ಸುದ್ದಿ

ಡಾರ್ಲಿಂಗ್ ಪ್ರಭಾಸ್ ಮನ ಕದ್ದ ಚೆಲುವೆ ಇವರೇನಾ..?

58

ಟಾಲಿವುಡ್ ನ ಮೋಸ್ಟ್ ಹ್ಯಾಂಡ್ ಸಮ್ ಹಾಗೂ ಎಲಿಜಿಬಲ್ ಬ್ಯಾಚುಲರ್ ನಟ ಪ್ರಭಾಸ್ ಮದುವೆ ಯಾವಾಗ ಯಾವಾಗ ಎಂದು ಕೇಳುತ್ತಿದ್ದ, ಟಾಲಿವುಡ್ ಮಂದಿಗೆ ಡಾರ್ಲಿಂಗ್ ಪ್ರಭಾಸ್ ಮದುವೆ ವಿಚಾರವಾಗಿ ಸಣ್ಣದೊಂದು ಕ್ಲೂ ಸಿಕ್ಕಿದೆ
ಹೌದು ಬಾಹುಬಲಿ ಸಿನಿಮಾದ ನಂತರ ನಟ ಪ್ರಭಾಸ್ ನಟಿ ಅನುಷ್ಕಾ ಶೆಟ್ಟಿಯನ್ನು ಮದುವೆಯಾಗುತ್ತಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿತ್ತು, ಜೊತೆಗೆ ಇದಕ್ಕೆ ಪುಷ್ಠಿ ನೀಡುವಂತೆ ಈ ಬಾಹುಬಲಿ ಜೋಡಿ ಹಲವು ಸಮಾರಂಭಗಳಲ್ಲಿ, ಅಲ್ಲಿ ಇಲ್ಲಿ ಒಟ್ಟಾಗಿ ಸುತ್ತಾಡಿದ್ದರು.

 ಅಷ್ಟೇಲ್ಲದೆ ಕೆಲ ದಿನಗಳ ಹಿಂದೆ ಇವರಿಬ್ಬರು ಮತ್ತೊಮ್ಮೆ ಲಂಡನ್​ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಹಾಗಾಗಿ ಈ ತಾರಾ ಜೋಡಿ ಸಪ್ತಪದಿ ತುಳಿಯುತ್ತಾರೆಯೇ. ಎಂಬ ಎಂಬ ಪ್ರಶ್ನೆಯೊಂದು ಅಭಿಮಾನಿಗಳಲ್ಲಿ ಹುಟ್ಟುಕೊಂಡಿತ್ತು.
ಇನ್ನೂ ಈ ವಿಚಾರವಾಗಿ ನಟಿ ಅನುಷ್ಕಾ ನಾವಿಬ್ಬರೂ ಉತ್ತಮ ಫ್ರೆಂಡ್ಸ್ , ಅದು ಬಿಟ್ಟರೇ ನಮ್ಮಿಬ್ಬರ ನಡುವೆ ಯಾವುದೇ ರೀತಿಯ ಸಂಬಂಧವಿಲ್ಲ ಎಮದು ಸ್ಪಷ್ಟಪಡಿಸಿದ್ದರು. ನಂತರ ಪ್ರಭಾಸ್ ಮದುವೆ ವಿಚಾರ ಸ್ವಲ್ಪ ತಣ್ಣಗಾಗಿತ್ತು ಆದರೀಗ ಮತ್ತೊಮ್ಮೆ ಟಾಲಿವುಡ್ ಅಂಗಳದಲ್ಲಿ ಬಾಹುಬಲಿ ಪ್ರಭಾಸ್ ಮದುವೆ ಸುದ್ದಿ ಶುರುವಾಗಿದ್ದು, ಪ್ರಭಾಸ್ ಮದುವೆ ವಿಚಾರಕ್ಕೆ ಇಷ್ಟರಲ್ಲಿಯೇ ಪುಲಿಸ್ಟಾಪ್ ಬೀಳುವ ಸಾಧ್ಯತೆಗಳಿವೆ.

