ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬೆಂಗಳೂರು, ಮಹತ್ವಾಕಾಂಕ್ಷಿ ಚಂದ್ರಯಾನ-2 ನೌಕೆಯ ಸಂಪರ್ಕ ಕೊನೆ ಕ್ಷಣದಲ್ಲಿ ಕಡಿತಗೊಂಡಿದೆ. ಇದರಿಂದಾಗಿ ಭೂಮಿಯ ನೈಸರ್ಗಿಕ ಉಪಗ್ರಹ ಚಂದ್ರನ ಒಡಲಲ್ಲಿ ಅಡಗಿರುವ ಅನೂಹ್ಯ ರಹಸ್ಯಗಳನ್ನು ಭೇದಿಸುವ ಗುರಿ ಹೊಂದಿದ್ದ ಇಸ್ರೋಗೆ ಕೊಂಚ ಹಿನ್ನಡೆಯಾಗಿದೆ.

ಚಂದ್ರನ ಅಂಗಳದ ಮೇಲೆ ಲ್ಯಾಂಡರ್ ಅನ್ನು ಇಳಿಸುವ ಕೊನೆಯ 15ನಿಮಿಷ ಭಾರೀ ಕಷ್ಟದ ಕ್ಷಣಗಳು ಎಂದು ಇಸ್ರೋ ಈ ಮೊದಲೇ ಹೇಳಿತ್ತು. ಹೀಗಾಗಿ ಮೊದಲ ಕೆಲವು ಕ್ಷಣಗಳು ಸುಸೂತ್ರವಾಗಿ ನೆರವೇರಿದರೂ ಇನ್ನೇನು ಚಂದ್ರನ ಅಂಗಳ 2.1 ಕಿ.ಮೀ ದೂರ ಇರುವಂತೆ ಲ್ಯಾಂಡರ್ ನೌಕೆ ಸಂಪರ್ಕ ಕಡಿದುಕೊಂಡಿತು. ಈ ವೇಳೆ ಇಸ್ರೋ ಕೇಂದ್ರದಲ್ಲಿ ಆತಂಕದ ವಾತಾವರಣ ಉಂಟಾಗಿತ್ತು. ಸಿಗ್ನಲ್‌ಗಾಗಿ ಕೆಲ ಹೊತ್ತು ನಿರೀಕ್ಷಿಸಲಾಯಿತು. ಆದರೆ ಯಾವುದೇ ಧನಾತ್ಮಕ ಫಲ ಸಿಗಲಿಲ್ಲ. ಕೊನೆಗೆ ಇಸ್ರೋ ಅಧ್ಯಕ್ಷ ಶಿವನ್ ಅವರು ಲ್ಯಾಂಡರ್ 2.1 ಕಿ. ಮೀ.ವರೆಗೆ ಸುಸೂತ್ರವಾಗಿ ಕೆಲಸ ಮಾಡಿದೆ. ಆ ನಂತರ ಸಿಗ್ನಲ್ ಕಡಿತಗೊಂಡಿದೆ. ಇದರ ಡೇಟಾವನ್ನು ವಿಶ್ಲೇಷಣೆ ಮಾಡುತ್ತೇವೆ ಎಂದು ಘೋಷಿಸಿದರು.

