ಸುದ್ದಿ

ಬ್ರಹ್ಮಾವರದಲ್ಲಿ ಮಹಾಮಳೆಯ ಅಬ್ಬರ : ಜನಜೀವನ ಅಸ್ತವ್ಯಸ್ತ…..!

114

ಬ್ರಹ್ಮಾವರ ತಾಲೂಕಿನೆಲ್ಲೆಡೆ ಕುಂಭ ದ್ರೋಣ ಮಳೆಯ ಅಬ್ಬರ ಜೋರಾಗಿದ್ದು, ಮಂಗಳವಾರ ಬೆಳಗ್ಗಿನಿಂದಲೇ ಸುರಿದ ಮಳೆಯಿಂದಾಗಿ ಹಲವೆಡೆಗಳಲ್ಲಿ ನೆರೆ ಆವರಿಸಿದೆ. ಕೆಲವೆಡೆ ಮನೆಯೊಳಗೆ ನೀರು ನುಗ್ಗಿದ್ದರೆ, ಅನೇಕ ಕಡೆಗಳಲ್ಲಿ ಗದ್ದೆ, ಅಡಿಕೆ, ತೆಂಗಿನ ತೋಟ ಸಹಿತ ಕೃಷಿ ಪ್ರದೇಶಗಳು ಜಲಾವೃತಗೊಂಡಿವೆ.

ಬ್ರಹ್ಮಾವರ ಪರಿಸರದ ಮಟಪಾಡಿ, ನೀಲಾವರ, ನಂದನಕುದ್ರು, ರಾಮನಕುದ್ರು, ಬಲ್ಜಿ ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿದ್ದು ಇದರಿಂದಾಗಿ ವಾಹನ ಸವಾರರು ಕೂಡ ಸಮಸ್ಯೆಯನ್ನು ಅನುಭವಿಸಿದರು.

ಅನೇಕ ಕಡೆಗಳಲ್ಲಿ ಭತ್ತದ ಕೃಷಿ ಬೆಳೆದಿರುವ ಗದ್ದೆ ಜಲಾವೃತಗೊಂಡಿದ್ದರೆ, ಅಡಿಕೆ ತೋಟಗಳಲ್ಲಿ ನೀರು ನಿಂತಿದೆ. ಇದಲ್ಲದೆ ಕೆಲವೆಡೆಗಳಲ್ಲಿ ಬಾಳೆ ಗಿಡಗಳು, ಗಾಳಿಗೆ ಉರುಳಿ ಬಿದ್ದಿವೆ. ಪ್ರಮುಖ ಬೀದಿಗಳಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ನೀರು ರಸ್ತೆ ಮೇಲೆ ಹರಿದು ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ.

ಮಟಪಾಡಿ ಗ್ರಾಮದಿಂದ ನಂದನಕುದ್ರು, ರಾಮನಕುದ್ರು ಸಂಪರ್ಕಿಸುವ ರಸ್ತೆ ಮುಳುಗಡೆಯಾಗಿದ್ದುಜನರ ಸಂಚಾರಕ್ಕೆ ಕಷ್ಟವಾಯಿತು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಅಂತರ್ಜಾತಿ ಮದುವೆ ಆದ್ರೆ ಸಿಗುತ್ತೆ ಲಕ್ಷ ಲಕ್ಷ ಹಣ…ಹೆಚ್ಚಿನ ಮಾಹಿತಿಗೆ ಈ ಸುದ್ದಿ ನೋಡಿ