ಹೌದು ನಟ ಪ್ರಭಾಸ್ ಮದುವೆ ವಿಚಾರಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ, ಅಮೆರಿಕ ಮೂಲದ ಭಾರತೀಯ ಹುಡುಗಿಯನ್ನು ವರಿಸಲಿದ್ದಾರಂತೆ ಪ್ರಭಾಸ್. ಇನ್ನೂ ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಮಾತನಾಡಿದ ಪ್ರಭಾಸ್ ಸಹೋದರಿ ಅಣ್ಣ ಅಣ್ಣನ ಮದುವೆ ಬಗ್ಗೆ ಮಾತುಕತೆಗಳು ನಡೆಯುತ್ತಿವೆ. ಅಮೆರಿಕ ಮೂಲದ ಉದ್ಯಮಿಯೊಬ್ಬರ ಮಗಳನ್ನು ಅಣ್ಣ ವಿವಾಹವಾಗಲಿದ್ದಾರೆ ಎಂಬ ಗುಟ್ಟನ್ನು ರಟ್ಟು ಮಾಡಿದ್ದಾರೆ

ಸದ್ಯ ಸಾಹೋ ಸಿನಿಮಾದಲ್ಲಿ ಬ್ಯುಸಿಯಾಗಿರುವ ಪ್ರಭಾಸ್ಗಾಗಿ ಕುಟುಂಬಸ್ಥರು ಕಾಯುತ್ತಿದ್ದು, ಇದೇ ತಿಂಗಳ 30ರಂದುಸಾಹೋಚಿತ್ರ ಬಿಡುಗಡೆಯಾಗಲಿದೆ. ನಂತರ ಎರಡು ಕುಟುಂಬಗಳು ಸೇರಿ ದಿನಾಂಕ ಮತ್ತು ಇನ್ನೂ ಹಲವು ವಿಚಾರಗಳನ್ನು ಅಂತಿಮಗೊಳಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಎಲ್ಲಾ ವಿಚಾರಗಳನ್ನು ಗಮನಿಸುತ್ತಿದ್ದರೆ ವರ್ಷದ ಕೊನೆಯಲ್ಲಿಡಾರ್ಲಿಂಗ್ಪ್ರಭಾಸ್ ಹಸೆಮಣೆ ಏರುವುದು ಕನ್ಫರ್ಮ್ಎನ್ನಲಾಗುತ್ತಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಜಗತ್ತಿನ ಅತ್ಯಂತ ಹಿರಿಯ ವ್ಯಕ್ತಿ ಯಾರಿರಬಹುದು?..ಮಾನವನ ಆಯಸ್ಸು ಎಷ್ಟು ಗೊತ್ತಾ….?

    ಮನುಷ್ಯ ಎಷ್ಟು ವರ್ಷ ಬದುಕಿರಬಲ್ಲ…? ಜಗತ್ತಿನ ಅತ್ಯಂತ ಹಿರಿಯ ವ್ಯಕ್ತಿ ಯಾರಿರಬಹುದು….? ಮನುಷ್ಯನ ವಯಸ್ಸಿಗೆ ಮಿತಿ ಇದ್ಯಾ….? ಇಂತಹ ಹತ್ತಾರು ಪ್ರಶ್ನೆಗಳು ನಮ್ಮ ಮನಸ್ಸಿನಲ್ಲಿ ಆಗಾಗ ಗಿರಕಿ ಹೊಡೆಯುತ್ತಲೇ ಇರುತ್ತವೆ. ಅಮೆರಿಕದ ವಿಜ್ಞಾನಿಗಳು ಈ ಬಗ್ಗೆ ಸಂಶೋಧನೆ ನಡೆಸಿದ್ದಾರೆ. 5 ತಂಡಗಳಾಗಿ ಪ್ರತ್ಯೇಕ ಸಂಶೋಧನೆ ನಡೆಸಿದ್ದು, ಮನುಷ್ಯನ ಆಯಸ್ಸು ಗರಿಷ್ಠ 114.9 ವರ್ಷ ಅಥವಾ ಅದನ್ನು ಮೀರಲೂಬಹುದು ಅನ್ನೋ ತೀರ್ಮಾನಕ್ಕೆ ಬಂದಿದ್ದಾರೆ. ಆದ್ರೆ ಈ ಸಂಶೋಧನೆಯಲ್ಲಿ ನಿಖರತೆ ಇಲ್ಲ ಅನ್ನೋದು ಇನ್ನು ಕೆಲವರ ವಾದ. ಮನುಷ್ಯ 120…

