ಸುದ್ದಿ

ಏಕಕಾಲಕ್ಕೆ ಪಂಚಭಾಷೆಗಳಲ್ಲಿ ರಿಲೀಸ್ ಆಗಲಿರುವ ಶಿವರಾಜ್‌ ಕುಮಾರ್‌ ಭಜರಂಗಿ 2 ಚಿತ್ರ…!

97

ಕನ್ನಡ ಚಿತ್ರಗಳನ್ನು ದೇಶಾದ್ಯಂತ ಎಲ್ಲಭಾಷೆಗಳ ಪ್ರೇಕ್ಷಕರು ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ. ಇದೇ ಕಾರಣಕ್ಕೆ ಭಜರಂಗಿ-2 ಸಿನಿಮಾವನ್ನು ಪಂಚಭಾಷೆಗಳಲ್ಲಿ ತಯಾರಿಸುವ ಪ್ಲಾನ್‌ ಮಾಡಿದ್ದೇವೆ. ಸೆಪ್ಟೆಂಬರ್‌ 9ರಿಂದ ಶೂಟಿಂಗ್‌ ಆರಂಭವಾಗಲಿದೆ ಎಂದಿದ್ದಾರೆ ನಿರ್ದೇಶಕ ಎ ಹರ್ಷ.ಕೆಜಿಎಫ್‌ ಸಿನಿಮಾದ ಬಂದ ನಂತರ ಪ್ಯಾನ್‌ ಇಂಡಿಯಾ ಸಿನಿಮಾಗಳನ್ನು ಮಾಡುವ ಟ್ರೆಂಡ್‌ ಸ್ಯಾಂಡಲ್‌ವುಡ್‌ನಲ್ಲಿ ಹೆಚ್ಚುತ್ತಿದ್ದು, ಹಿರಿಯ ನಟ ಶಿವರಾಜ್‌ ಕುಮಾರ್‌ ಇದೀಗ ಅಂತಹ ಚಿತ್ರ ಒಂದರಲ್ಲಿ ನಟಿಸುತ್ತಿದ್ದಾರೆ.

ಹರ್ಷ ನಿರ್ದೇಶನದ ‘ಭಜರಂಗಿ-2’ ಚಿತ್ರವನ್ನು ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿಯಲ್ಲಿ ಏಕಕಾಲಕ್ಕೆ ತಯಾರಿಸಲಾಗುತ್ತಿದ್ದು, ಈ ಚಿತ್ರಕ್ಕೆ ದೊಡ್ಡ ಮೊತ್ತದ ಬಜೆಟ್‌ ಪ್ಲಾನ್‌ ಮಾಡಲಾಗಿದೆ ಎಂದು ಗೊತ್ತಾಗಿದೆ.  ಯಶ್‌,ದರ್ಶನ್‌ ಅಭಿನಯದ ಸಿನಿಮಾಗಳು ಈಗಾಗಲೇ ತೆರೆ ಕಂಡು ದೇಶಾದ್ಯಂತ ಸದ್ದು ಮಾಡಿವೆ. ಶೀಘ್ರದಲ್ಲಿಯೇ ಸುದೀಪ್‌ ನಟನೆಯ ‘ಪೈಲ್ವಾನ್‌’ ಚಿತ್ರ ತೆರೆ ಕಾಣಲಿದೆ. ಅದೇ ದಾರಿಯಲ್ಲಿ’ಭಜರಂಗಿ-2′ ನಿರ್ಮಾಣವಾಗುತ್ತಿದೆ. ಈ ಕುರಿತು ಲವಲವಿಕೆ ಜತೆ ಮಾತನಾಡಿದ್ದಾರೆ ನಿರ್ದೇಶಕ ಹರ್ಷ. 