    ಅಂತರ್ಜಾತಿ ವಿವಾಹವಾದರೆ 3 ಲಕ್ಷ ರೂ. ಪ್ರೋತ್ಸಾಹ ಧನ ನೀಡಲಾಗುವುದು. ಅಂತರ್ಜಾತಿ ವಿವಾಹವಾಗುವ ಪರಿಶಿಷ್ಟ ಜಾತಿಯವರಿಗೆ ಪ್ರೋತ್ಸಾಹಧನ ನೀಡುತ್ತಿದ್ದು, ಇದನ್ನು ಪರಿಶಿಷ್ಟ ಪಂಗಡದ ಸಮುದಾಯಕ್ಕೂ ನೀಡಬೇಕೆಂದು ಬೇಡಿಕೆ ಇಡಲಾಗಿತ್ತು. ಪರಿಶಿಷ್ಟ ಪಂಗಡದವರಿಗೆ ಅಂತರ್ಜಾತಿ ವಿವಾಹವಾದರೆ 3 ಲಕ್ಷ ರೂ. ನೀಡುವ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ. ಈ ಮೊದಲು 2 ಲಕ್ಷ ರೂ. ನೀಡಲಾಗುತ್ತಿತ್ತು. ಅದನ್ನು 3 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ಪರಿಶಿಷ್ಟ ಪಂಗಡ ಸಮುದಾಯದ 51 ಜಾತಿಯವರು ಯೋಜನೆಯ ಲಾಭ ಪಡೆದುಕೊಳ್ಳಬಹುದಾಗಿದೆ. ಎಸ್.ಟಿ. ಸಮುದಾಯದ ಹೆಣ್ಣುಮಕ್ಕಳನ್ನು…

  • ಆರೋಗ್ಯ

    ಉತ್ತಮ ಆರೋಗ್ಯಕ್ಕೆ ಕಬ್ಬಿನ ಹಾಲು. ಕಬ್ಬಿನ ಹಾಲಿನ ಮಹತ್ವ ನೋಡಿ!

    1. ಕಬ್ಬಿನ ಹಾಲು ದೇಹಕ್ಕೆ ಶಕ್ತಿ ತುಂಬುವುದರ ಜತೆಗೆ ಮಾನಸಿಕ ಒತ್ತಡವನ್ನು ನಿವಾರಿಸುವಲ್ಲಿ ಸಹಕಾರಿ 2. ಕಬ್ಬಿನ ಹಾಲು ಕುಡಿದರೆ ನಿದ್ದೆ ಚೆನ್ನಾಗಿ ಬರುವುದು. ತಾಜಾ ಕಬ್ಬಿನ ರಸವನ್ನು ನಿಯಮಿತವಾಗಿ ಸೇವಿಸಿದರೆ ಇನ್ಸೊಮ್ನಿಯ(ನಿದ್ರೆ ಹೀನತೆ) ಸಮಸ್ಯೆಯೂ ದೂರವಾಗುತ್ತದೆ. 3. ತೂಕ ಕಡಿಮೆ ಮಾಡಿಕೊಳ್ಳುವವರಿಗೂ ಶುಗರ್‌ಕೇನ್‌ ಜ್ಯೂಸ್‌ ಬೆಸ್ಟ್‌. ಇದರಲ್ಲಿ ಅಧಿಕ ಪ್ರಮಾಣದಲ್ಲಿರುವ ನೈಸರ್ಗಿಕ ಸಕ್ಕರೆ ಕೊಬ್ಬು ಕರಗಿಸುವಲ್ಲಿ ಸಹಕಾರಿ. 4. ಕಬ್ಬಿನ ಹಾಲು ಕಾಮಾಲೆ ರೋಗದಿಂದ ಗುಣವಾಗಲು ಉತ್ತಮ ಮನೆಮದ್ದು. ದಿನಕ್ಕೊಂದು ಲೋಟ ಕಬ್ಬಿನಹಾಲು ಕುಡಿಯುವುದರಿಂದ ಯಕೃತ್‌…

