ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಜಿಂದಾಲ್ಗೆ ಭೂಮಿ ನೀಡೋದನ್ನು ವಿರೋಧಿಸಿ ಹೋರಾಟ ಮಾಡಿದ್ದ ಬಿಎಸ್ ಯಡಿಯೂರಪ್ಪ ಸಿಎಂ ಆದ ವಾರದಲ್ಲೇ ಅಮೆರಿಕ ಮೂಲದ ಕಂಪನಿಗೆ 250 ಕೋಟಿ ಮೌಲ್ಯದ ಭೂಮಿಯನ್ನು ರಾತ್ರೋರಾತ್ರಿ ತರಾತುರಿಯಲ್ಲಿ ನೀಡಿದ್ದಾರೆ.

ಅಮೆರಿಕ ಮೂಲದ ಬಹುರಾಷ್ಟ್ರೀಯ ವೈಮಾನಿಕ ಕಂಪನಿ ಗುಡ್ರಿಚ್ಗೆ ದೇವನಹಳ್ಳಿಯ ಏರೋಸ್ಪೇಸ್ SEZ ಪಾರ್ಕ್ನ 25 ಎಕರೆ 1 ಗುಂಟೆ ಭೂಮಿಯನ್ನು ಎಕರೆಗೆ 2.50 ಕೋಟಿ ರೂಪಾಯಿಯಂತೆ ನೀಡಿದ್ದಾರೆ. ತಜ್ಞರ ವರದಿ ತರಿಸಿಕೊಳ್ಳದೇ, HLCC ಮೀಟಿಂಗ್ ಮಾಡದೇ, ಅಧಿಕಾರಿಗಳು ವಿರೋಧದ ನಡುವೆಯೂ 5 ವರ್ಷದ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಭೂಮಿ ಮಂಜೂರು ಮಾಡಲಾಗಿದೆ.

ಸಂಪುಟ ರಚನೆ ಆಗೋವರೆಗೂ ಕಾಯದೇ ಭೂಮಿ ನೀಡಿದ್ದರ ಹಿಂದೆ ಹಲವು ಅನುಮಾನಗಳು ಕಾಡುತ್ತಿವೆ. ಬಿಟಿವಿಗೆ ಸಿಕ್ಕ ಮಾಹಿತಿಗಳ ಪ್ರಕಾರ ಅಧಿಕಾರಿಗಳು ಈ ಪ್ರಾಜೆಕ್ಟ್ಗೆ ಒಪ್ಪಿಲ್ಲ. ಈ ಭಾಗದಲ್ಲಿ 1 ಎಕರೆ ಭೂಮಿಯೇ 10 ಕೋಟಿ ರೂ.ನಷ್ಟು ಬೆಲೆ ಬಾಳುತ್ತೆ. ಆದರೆ ಸರ್ಕಾರ 2.50 ಕೋಟಿಗೆ ಭಾರೀ ಮೌಲ್ಯದ ಭೂಮಿ ಕೊಟ್ಟಿದೆ.

ಕರ್ನಾಟಕದ 20 ಸಂಸ್ಥೆಗಳು ಅರ್ಜಿ ಹಾಕಿ ಕಾಯುತ್ತಾ ಇದ್ದವು. ಕುಮಾರಸ್ವಾಮಿ ಸರ್ಕಾರ ಈ ಕಂಪನಿ ಸರಿಯಿಲ್ಲವೆಂದು ರಿಜೆಕ್ಟ್ ಮಾಡಿತ್ತು. ಆದ್ರೆ ಬಿಎಸ್ವೈ ಮಾತ್ರ ಆತುರಾತುರವಾಗಿ ಭೂಮಿ ಮಂಜೂರು ಮಾಡಿದ್ದಾರೆ. ಜಿಂದಾಲ್ಗೆ ಭೂಮಿ ಮಾರೋದನ್ನು ವಿರೋಧಿಸಿ 3 ದಿನ ಪೆಂಡಾಲ್ ಹಾಕಿ ಧರಣಿ ಮಾಡಿದ್ದ ಆರ್.ಅಶೋಕ್, ಸಿಟಿರವಿ ಅವರಂತಹ ಬಿಜೆಪಿ ನಾಯಕರು ಈಗ ಏಕೆ ಸೈಲೆಂಟ್ ಆಗಿದ್ದಾರೆ. ಅನ್ನೋ ಪ್ರಶ್ನೆ ಎದುರಾಗ್ತಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಈ ಗೃಹೋಪಯೋಗಿ ವಸ್ತುಗಳಲ್ಲಿ ತುಂಬಾನೇ ಹಾನಿ ಉಂಟುಮಾಡೋ, ನಮ್ಮ ