ಸುದ್ದಿ

ಟಾಟಾಸ್ಕೈ ಬಳಕೆ ಮಾಡುವರಿಗೊಂದು ಸಿಹಿ ಸುದ್ದಿ, ಇನ್ಮುಂದೆ ವಾಟ್ಸಪ್‌ನಲ್ಲಿ ಬ್ಯಾಲೆನ್ಸ್ ತಿಳಿಯಬಹುದು, ಏಗೆಂದು ಇದನ್ನೊಮ್ಮೆ ಓದಿ …!

70

ಪ್ರಸ್ತುತ ಬಹುತೇಕ ಅಗತ್ಯ ಕೆಲಸಗಳು ಸ್ಮಾರ್ಟ್‌ಫೋನ್‌ ಡಿವೈಸ್‌ ಮೂಲಕವೇ ಮಾಡಿಬಿಡಬಹುದಾಗಿದ್ದು, ಅದಕ್ಕೆ ಸಾಮಾಜಿಕ ಜಾಲತಾಣಗಳು ಮತ್ತು ಕೆಲವು ಆಪ್ಸ್‌ಗಳು ಅತ್ಯುತ್ತಮ ಸಾಥ್‌ ನೀಡುತ್ತಿವೆ. ಈ ನಿಟ್ಟಿನಲ್ಲಿ ಇದೀಗ ಜನಪ್ರಿಯ ಟಾಟಾಸ್ಕೈ ಡಿಟಿಎಚ್‌ ಸಂಸ್ಥೆಯು ವಾಟ್ಸಪ್‌ ಪ್ಲಾಟ್‌ಫಾರ್ಮ್‌ ಬಳಸಿಕಂಡು ತನ್ನ ಗ್ರಾಹಕರಿಗೆ ಅನುಕೂಲಕರ ಸೇವೆ ನೀಡಲು ಮುಂದಾಗಿದೆ , ಹೌದು, ಟಾಟಾಸ್ಕೈ ಸಂಸ್ಥೆಯು ಈಗ ವಾಟ್ಸಪ್‌ ಬ್ಯುಸಿನೆಸ್‌ ಅಕೌಂಟ್‌ ಅನ್ನು ತೆರೆದಿದ್ದು, ಈ ಮೂಲಕ ಗ್ರಾಹಕರಿಗೆ ತ್ವರಿತವಾಗಿ ಅಗತ್ಯ ಸೇವೆ ನೀಡಲು ಸಜ್ಜಾಗಿದೆ. ಗ್ರಾಹಕರು ತಮ್ಮ ಟಾಟಾಸ್ಕೈ ಅಕೌಂಟ್‌ನ ಮಾಹಿತಿಯನ್ನು ತಿಳಿಯಲು, ಡಿಟಿಎಚ್‌ ರೀಚಾರ್ಜ್‌ ಮಾಡಿಸಿಕೊಳ್ಳಲು ಮತ್ತು ರೀಚಾರ್ಜ್‌ ಮಾಡಿದ ಮೇಲೆ ಅಕೌಂಟ್‌ ರಿಪ್ರೇಶ್ ಮಾಡಲು ಕಂಪೆನಿಯ ಹೊಸ ವಾಟ್ಸಪ್ ಖಾತೆಯ ನೆರವು ಪಡೆಯಬಹುದಾಗಿದೆ.

