ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಭಾರತದ ಹೆಮ್ಮೆಯ ಪಿವಿ ಸಿಂಧೂ, ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್ ಗೆದ್ದು ನೂತನ ಇತಿಹಾಸ ಬರೆದಿದ್ದಾರೆ. ಮಹಿಳಾ ಸಿಂಗಲ್ಸ್ ಫೈನಲ್ ಮುಖಾಮುಖಿಯಲ್ಲಿ ಜಪಾನ್‌ನ ನಜೊಮಿ ಮಣಿಸಿ ವಿಶ್ವ ಚಾಂಪಿಯನ್‌ಶಿಪ್‌ಗೆ ಮುತ್ತಿಕ್ಕಿದರು, ಭಾರತದ ಅಗ್ರಮಾನ್ಯ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧೂ, ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‌ಶಿಪ್ ಗೆದ್ದು ಇತಿಹಾಸ ರಚಿಸಿದ್ದಾರೆ. ಅಲ್ಲದೆ ಬ್ಯಾಡ್ಮಿಂಟನ್ ವಿಶ್ವ ಸಾಮ್ರಾಜ್ಞಿಯಾದ ಭಾರತದ ಮೊದಲ ಆಟಗಾರ್ತಿಯೆನ್ನುವ ಚಾರಿತ್ರಿಕ ದಾಖಲೆಯನ್ನು ಬರೆದಿದ್ದಾರೆ. ಭಾನುವಾರ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ನಡೆದ ಫೈನಲ್ ಮುಖಾಮುಖಿಯಲ್ಲಿ ತಮ್ಮ ಬದ್ದ ವೈರಿ ಜಪಾನ್‌ನ ಜಪಾನ್‌ನ ನಜೊಮಿ ಒಕುಹರಾ ವಿರುದ್ಧ21-7, 21-7ರ ಅಂತರದ ಗೆಲುವು ದಾಖಲಿಸಿ ಇತಿಹಾಸ ಪುಟ ಸೇರಿದ್ದಾರೆ.
ಭಾರತದ ಬ್ಯಾಡ್ಮಿಂಟನ್ ಕಣ್ಮಣಿ ಪಿ.ವಿ ಸಿಂಧೂ, ಸತತವಾದ ಐದನೇ ಪ್ರಯತ್ನದಲ್ಲಿ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.24ರ ಹರೆಯದ ಹೈದರಾಬಾದ್ ಆಟಗಾರ್ತಿ2017 ಮತ್ತು 2018ರ ಆವೃತ್ತಿಗಳಲ್ಲಿ ಫೈನಲ್ ಪ್ರವೇಶಿಸಿ, ಪ್ರಶಸ್ತಿ ಸೆಣಸಾಟದಲ್ಲಿ ಸೋತು ಬೆಳ್ಳಿ ಪದಕಕ್ಕೆ ಸಮಾಧಾನ ಪಟ್ಟುಕೊಂಡಿದ್ದರು. ಅದರಲ್ಲೂ ವಿಶೇಷವಾಗಿ2017ರ ಫೈನಲ್‌ನಲ್ಲಿ ಜಪಾನ್‌ನ ನಜೊಮಿ ಒಕುಹರಾ ವಿರುದ್ಧ ಕೇವಲ ಎರಡು ಅಂಕಗಳ ಹಿನ್ನಡೆಯೊಂದಿಗೆ ಸೋತು ನಿರಾಸೆ ಅನುಭವಿಸಿದ್ದರು. ಜೀವಮಾನದಲ್ಲೇ ಅತ್ಯುನ್ನತ ಫಾರ್ಮ್‌ನಲ್ಲಿರುವ ಪಿವಿ ಸಿಂಧೂ, ಪಂದ್ಯದ ಆರಂಭದಿಂದಲೇ ಎದುರಾಳಿ ಮೇಲೆ ಪ್ರಹಾರ ಮಾಡ ತೊಡಗಿದರು. ಸಿಂಧೂ ಬಲವಾದ ಹೊಡೆತಕ್ಕೆ ಓಕುಹರಾ ಬಳಿ ಉತ್ತರವೇ ಇಲ್ಲ. ಇದರಿಂದಾಗಿ ಒಂದು ಹಂತದಲ್ಲಿ16-2ರ ಅಂತರದ ಮುನ್ನಡೆ ದಾಖಲಿಸಿದರು. ಅಲ್ಲದೆ ಮೊದಲ ಸುತ್ತನ್ನು21-7 ರ ಅಂತರದ ಸುಲಭವಾಗಿ ವಶಪಡಿಸಿಕೊಂಡರು.
ನಿರ್ಣಾಯಕ ದ್ವಿತೀಯ ಸುತ್ತಿನಲ್ಲೂ ಆಕ್ರಮಣಕಾರಿ ಆಟವನ್ನು ಮುಂದುವರಿಸಿದ ಸಿಂಧೂ, ಎದುರಾಳಿಯ ಮೇಲೆ ನಿರಂತರ ಒತ್ತಡವನ್ನು ಹೇರುತ್ತಲೇ ಸಾಗಿದರು. ಹಿಂದಿನ ಪ್ರದರ್ಶನಕ್ಕೆ ಹೋಲಿಸಿದರೆ ಅನಗತ್ಯ ತಪ್ಪುಗಳಿಗೆ ಯಾವುದೇ ಆಸ್ಪದ ನೀಡದ ಸಿಂಧೂ, ತಮ್ಮ ಬಲವಾದ ಹೊಡೆತದಿಂದಲೇ ಎದುರಾಳಿ ಮೇಲೆ ಸವಾರಿ ಮಾಡಿದರು. ಹಾಗೆಯೇ ದ್ವಿತೀಯ ಸುತ್ತಿನಲ್ಲೂ ಒಂದು ಹಂತದಲ್ಲಿ16-4ರ ಮುನ್ನಡೆ ಗಳಿಸಿ ಪ್ರಶಸ್ತಿಯತ್ತ ಮುನ್ನಡೆದರು. ಅಂತಿಮವಾಗಿ ದ್ವಿತೀಯ ಗೇಮ್ 21-7ರ ಅಂತರದಲ್ಲಿ ವಶಪಡಿಸಿ ಚಿನ್ನದ ಹಾರವನ್ನುಕೊರಳಿಗೆ ಹಾಕಿಕೊಂಡರು.
ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಮೂರನೇ ಶ್ರೇಯಾಂಕದ ಆಟಗಾರ್ತಿ ಚೀನಾದ ಚೆನ್ ಯು ಫಿ ಅವರನ್ನು21-7 ಮತ್ತು 21-14 ಗೇಮ್‌ಗಳಿಂದ ಮಣಿಸಿ ಅಂತಿಮ ಹಣಾಹಣಿಗೆ ವೇದಿಕೆ ನಿರ್ಮಿಸಿಕೊಂಡರು. ಇದರೊಂದಿಗೆ ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಸತತ 3ನೇ ಬಾರಿಗೆ ಫೈನಲ್ ಪ್ರವೇಶಿಸಿದ ವಿಶ್ವದ ಮೊದಲ ಆಟಗಾರ್ತಿಯೆನ್ನುವ ಹೆಗ್ಗಳಿಕೆಯನ್ನೂ ತಮ್ಮದಾಗಿಸಿಕೊಂಡರು. 2013ರ ಆವೃತ್ತಿಯಲ್ಲಿ ಸಿಂಧೂ ಕಂಚಿನ ಪದಕ ಜಯಿಸಿದ್ದರು. ಆಗ ಅವರಿಗೆ ಕೇವಲ 18 ವರ್ಷ. ಅದಾದ ಬಳಿಕ 2014ರ ಆವೃತ್ತಿಯಲ್ಲೂ ಕಂಚಿನ ಪದಕ ಗೆದ್ದಿದ್ದರು. ಇದರೊಂದಿಗೆ, ರಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಸಿಂಧೂ ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಒಟ್ಟು 5 ಪದಕ (ಹಾಲಿ ಆವೃತ್ತಿಯದೂ ಸೇರಿ) ಗೆದ್ದಂತಾಗಿದೆ.
ಸಿಂಧೂ ಪ್ರಮುಖ ಸಾಧನೆಗಳು:
ಒಲಿಂಪಿಕ್:
2016 ರಿಯೋ ಡಿ ಜನೈರೋ: ಬೆಳ್ಳಿ ಪದಕ (ಮಹಿಳಾ ಸಿಂಗಲ್ಸ್)
ವಿಶ್ವ ಚಾಂಪಿಯನ್‌ಶಿಪ್:
2019 ಬಾಸೆಲ್: ಚಿನ್ನ ಪದಕ (ಮಹಿಳಾ ಸಿಂಗಲ್ಸ್)
2018 ನಾನ್‌ಜಿಂಗ್: ಬೆಳ್ಳಿ ಪದಕ (ಮಹಿಳಾ ಸಿಂಗಲ್ಸ್)
2017 ಗ್ಲ್ಯಾಸ್ಗೋ: ಬೆಳ್ಳಿ ಪದಕ (ಮಹಿಳಾ ಸಿಂಗಲ್ಸ್)
2014 ಕೊಪೆನ್‌ಹ್ಯಾಗನ್: ಕಂಚಿನ ಪದಕ (ಮಹಿಳಾ ಸಿಂಗಲ್ಸ್)
2013 ಗುವಾಂಗ್‌ಝೌ: ಕಂಚಿನ ಪದಕ (ಮಹಿಳಾ ಸಿಂಗಲ್ಸ್)
ಏಷ್ಯನ್ ಗೇಮ್ಸ್:
2018 ಜಕಾರ್ತ-ಪ್ಯಾಲೆಮ್‌ಬ್ಯಾಂಗ್: ಬೆಳ್ಳಿ ಪದಕ (ಮಹಿಳಾ ಸಿಂಗಲ್ಸ್)
2014 ಇಂಚಿಯಾನ್: ಕಂಚಿನ ಪದಕ (ಮಹಿಳಾ ಸಿಂಗಲ್ಸ್)
ಕಾಮನ್‌ವೆಲ್ತ್ ಗೇಮ್ಸ್:
2018 ಗೋಲ್ಡ್ ಕೋಸ್ಟ್: ಚಿನ್ನದ ಪದಕ (ಮಿಶ್ರ ತಂಡ)
2018 ಗೋಲ್ಡ್ ಕೋಸ್ಟ್: ಬೆಳ್ಳಿ ಪದಕ (ಮಹಿಳಾ ಸಿಂಗಲ್ಸ್)
2014 ಗ್ಲ್ಯಾಸ್ಗೋ: ಬೆಳ್ಳಿ ಪದಕ (ಮಹಿಳಾ ಸಿಂಗಲ್ಸ್)
ಏಷ್ಯಾ ಚಾಂಪಿಯನ್‌ಶಿಪ್:
2014 ಗಿಮ್ಚಿಯಾನ್: ಕಂಚಿನ ಪದಕ (ಮಹಿಳಾ ಸಿಂಗಲ್ಸ್)
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕೆಮಿಕಲ್ ಗೋಡಾನ್‍ನಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ಪಶ್ಚಿಮ ಬಂಗಾಳದ ಹೌರಾ ಬ್ರಿಡ್ಜ್‍ನಲ್ಲಿ ನಡೆದಿದೆ. ಇಂದು ನಸುಕಿನ ಜಾವ 2 ಗಂಟೆಗೆ ಗೋಡಾನ್‍ನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಈ ವಿಷಯ ತಿಳಿದು 20 ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿಯನ್ನು ನಂದಿಸಿದ್ದಾರೆ. ಬೆಂಕಿಯನ್ನು ನಂದಿಸಲು ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಜಗನ್ನಾಥ್ ಘಾಟ್‍ನಲ್ಲಿ ಗೋಡಾನ್ ಇದ್ದು, ಇಂದು ಬೆಳಗ್ಗೆ ಬೆಂಕಿ ಹೊತ್ತಿಗೊಂಡಿದೆ. ಈಗ ಬೆಂಕಿಯನ್ನು ನಿಯಂತ್ರಿಸಲಾಗಿದೆ. ಯಾವುದೇ ಪ್ರಾಣಾಪಾಯ ಆಗಿಲ್ಲ ಎಂದು ಅಗ್ನಿಶಾಮಕ ಸಿಬ್ಬಂದಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಸಚಿವ…
ಜೀವನ ನಾವು ಅಂದುಕೊಂಡಷ್ಟು ಸುಲಭವೂ ಅಲ್ಲ, ಹಾಗೆಯೇ ಕಷ್ಟವೆಂದು ಕುಳಿತು ಕೊಳ್ಳುವಷ್ಟು ಕಷ್ಟವು ಅಲ್ಲ. ಜೀವನದಲ್ಲಿ ಕಷ್ಟ ಸುಖ ಎರಡು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಒಮ್ಮೆ ಕಷ್ಟ ಬಂದರೆ ಮತ್ತೊಮ್ಮೆ ಸುಖ ಬರುತ್ತದೆ. ಕಷ್ಟ ಬಂದಾಗ ಕುಗ್ಗದೆ, ಸುಖ ಬಂದಾಗ ಹಿಗ್ಗದೇ ಜೀವನವನ್ನ ನಡೆಸ ಬೇಕು. ಕಷ್ಟಗಳು ಬಂದವೆಂದು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವ ಬದಲು ಛಲದಿಂದ ಕಷ್ಟಗಳನ್ನ ಎದುರಿಸಿ ಮುಂದೆ ಸಾಗಬೇಕು. ನಾವೀಗ ಹೇಳಲಿರುವ ಯುವತಿ ಸಹ ಇದೇ ಪಟ್ಟಿಗೆ ಸೇರುತ್ತಾಳೆ.
ಸ್ಮಾರ್ಟ್‌ಫೋನ್‌ನಲ್ಲಿ ಬಳಕೆಗೆ ಅಭಿವೃದ್ಧಿಪಡಿಸಲಾಗಿರುವ ಎಂ-ಆಧಾರ್ ಆ್ಯಪ್ ಅನ್ನು ಮತ್ತಷ್ಟು ಸುರಕ್ಷಿತಗೊಳಿಸಿರುವ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ)ಹೊಸ ಆವೃತ್ತಿಯನ್ನು ಗ್ರಾಹಕರ ಬಳಕೆಗಾಗಿ ಬಿಡುಗಡೆಮಾಡಿದೆ.ಹಿಂದಿನ ಆವೃತ್ತಿಯನ್ನು ಅಳಿಸಿ,ನೂತನ ಆವೃತ್ತಿಯನ್ನು ಸ್ಮಾರ್ಟ್‌ಫೋನ್‌ಗಳಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳುವಂತೆ ಯುಐಡಿಎಐ ಸೂಚಿಸಿದೆ. ನೂತನ ಆವೃತ್ತಿಯ ಎಂ-ಆಧಾರ್‌ನಲ್ಲಿ ಕನ್ನಡ ಸೇರಿದಂತೆ 13 ಭಾಷೆಗಳಿವೆ. ಆಧಾರ್ ಕಾರ್ಡ್ ಡೌನ್‌ಲೋಡ್, ಆಫ್‌ಲೈನ್ ಇಕೆವೈಸಿ, ವಿಳಾಸ ಪರಿಷ್ಕರಣೆ, ಇ-ಮೇಲ್ ಪರಿಶೀಲನೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಗ್ರಾಹಕರು ಎಂ-ಆಧಾರ್‌ನಿಂದ ಪಡೆಯಬಹುದಾಗಿದೆ. ಗುರುತು ಖಾತ್ರಿಗಾಗಿ ಆಧುನಿಕ ಬಯೋಮೆಟ್ರಿಕ್ ವ್ಯವಸ್ಥೆಯನ್ನುನೂತನ ಆವೃತ್ತಿಯಲ್ಲಿ ಬಳಸಲಾಗಿದ್ದು, ಇದರಿಂದ ಆಧಾರ್ ಆ್ಯಪ್‌ಅನ್ನು ಲಾಕ್…
Kotilingeshwara temple is situated in Kammasandra village in Kolar district , Karnataka. In the temple premises more than million of lingas were installed since 1980.
ನಮ್ಮ ದೇಹದ ಆಕಾರವನ್ನು ನೋಡಿ ಒಬ್ಬರ ವ್ಯಕ್ತಿತ್ವವನ್ನು ಅಳೆಯಬಹುದು. ಯಾರೇ ಆಗಲಿ ನಮ್ಮನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವರು ಎಂತಹ ವ್ಯಕ್ತಿ ಎಂಬುದನ್ನು ಹಾಗೆಯೇ ತಿಳಿಯಬಹುದು.
‘ತಿಥಿ’ ಸ್ಟಾರ್ ಗಡ್ಡಪ್ಪ ಹಾಗೂ ಸೆಂಚುರಿಗೌಡ ಸದ್ಯ ಸ್ಯಾಂಡಲ್ ವುಡ್ ನ ‘ಟಾಕ್ ಆಫ್ ದಿ ಟೌನ್’ ಆಗಿದ್ದಾರೆ. ಬಿಗ್ ಸ್ಟಾರ್ ಗಳಂತೆ ಬ್ಯುಸಿಯಾಗಿರುವ ಇವರಿಬ್ಬರು ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.