ಲಂಡನ್‌ನಿಂದ ಬೆಂಗಳೂರಿಗೆ ಹಿಂತಿರುಗಿದ ಹ್ಯಾಟ್ರಿಕ್ ಹೀರೋ ಶಿವಣ್ಣ : ಭಜರಂಗಿ-2ಚಿತ್ರವನ್ನು ಐದು ಭಾಷೆಗಳಲ್ಲಿ ನಿರ್ಮಾಣ ಮಾಡಲು ದೊಡ್ಡ ಪ್ಲಾನ್‌ ಮಾಡಿದ್ದೇವೆ. ನಿಮಾರ್ಪಕರು ಮತ್ತು ನಾನು ಮಾತುಕತೆ ಮಾಡುತ್ತಿದ್ದೇವೆ. ಕಥೆ, ಬಜೆಟ್‌,ಸೆಟ್‌ಗಳು ಸೇರಿ ಎಲ್ಲವನ್ನೂ ಪ್ಲಾನ್‌ ಮಾಡಿಕೊಂಡು ಶೂಟಿಂಗ್‌ ಆರಂಭಿಸಲಿದ್ದೇವೆ. ಇತ್ತೀಚೆಗೆ ಬೇರೆ ಬೇರೆ ಭಾಷೆಗಳ ಪ್ರೇಕ್ಷಕರು ಕನ್ನಡ ಚಿತ್ರಗಳನ್ನು ಖುಷಿಯಿಂದ ಸ್ವೀಕರಿಸುತ್ತಿದ್ದಾರೆ. ಇದುವೇ ನಮಗೆ ಪ್ಯಾನ್‌ ಇಂಡಿಯಾ ಸಿನಿಮಾ ಮಾಡಬೇಕೆಂಬ ಪ್ರೇರಣೆ. ಶಿವಣ್ಣ ಅವರಿಗೆ ಕಥೆ ತುಂಬಾ ಇಷ್ಟವಾಗಿದೆ’ ಎನ್ನುತ್ತಾರೆ ಅವರು. 

ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಎಂದ ಶಿವಣ್ಣ  : ಈ ಸಿನಿಮಾದ ಮೂಲಕ ಶಿವರಾಜ್‌ ಕುಮಾರ್‌ ನೇರವಾಗಿ ಅಷ್ಟೂ ಭಾಷೆಗಳಿಗೂ ಎಂಟ್ರಿ ಕೊಟ್ಟಂತಾಗುತ್ತದೆ. ಈಗಾಗಲೇ ಹಲವಾರು ಕನ್ನಡ ಚಿತ್ರಗಳಲ್ಲಿನಟಿಸಿರುವ ಮಲೆಯಾಳಿ ನಟಿ ಭಾವನಾ ಮೆನನ್‌ ನಾಯಕಿಯಾಗಿ ನಟಿಸಲಿದ್ದಾರೆ. ನಿರ್ಮಾಪಕ ಜಯಣ್ಣ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಹಿಂದೆ ಹರ್ಷ ಹಾಗೂ ಶಿವಣ್ಣ ಕಾಂಬಿನೇಷನ್‌ನಲ್ಲಿಮೂಡಿಬಂದ ಸಿನಿಮೂ ಸೂಪರ್‌ಹಿಟ್‌ ನೀಡಿತ್ತು. 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಪ್ರೇಯಸಿಗಾಗಿ ಸಿಡ್ನಿಯಿಂದ ಬಂದ ಪಾಗಲ್ ಪ್ರೇಮಿ..ಪ್ರಿಯಕರನಿಗೆ ಕಾದಿತ್ತು ಶಾಕ್ ..!ಏನು ಗೊತ್ತಾ?

    ಇದೊಂದು ಪಾಗಲ್‌ ಪ್ರೇಮಿಯ ಕಥೆ. ಮ್ಯಾಟ್ರಿಮೋನಿಯಲ್ಲಿ ಹುಡುಗಿಯ ಭಾವಚಿತ್ರ ನೋಡಿಕೊಂಡು ಮದುವೆಯಾದರೆ ಅವಳನ್ನೇ ಆಗುತ್ತೇನೆ. ಬೇಕೇ ಬೇಕು ಅವಳೇ ಬೇಕೆಂದು ಯುವತಿಯ ಮನೆ ಎದುರು ಕಳೆದ ನಾಲ್ಕು ದಿನಗಳಿಂದ ಸಾಫ್ಟ್‌ವೇರ್‌ ಎಂಜಿನಿಯರ್‌ನೊಬ್ಬ ಧರಣಿ ನಡೆಸು. ನಡೆಸುತ್ತಿರುವ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಪ್ರಸ್ತುತ ಪ್ರೀತಿಗಾಗಿ ಆಸ್ಟ್ರೇಲಿಯಾದಲ್ಲಿ ವಾಸವಾಗಿರುವ ಅನಿವಾಸಿ ಭಾರತೀಯ ಆಂಧ್ರ ಮೂಲದ ಚಕ್ರವರ್ತಿ ಎಂಬ ಯುವನೋರ್ವ ರಾಜ್ಯದ ಹುಬ್ಬಳ್ಳಿ ಮೂಲದ ಶ್ವೇತಾ ಎಂಬ ಹುಡುಗಿ ಬೇಕು. ‘ನೀನು ಇಲ್ಲ ಅಂದ್ರೆ ಬೇರೇನು ಇಲ್ಲ. ನನ್ನ ಮದುವೆ ಮಾಡಿಕೊಳ್ಳಿ…

