ಸೌಂದರ್ಯ

ನೀವು ನಿಜವೆಂದು ನಂಬಿರುವ ಸೌಂದರ್ಯದ 5 ಟಿಪ್ಸ್ ಶುದ್ಧ ಸುಳ್ಳು,..ಅದೇನೆಂದು ತಿಳಿಯಿರಿ ..?

87

ಸುಂದರವಾಗಿ ಕಾಣಲು ಎಲ್ಲರು ಇಷ್ಟಪಡ್ತಾರೆ. ಅದಕ್ಕಾಗಿ ಎಲ್ಲರೂ ಒಂದಲ್ಲಾ ಒಂದು ಟಿಪ್ಸ್ ಫಾಲೋ ಮಾಡ್ತಾರೆ. ಆದರೆ ಸರಿಯಾದ ಜ್ಞಾನವಿಲ್ಲದೇ ಜನರು ಈ 5 ಟಿಪ್ಸ್ ಅನ್ನು ನಂಬಿ ಇದನ್ನು ಅನುಸರಿಸುತ್ತಾರೆ. ಆದರೆ ಈ 5 ಟಿಪ್ಸ್ ಈಗ ಶುದ್ಧ ಸುಳ್ಳು ಎಂದು ತಿಳಿದುಬಂದಿದೆ.

1.ನಿಮ್ಮಸ್ಕಿನ್ ನನ್ನು ನಿಂಬೆಹಣ್ಣಿನಿಂದ ಉಜ್ಜುವುದು:  ಜನರು ಪಿಂಪಲ್ ಫ್ರೀ ತ್ವಚೆ ಪಡೆಯಲು ನಿಂಬೆಹಣ್ಣಿನಿಂದ ಸ್ಕ್ರಬ್ಬಿಂಗ್ ಮಾಡಿಕೊಳ್ಳುತ್ತಾರೆ. ಆದರೆ ಈ ರೀತಿ ಮಾಡುವುದರಿಂದ ನಿಮ್ಮ ತ್ವಚೆಗೆ ಹಾನಿಯಾಗುತ್ತದೆ. ಏಕೆಂದರೆ ನಿಂಬೆಹಣ್ಣಿನಲ್ಲಿ ಸಿಟ್ರಿಕ್ ಆ್ಯಸಿಡ್ ಇರುತ್ತದೆ. ಹಾಗಾಗಿ ಅದನ್ನು ತ್ವಜೆ ಮೇಲೆ ನೇರವಾಗಿ ಉಜ್ಜುವುದು ಒಳ್ಳೆಯದಲ್ಲ. ನಿಂಬೆಹಣ್ಣನ್ನು ನೇರವಾಗಿ ಸ್ಕೀನ್‍ಗೆ ಉಜ್ಜುವುದರ ಬದಲು ಅದನ್ನು ಗ್ಲಿಸರಿನ್ ಅಥವಾ ಫೇಸ್‍ಪ್ಯಾಕ್‍ನಲ್ಲಿ ಮಿಕ್ಸ್ ಮಾಡಿ ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ.

2. ಪದೇ ಪದೇ ನೀರಿನಿಂದ ಮುಖ ತೊಳೆದರೆ ಮೊಡವೆ ಮಾಯ: ಪದೇ ಪದೇ ನೀರಿನಿಂದ ಮುಖ ತೊಳೆದರೆ ಮೊಡವೆಗಳು ಮಾಯವಾಗುತ್ತದೆ ಎಂದು ತುಂಬಾ ಜನ ನಂಬುತ್ತಾರೆ. ಆದರೆ ಇದು ಶುದ್ಧ ಸುಳ್ಳು. ಪದೇ ಪದೇ ನೀರಿನಿಂದ ಮುಖ ತೊಳೆದರೆ ನಿಮ್ಮ ಸ್ಕಿನ್‍ಗೆ ಬೇಕಾದ ಆಯಿಲ್ ಕಡಿಮೆ ಆಗುತ್ತದೆ. ಇದರಿಂದ ನಿಮ್ಮ ಸ್ಕೀನ್ ಡ್ರೈ ಆಗಿ ಮೊಡವೆ ಜಾಸ್ತಿಯಾಗುವ ರೀತಿ ಮಾಡುತ್ತದೆ. ಹೀಗಾಗಿ ದಿನಕ್ಕೆ 2 ಅಥವಾ 3 ಬಾರಿ ಮಾತ್ರ ಫೇಸ್ ವಾಶ್ ಮಾಡಬೇಕು.

