inspirational, ಸುದ್ದಿ

ಇಲ್ಲಿದೆ ನೋಡಿ ರಾಜ್ಯದ ಎಲ್ಲಾ ರೈತರಿಗೆ ಸುಪ್ರೀಂಕೋರ್ಟ್ ಗುಡ್ ನ್ಯೂಸ್ ನೀಡಿದೆ. ಇದನ್ನೊಮ್ಮೆ ಓದಿ…!

67

ನವದೆಹಲಿ, ಕೊಡಗುಜಿಲ್ಲೆಯಲ್ಲಿ ವರ್ಗಭೂಮಿ ಹೊಂದಿರುವವರಿಗೆ ಲಭ್ಯವಾಗುವಬಾಣೆ ಜಮೀನು ಹಂಚಿಕೊಳ್ಳುವ ಅಧಿಕಾರವನ್ನುಸುಪ್ರೀಂ ಕೋರ್ಟ್‌ ನೀಡಿದೆ. ಈ ಮೂಲಕ ಬಾಣೆ ಜಮೀನು ಕೂಡ ಸೀಮಿತ ಆಸ್ತಿ ಹಕ್ಕಿನ ವ್ಯಾಪ್ತಿಯನ್ನು ಹೊಂದಿದೆಎಂಬ ವಾದಕ್ಕೆ ಸುಪ್ರೀಂನ ಮುದ್ರೆ ಬಿದ್ದಂತಾಗಿದೆ. 
ಕೊಡಗಿನ ಬಾಣೆ ಭೂಮಿಗೆ ಸಮಾನಂತರವಾಗಿ ವ್ಯಾಖ್ಯಾನಿಸಲಾಗುವ ಕುಮ್ಕಿ, ಕಾಣೆ, ಬೆಟ್ಟಭೂಮಿ, ಹಾದಿ ಭೂಮಿ, ಕಾನ್‌ ಮತ್ತು ಸೊಪ್ಪಿನ ಬೆಟ್ಟ, ಜಮ್ಮಾ ಮತ್ತು ಮೊಟಸ್ಥಳಗಳನ್ನು ಹೊಂದಿರುವ ರಾಜ್ಯದ ಉದ್ದಗಲದಲ್ಲಿನ ಲಕ್ಷಾಂತರ ರೈತರಿಗೆ ಸುಪ್ರೀಂಕೋರ್ಟ್‌ನ ಈ ಆದೇಶ ತುಸು ನೆಮ್ಮದಿಯನ್ನು ನೀಡಿದೆ.

ಕೊಡಗಿನ ಕೋಟಿಯಂಗದ ಬಿ. ಮೋಟಯ್ಯ ವರ್ಸಸ್‌ ಮಾಚಿಮಾಡ ಬೆಳ್ಳಿಯಪ್ಪ ಮತ್ತಿತರರು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟಿನ ಕದ ತಟ್ಟಿದ್ದರು. ನ್ಯಾಯಮೂರ್ತಿ ನವೀನ್‌ ಸಿನ್ಹಾ ಮತ್ತು ನ್ಯಾ. ಇಂದಿರಾ ಬ್ಯಾನರ್ಜಿ ಅವರಿದ್ದ ದ್ವಿಸದಸ್ಯ ನ್ಯಾಯಪೀಠವು ಬಾಣೆ ಜಮೀನಿನ ಹಕ್ಕನ್ನು ಗುರುತಿಸಿ ಅದನ್ನು ಹಂಚಿಕೊಳ್ಳುವ ಅಧಿಕಾರವನ್ನು ಕಲ್ಪಿಸಿ ಆ.28ರಂದು ಆದೇಶ ನೀಡಿದೆ. ಇದು ಕರ್ನಾಟಕ ಭೂ ಕಂದಾಯ ಕಾಯ್ದೆ- 1964ಕ್ಕೆ ಸಂಬಂಧಿಸಿದಂತೆ ಅತ್ಯಂತ ಮಹತ್ವದ ತೀರ್ಪು ಎಂದು ವಿಶ್ಲೇಷಿಸಲಾಗಿದೆ.

