ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಉತ್ತರ ಕರ್ನಾಟಕದಲ್ಲಿನ ಭೀಕರ ಪ್ರವಾಹದಿಂದಾಗಿ ಆಸ್ತಿ ಪಾಸ್ತಿ, ಹಣದ ಜೊತೆಗೆ ಜನರ ಪ್ರಾಣ ಕೂಡ ಸಂಕಷ್ಟದ ಪರಿಸ್ಥಿತಿಯಲ್ಲಿದೆ. ಈ ಪ್ರವಾಹದಿಂದ ಮನೆ ಮಠ ಕಳೆದುಕೊಂಡು ನಿರಾಶ್ರಿತರಾದ ಸಾವಿರಾರು ಜನರಿಗೆ ಹಲವಾರು ಹಲವಾರು ರೀತಿಯಲ್ಲಿ ತಮ್ಮ ಕೈಲಾದಷ್ಟು ಮಾಡುತ್ತಿದ್ದಾರೆ.ಮುಂಬೈನ ಸುಮನ್ ರಾವ್ ಎನ್ನುವ ಮಹಿಳೆಯೊಬ್ಬಳು ತಮ್ಮ ಮಗಳ ಮದುವೆಗೋಸ್ಕರ ಕೂಡಿಟ್ಟಿದ್ದ ಹಣವನ್ನು
ಸಂಕಷ್ಟದಲ್ಲಿರುವ ಉತ್ತರ ಕರ್ನಾಟಕದ ಜನರಿಗೋಸ್ಕರ ಕೊಡುವುದರ ಮುಖಾಂತರ ತಮ್ಮ ಮಾನವೀಯತೆಯನ್ನು ಮೆರೆದಿದ್ದಾರೆ. ಇದೆ ವರ್ಷ ಡಿಸೆಂಬರ್ ತಿಂಗಳಿನಲ್ಲಿ ತಮ್ಮ ಮಗಳ ಮದುವೆ ಮಾಡಬೇಕೆಂದು ೫೦ ಲಕ್ಷರೂ ಹಣವನ್ನು ಕೂಡಿಟ್ಟಿದ್ದರು. ಆ ಹಣವನ್ನು ಯಾರಿಗೂ ಹೇಳದೆ, ಯಾವುದೇ ರೀತಿಯ ಪ್ರಚಾರ ಮಾಡದೆ ನೇರವಾಗಿ ಕರ್ನಾಟಕ ಮುಖ್ಯಮಂತ್ರಿ ಪರಿಹಾರ ನಿಧಿ ಖಾತೆಗೆ ಹಾಕಿದ್ದಾರೆ ಈ ಮಹಾತಾಯಿ.
ಆದರೆ ಇದರ ವಿಚಾರ ಗೊತ್ತಾದ ಮೇಲೆ ಸುಮನ್ ರಾವ್ ಅವರನ್ನು ಕೇಳಲಾಗಿ ಅವರು ಕೊಟ್ಟ ಪ್ರತಿಕ್ರಿಯೆ ಹೀಗಿತ್ತು..ನಮಗೆ ಯಾವುದೇ ಪ್ರಚಾರ ಮಾಡುವುದು ಬೇಡ. ಏಕೆಂದರೆ ಒಂದು ಕೈಯಿಂದ ಕೊಟ್ಟಿದ್ದು ಇನ್ನೊಂದು ಕೈ ಗೆ ಗೊತ್ತಾಗಬಾರದು ಎಂದು ಅವರು ಹೇಳಿದ್ದಾರೆ. ಎಲ್ಲರಿಗೂ ಮಾದರಿಯಾಗಿರುವ ಇಂತಹ ಗುಣ ಸ್ವಭಾವದವರು ಇರುವುದು ನೂರಕ್ಕೆ ಒಬ್ಬರಲ್ಲವಾ..