3. ಸ್ಕ್ರಬ್ ಹಾಗೂ ಫೇಶಿಯಲ್‍ನಿಂದ ಪಿಂಪಲ್ ಫ್ರೀ:  ಸ್ಕ್ರಬ್, ಕ್ಲೀನಿಂಗ್ ಹಾಗೂ ಫೇಶಿಯಲ್ ಮಾಡುವುದರಿಂದ ಪಿಂಪಲ್ ಕಡಿಮೆಯಾಗುತ್ತದೆ ಎಂದು ಎಲ್ಲರು ನಂಬುತ್ತಾರೆ. ಆದರೆ ಇದರಿಂದ ನಿಮ್ಮ ಹಣ ಮಾತ್ರ ವ್ಯರ್ಥ ಆಗುವುದು ಹೊರತು ಪಿಂಪಲ್ ದೂರವಾಗುವುದಿಲ್ಲ. ಈ ರೀತಿ ಮಾಡುವುದರಿಂದ ನಿಮ್ಮ ತ್ವಚೆಯ ಪೋರ್ ಓಪನ್ ಆಗಿ ನಿಮ್ಮ ಸ್ಕೀನ್ ಅನ್ನು ಸೆನ್ಸಿಟಿವ್ ಮಾಡುತ್ತದೆ. ಅಲ್ಲದೇ ಇದರಿಂದ ನಿಮ್ಮ ಮುಖದ ಮೇಲೆ ಇನ್ನಷ್ಟೂ ಪಿಂಪಲ್ ಜಾಸ್ತಿ ಮಾಡುತ್ತದೆ.

4. ಫೇರ್ ನೆಸ್ ಕ್ರೀಂ ಬೆಳ್ಳಗೆ ಮಾಡುತ್ತದೆ:  ಫೇರ್ ನೆಸ್ ಕ್ರೀಂ ನಿಮ್ಮ ಮುಖವನ್ನು ಹೊಳೆಯುವಂತೆ ಮಾಡುತ್ತದೆ ಎಂದು ಅಂದುಕೊಂಡಿದ್ದಾರೆ. ಆದರೆ ಈ ಕ್ರೀಂಗಳು ಹಾಗೇ ಮಾಡುವುದಿಲ್ಲ. ಕಂಪೆನಿಗಳು ತಮ್ಮ ಪ್ರಾಡೆಕ್ಟ್ ಗಳನ್ನು ಮಾರಾಟ ಮಾಡಲು ಈ ರೀತಿಯ ಐಡಿಯಾ ಉಪಯೋಗಿಸುತ್ತಾರೆ. ಈ ಕ್ರೀಂಗಳನ್ನು ಉಪಯೋಗಿಸಿದ್ದರೆ ಅದು ನಿಮ್ಮ ತ್ವಚೆಯ ಫಿಗ್ಮೆಂಟೇಶನ್‍ನನ್ನು ತೆಗೆಯುತ್ತದೆ. ಹಾಗಾಗಿ ಕ್ರೀಂಗಳ ಬದಲು ನಿಮ್ಮ ಬಗ್ಗೆ ನೀವು ವಿಶ್ವಾಸವನ್ನು ಹೊಂದಿರಿ.

5. ಕ್ಲೌಡಿ ಡೇ ದಿನ ಸನ್‍ಸ್ಕ್ರೀನ್ ಬಳಸಬಾರದು:  ಸನ್ ಸ್ಕ್ರೀನ್ ಉಪಯೋಗಿಸುವುದರಿಂದ ಅದು ನಮ್ಮನ್ನು ಅಲ್ಟ್ರಾವೈಲೆಟ್ ಕಿರಣಗಳಿಂದ ಕಾಪಾಡುತ್ತದೆ. ಬಿಸಿಲು ಇದ್ದಾಗ ಮಾತ್ರ ಜನರು ಸನ್ ಸ್ಕ್ರೀನ್ ಉಪಯೋಗಿಸುತ್ತಾರೆ. ಮೋಡ ಕವಿದ ದಿನವೂ ಕೂಡ ಸೂರ್ಯನ ಕಿರಣವೂ ನಮ್ಮ ಮೇಲೆ ಸುಲಭವಾಗಿ ಬೀಳುತ್ತದೆ. ಹಾಗಾಗಿ ನೀವು ದಿನವೂ ಸನ್ ಸ್ಕ್ರೀನ್‍ನನ್ನು ಉಪಯೋಗಿಸುವುದನ್ನು ಮರೆಯಬೇಡಿ. ಹೀಗಾಗಿ ಕ್ಲೌಡಿ ಡೇ ದಿನ ಸನ್‍ಸ್ಕ್ರೀನ್ ಬಳಸಬಾರದು ಎಂಬುವುದು ಶುದ್ಧ ಸುಳ್ಳಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ, ಉಪಯುಕ್ತ ಮಾಹಿತಿ