ಬಳ್ಳಿ ಮಂಡೂರು ಗ್ರಾಮದಲ್ಲಿ ವರ್ಗ ಜಮೀನಿಗೆ ತಾಕಿಕೊಂಡಿದ್ದ ಬಾಣೆ ಜಾಗಕ್ಕೆ ಸಂಬಂಧಿಸಿ ತಕರಾರಿನ ಬಗ್ಗೆ ವಿಚಾರಣೆ ನಡೆಸಿತು. ಸುಪ್ರೀಂ ಕೋರ್ಟ್‌, ವರ್ಗ ಭೂಮಿ ಹೊಂದಿರುವವರಿಗೆ ಮಾತ್ರ ಅಲ್ಲಿನ ಬಾಣೆ ಜಮೀನಿನ ಮೇಲೆ ಅಧಿಕಾರವಿದೆ ಎಂಬ ಹೈಕೋರ್ಟ್‌ ಮತ್ತು ಸ್ಥಳೀಯ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿಯುವುದರೊಂದಿಗೆ ಬಾಣೆ ಜಮೀನನ್ನು ಹಂಚುವ ಅಧಿಕಾರ ವರ್ಗ ಭೂಮಿಯ ಮಾಲೀಕನಿಗೆ ಸಿಕ್ಕಂತಾಗಿದೆ.

ಬಾಣೆ, ಕುಮ್ಕಿ, ಜಮ್ಮಾ ಮುಂತಾದವು ವರ್ಗ ಜಮೀನಿಗೆ ತಾಕಿಕೊಂಡಿದ್ದು ಈ ಜಮೀನಿನ ಮೇಲೆ ಸರ್ಕಾರಕ್ಕೆ ಅಧಿಕಾರವಿದೆ. ಕೃಷಿಕರಿಗೆ ತಮ್ಮ ಕೃಷಿ ಚಟುವಟಿಕೆಗೆ ಪೂರಕವಾದ ಮತ್ತು ಮನೆ ಬಳಕೆಗೆ ಬೇಕಾದ ಸೊಪ್ಪು ಸಂಗ್ರಹ, ಕಟ್ಟಿಗೆ, ಮರಮಟ್ಟುಗಳನ್ನು ಮಾತ್ರ ಈ ಜಮೀನಿನಿಂದ ಪಡೆಯಬಹುದೇ ಹೊರತು ಅಲ್ಲಿ ಕೃಷಿ ಮಾಡುವಂತಿಲ್ಲ ಎಂದು ಭೂ ಕಂದಾಯ ಕಾಯ್ದೆ ಹೇಳಿದೆ. ಆದರೆ ಕೃಷಿಕರು ಬಾಣೆ ಅಥವಾ ಕುಮ್ಕಿ ಜಮೀನಿನ ಮೇಲೆ ತಮಗೆ ಪೂರ್ಣ ಅಧಿಕಾರ ನೀಡಬೇಕು ಎಂದು ಅನೇಕ ದಶಕಗಳಿಂದ ಹೋರಾಟ ನಡೆಸುತ್ತಿದ್ದಾರೆ. ಆದರೆ ಈ ಪ್ರಕರಣದಲ್ಲಿ ಬಾಣೆ ಭೂಮಿಯನ್ನು ಹಂಚುವ ಅಧಿಕಾರ ನೀಡಿರುವುದು ಬಾಣೆ ಜಮೀನಿನ ಮೇಲೆ ರೈತರ ಸೀಮಿತ ಅಧಿಕಾರವನ್ನು ನ್ಯಾಯಾಲಯ ಮಾನ್ಯ ಮಾಡಿದಂತೆ ಆಗಿದೆ ಎಂದು ಹೇಳಲಾಗುತ್ತಿದೆ.