  • ಸುದ್ದಿ

    ಜಮ್ಮು- ಕಾಶ್ಮೀರದಲ್ಲಿ ನಡೆದ ಪ್ರತ್ಯೇಕ ಎನ್ ಕೌಂಟರ್ ಗಳಲ್ಲಿ ಆರು ಉಗ್ರರ ಹತ್ಯೆ, ಯೋಧ ಹುತಾತ್ಮ

    ಕಣಿವೆ ರಾಜ್ಯ ಜಮ್ಮು- ಕಾಶ್ಮೀರದ ಪುಲ್ವಾಮ ಹಾಗೂ ಶೂಪಿಯಾನ್ ಬಳಿ ಭದ್ರತಾ ಪಡೆಗಳು ನಡೆಸಿದ ಪ್ರತ್ಯೇಕ ಎನ್ ಕೌಂಟರ್ ಗಳಲ್ಲಿ ಆರು ಮಂದಿ ಉಗ್ರರು ಹತ್ಯೆಯಾಗಿದ್ದಾರೆ. ಈ ಮಧ್ಯೆ ಯೋಧರು ಹುತಾತ್ಮರಾಗಿದ್ದು, ನಾಗರಿಕರೊಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಪುಲ್ವಾಮಾದಲ್ಲಿ ಮೂವರು ಜೈಷ್ -ಇ- ಮೊಹಮ್ಮದ್ ಸಂಘಟನೆ ಉಗ್ರರು ಹತ್ಯೆಯಾಗಿದ್ದರೆ, ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಈ ಮಧ್ಯೆ ನಾಗರಿಕರೊಬ್ಬರು ಮೃತಪಟ್ಟಿದ್ದಾರೆ. ಶೂಪಿಯಾನ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಜೊತೆಗಿನ ಗುಂಡಿನ ಕಾಳಗದಲ್ಲಿ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸ್…

  • ರಾಜಕೀಯ

    ಕಾಂಗ್ರೆಸ್ ಪಕ್ಷ ದಿಂದ ಅಭ್ಯರ್ಥಿಗಳ 2ನೇ ಪಟ್ಟಿ ಪ್ರಕಟ

    ದೆಹಲಿಯಲ್ಲಿ ರಾಜ್ಯ ವಿಧಾನಸಭಾ ಚುನಾವಣೆಗಾಗಿ ( Karnataka Assembly Election 2023 ) ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಗಳ ( Congress Candidate List ) 2ನೇ ಪಟ್ಟಿ ಬಿಡುಗಡೆಗಾಗಿ ಚುನಾವಣಾ ಸಮಿತಿಯ ಸಭೆ ನಡೆಯಿತು. ಈ ಸಭೆಯಲ್ಲಿ ಅಂತಿಮವಾಗಿ 42 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಫೈಲನ್ ಮಾಡಲಾಗಿತ್ತು. ಅದರಂತೆ ಕಾಂಗ್ರೆಸ್ ಪಕ್ಷದಿಂದ 42 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಮೊದಲು 124 ಕ್ಷೇತ್ರಗಳಿಗೆ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಸಿಂಗಲ್ ಅಭ್ಯರ್ಥಿಗಳಿರುವಂತ 124 ಕ್ಷೇತ್ರಗಳಿಗೆ…

  • ಜ್ಯೋತಿಷ್ಯ

    ದಿನ ಭವಿಷ್ಯ ಸೋಮವಾರ, ರಾಶಿ ಭವಿಷ್ಯದ ಜೊತೆಗೆ ನಿಮ್ಮ ಇಂದಿನ ಅದೃಷ್ಟದ ಸಂಖ್ಯೆ ಯಾವುದು ನೋಡಿ..

