗಿ ಹೋಗಲಾಡಿಸಬಹುದು ಹೇಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

    ನಿಮ್ಮ ಮುಖ ಸುಂದರವಾಗಿದ್ದರೂ ಈ ಬ್ಲಾಕ್ ಹೆಡ್ಸ್ ನಿಂದಾಗಿ ಕಿರಿಕಿರಿಯಾಗುತ್ತದೆ.. ಇದರಿಂದ ಕೆಲವು ಬಾರಿ ಮುಜುಗರಕ್ಕೂ ಒಳಗಾಗುತ್ತೇವೆ.. ಪ್ರತಿ ಬಾರಿ ಬ್ಯೂಟಿ ಪಾರ್ಲರ್ ಗೆ ಹೋಗಿ ತೆಗಿಸಲು ಸಾಧ್ಯವಿಲ್ಲ.. ಅದರಲ್ಲೂ ಹುಡುಗರು ಪಾರ್ಲರ್ ಗಳಲ್ಲಿ ತೆಗೆಸಲು ಮುಜುಗರವೂ ಆಗುತ್ತದೆ.. ಇದಕ್ಕಾಗಿಯೇ ಮನೆ ಮದ್ದುಗಳ ಮೊರೆ ಹೋಗುವುದೇ ಒಳ್ಳೆಯದು.. ನಿಮಗಾಗಿಯೇ ಇಲ್ಲಿ ಕೆಲವು ಮನೆಮದ್ದುಗಳ ಮಾಹಿತಿ ನೀಡಿದ್ದೇವೆ ನೋಡಿ..

  • ರಾಜಕೀಯ

    ಕೋಲಾರದಿಂದ ಸ್ಪರ್ಧೆ ಮಾಡಲು ಮಾಜಿ ಸಿಎಂ ಸಿದ್ದರಾಮಯ್ಯ ಬಹಿರಂಗವಾಗಿ ಘೋಷಣೆ

    ಕೋಲಾರ: ನಾನು ಮುಂದಿನ ಚುನಾವಣೆಯಲ್ಲಿ ಕೋಲಾರದಿಂದ ಸ್ಪರ್ಧೆ ಮಾಡಲು ತೀರ್ಮಾನ ಮಾಡಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಹಿರಂಗವಾಗಿ ಘೋಷಣೆ ಮಾಡಿದ್ದಾರೆ. ಕೋಲಾರದ ಜೂನಿಯರ್ ಕಾಲೇಜು ಮೈದಾನದಲ್ಲಿ ಇಂದು ನಡೆದ ಕೋಲಾರ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನನಗೆ ಸ್ಪರ್ಧಿಸಲು ಸರಿಯಾದ ಕ್ಷೇತ್ರವೇ ಇಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನನಗೆ ವರುಣಾದಿಂದ ಮತ್ತೆ ಸ್ಪರ್ಧೆ ಮಾಡಿ ಎಂದು ಹೇಳುತ್ತಿದ್ದಾರೆ, ಬಾದಾಮಿ ದೂರ ಆಯ್ತು ಎಂಬ ಕಾರಣಕ್ಕೆ ಸ್ಪರ್ಧೆ ಮಾಡಲು ಸಾಧ್ಯವಿಲ್ಲ ಎಂದಿದ್ದಕ್ಕೆ…