ಕಾನೂನಾತ್ಮಕವಾಗಿ ಸುಪ್ರೀಂ ಕೋರ್ಟ್‌ನ ಈ ನಡೆ ಬಾಣೆ ಭೂಮಿಯನ್ನು ಆಸ್ತಿ ಹಕ್ಕಿನ ವ್ಯಾಪ್ತಿಯಲ್ಲಿ ಗುರುತಿಸಿದಂತಾಗಿದೆ. ಭೂ ಸ್ವಾಧೀನ ಕಾಯ್ದೆ ವರ್ಗ ಜಮೀನಿಗೆ ಮಾತ್ರ ಅನ್ವಯವಾಗುತ್ತದೆ. ಒಂದು ವೇಳೆ ಬಾಣೆ ಅಥವಾ ಕುಮ್ಕಿ ಭೂಮಿಯು ಆಸ್ತಿ ಹಕ್ಕಿನ ಒಳಗೆ ಅಧಿಕೃತವಾಗಿ ಸೇರಿದರೆ ಭೂ ಸ್ವಾಧೀನ ಕಾಯ್ದೆ ಅನ್ವಯಿಸುವ ಸಂದರ್ಭದಲ್ಲಿ ಸರ್ಕಾರವು ಕಾಯ್ದೆಯನ್ವಯ ಪರಿಹಾರವನ್ನು ನೀಡಿಯೇ ಜಮೀನನ್ನು ವಶಕ್ಕೆ ಪಡೆದುಕೊಳ್ಳಬೇಕಾಗುತ್ತದೆ ಎಂಬ ವಾದಕ್ಕೆ ಪುಷ್ಠಿ ಸಿಕ್ಕಂತಾಗಿದೆ. ಇದೇ ವೇಳೆ, ಬಾಣೆ ಜಮೀನಿನ ವಿವಾದಗಳು ಸಿವಿಲ್ ನ್ಯಾಯಾಲಯದ ವಿಚಾರಣಾ ವ್ಯಾಪ್ತಿಗೆ ಬರುತ್ತದೆ ಎಂಬ ವಾದವನ್ನೂ ಸುಪ್ರೀಂ ಕೋರ್ಟ್‌ ಒಪ್ಪಿಕೊಂಡಿದೆ.

ಬಾಣೆ ಭೂಮಿಗೆ ರಾಜ್ಯದ ಎಲ್ಲೆಲ್ಲಿ ಏನು ಹೇಳ್ತಾರೆ? ಖಾಸಗಿ ಜಮೀನಿನ ಪಕ್ಕವಿರುವ ಜಮೀನಿಗೆ ಕರಾವಳಿ ಜಿಲ್ಲೆಗಳಲ್ಲಿ ಕುಮ್ಕಿ, ಬಾಣೆ, ಕಾನ್‌, ಉತ್ತರ ಕನ್ನಡದಲ್ಲಿ ಬೆಟ್ಟ, ಹಾದಿ, ಮೈಸೂರಿನಲ್ಲಿ ಸೊಪ್ಪಿನ ಬೆಟ್ಟ, ಕಾನ್‌ ಜಮೀನು, ಕೊಡಗಿನಲ್ಲಿ ಜಮ್ಮಾ ಮತ್ತು ಬಾಣೆ ಮತ್ತು ಕಲಬುರಗಿಯಲ್ಲಿ ಮೊಟಸ್ಥಳ ಎಂದು ಕರೆಯುತ್ತಾರೆ. ವರ್ಗ ಭೂಮಿಗೆ ಸಿಗುವ ಈ ಜಮೀನಿನ ಪ್ರಮಾಣದಲ್ಲಿ ವ್ಯತ್ಯಾಸವಿದ್ದರೂ ಇದೆಲ್ಲದರ ಸ್ವರೂಪ ಮತ್ತು ವ್ಯಾಖ್ಯಾನ ಒಂದೇ ಆಗಿದೆ. ಉದಾಹರಣೆಗೆ ಬಾಣೆ ಜಮೀನು ವರ್ಗ ಜಮೀನಿನ ಗರಿಷ್ಠ ಎರಡು ಪಟ್ಟು ಇದ್ದರೆ ಕುಮ್ಕಿಯು ವರ್ಗ ಜಮೀನಿನ ಸುತ್ತ 100 ಗಜದಷ್ಟುಇರುತ್ತದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ಕಡಿಮೆ ಖರ್ಚಿನಲ್ಲಿ ನಟಿ ಮತ್ತು ಟರ್ಕಿ ಕೋಳಿಯನ್ನು ಸಾಕಿ ಹೆಚ್ಚು ಹಣ ಗಳಿಸಿ!ತಿಳಿಯಲು ಈ ಮಾಹಿತಿ ನೋಡಿ…