ಮುಂಬೈನಲ್ಲಿ ವಾಸಮಾಡುವ ಸುಮನ್ ರಾವ್ ಅವರ ಪುತ್ರಿ ವಿದೇಶದಲ್ಲಿದ್ದಾರೆ. ಆದರೆ ಡಿಸೆಂಬರ್ ನಲ್ಲಿ ಮಗಳ ಮಾಡುವೆ ಫಿಕ್ಸ್ ಹಾಗಿದ್ದು ಈಗ ಎಲ್ಲಾ ಹಣವನ್ನು ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ಕೊಟ್ಟು ಬಿಟ್ಟಿದ್ದಾರೆ. ಆದರೆ ಈಗ ಮಗಳ ಮದುವೆ ಹೇಗೆ ಮಾಡುತ್ತಾರೆ ಎಂಬ ಪ್ರಶ್ನೆ ಬಂತು. ಇದಕ್ಕೆ ಅವರು ಎಷ್ಟು ಸರಳವಾಗಿ ಉತ್ತರ ಕೊಟ್ಟಿದ್ದಾರೆ ಗೊತ್ತಾ.?ಮಗಳ ಮದುವೆಯನ್ನು ರಿಜಿಸ್ಟರ್ ಮದುವೆ ಮಾಡಿದರಾಯ್ತು ಅಂತ ತುಂಬಾ ಸುಲಭವಾಗಿ ಹೇಳಿಬಿಟ್ಟಿದ್ದಾರೆ. ಕರುನಾಡಿನ ನೆರೆಸಂತ್ರಸ್ತರ ಸಂಕಷ್ಟಕ್ಕೆ ಮಿಡಿದ ಸುಮನ್ ರಾವ್ ಅವರು ನಿಜಕ್ಕೂ ಮಹಾತಾಯಿಯೇ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಹೊರಡಿಸಿರುವ ಸೂಚನೆಯೊಂದು ರಾಜ್ಯದ ಶಿಕ್ಷಕರನ್ನು ಆತಂಕಕ್ಕೀಡು ಮಾಡಿದೆ. ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಸೇವೆಯಲ್ಲಿರುವ ಶಿಕ್ಷಕರು ಉತ್ತಮ ರೀತಿಯಲ್ಲಿ ವೃತ್ತಿ ತರಬೇತಿ ಮಾಡಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ, ಇಲ್ಲದಿದ್ದರೆ ಅವರನ್ನು ವಜಾಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಶಿವರಾಮ ಕಾರಂತ (ಅಕ್ಟೋಬರ್ 10, 19೦6-ಸೆಪ್ಟೆಂಬರ್ 16, 1997)- “ಕಡಲತೀರದ ಭಾರ್ಗವ”, “ನಡೆದಾಡುವ ವಿಶ್ವಕೋಶ” ಎಂದೇ ಖ್ಯಾತರಾಗಿದ್ದ ಕನ್ನಡ ಸಾಹಿತ್ಯ-ಸಂಸ್ಕೃತಿಯ ವಕ್ತಾರ, ಕವಿ, ಕಾದಂಬರಿಕಾರ, ನಾಟಕಕಾರ, ಅನುವಾದಕ, ವೈಜ್ಞಾನಿಕ ಬರಹಗಾರ. ಆಡುಮುಟ್ಟದ ಸೊಪ್ಪಿಲ್ಲ. ಹಾಗೇಯೆ ಕಾರಂತರು ಬರೆಯದ ಸಾಹಿತ್ಯ ಪ್ರಕಾರವೇ ಇಲ್ಲವೆನ್ನಲಾಗಿದೆ. ವಿಶ್ವ ವಿದ್ಯಾನಿಲಯಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದಿಲ್ಲದಿದ್ದರೂ, ಅವರ ಸಾಹಿತ್ಯ ಪರಿಶ್ರಮ ಅಪಾರವಾದುದು. ಜ್ಞಾನಪೀಠ, ಪದ್ಮಭೂಷಣ, ಪಂಪ ಪ್ರಶಸ್ತಿ, ನಾಡೋಜ ಪುರಸ್ಕಾರ, ಎಂಟು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ಗಳನ್ನಿತ್ತು ಪುರಸ್ಕರಿಸಿವೆ. ಜೀವನ:- ಜ್ಞಾನಪೀಠಪುರಸ್ಕೃತ ಡಾ. ಶಿವರಾಮ ಕಾರಂತರು ಹುಟ್ಟಿದ್ದು ಉಡುಪಿ ಜಿಲ್ಲೆಯ ಕೋಟದಲ್ಲಿ ೧೯೦೨, ಅಕ್ಟೋಬರ್ ೧೦ರಂದು. ಒಂದು ಶತಮಾನಕ್ಕೆ ನಾಲ್ಕು ವರ್ಷಗಳಷ್ಟೇ…