  • ಆರೋಗ್ಯ, ಉಪಯುಕ್ತ ಮಾಹಿತಿ

    ಕರಿದ ಎಣ್ಣೆಯನ್ನ ಪದೇ ಪದೇ ಉಪಯೋಗಿಸಿದ್ದಲ್ಲಿ ಈ ಭಯಂಕರ ಖಾಯಿಲೆ ಗ್ಯಾರಂಟಿ..!

    ಈಗಂತೂ ಮನೆಯಲ್ಲಿ ಮಾಡಿದ ಅಡುಗೆಗಿಂತ ಹೊರಗಡೆ ಸಿಗುವ ಫಾಸ್ಟ್ ಫುಡ್, ಸ್ನಾಕ್ಸ್ ಗಳನ್ನು ತಿನ್ನುವುದೇ ಹೆಚ್ಚು.ಅದರಲ್ಲೂ ಹೊರಗಡೆ ಸಿಗುವ ಕಬಾಬ್​​, ಬಜ್ಜಿ, ಮಂಚೂರಿ, ಪುರಿ, ಬೋಂಡಾ ಹೆಸರು ಕೇಳ್ತಿದ್ರೆ ಬಾಯಲ್ಲಿ ನೀರು ಬರುತ್ತೆ. ಮನೆಯಲ್ಲಿ ಈ ಸ್ಪೈಸಿ ತಿಂಡಿ ಮಾಡಿ ತಿನ್ನೋದು ಸ್ವಲ್ಪ ಕಷ್ಟ. ಹಾಗಾಗಿ ನಾವೆಲ್ಲ ಹೊಟೇಲ್ ಆಯ್ಕೆ ಮಾಡಿಕೊಳ್ತೇವೆ. ಹೊಟೇಲ್ ಇರಲಿ, ಮನೆಯಿರಲಿ, ಒಮ್ಮೆ ಕರಿದ ಎಣ್ಣೆಯನ್ನು ಎತ್ತಿಟ್ಟು ಮತ್ತೊಮ್ಮೆ ಅಡುಗೆಗೆ ಬಳಸ್ತೇವೆ. ಮನೆಯಲ್ಲಿ ನಾಲ್ಕೈದು ಬಾರಿ ಬಳಸಿದ್ರೆ ಹೊಟೇಲ್ ನಲ್ಲಿ ಅದೆಷ್ಟು ಬಾರಿ ಒಂದೇ…

  • ಸಿನಿಮಾ

    ಕೆಜಿಎಫ್ ಚಿತ್ರದ ಟ್ರೇಲರ್ ನೋಡಿ ತಮಿಳು ಖ್ಯಾತ ನಟ ವಿಜಯ್ ದಳಪತಿ ಹೇಳಿದ್ದೇನು ಗೊತ್ತಾ?

    ಕರ್ನಾಟಕ ಮಾತ್ರವಲ್ಲ ಇಡೀ ಭಾರತದಲ್ಲೇ ಕೆಜಿಎಫ್ ಚಿತ್ರ ಸದ್ದು ಮಾಡುತ್ತಿದೆ. ಈ ಚಿತ್ರ ಕನ್ನಡ, ಹಿಂದಿ, ತೆಲುಗು,ತಮಿಳು ಮತ್ತು ಮಲೆಯಳಂ ಭಾಷೆಗಳಲ್ಲಿ ಬಿಡುಗಡೆ ಗೊಳ್ಳಲಿದೆ. ಸದ್ಯ ಈ ಚಿತ್ರದ ಟ್ರೇಲರ್ ಎಲಾ ಭಾಷೆಗಳಲ್ಲೂ ಸಂಚಲನ ಸೃಷ್ಟಿಸಿದೆ. ಹಿಂದಿ ಆವೃತ್ತಿಯಲ್ಲಿ ಶಾರುಕ್ ಖಾನ್ ಅಭಿನಯದ ಝೀರೋ ಚಿತ್ರವನ್ನೇ ಹಿಂದಿಕ್ಕಿ ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿ ಮೊದಲ ಸ್ಥಾನ ಪಡೆದಿತ್ತು. ಹೀಗೆ ಎಲ್ಲಾ ಭಾಷೆಯಲ್ಲೂ ಸದ್ದು ಮಾಡುತ್ತಿರುವ ಈ ಚಿತ್ರಕ್ಕೆ ನಟ ಪುನೀತ್ ರಾಜ್ ಕುಮಾರ್ ಸೇರಿದಂತೆ ಇತರೆ ಫಿಲ್ಮ್…