    ಮಾಂಸಪ್ರಿಯರಿಗೆ ನಾಟಿ ಕೋಳಿ ಮಾಂಸ ಎಂದರೆ ಬಾಯಿಯಲ್ಲಿ ನೀರು ಬರುವುದಂತು ಗ್ಯಾರಂಟಿ ಏಕೆಂದರೆ ಇದರ ಮಾಂಸದ ರುಚಿ ಅಂತಹುದು. ನಗರೀಕರಣ ಮತ್ತು ಮಾಂಸದ ಬೇಡಿಕೆಯ ಕಾರಣದಿಂದ ಫಾರಂ ಮತ್ತು ಬ್ರಾಯ್ಲರ್​ ಕೋಳಿಗಳ ಸಾಕಾಣಿಕೆಯ ಕೇಂದ್ರಗಳು ತಲೆ ಎತ್ತಿವೆ. ಆದರೆ ಈ ಕೋಳಿಗಳ ಮಾಂಸ ನಾಟಿ ಕೋಳಿಯ ಮಾಂಸದ ರುಚಿಯಷ್ಟಿರುವುದಿಲ್ಲ. ನಗರಗಳಲ್ಲಿ ಜನರು ಇಂದು ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡುತ್ತಿದ್ದು ಹಣ ಖರ್ಚಾದರೂ ಕೂಡ ನಾಟಿ ಕೋಳಿಯನ್ನು ಕೊಳ್ಳುತ್ತಾರೆ. ಟರ್ಕಿ ಕೋಳಿಯನ್ನು ಕರ್ನಾಟಕದಲ್ಲಿ ತಿನ್ನುವುದು ಕಡಿಮೆ, ಆದರೆ…

  • ಸುದ್ದಿ

    ವಾಹನ ಚಾಲಕರಿಗೆ ಹೊಸ ರೂಲ್ಸ್…..ಏನೆಂದು ತಿಳಿಯಿರಿ?

    ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತೀರಾ..? ಹಾಗಿದ್ರೆ ಹುಷಾರ್ 10 ಸಾವಿರ ಫೈನ್ ಕಟ್ಟಲೇಬೇಕು. ಇದು ಕೇಂದ್ರ ಸರ್ಕಾರದ ಹೊಸ ನಿಯಮ. ಇತ್ತೀಚೆಗಷ್ಟೇ ಕರ್ನಾಟಕ ಸರ್ಕಾರ ಕೂಡ ಸಂಚಾರಿ ನಿಯಮ ಉಲ್ಲಂಘನೆಗೆ ಭಾರೀ ದಂಡ ವಿಧಿಸಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಕೂಡ ಸಂಚಾರಿ ನಿಯಮ ಉಲ್ಲಂಘನೆಗೆ ಕಡಿವಾಣ ಹಾಕಲು ಹೊಸ ಮೋಟಾರು ವಾಹನ ಕಾಯ್ದೆ ಮಸೂದೆ ಮಂಡಿಸಿದೆ. ಹೊಸ ಮಸೂದೆ ಪ್ರಕಾರ ಮದ್ಯಪಾನ ಮಾಡಿದ್ರೆ 10 ಸಾವಿರ ದಂಡ, ಅದೇ ರೀತಿ ರ್ಯಾಶ್ ಡ್ರೈವ್ ಮಾಡಿದ್ರೆ 5…

  • ಸ್ಪೂರ್ತಿ

    ಟೀ ಮಾಡಿಕೊಂಡೇ ಲಕ್ಷಾಂತರ ಹಣ ಮಾಡುತ್ತಿದ್ದಾನೆ ಈತ..!

    ಇಂಜಿನಿಯರಿಂಗ್, ವೈದ್ಯ ಸೇರಿದಂತೆ ತಿಂಗಳಿಗೆ ಸಂಬಳ ಸಿಗುವಂತಹ ಹುದ್ದೆಗಳನ್ನು ಮಾತ್ರ ಎಲ್ಲರೂ ಗೌರವದಿಂದ ನೋಡ್ತಾರೆ. ಸಣ್ಣ ಪುಟ್ಟ ವ್ಯಾಪಾರ, ಟೀ ವ್ಯಾಪಾರದ ಹೆಸರು ಕೇಳಿದ್ರೆ ಬಹುತೇಕರು ಮೂಗು ಮುರಿಯುತ್ತಾರೆ. ಆದ್ರೆ ಟೀ ಸಣ್ಣ ವ್ಯಾಪಾರವಲ್ಲ. ಟೀ ಮಾರಾಟ ಮಾಡಿ ಲಕ್ಷಾಂತರ ರೂಪಾಯಿ ಗಳಿಸಬಹುದು ಎಂಬುದನ್ನು ಪುಣೆ ಯುವಕ ತೋರಿಸಿಕೊಟ್ಟಿದ್ದಾನೆ. ಪುಣೆಯಲ್ಲಿ ಯೇವ್ಲೆ ಟೀ ಹೌಸ್ ಪ್ರಸಿದ್ಧಿ ಪಡೆದಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುವ ಗುರಿಯನ್ನು ಈ ಟೀ ಹೌಸ್ ಹೊಂದಿದೆ. ಪುಣೆಯಲ್ಲಿಯೇ ಮೂರು ಸ್ಟಾಲ್ ಗಳನ್ನು ಇದು…

  • ಹಣ ಕಾಸು

    ಜಿಎಸ್‍ಟಿ ತೆರಿಗೆ(ನಾಳೆ ಜುಲೈ1)ರಿಂದ ಈ ಸೇವೆಗಳು ದುಬಾರಿಯಾಗಲಿವೆ!

    ಸ್ವಾತಂತ್ರ್ಯ ನಂತರದ ದೇಶದ ದೊಡ್ಡ ಮತ್ತು ಏಕರೂಪ ತೆರಿಗೆ ಎಂದು ಹೇಳಲಾಗಿರುವ (ಸರಕು ಮತ್ತು ಸೇವಾ ತೆರಿಗೆ)ಜಿಎಸ್‍ಟಿ ಜುಲೈ 1 ರಿಂದ ಜಾರಿಯಾಗಲಿದ್ದು, ಇದರಿಂದ ಯಾವ ಯಾವ ಸೇವೆಗಳ ಮೇಲೆ ಈ ತೆರಿಗೆ ಪ್ರಭಾವ ಬೀರಲಿದೆ

  • ಸುದ್ದಿ

    ರಾಜ್ಯ ಸರ್ಕಾರದ ಹೊಸ ಟ್ರಾಫಿಕ್​ ರೂಲ್ಸ್ ಕಡಿತ ಬಗ್ಗೆ ಆದೇಶ ನೀಡಿದ ಮುಖ್ಯಮಂತ್ರಿ ಬಿಎಸ್​ವೈ,!ಇಷ್ಟಕ್ಕೂ ಏನು ಆ ಆದೇಶ ತಿಳಿಯಿರಿ,.?