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(22 ಏಪ್ರಿಲ್, 2019) ನೀವು ಬಹುಕಾಲದಿಂದ ಎದುರು ನೋಡುತ್ತಿದ್ದ ಜೀವನದ ಒತ್ತಡಗಳಿಂದ ಇಂದು ಶಮನ ಪಡೆಯುತ್ತೀರಿ. ಅವುಗಳನ್ನು ಶಾಶ್ವತವಾಗಿ…

  • ವಿಸ್ಮಯ ಜಗತ್ತು

    ಹೊಸ ದೇಶ ಸ್ಥಾಪಿಸಿ ತಾನೇ ಅಧ್ಯಕ್ಷನೆಂದು ಘೋಷಿಸಿಕೊಂಡ ಭೂಪತಿ!ಹೀಗೂ ಇರ್ತಾರೆ ನೋಡಿ…

    ಪ್ರಪಂಚವೇ ಒಂತರಾ ವಿಚಿತ್ರ. ಯಾಕಂದ್ರೆ ಈ ಪರಪಂಚದಲ್ಲಿರುವ ಜನಗಳು ವಿಚಿತ್ರ. ಜನರು ಏನೇನೋ ವಿಚಿತ್ರ ಕೆಲಸಗಳನ್ನು ಮಾಡಿರುವುದು ಕೇಳಿದ್ದೇವೆ. ಅಂತಹವರಲ್ಲಿ ಅಮೆರಿಕದ ಜ್ಯಾಕ್ ಲ್ಯಾಂಡ್ಸ್ಬರ್ಗ್ ಅನ್ನುವ ವ್ಯೆಕ್ತಿಯೂ ಕೂಡ ಸೇರಿಕೊಂಡಿದ್ದಾರೆ. ಏಕೆಂದರೆ ಇವನು ಮಾಡಿರುವ ಅಚ್ಚರಿದಾಯಕ ಕೆಲಸ ಏನು ಗೊತ್ತಾ..

  • inspirational

    ಕರೋನಾ ವೈರಸ್ COVID – 19

    MAYOON N/ BIOTECHNOLOGIST / KOLAR ಕೊರೊನಾ ವೈರಸ್ ಎಂದರೆ ಸಾಮಾನ್ಯ ವೈರಸ್ ಗಳ ಒಂದು ಗುಂಪು. ವೈರಸ್ ಗಳ ಮೇಲ್ಮೈಯಲ್ಲಿ ಕಿರೀಟದಂತಹ ವಿನ್ಯಾಸವಿರುವ ಕಾರಣದಿಂದಾಗಿ ಹೀಗೆ ಹೆಸರಿಡಲಾಗಿದೆ.. ಕೊರಾನಾ ಅಥವಾ ಕರೋನಾ ವೈರಸ್ ಒಂದು ಬಗೆಯ ಪ್ರಾಣಹಾನಿ ಉಂಟು ಮಾಡುವಂತಹ ವೈರಸ್ ಆಗಿದ್ದು, ಇದು ಮನುಷ್ಯನ ಸಹಿತ ಸಸ್ತನಿಗಳ ಉಸಿರಾಟದ ವ್ಯವಸ್ಥೆ ಮೇಲೆ ಪರಿಣಾಮ ಬೀರುವುದು ಎಂದು ಹೇಳಲಾಗುತ್ತಿದೆ. ಈ ವೈರಸ್ ನಿಂದಾಗಿ ಸಾಮಾನ್ಯ ಶೀತ, ನ್ಯುಮೋನಿಯಾ ಮತ್ತು ತೀವ್ರ ರೀತಿಯ ಶ್ವಾಸಕೋಶದ ಸಮಸ್ಯೆ(ಎಸ್ ಎಆರ್…