ಮೋದಿ ವೀಕ್ಷಣೆ: ಇಸ್ರೋದ ಕೌತುಕ ಕ್ಷಣವನ್ನು ವೀಕ್ಷಿಸಲು ಬೆಂಗಳೂರಿನ ಇಸ್ರೋ ಕೇಂದ್ರಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸಿದರು. ವಿಜ್ಞಾನಿಗಳ ಜತೆ ಕೂತು ವೀಕ್ಷಿಸಿದರು. ಸಿಗ್ನಲ್ ಕಡಿತಗೊಂಡ ಬಳಿಕ ವಿಜ್ಞಾನಿಗಳು ಪ್ರಧಾನಿಯವರಿಗೆ ಮಾಹಿತಿ ನೀಡಿದರು. ನಮ್ಮ ವಿಜ್ಞಾನಿಗಳು ದೇಶದ ಹೆಮ್ಮೆ. ನಿಮ್ಮೊಂದಿಗೆ ನಾವಿದ್ದೇವೆ. ಮುಂದೆ ಹೆಜ್ಜೆ ಹಾಕೋಣ ಎಂದು ಹೇಳಿದರು. ಬಳಿಕ ಚಂದ್ರಯಾನ ವೀಕ್ಷಿಸಲು ಆಗಮಿಸಿದ್ದ ಮಕ್ಕಳ ಜತೆ ಸಂವಾದ ನಡೆಸಿದರು.ಲ್ಯಾಂಡರ್ ಮತ್ತು ರೋವರ್ ಅನ್ನು ಚಂದ್ರನ ಮೇಲೆ ಸಾಫ್ಟ್‌ಲ್ಯಾಂಡಿಂಗ್ ಮಾಡುವುದು ರೋಚಕ ಮತ್ತು ಭಯಾನಕ ಕ್ಷಣವಾಗಿದ್ದು, ಇದೊಂದು ರೀತಿ ಮಗುವನ್ನು ತೊಟ್ಟಿಲಿನಲ್ಲಿ ಹಾಕುವ ರೀತಿಯ ಪ್ರಕ್ರಿಯೆಯಾಗಿದೆ ಎಂದು ಹಿರಿಯ ವಿಜ್ಞಾನಿಯೊಬ್ಬರು ಹೇಳಿದ್ದರು. ಹೀಗಾಗಿ ವಿಜ್ಞಾನಿಗಳಲ್ಲಿ ವಿಶ್ವಾಸವಿದ್ದರೂ ಎಲ್ಲೋ ಒಂದು ಕಡೆ ಆತಂಕವೂ ಇತ್ತು.

ಏನಾಯ್ತು? :ಚಂದ್ರನ ಮೇಲ್ಮೈನಿಂದ 30 ಕಿ.ಮೀ. ಎತ್ತರದಲ್ಲಿ ಹಾರಾಡುತ್ತಿದ್ದ ಲ್ಯಾಂಡರ್ ಅನ್ನು ತಡರಾತ್ರಿ 1.35ಕ್ಕೆ ಇಳಿಸುವ ರಫ್ ಬ್ರೇಕಿಂಗ್ ಹಂತವನ್ನು ನೆರವೇರಿಸಲಾಯಿತು. ನಂತರ 10 ನಿಮಿಷಗಳ ನಂತರ 7 ಕಿ.ಮೀ. ಎತ್ತರಕ್ಕೆ ಇಳಿಸುವ ಫೈನ್ ಬ್ರೇಕಿಂಗ್ ಪ್ರಕ್ರಿಯೆ ನಡೆಯಿತು. ನಂತರ ಲೋಕಲ್ ನೇವಿಗೇಶನ್ ಆರಂಭವಾಗಿ, ಲ್ಯಾಂಡರ್ ಪೋಟೋವನ್ನು ಇಸ್ರೋಗೆ ಕಳುಹಿಸುವ ಪ್ರಕ್ರಿಯೆ ನಡೆಯಬೇಕಿತ್ತು. ಬಳಿಕ ಲ್ಯಾಂಡರ್ ಚಂದ್ರನ ಮೇಲೆ ನಿಧಾನವಾಗಿ ಇಳಿಯಬೇಕಿತ್ತು. ಆದರೆ ಫೈನ್ ಬ್ರೇಕಿಂಗ್ ಪ್ರಕ್ರಿಯೆ ನಂತರ ಲ್ಯಾಂಡರ್ ಸಂಪರ್ಕ ಕಡಿದುಹೋಯಿತು. ಇಸ್ರೋ ಟಿವಿ ಮಾನಿಟರ್‌ಗಳಲ್ಲಿ ಲ್ಯಾಂಡರ್ ನಿರ್ದಿಷ್ಟ ಪಥ ಬಿಟ್ಟು ಬೇರೆಡೆ ಚಲಿಸಿದ ಬಗ್ಗೆ ಕಾಣಿಸುತ್ತಿತ್ತು. ಈ ವೇಳೆ ಎಲ್ಲರಲ್ಲಿ ಆತಂಕ ಮನೆ ಮಾಡಿತ್ತು. ಕೆಲ ಹೊತ್ತು ಕಾದರೂ ಸಂಪರ್ಕ ಸಿಗಲಿಲ್ಲ. ಆಗ ಇಸ್ರೋ ಅಧ್ಯಕ್ಷ ಶಿವನ್ ಅವರು ಸಿಗ್ನಲ್ ಕಡಿತಗೊಂಡಿದೆ. ಡೇಟಾ ವಿಶ್ಲೇಷಿಸುತ್ತೇವೆ ಎಂದು ಹೇಳಿದರು.
ಜು.22ರಂದು ಆಂಧ್ರದ ಶ್ರೀಹರಿಕೋಟ ನೆಲೆಯಿಂದ ಜಿಎಸ್ ಎಲ್‌ವಿ ರಾಕೆಟ್ ಮೂಲಕ ಚಂದ್ರಯಾನ-2 ನೌಕೆ ಉಡಾವಣೆಯಾಗಿತ್ತು. ಈ ನೌಕೆಯಲ್ಲಿ ಆರ್ಬಿಟರ್, ರೋವರ್ ಅನ್ನು ಒಡಲಲ್ಲಿಟ್ಟುಕೊಂಡ ಲ್ಯಾಂಡರ್ ಇದ್ದವು. ಸೆ.2ರಂದು ಗಣೇಶ ಹಬ್ಬದ ದಿನದಂದು ಆರ್ಬಿಟರ್ ಹಾಗೂ ಲ್ಯಾಂಡರ್ ಪ್ರತ್ಯೇಕಗೊಂಡಿದ್ದವು
ಸಾಫ್ಟ್ ಲ್ಯಾಂಡಿಂಗ್ ಆಗ ಹುಟ್ಟಿದ ಮಗುವಿದ್ದಂತೆ: ಸಾಫ್ಟ್‌ಲ್ಯಾಂಡಿಂಗ್ ನಮಗೆ ಹೊಸದಾದ ಹಾಗೂ ಸಂಕೀರ್ಣತೆಯ ಪ್ರಕ್ರಿಯೆ. 15 ನಿಮಿಷವು ನಮಗೆ ಭಯಾನಕ. ಇದೊಂದು ರೀತಿ ಯಾರೋ ಒಬ್ಬರು ಆಗಷ್ಟೇ ಹುಟ್ಟಿದ ಮಗುವನ್ನು ಅನಿರೀಕ್ಷಿತವಾಗಿ ನಿಮ್ಮ ಕೈಗೆ ಇಟ್ಟಂತೆ. ಅಗತ್ಯದ ಸಹಾಯವಿಲ್ಲದೆ ಮಗುವನ್ನು ಎತ್ತಿಕೊಳ್ಳಲು ನಿಮ್ಮಿಂದ ಸಾಧ್ಯವೇ? ಸಹಾಯವಿಲ್ಲದೆ ಮಗುವನ್ನು ಎತ್ತಿಕೊಂಡರೆ, ಆ ಕಡೆಯಿಂದ ಈ ಕಡೆಗೆ ಮಗು ಅಲ್ಲಾಡುತ್ತದೆ. ಅದಕ್ಕಾಗಿ ಮಗುವನ್ನು ನಾವು ಹಿಡಿದಿಟ್ಟುಕೊಳ್ಳಬೇಕು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಖಾಸಗಿ ಆಸ್ಪತ್ರೆಗಳ ವೈದ್ಯರ ಮುಷ್ಕರದ ಪರಿಣಾಮ ಸಕಾಲದಲ್ಲಿ ಚಿಕಿತ್ಸೆ ಸಿಗದೆ ರಾಜ್ಯದ ವಿವಿಧೆಡೆ ಐವರು ಮಕ್ಕಳು ಸೇರಿ ಒಂಭತ್ತು ರೋಗಿಗಳು ಮೃತಪಟ್ಟಿದ್ದಾರೆ.ಖಾಸಗಿ ಆಸ್ಪತ್ರೆಗಳ ವೈದ್ಯರ ಮುಷ್ಕರದ ಪರಿಣಾಮ ಸಕಾಲದಲ್ಲಿ ಚಿಕಿತ್ಸೆ ಸಿಗದೆ ರಾಜ್ಯದ ವಿವಿಧೆಡೆ ಐವರು ಮಕ್ಕಳು ಸೇರಿ ಒಂಭತ್ತು ರೋಗಿಗಳು ಮೃತಪಟ್ಟಿದ್ದಾರೆ.