    ಬೆಂಗಳೂರು,  ಕೇಂದ್ರ ಸರ್ಕಾರದ ಹೊಸ ಮೋಟಾರು ವಾಹನ ಕಾಯ್ದೆಗೆ ಹಲವು ವಾಹನ ಸವಾರರು ಈ ಕಾಯ್ದೆಯ ವಿರುದ್ಧ ಧ್ವನಿ ಎತ್ತಿದ್ದರು. ಇದರ ಬೆನ್ನಲೆಯಲ್ಲಿ ಇಂದು ರಾಜ್ಯ ಸರ್ಕಾರ ಹೊಸ ಟ್ರಾಫಿಕ್​ ಫೈನ್ ಇಳಿಕೆ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಹೇಳಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಜರಾತ್​ ಮಾದರಿಯಲ್ಲಿ ರಾಜ್ಯದಲ್ಲೂ ಟ್ರಾಫಿಕ್ ಫೈನ್ ಇಳಿಕೆ ಬಗ್ಗೆ ಇಂದು ಚರ್ಚೆ ನಡೆಯುತ್ತಿದೆ ಎಂದ ಅವರು, ನಮ್ಮ ಅಧಿಕಾರಿಗಳ ಚರ್ಚೆ ನಡೆಸಿದ…

  • ಆರೋಗ್ಯ, ಉಪಯುಕ್ತ ಮಾಹಿತಿ

    ಈ 4 ರೋಗಗಳನ್ನು ಗುಣಪಡಿಸುವ ಅದ್ಭುತ ಶಕ್ತಿ ಈ ಸೊಪ್ಪಿನಲ್ಲಿದೆ..!

    ಮೆಂತ್ಯ ಪಲಾವ್, ಮೆಂತ್ಯ ರೈಸ್, ಮೆಂತೆ ಪಲ್ಯ ಸೇವನೆ ಮಾಡುತ್ತಿದ್ದೀರಾ. ಹಾಗಿದ್ದರೆ ಇದು ಆರೋಗ್ಯಕ್ಕೆ ಎಷ್ಟು ಒಳ್ಳೆಯ ಪ್ರಯೋಜನ ಕೊಡುತ್ತದೆ ಅಂತ ತಿಳಿಯಿರಿ. ಮಧುಮೇಹ : ಮೆಂತ್ಯ ಸೊಪ್ಪು ಮಧುಮೇಹ ನಿಯಂತ್ರಿಸುವ ಗುಣ ಹೊಂದಿದೆ. ಇದು ಟೈಪ್ 1, ಟೈಪ್ 2 ಮಧುಮೇಹಿಗಳಿಗೆ ಹೇಳಿ ಮಾಡಿಸಿದ ಸೊಪ್ಪು. ಕೊಲೆಸ್ಟ್ರಾಲ್ : ಮೆಂತ್ಯ ಸೊಪ್ಪು ಕರುಳಿನಲ್ಲಿರುವ ಕೊಲೆಸ್ಟ್ರಾಲ್ ಅಂಶವನ್ನು ಹೀರಿಕೊಳ್ಳುವ ಗುಣ ಹೊಂದಿದೆ. ಅಷ್ಟೇ ಅಲ್ಲದೆ, ಲಿವರ್ ನಲ್ಲಿ ಕೊಬ್ಬಿನಂಶ ಹೆಚ್ಚು ಬಿಡುಗಡೆಯಾಗದಂತೆ ನೋಡಿಕೊಳ್ಳುತ್ತದೆ. ಇದು ಒಳ್ಳೆಯ ಕೊಬ್ಬಿನಂಶ ಬಿಡುಗಡೆ ಮಾಡಲು…