ಕಳೆದ ವರ್ಷವೇ 2018ರಲ್ಲಿ ಟಾಟಾಸ್ಕೈ ಸಂಸ್ಥೆಯು ವಾಟ್ಸಪ್‌ ಬ್ಯುಸಿನೆಸ್‌ ಖಾತೆಯನ್ನು ತೆರೆದಿದ್ದು, ಆದ್ರೆ ಇದೀಗ ಆ ಅಕೌಂಟ್‌ ಕಾರ್ಯರೂಪಕ್ಕೆ ಬಂದಿದೆ. ಈ ವಾಟ್ಸಪ್‌ ಅಕೌಂಟ್‌ನಲ್ಲಿ ಗ್ರಾಹಕರು ಅಕೌಂಟ್‌ ಬ್ಯಾಲೆನ್ಸ್, ಇನ್‌ಸ್ಟಂಟ್ ರೀಚಾರ್ಜ್ ಆಯ್ಕೆ, ಅಗತ್ಯ ಸಂದರ್ಭದಲ್ಲಿ ರೀಚಾರ್ಜ್ ಮಾಡಿಸಿಕೊಳ್ಳಲು, ಅಕೌಂಟ್ ರಿಫ್ರೇಶ್ ಮಾಡಿಸಲು ಕಂಪೆನಿಯ ವಾಟ್ಸಪ್‌ ಬ್ಯುಸಿನೆಸ್‌ ಖಾತೆ ಗ್ರಾಹಕರಿಗೆ ಉಪಯುಕ್ತ ಎನಸಲಿದೆ. ಹಾಗಾದರೇ ಟಾಟಾಸ್ಕೈ ವಾಟ್ಸಪ್ ಖಾತೆಯ ಹೊಸ ಸೇವೆಗಳ ಕುರಿತು ಇನ್ನಷ್ಟು ಮಾಹಿತಿಯನ್ನು ಮುಂದೆ ನೋಡೋಣ ಬನ್ನಿರಿ.

ವಾಟ್ಸಪ್‌ನಲ್ಲಿ ಲಭ್ಯವಾಗುವ ಸೇವೆಗಳು ಟಾಟಾಸ್ಕೈ ಸಂಸ್ಥೆಯು ತನ್ನ ಗ್ರಾಹಕರು ವಾಟ್ಸಪ್‌ನಲ್ಲಿಯೇಈಗ ಹಲವು ಸೇವೆಗಳನ್ನು ನೀಡುತ್ತಿದೆ. ಅವುಗಳಲ್ಲಿ ಮುಖ್ಯವಾಗಿ ಬ್ಯಾಲೆನ್ಸ್‌ ಚೆಕ್ ಮಾಡುವುದು,ಪ್ರಸ್ತುತ ಚಾನೆಲ್ ಪ್ಯಾಕ್‌ ಬಗ್ಗೆ ಮಾಹಿತಿ ತಿಳಿಯುವುದು, ಇನ್‌ಸ್ಟಂಟ್‌ (ತ್ವರಿತವಾಗಿ)ರೀಚಾರ್ಜ್ ಮಾಡಿಕೊಳ್ಳುವ ಅವಕಾಶ, ಅಕೌಂಟ್‌ ರಿಫ್ರೇಶ್ ಮಾಡುವ ಸೌಲಭ್ಯ, ಎಮರ್ಜನ್ಸಿ ಟಾಪ್ಅಪ್‌ಸೇವೆಗಳನ್ನು ದೊರಕಿಸಲು ಅಣಿಯಾಗಿದೆ.

ಟಾಟಾಸ್ಕೈ ವಾಟ್ಸಪ್ ಸೇವೆ ಪಡೆಯುವುದು ಹೇಗೆ? ಟಾಟಾಸ್ಕೈ ಗ್ರಾಹಕರು ಈಗ ವಾಟ್ಸಪ್‌ ಮೂಲಕವೇ ತಮ್ಮಖಾತೆಯ ಬ್ಯಾಲೆನ್ಸ್‍ ಚೆಕ್‌ ಮಾಡಬಹುದಾಗಿದ್ದು, ಅದಕ್ಕಾಗಿ ಕಂಪೆನಿಯು ಬ್ಯುಸಿನೆಸ್‌ ಖಾತೆಯನಂಬರ್‌ +91 1800 208 6633 ನೀಡಿದೆ. ಈ ನಂಬರ್‌ ಅನ್ನು ಗ್ರಾಹಕರು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿಸೇವ್ ಮಾಡಿಕೊಂಡು ಒಂದು ಮೆಸೆಜ್ ಕಳುಹಿಸಬೇಕು. ಆನಂತರ ಕಂಪೆನಿಯಿಂದ ರಿಪ್ಲೇ ಬರುವುದು ಮತ್ತುವಾಟ್ಸಪ್‌ ಸೇವೆ ಚಾಲ್ತಿ ಆಗುವುದು. ಮತ್ತು ರಿಜಿಸ್ಟರ್ ಮೊಬೈಲ್ ನಂಬರ್‌ನಿಂದ 92296-92296ಮಿಸ್‌ಕಾಲ್‌ ಮಾಡಿ ಅಥವಾ 56633 ನಂಬರ್‌ಗೆ WHATSAPP ಎಂದು ಎಸ್‌ಎಮ್‌ಎಸ್‌ ಸಹ ಮಾಡಿ ಟಾಟಾಸ್ಕೈವಾಟ್ಸಪ್ ಸೇವೆ ಪಡೆಯಬಹುದು.

ಬ್ಯಾಲೆನ್ಸ್‌ ಚೆಕ್‌ ಮಾಡಲು ಹೀಗೆ ಮಾಡಿ ಟಾಟಾಸ್ಕೈ ಸಂಸ್ಥೆಯ ವಾಟ್ಸಪ್ ಬ್ಯುಸಿನೆಸ್‌ ಅಕೌಂಟ್‌ನಲ್ಲಿಒಟ್ಟು ಎಂಟು ಸೇವೆಗಳು ದೊರೆಯಲಿವೆ. ಗ್ರಾಹಕರು ವಾಟ್ಸಪ್‌ನಲ್ಲಿ ಟಾಟಾಸ್ಕೈ ಬ್ಯಾಲೆನ್ಸ್‌ ಚೆಕ್ಮಾಡಲು ಕ್ಯಾಪಿಟಲ್ ಅಕ್ಷರದಲ್ಲಿ ‘BALANCE’ ಎಂದು ಬರೆದು ಮೆಸೆಜ್ ಮಾಡಿದರೇ, ಕಂಪೆನಿಯಿಂದಬ್ಯಾಲೆನ್ಸ್‍ ಎಷ್ಟಿದೆ ಎಂದು ಮರಳಿ ಮೆಸೆಜ್ ಬರುತ್ತದೆ. ಅಂದಹಾಗೇ ಗ್ರಾಹಕರು ಟಾಟಾಸ್ಕೈನಲ್ಲಿರಿಜಿಸ್ಟರ್ ಆದ ಮೊಬೈಲ್ ನಂಬರ್‌ನಿಂದಲೇ ಮೆಸೆಜ್ ಮಾಡಬೇಕು.
ಸೇವೆಯನ್ನು ನಿಲ್ಲಿಸಲು ಅವಕಾಶ:  ವಾಟ್ಸಪ್‌ ಬ್ಯುಸಿನೆಸ್‌ ಖಾತೆಯನ್ನು ತೆರೆದಿರುವಟಾಟಾಸ್ಕೈ ಸಂಸ್ಥೆಯು ತನ್ನ ಗ್ರಾಹಕರಿಗೆ ಅಗತ್ಯ ಸೌಲಭ್ಯಗಳನ್ನ ನೀಡಲು ಕ್ರಮಕೈಕೊಂಡಿದೆ. ಹಾಗೆಯೇಈ ಸೇವೆಯನ್ನು ಗ್ರಾಹಕರು ಯಾವುದೇ ಸಮಯದಲ್ಲಿ ಬೇಕಾದರು ನಿಲ್ಲಿಸುವ ಅವಕಾಶವನ್ನು ಸಹ ನೀಡಿದೆ. ಅದಕ್ಕಾಗಿಗ್ರಾಹಕರು ತಮ್ಮ ರಿಜಿಸ್ಟರ್ ಖಾತೆಯಿಂದ ಕ್ಯಾಪಿಟಲ್ ಅಕ್ಷರಗಳಲ್ಲಿ ‘STOP’ ಎಂದು ಟೈಪ್ ಮಾಡಿ ಮೆಸೆಜ್ಕಳುಹಿಸಿದರೇ ಆಯಿತು ಸೇವೆ ಸ್ಥಗಿತವಾಗುತ್ತದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • KOLAR NEWS PAPER