ಪೈಲ್ಸ್ ಅಥವಾ ಮೂಲವ್ಯಾಧಿ ವಿಪರೀತ ನೋವು ನೀಡುವ ರೋಗ. ಬೇರೆಯವರಿಗೆ ಹೇಳಿಕೊಳ್ಳಲೂ ಆಗದ ಅನುಭವಿಸಲೂ ಆಗದೆ ಒಳಗೊಳಗೆ ಚಿತ್ರ ಹಿಂಸೆ ನೀಡುತ್ತದೆ. ಈ ಕಾಯಿಲೆಗೆ ಕಾರಣಗಳು:- ಬಹಳ ಹೊತ್ತು ಕೂತು ಕೆಲಸ ಮಾಡುವವರಿಗೆ, ಅತಿ ಖಾರ, ಮಸಾಲೆ ಪದಾರ್ಥಗಳ ಸೇವನೆ,ದೀರ್ಘಕಾಲದ ಮಲಬದ್ಧತೆ,ತಂಬಾಕು, ಮದ್ಯಪಾನ ಇತ್ಯಾದಿ ಚಟಗಳು, ಹಾಗೂ ದಿನವೂ ಹೆಚ್ಚು ಪ್ರಯಾಣ ಮಾಡುವವರಿಗೆ ಸಾಮಾನ್ಯವಾಗಿ ಕಾಡುವ ತೊಂದರೆ ಮೂಲವ್ಯಾಧಿ (ಮೊಳಕೆ ರೋಗ). ಇದಕ್ಕೆ ಸಾಕಷ್ಟು ಔಷಧಿ ಮಾತ್ರೆಗಳಿವೆ. ಅತ್ಯಾಧುನಿಕ ಶಸ್ತ್ರಚಿಕಿತ್ಸೆಯೂ ಲಭ್ಯ. ಆದರೂ, ಇದಕ್ಕೊಂದು ಶಾಶ್ವತ ಪರಿಹಾರ…
ಸಾಮಾನ್ಯವಾಗಿ ಸೆಟ್‌ನಲ್ಲಿ ತಂತ್ರಜ್ಞರೆಲ್ಲ ಮನೆಯವರಂತೆ ಇರುತ್ತಾರೆ. ಮನಸ್ತಾಪಗಳು ಬಂದರು ಬಹಳ ಕಾಲ ಇರುವುದಿಲ್ಲ. ಅಲ್ಲಿಂದಲ್ಲಿಗೆ ಮರೆತು ಒಂದಾಗಿ ಕೆಲಸ ಮಾಡಿಕೊಂಡು ಇರುತ್ತಾರೆ. ಆದರೆ, ‘ಸೂರ್ಯವಂಶಿ’ ಚಿತ್ರದ ಸೆಟ್‌ನಲ್ಲಿ ಮಾತ್ರ ಎಲ್ಲ ಅವಾಂತರವೇ ಆಗಿಹೋಗಿದೆ. ಆ ಚಿತ್ರದ ಹೀರೋ ಅಕ್ಷಯ್‌ಕುಮಾರ್. ನಿರ್ದೇಶನ ಮಾಡುತ್ತಿರುವುದು ರೋಹಿತ್ ಶೆಟ್ಟಿ. ಇದೀಗ ಇವರಿಬ್ಬರು ಸೆಟ್‌ನಲ್ಲಿ ಹೊಡೆದಾಡಿಕೊಂಡಿದ್ದಾರೆ. ಹಾಗಾದರೆ, ಅಕ್ಷಯ್ ಮತ್ತು ರೋಹಿತ್ ಹೀಗೆ ಹೊಡೆದಾಡಿಕೊಂಡರು? ಗಾಬರಿ ಆಗಬೇಡಿ. ಇದು ನಿಜವಾದ ಜಗಳವಲ್ಲ. ಬದಲಿಗೆ, ಕಾಮಿಡಿ ಜಗಳ. ಈ ರೀತಿ ಅವರಿಬ್ಬರು ನಡೆದುಕೊಳ್ಳಲೂ ಕಾರಣವಿದೆ. ಅದೇನೆಂದರೆ, ಇತ್ತೀಚಿಗೆ…
ಬಿಗ್ ಬಾಸ್ ಮನೆಯಲ್ಲಿ ಈ ಸೀಸನ್ ನಲ್ಲಿ ಯಾವುದೇ ಲವ್ವು ಇಲ್ಲ ಅಂದುಕೊಂಡವರಿಗೆ ವಾಸುಕಿ ಶಾಕ್ ನೀಡುತ್ತಾ ಬರುತ್ತಿರೋದು ಇವರೇನಾ ವಾಸುಕಿ ವೈಭವ್ ಎನ್ನುವಂತಾಗಿರೋದು ಸುಳ್ಳಲ್ಲ. ಆದರೆ ಸದ್ಯ ಚಂದನ ವಿಷಯ ಮುಗಿಸಿ ಭೂಮಿ ಜೊತೆ ಮನೆಯಲ್ಲಿ ಅಡ್ಡಾಡುತ್ತಾ ಹೆಡ್ ಮಸಾಜ್ ಮಾಡಿಸಿಕೊಳ್ಳುತ್ತಿರುವ ವಾಸುಕಿ ಬಗ್ಗೆ ಮನೆಯಲ್ಲೇ ದೂರುಗಳು ಹೆಚ್ಚಾಗಿದೆ. ಹೌದು, ನಿನ್ನೆ ಬಿಗ್ ಬಾಸ್ ಮನೆಯಲ್ಲಿ ಲೈಟ್ ಆಫ್ ಆದಮೇಲೆ ಪ್ರಿಯಾಂಕ ಶೈನ್ ಹಾಗೂ ವಾಸುಕಿ ಅವರು ಲಿವಿಂಗ್ ಏರಿಯಾದಲ್ಲಿ ಮಾತನಾಡುವಾಗ. ಇತ್ತೀಚೆಗೆ ವಾಸುಕಿ ಅವರು ಎಲ್ಲರನ್ನು…
*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ತಮ್ಮ ಕನಸು ಈಡೇರಿಸಿಕೊಳ್ಳಲು ಇಡೀ ಜೀವನವನ್ನೇ ವ್ಯಯಿಸಬೇಕಾಗುತ್ತದೆ. ಮತ್ತು ಕೆಲವರಿಗೆ ತಮ್ಮ ಟ್ಯಾಲೆಂಟ್‍ನಲ್ಲಿತಮ್ಮೆಲ್ಲ ಕನಸ್ಸು ಬಹುಬೇಗನೆ ಈಡೇರಿ ಬಿಡುತ್ತದೆ. ಯಾವುದೇ ವ್ಯಕ್ತಿಯಲ್ಲಿ ಟ್ಯಾಲೆಂಟ್ ಇದ್ದರೆ ಅಂತಹವರನ್ನು ಯಾರಿಂದಲೂ ತಡೆಹಿಡಿಯಲು ಸಾಧ್ಯವಿಲ್ಲ. ಆರುವರ್ಷದ ಈ ಮಗು ಕೂಡಾ ಇದ್ದಾನೆ. ವಯಸ್ಸಿನಲ್ಲಿ ಕೇವಲ ಆರುವರ್ಷ ಮಾತ್ರ ಆತನಿಗೆ ಆಗಿದೆ. ಅಷ್ಟರಲ್ಲಿಯೇ ಅವನು ಬಹಳಷ್ಟು ಸಂಪಾದಿಸಿದ್ದಾನೆ. ವೀಡಿಯೊ ಮಾಡಿ ಸ್ಟಾರ್ ಆದ:- ಈ ಮಗುವಿನ ಹೆಸರು ನಿಹಾಲ್ ರಾಜ್. ಕೊಚ್ಚಿಯಲ್ಲಿ ಅವನ ಮನೆಯಿದೆ. ನಿಹಾಲ್ …
ಬೆಂಗಳೂರು, ಜುಲೈ 29 ಅಧಿಕಾರಕ್ಕೆ ಬಂದ ದಿನವೇ ನೇಕಾರರ ಸಾಲಮನ್ನಾ ಮಾಡುವ ಮೂಲಕ ಮಹತ್ವದ ಘೋಷಣೆ ಮಾಡಿದ್ದ ನೂತನ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಕರಾವಳಿ ಭಾಗದ ಮೀನುಗಾರರಿಗೆ ಸಂತಸದ ಸುದ್ದಿ ನೀಡಿದ್ದಾರೆ. ಕರಾವಳಿ ಭಾಗದ ಮೂರು ಜಿಲ್ಲೆಗಳ ಮೀನುಗಾರರಿಗೆ ಯಡಿಯೂರಪ್ಪ ಅವರು ಸಾಲಮನ್ನಾದ ಸಿಹಿ ಸುದ್ದಿ ನೀಡಿದ್ದಾರೆ. 2017-18, 2018-19 ಸಾಲಿನಲ್ಲಿ ಕರಾವಳಿಯ 3 ಜಿಲ್ಲೆಗಳಲ್ಲಿ ಒಟ್ಟು 23507 ಮೀನುಗಾರರು ವಾಣಿಜ್ಯ ಮತ್ತು ಪ್ರಾದೇಶಿಕ ಬ್ಯಾಂಕುಗಳಲ್ಲಿ ಮಾಡಿರುವ ಒಂದು ಹಂತದವರೆಗಿನ ಸಾಲವನ್ನು ಮನ್ನಾ ಮಾಡುವ ಕುರಿತು ಬಿ.ಎಸ್…