ಸಾಮಾನ್ಯವಾಗಿ ನವಜಾತ ಶಿಶುಗಳ ತೂಕ 2.5 ಕೆಜಿಯಿಂದ 4.3 ಕೆಜಿಯೊಳಗೆ ಇರುತ್ತದೆ. ಆದರೆ, ಇಲ್ಲೊಬ್ಬಳು ತಾಯಿ ಜನ್ಮ ನೀಡಿದ ಮಗುವಿನ ತೂಕ ಸುಮಾರು 6 ಕೆಜಿ…! ಈ ಕಂದನ ತೂಕ ನೋಡಿ ಸ್ವತಃ ತಾಯಿಯೇ ಅಚ್ಚರಿಗೊಂಡಿದ್ದು, `ನಾನು ಮಿನಿ ರೆರ್ಸ್ಲೆರ್ಗೆ ಜನ್ಮ ನೀಡಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ. ಸಿಡ್ನಿಯ ಎಮ್ಮಾ ಮಿಲ್ಲರ್ ಮತ್ತು ಡೇನಿಯರ್ ದಂಪತಿ ಕಳೆದ ವಾರ ರೆಮಿ ಫ್ರಾನ್ಸಿಸ್ ಮಿಲ್ಲರ್ನನ್ನು ಮನೆಗೆ ಸ್ವಾಗತಿಸಿದ್ದರು. ಆದರೆ, ರೆಮಿ ಎಲ್ಲಾ ಚಿಣ್ಣರಂತಿಲ್ಲ. ಇವಳ ದೇಹದ ತೂಕ ಸಹಜ ಮಕ್ಕಳ…
ಕನ್ನಡದ ಖಾಸಗಿ ಚಾನಲ್ ನಡೆಸುವ, ಕನ್ನಡದ ರಿಯಾಲಿಟಿ ಶೋ ‘ಬಿಗ್ ಬಾಸ್’ ಕಾರ್ಯಕ್ರಮ ಈಗಾಗಲೇ ತುಂಬಾ ಜನಪ್ರಿಯವಾಗಿದೆ. ನಿಮಗೆ ಗೊತ್ತಿರುವ ಹಾಗೆ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಇಲ್ಲಿಯವರಿಗೂ ವಿವಿಧ ಕ್ಷೇತ್ರಗಳಲ್ಲಿ ಗುರ್ತಿಸಿಕೊಂಡ ಸೆಲೆಬ್ರೆಟಿಗಳಿಗೆ ಮಾತ್ರ ಭಾಗವಹಿಸುವುದಕ್ಕೆ ಅವಕಾಶವಿತ್ತು.
ಇಂಗ್ಲಿಷಿನಲ್ಲಿ ಲೇಡಿಸ್ ಫಿಂಗರ್ ಮತ್ತು ಸ್ಪ್ಯಾನಿಷ್ ಭಾಷೆಯಲ್ಲಿ ಗೂಂಬೊ ಎಂದು ಕರೆಯುತ್ತಾರೆ. ಬೆಂಡೆಯ ಉಗಮಸ್ಥಾನ ಆಫ್ರಿಕಾ ಖಂಡದ ಉಷ್ಣವಲಯವೆಂದು ಸಸ್ಯ ವಿಜ್ಞಾನಿಗಳ ಅಭಿಪ್ರಾಯ. 1216ಕ್ಕಿಂತ ಪೂರ್ವದಲ್ಲಿ ಯೂರೊಪಿಯನ್ನರು ಇದನ್ನು ಬೆಳೆಸುತ್ತಿದ್ದರು. ಅಲ್ಲಂದೀಚೆಗೆ ಇದನ್ನು ಉಷ್ಣವಲಯ ಮತ್ತು ಸಮಶೀತೋಷ್ಣವಲಯಗಳೆರಡರಲ್ಲೂ ಬೆಳೆಸಲಾಗುತ್ತದೆ. ಇದು ಸುಮಾರು 2 ಮೀ. ಎತ್ತರದವರೆಗೆ ಬೆಳೆಯುತ್ತದೆ. ಸಾಮಾನ್ಯವಾಗಿ ಕವಲೊಡೆಯದಿರದ ಉದ್ದನೆಯ ನೀಳವಾದ ಕಾಂಡ ಮತ್ತು ತಾಯಿ ಬೇರು ಸಮೂಹ ಇರುವುವು. ಕಾಂಡದ ಮೇಲೆ ಸಣ್ಣ ರೋಮಗಳಿವೆ. ಕಾಂಡದಲ್ಲಿ ಸರಳವಾದ ಮತ್ತು ಅಂಗೈಯಾಕೃತಿ ಹೋಲುವ ಅನೇಕ ಎಲೆಗಳಿವೆ….
ಕನ್ನಡ ಪಿಡಿಎಫ್ ಪುಸ್ತಕಗಳನ್ನು ಕೆಟಲಾಗ್ ಮಾಡಿ ಗೂಗಲ್ ಡ್ರೈವಿನಲ್ಲಿ save ಮಾಡಲಾಗಿದೆ. ಆಸಕ್ತರು ಲಿಂಕಿನ ಮೇಲೆ ಕ್ಲಿಕ್ ಮಾಡಿ ನಂತರ ಬೇಕಾದ ಪಿಡಿಎಫ್ ಡೌನ್ ಲೋಡ್ ಮಾಡಿಕೊಳ್ಳಬಹುದು…