    ಕೆಎಂಎಫ್ ನಂದಿನಿ ಅಮುಲ್ ಜತೆ ವಿಲೀನದ ಪ್ರಸ್ತಾಪಕ್ಕೆ ಖಂಡನೆ

    ಕೋಲಾರ;- ಕೋಟ್ಯಾಂತರ ರೈತರ ಆಸ್ತಿಯಾಗಿರುವ ನಂದಿನಿಯನ್ನು ಯಾವುದೇ ಕಾರಣಕ್ಕೂ ಅಮುಲ್ ಜೊತೆ ವಿಲೀನ ಮಾಡಬಾರದೆಂದು ರೈತಸಂಘದಿOದ ಕೋಮುಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ನೀಡಿ ಆಗ್ರಹಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ರೈತರು ನೆಲ ಜಲ ನುಡಿಯ ಮೇಲೆ ಸದಾ ತಮ್ಮ ಪ್ರತಾಪವನ್ನು ತೋರಿಸುತ್ತಿರುವ ಕೇಂದ್ರ ಸರ್ಕಾರ ಈಗ ರಾಜ್ಯದಲ್ಲಿ ತನ್ನದೇ ಆದ ಪ್ರಾಬಲ್ಯ ಅಸ್ತಿತ್ವವನ್ನು ಹೊಂದಿರುವ ನಂದಿನಿ ಹಾಲಿನ ಮೇಲೆ ಗುಜರಾತಿನ ಹುಳಿ ಇಂಡಲು ಮುಂದಾಗಿರುವುದು ಖಂಡನೀಯ, ಕೇಂದ್ರ ಗೃಹ ಸಚಿವ ಅಮಿತ್ ಶಾ ಕನ್ನಡಿಗರ ತಾಳ್ಮೆಯನ್ನೇ ಕೆಣಕಲು…

  • ಉಪಯುಕ್ತ ಮಾಹಿತಿ

    ಪ್ಯಾನ್ ಕಾರ್ಡ್ ಗೆ ಆಧಾರ್ ಲಿಂಕ್: ಕೊನೆಯ ದಿನಾಂಕವನ್ನು ವಿಸ್ತರಿಸಿದ ಕೇಂದ್ರ ಸರ್ಕಾರ!

    ಆಧಾರ್ ಕಾರ್ಡ್ ನೊಂದಿಗೆ ಪಾನ್‌ಕಾರ್ಡ್ ಲಿಂಕ್ ಮಾಡುವ ಅವಧಿಯನ್ನು ಜೂನ್ 30ರವರೆಗೆ ವಿಸ್ತರಿಸಲಾಗಿದೆ.(ಶುಲ್ಕಸಹಿತ) ನವದೆಹಲಿ: ಪ್ಯಾನ್ ಕಾರ್ಡ್ ನ್ನು ಆಧಾರ್ ಕಾರ್ಡ್ ಗೆ  ಜೋಡಿಸುವ ವಿಚಾರ ದೇಶಾದ್ಯಂತ ಭಾರೀ ಚರ್ಚೆಯಲ್ಲಿರುವಾಗಲೇ, ಪಾನ್ ಆಧಾರ್  ಜೋಡಿಸಲು ಕೊನೆಯ ದಿನಾಂಕವನ್ನು ವಿಸ್ತರಿಸಿ ಕೇಂದ್ರ ಹಣಕಾಸು ಇಲಾಖೆ ಮಂಗಳವಾರ ಆದೇಶಿಸಿದೆ. ಈ ಹಿಂದೆ ಪ್ಯಾನ್ ಆಧಾರ್ ಜೋಡಿಸಲು ಮಾರ್ಚ್ 31 ಕೊನೆನವದೆಹಲಿ: ಪ್ಯಾನ್ ಕಾರ್ಡ್ ನ್ನು ಆಧಾರ್ ಕಾರ್ಡ್ ಗೆ  ಜೋಡಿಸುವ ವಿಚಾರ ದೇಶಾದ್ಯಂತ ಭಾರೀ ಚರ್ಚೆಯಲ್ಲಿರುವಾಗಲೇ, ಪಾನ್ ಆಧಾರ್  ಜೋಡಿಸಲು…