    ಪೈಲ್ಸ್ ಅಥವಾ ಮೂಲವ್ಯಾಧಿ (ಮೊಳಕೆ ರೋಗ)ದ ನಿಯಂತ್ರಣಕ್ಕೆ ಇಲ್ಲಿದೆ ಸುಲಭ ಪರಿಹಾರಗಳು.!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

    ಪೈಲ್ಸ್ ಅಥವಾ ಮೂಲವ್ಯಾಧಿ ವಿಪರೀತ ನೋವು ನೀಡುವ ರೋಗ. ಬೇರೆಯವರಿಗೆ ಹೇಳಿಕೊಳ್ಳಲೂ ಆಗದ ಅನುಭವಿಸಲೂ ಆಗದೆ ಒಳಗೊಳಗೆ ಚಿತ್ರ ಹಿಂಸೆ ನೀಡುತ್ತದೆ. ಈ ಕಾಯಿಲೆಗೆ ಕಾರಣಗಳು:- ಬಹಳ ಹೊತ್ತು ಕೂತು ಕೆಲಸ ಮಾಡುವವರಿಗೆ, ಅತಿ ಖಾರ, ಮಸಾಲೆ ಪದಾರ್ಥಗಳ ಸೇವನೆ,ದೀರ್ಘಕಾಲದ ಮಲಬದ್ಧತೆ,ತಂಬಾಕು, ಮದ್ಯಪಾನ ಇತ್ಯಾದಿ ಚಟಗಳು, ಹಾಗೂ ದಿನವೂ ಹೆಚ್ಚು ಪ್ರಯಾಣ ಮಾಡುವವರಿಗೆ ಸಾಮಾನ್ಯವಾಗಿ ಕಾಡುವ ತೊಂದರೆ ಮೂಲವ್ಯಾಧಿ (ಮೊಳಕೆ ರೋಗ). ಇದಕ್ಕೆ ಸಾಕಷ್ಟು ಔಷಧಿ ಮಾತ್ರೆಗಳಿವೆ. ಅತ್ಯಾಧುನಿಕ ಶಸ್ತ್ರಚಿಕಿತ್ಸೆಯೂ ಲಭ್ಯ. ಆದರೂ, ಇದಕ್ಕೊಂದು ಶಾಶ್ವತ ಪರಿಹಾರ…

  • ಸಿನಿಮಾ, ಸುದ್ದಿ

    ಬಾಲ್ಯದ ಗೆಳೆಯನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಖ್ಯಾತಿಯ ನಟಿ ಮಯೂರಿ.

    ಕೃಷ್ಣ ಲೀಲಾ ಖ್ಯಾತಿಯ ನಟಿ ಮಯೂರಿಯವರು ಇಂದು ತನ್ನ ಬಾಲ್ಯದ ಗೆಳೆಯನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೃಷ್ಣ ಲೀಲಾ ಸಿನಿಮಾ ಮೂಲಕ ಖ್ಯಾತ ಹೊಂದಿದ್ದ ನಟಿ ಮಯೂರಿ ಅವರು ಇಂದು ಬಾಲ್ಯದ ಗೆಳೆಯನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುದಿನದ ಗೆಳೆಯ ಅರುಣ್ ಅವರ ಜೊತೆ ಬೆಂಗಳೂರಿನ ಜೆಪಿ ನಗರದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಬಳಿ ಇಂದು ಮದುವೆಯಾಗಿದ್ದಾರೆ. ಅರುಣ್ ಮತ್ತು ಮಯೂರಿ ಸುಮಾರು 10 ವರ್ಷಗಳಿಂದ ಪ್ರೀತಿ ಮಾಡುತ್ತಿದ್ದು, ಇಂದು ಕುಟುಂಬ ಒಪ್ಪಿಗೆಯ ಮೇರೆಗೆ…