  • ಗ್ಯಾಜೆಟ್

    ಗ್ರಾಹಕರಿಗೊಂದು ಖುಷಿಯ ಸುದ್ದಿ ‘ಜಿಯೋ 4ಜಿ ಫೀಚರ್ ಫೋನ್ ‘ ..!ತಿಳಿಯಲು ಈ ಲೇಖನ ಓದಿ ..

    ಜಿಯೋ ಫೋನ್ ನಿರೀಕ್ಷೆಯಲ್ಲಿರುವ ಗ್ರಾಹಕರಿಗೊಂದು ಖುಷಿ ಸುದ್ದಿ. ಮುಂಗಡ ಬುಕ್ಕಿಂಗ್ ಮಾಡಿದ್ದ ಗ್ರಾಹಕರ ಕೈಗೆ ಈ ವಾರಾಂತ್ಯದಲ್ಲಿ ಜಿಯೋ 4ಜಿ ಫೀಚರ್ ಫೋನ್ ಸಿಗಲಿದೆ. ಮೂಲಗಳ ಪ್ರಕಾರ ಅಕ್ಟೋಬರ್ 1ರಂದು ಜಿಯೋ ತನ್ನ ಫೀಚರ್ ಫೋನ್ ಡಿಲೆವರಿ ಶುರು ಮಾಡಲಿದೆ. ಮೊದಲ ಬಾರಿ ಪ್ರಿ ಬುಕ್ಕಿಂಗ್ ವೇಳೆ 60 ಲಕ್ಷಕ್ಕೂ ಹೆಚ್ಚು ಫೋನ್ ಬುಕ್ಕಿಂಗ್ ಆಗಿತ್ತು.

  • inspirational

    ಭವಿಷ್ಯವನ್ನು ಮುನ್ನಡೆಸಲು ಶಿಕ್ಷಣ ಅತ್ಯಗತ್ಯ

    ಉನ್ನತ ಶಿಕ್ಷಣಕ್ಕಾಗಿ ಉತ್ತಮ ಅವಕಾಶ ಕೋವಿಡ್ – 19 ನ ಭೀತಿಯಿಂದ ಸಮಗ್ರ ಶಿಕ್ಷಣವು ಕುಂಠಿತಗೊಂಡಿದ್ದು ವಿದ್ಯಾರ್ಥಿಗಳ ಶೈಕ್ಷಣಿಕ ಬದುಕು ಮಂದಗತಿಯಲ್ಲಿ ಮುಂದುವರೆಯುತ್ತಿರುವುದರಿಂದ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು DRM Career Build ಮತ್ತು SSN Academy ಸಂಸ್ಥೆಯು ಅಲವಾರು ಯೋಜನೆಗಳನ್ನು ರೂಪಿಸಿದೆ. ವಿಶೇಷವಾಗಿ ವಿದ್ಯಾರ್ಥಿಗಳು ಶಿಕ್ಷಣವನ್ನು ಮುಂದುವರೆಸಲು ಅತಿ ಕಡಿಮೆ ವೆಚ್ಚದಲ್ಲಿ ಉನ್ನತ ಶಿಕ್ಷಣಕ್ಕಾಗಿ ಉತ್ತಮ ಅವಕಾಶವನ್ನು ಒದಗಿಸುತ್ತಿದೆ. 10ನೇ / SSLC ತರಗತಿ CBSC / NCRT ವಿದ್ಯಾರ್ಥಿಗಳಿಗೆ Offline video ತರಗತಿಗಳನ್ನು ನಡೆಸಲಾಗುತ್ತಿದೆ. 12ನೇ…