  • corona, Health

    ರಾಜ್ಯಾದ್ಯಂತ 4ಲಕ್ಷ ಮಕ್ಕಳಿಗೆ ಉಚಿತ ಲಸಿಕೆ

    ಮೊದಲದಿನ 4 ಲಕ್ಷ ಮಕ್ಕಳಿಗೆ ಉಚಿತ ಲಸಿಕೆ  ರಾಜ್ಯದಲ್ಲಿ 15-18ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ ವಿತರಣೆ ಅಭಿಯಾನ ಆರಂಭವಾಗಿದೆ.ಮೊದಲದಿನ 4.03 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಉಚಿತ ಲಸಿಕೆ ನೀಡಲಾಗಿದೆ.ಆ ಮೂಲಕ ಶೇ.63 ಗುರಿ ಸಾಧನೆ ಮಾಡಲಾಗಿದೆ. ಸೋಮವಾರ ರಾಜ್ಯಾದ್ಯಂತ ನಡೆದ ಲಸಿಕೆ ಅಭಿಯಾನದಲ್ಲಿ 6,38,891 ಮಕ್ಕಳಿಗೆ ಉಚಿತ ಲಸಿಕೆ ಹಾಕುವ ಗುರಿ ಹೊಂದಲಾಗಿತ್ತು.ಈ ಪೈಕಿ (ಸಂಜೆ 7:30ರವೆರಗೂ) 4,03,928 ಮಕ್ಕಳಿಗೆ ಉಚಿತ ಲಸಿಕೆ ನೀಡಲಾಗಿದೆ.ಈ ವಯೋಮಾನದ ಎಲ್ಲ ಮಕ್ಕಳಿಗೂ ಕೋವ್ಯಾಕ್ಸೀನ್ ಹಾಕಿರುವುದರಿಂದ 28ದಿನಗಳ ನಂತರ 2ನೇ ಡೋಸ್…

    Loading

  • ಜೀವನಶೈಲಿ

    ಊಟದ ನಂತರ ತಾಂಬೂಲ ಸೇವನೆಯು ನಿಮ್ಮ ಆರೋಗ್ಯಕ್ಕೆ ಒಳೆಯದಾ.?. ಕೆಟ್ಟದಾ..? ತಿಳಿಯಲು ಈ ಲೇಖನ ಓದಿ …

    ಊಟದ ನಂತರ ತಾಂಬೂಲ ಸೇವನೆಯಿಂದ ನಿಮ್ಮ ಆರೋಗ್ಯಕ್ಕೆ ಏನು ಲಾಭ: ವೀಳ್ಯದೆಲೆ ಅಥವಾ ವೀಳ್ಯೆಲೆ ಅನೇಕ ಔಷಧಿ ಗುಣಗಳಿಂದ ಕೂಡಿದ್ದು, ಆಯುರ್ವೇದ ವೈದ್ಯರು ಇದನ್ನು ಅಮೃತ ಸಮಾನವಾದ ವನಸ್ಪತಿ ಎಂದು ಗುರುತಿಸಿದ್ದಾರೆ.

  • ಸುದ್ದಿ

    ಕೊಳವೆಬಾವಿಗೆ ಬಿದ್ದಿದ್ದ ಮಗುವನ್ನು 109 ಗಂಟೆಗಳ ನಂತರ ರಕ್ಷಣೆ…!

    ಚಂಡೀಗಢ: 150 ಅಡಿ ಆಳದ ಕೊಳವೆಬಾವಿಗೆ ಬಿದ್ದ 2 ವರ್ಷದ ಬಾಲಕನನ್ನು ಸುಮಾರು 109 ಗಂಟೆಗಳ ಕಾಲ ಕಾರ್ಯಾಚರಣೆ ಮಾಡಿ ರಕ್ಷಿಸುವ ಪ್ರಯತ್ನ ನಡೆಸಿದರೂ ಆತ ಮೃತಪಟ್ಟ ಘಟನೆ ಇಂದು ನಡೆದಿದೆ. ಫಥೇವೀರ್ ಸಿಂಗ್ ಬಳಕೆ ಮಾಡದ ಕೊಳವೆ ಬಾವಿಗೆ ¸ಬಿದ್ದ ಬಾಲಕ. ಈತ ಸಂಗೂರ್ ಜಿಲ್ಲೆಯ ಭಗವಾನ್ ಪುರ ಗ್ರಾಮದಲ್ಲಿ ತಮ್ಮ ಮನೆಯ ಹತ್ತಿರವೇ ಗುರುವಾರ ಸಂಜೆ 4 ಗಂಟೆ ಸುಮಾರಿಗೆ ಆಟವಾಡುತ್ತಿದ್ದನು. ಈ ವೇಳೆ ಬಳಕೆ ಮಾಡದೇ ಇರುವ ಬೋರ್ ವೆಲ್ ಒಳಗೆ ಆಯತಪ್ಪಿ…