  • ಸುದ್ದಿ

    ನಿಶ್ಚಿತಾರ್ಥ ಮಾಡಿಕೊಂಡ ಕಾಮಿಡಿ ಕಿಲಾಡಿ ಜೋಡಿಗಳು…

    ಬೆಂಗಳೂರು ಮುದ್ದಿನಪಾಳ್ಯ ದ ಲಕ್ಷ್ಮಿ ವೆಂಕಟೇಶ್ವರ ದೇವಾಲಯದಲ್ಲಿ ಇಂದು ‘ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋ ಸ್ಪರ್ಧಿಗಳಾದ ಗೋವಿಂದೇಗೌಡ ಮತ್ತು ದಿವ್ಯಾ ಅವರ ನಿಶ್ಚಿತಾರ್ಥ ನೆರವೇರಿದೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋನ ಕ್ಯೂಟ್ ಕಪಲ್ ಗೋವಿಂದೇ ಗೌಡ ಹಾಗೂ ದಿವ್ಯಾಶ್ರೀ ಭಾನುವಾರ ಒಬ್ಬರನೊಬ್ಬರು ತಮ್ಮ ಉಂಗುರವನ್ನು ಬದಲಾಯಿಸಿಕೊಂಡಿದ್ದಾರೆ. ಇವರಿಬ್ಬರ ನಿಶ್ಚಿತಾರ್ಥ ಸರಳವಾಗಿ ನಡೆದಿದ್ದು, ಕುಟುಂಬಸ್ಥರು ಹಾಗೂ ಆಪ್ತ ಸಂಬಂಧಿಕರು ಮಾತ್ರ ಆಗಮಿಸಿದ್ದರು. ಜೀ ಕನ್ನಡ ವಾಹಿನಿಯ ‘ಕಾಮಿಡಿ ಕಿಲಾಡಿಗಳು’ ಶೋನಲ್ಲಿ ಸ್ಪರ್ಧಿಗಳಾಗಿದ್ದ ಗೋವಿಂದೇಗೌಡ ಮತ್ತು ದಿವ್ಯಾ ಸ್ನೇಹಿತರಾಗಿದ್ದರು….

  • ಸುದ್ದಿ

    ಹೆಂಡತಿಯ ಹತ್ತಿರ 20 ಸಾವಿರ ಸಾಲ ಪಡೆದ ಪತಿ, 28.45 ಕೋ.ರೂ ಗೆದ್ದ…!

    ತೆಲಂಗಾಣ: ಅದೃಷ್ಟ ಯಾವತ್ತೂ ಬೇಕಾದರೂ ಖುಲಾಯಿಸಬಹುದು ಎಂಬ ಮಾತಿದೆ. ಉದ್ಯೋಗ ಹುಡುಕಿಕೊಂಡು ಹೈದರಾಬಾದ್ನ ವ್ಯಕ್ತಿಯೊಬ್ಬ ದುಬೈ ವಿಮಾನ ಹತ್ತಿದ್ದರು. ಆದರೆ ಉದ್ಯೋಗ “ಅದೃಷ್ಟವಶಾತ್’ ಕೈ ಕೊಟ್ಟಿತ್ತು. ಹಾಗಂತ ಅವನು ಬರೀ ಕೈಯಲ್ಲಿ ಬಂದಿಲ್ಲ. ಬರುವಾಗ ಅದೂ ಹೆಂಡತಿ ಕೈಯಿಂದ ಸಾಲ ಪಡೆದು, ಅದೃಷ್ಟ ಚೀಟಿ “ರಾಫೆಲ್’ ಅನ್ನು ಖರೀದಿಸಿದ್ದರು. ಆದರೆ ಅವರ ಅದೃಷ್ಟ ‘ರಾಫೆಲ್ ಚೀಟಿಯಲ್ಲೇ ಭದ್ರವಾಗಿತ್ತು. ಹೌದು ತೆಲಂಗಾಣದ ನಿಜಾಮಬಾದ್‌ನ ಜಾಕ್ರನ್ಪಳ್ಳಿಗ್ರಾಮಕ್ಕೆ ಸೇರಿದ ವಿಲಾಸ್‌ ರಿಕ್ಕಳ ಎಂಬವರು ಈ ಅದೃಷ್ಟದ ನಾಯಕ. ಮೂಲತಃ ಕೃಷಿ ಕುಟುಂಬ. ಕೆಲವು…

  • ಸೌಂದರ್ಯ

    ಕಪ್ಪು ವರ್ತುಲಕ್ಕೆ ಕನ್ನಡಿಯಲ್ಲಿಲ್ಲ ಮದ್ದು..!ಇಲ್ಲಿದೆ ಮನೆ ಮದ್ದು…ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

    ಕಣ್ಣಿನ ಸುತ್ತ ಕಪ್ಪು ವರ್ತುಲ ನಿಜಕ್ಕೂ ಹಲವರ ಪಾಲಿಗೆ ತೀರಾ ಕಿರಿಕಿರಿಯ ಸಮಸ್ಯೆ. ಎಷ್ಟೇ ಮೇಕಪ್ ಮಾಡಿದ್ರೂ ಕಪ್ಪು ಕಲೆಯನ್ನು ಮಾತ್ರ ಹೋಗಲಾಡಿಸೋದು ಕಷ್ಟ. ಏಕೆಂದರೆ ಇದು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ಎಂಬುದಕ್ಕಿಂತ ಹೆಚ್ಚಾಗಿ ದೇಹ ನಿಶ್ಶಕ್ತವಾದಾಗ ಮತ್ತು ರಕ್ತಹೀನತೆಯುಂಟಾದಾದಾಗ ಆರಂಭವಾಗುವ ಸಮಸ್ಯೆ. ದೇಹಕ್ಕೆ ಪೌಷ್ಟಿಕಾಂಶಯುಕ್ತ ಆಹಾರದ ಕೊರತೆ ಉಂಟಾದಾಗ ದೇಹಕ್ಕೆ ಮತ್ತಷ್ಟು ಪೋಷಕಾಂಶ ಬೇಕು ಎಂಬ ಸಂದೇಶವನ್ನು ಕಪ್ಪು ವರ್ತುಲ ನೀಡುತ್ತದೆ. ನಿದ್ರಾಹೀನತೆಯಿಂದ ಬಳಲುವವರಲ್ಲೂ ಈ ಸಮಸ್ಯೆ ಕಾಣಬಹುದು. ಈ ಸಮಸ್ಯೆಯ ಪರಿಹಾರಕ್ಕೆ ಈಗಾಗಲೇ ಹಲವು…

  • ಆಧ್ಯಾತ್ಮ, ದೇವರು, ದೇವರು-ಧರ್ಮ

    ಇಲ್ಲಿದೆ ಪಂಚಮುಖಿ ಆಂಜನೇಯನ ಅವತಾರದ ಕತೆ..!ಹನುಮಂತನ 5 ತಲೆಗಳಿಗಿದೆ ಒಂದೊಂದು ವಿಶೇಷತೆ…ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

    *ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಹಲವು ಹೆಸರುಗಳಿಂದ ಕರೆಯಲ್ಪಡುವ ಆಂಜನೇಯನ ವಿಶೇಷತೆ ಮಹತ್ವ ಪೂರ್ಣವಾದದ್ದು. ರಾಮನ ಪರಮ ಭಕ್ತನಾದ ಹನುಮಂತನಿಗೆ ಅಪಾರ ಸಂಖ್ಯೆಯ ಭಕ್ತರು… ಮೊದಲಿಗೆ ಪಂಚಮುಖಿ ಆಂಜನೇಯನ ಅವತಾರವಾಗಿದ್ದು ಹೇಗೆ ಎಂದು ತಿಳಿಯೋಣ… ರಾಮಾಯಣದ ಯದ್ಧದಲ್ಲಿ ರಾಮ ರಾವಣರು ಯುದ್ದ ಮಾಡುತ್ತಿರುವಾಗ, ರಾವಣನು ಪಾತಾಳಲೋಕದ ದೊರೆಯಾದ ಅಹಿರಾವಣನ ಸಹಾಯ ಪಡೆಯುತ್ತಾನೆ ಹನುಮಂತನು ರಾಮ ಲಕ್ಷ್ಮಣರ ರಕ್ಷಣೆಗೆ ನಿಲ್ಲುತ್ತಾನೆ. ಹನುಮಂತನು ರಾಮ ಲಕ್ಷ್ಮಣರನ್ನು ರಕ್ಷಿಸಲು ಬೃಹತ್ ಆಕಾರ ತಳೆಯುತ್ತಾನೆ, ಅಹಿರಾವಣನು ರಾವಣನ ತಮ್ಮನಾದ ವಿಭೀಷಣನ…