  • inspirational, ಆರೋಗ್ಯ

    ಗೆಣಸು ನಮ್ಮ ಶರೀರದ ಆಂತರಿಕ ಅಂಗಾಂಗಗಳಿಗೆ ಎಷ್ಟು ಉಪಯೋಗಕಾರಿ ಗೊತ್ತಾ..?ತಿಳಿಯಲು ಈ ಲೇಖನ ಓದಿ…

    ಬಿಟಾ-ಕೆರೋಟಿನ್, ವಿಟಾಮಿನ್ ಇ,ಸಿ ಮತ್ತು ಬಿ-6, ಪೊಟ್ಯಾಷಿಯಂ ಮತ್ತು ಕಬ್ಬಿಣವನ್ನು ಪುಷ್ಕಳವಾಗಿ ಹೊಂದಿರುವ ಗೆಣಸು ಬಟಾಟೆಗೆ ಹೋಲಿಸಿದರೆ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್‌ನ್ನು ಹೊಂದಿದೆ. ಹೀಗಾಗಿ ಅದು ಮಧುಮೇಹಿಗಳ ಸ್ನೇಹಿತನಾಗಿದೆ. ನಾವು ಸೇವಿಸುವ ಆಹಾರದಲ್ಲಿನ ಕಾರ್ಬೊಹೈಡ್ರೇಟ್‌ಗಳು ರಕ್ತದಲ್ಲಿನ ಸಕ್ಕರೆಯ ಮಟ್ಟದ ಮೇಲೆ ಬೀರುವ ಪ್ರಮಾಣವನ್ನು ತಿಳಿಯಲು ಗ್ಲೈಸೆಮಿಕ್ ಇಂಡೆಕ್ಸ್ ಮಾನದಂಡವಾಗಿದೆ.

  • ಆಧ್ಯಾತ್ಮ, ಉಪಯುಕ್ತ ಮಾಹಿತಿ, ಜ್ಯೋತಿಷ್ಯ

    ದಾಂಪತ್ಯ ಜೀವನವೆಂದರೆ ಬರೀ ಅರ್ಥ ಧರ್ಮ ಕಾಮಾವೇ..?ಸುಖ ದಾಂಪತ್ಯ ಜೀವನವೆಂದರೆ ಹೇಗಿರಬೇಕು?ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ…

    ಉತ್ತಮ ದಾಂಪತ್ಯ ಜೀವನವೆಂದರೆ ಹೇಗಿರಬೇಕು ಎಂಬುದನ್ನೂ ಪ್ರತಿಯೊಬ್ಬರೂ ತಿಳಿಯಲೇ ಬೇಕಾದ ಸನ್ಮಾರ್ಗ.. ಪಂಡಿತ್ ಸುದರ್ಶನ್ ಆಚಾರ್ಯ ದೈವಜ್ಞ ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಚಿಂತಕರು 9663542672 ಹಿಂದೂ ವಿವಾಹ ಪದ್ಧತಿಯಲ್ಲಿ ಗಂಡು-ಹೆಣ್ಣುಗಳು ಮದುವೆಯ ಸಂದರ್ಭದಲ್ಲಿ ಪರಸ್ಪರ ಕೊಟ್ಟುಕೊಳ್ಳುವ ಮಾತೆಂದರೆ ಧರ್ಮೇಚ,ಅರ್ಥೇಚ, ಕಾಮೇಚ ನಾತಿಚರಿತಾಮಿ, ನಾತಿಚರಿತವ್ಯಂ. ಅಂದರೆ ದಾಂಪತ್ಯದ ಹೊಸಿಲಲ್ಲಿ ನಿಂತಿರುವವರು ಪರಸ್ಪರರಿಗೆ ಕೊಟ್ಟು ಕೊಳ್ಳುವ ಈ ಭಾಷೆ ದಾಂಪತ್ಯದ ಪರೀಕ್ಷೆಗೆ ಕನ್ನಡಿ ಹಿಡಿಯುವ ಕೆಲಸ ಮಾಡುತ್ತದೆ. ಪರಸ್ಪರರು ಧರ್ಮವಾಗಿ ನಡೆದುಕೊಂಡರೆ, ಸಂಪತ್ತಿಗಾಗಿ ಪರಿತಪಿಸದೇ ಅತಿಯಾಸೆ ಪಡದಿದ್ದರೆ, ಕಾಮಾತುರತೆಯಲ್ಲಿ ಅನ್ಯರೊಂದಿಗೆ…

  • ಸುದ್ದಿ

    ರೈತರಿಗೆ ಮತ್ತೊಂದು ಸಂತಸದ ಸುದ್ದಿ ಕೊಟ್ಟ ನಮ್ಮ ಸರ್ಕಾರ…!ಏನದು ಎಂದು ಇಲ್ಲಿ ಓದಿ ತಿಳಿಯಿರಿ..

    ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಲವು ಕ್ರಮ ಕೈಗೊಂಡಿರುವ ಸರ್ಕಾರ ಮತ್ತೊಂದು ಅನುಕೂಲತೆ ಕಲ್ಪಿಸಲು ಮುಂದಾಗಿದೆ. ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳ ಬೆಲೆ ಕುಸಿತವಾದ ಸಂದರ್ಭದಲ್ಲಿ ಬೆಂಬಲ ಬೆಲೆಗೆ ಸರ್ಕಾರದಿಂದ ಮಾರುಕಟ್ಟೆ ಮಧ್ಯಪ್ರವೇಶ ಮಾಡಿ ಬೆಲೆ ನಿಗದಿಪಡಿಸಲು ಐವರು ಸಚಿವರ ಕ್ಯಾಬಿನೇಟ್ ಉಪ ಸಮಿತಿಯನ್ನು ಸರ್ಕಾರ ರಚನೆ ಮಾಡಿದೆ. ಉಪಮುಖ್ಯಮಂತ್ರಿಲಕ್ಷ್ಮಣ ಸವದಿ ಅಧ್ಯಕ್ಷತೆಯಲ್ಲಿ ಐವರು ಸಚಿವರ ಕ್ಯಾಬಿನೆಟ್ ಉಪಸಮಿತಿ ರಚಿಸಲಾಗಿದ್ದು, ಗ್ರಾಮೀಣಾಭಿವೃದ್ಧಿಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಾನೂನುಸಂಸದೀಯ ವ್ಯವಹಾರಗಳು ಹಾಗೂ ಸಣ್ಣ…

  • ಸಿನಿಮಾ

    ‘ಒಂದು ಮೊಟ್ಟೆಯ ಕಥೆ’ಇದು ಕನ್ನಡದ ಸಿನಿಮಾ!ಈ ಸಿನಿಮಾ ಹೇಗಿದೆ ಗೊತ್ತಾ?ಈ ಲೇಖನಿ ಓದಿ…

    ಲೂಸಿಯಾ, ಯೂ ಟರ್ನ್ ಮುಂತಾದ ಯಶಸ್ವೀ ಚಿತ್ರಗಳ ನಿರ್ದೇಶಕ ಪವನ್ ಕುಮಾರ್ ಹೊಸದೊಂದು ಚಿತ್ರವನ್ನು ನಿರ್ಮಿಸಿದ್ದಾರೆ. ಆ ಚಿತ್ರದ ಹೆಸರು ‘ಒಂದು ಮೊಟ್ಟೆಯ ಕಥೆ’. ಹಾಗಂತ ಇದು ಕೋಳಿ ಮೊಟ್ಟೆಯ ಕಥೆಯಲ್ಲ. ನಮ್ಮ ನಿಮ್ಮೆಲರ ನಡುವೆ ಓಡಾಡೋ ಹಲವಾರು ಮೊಟ್ಟೆ ತಲೆಗಳ ಕಥೆ. ಅಂದ್ರೆ ತಲೆಯ ಮೇಲೆ ಕೂದಲಿಲ್ಲದೇ ಎಲ್ಲರಿಂದ ‘ಮೊಟ್ಟೆ, ಬಾಲ್ಡಿ, ಚೊಂಬು, ಟಕ್ಲು’ ಎಂದೆಲ್ಲಾ ಕರೆಸಿಕೊಳ್ಳುವವರ ಕಥೆ.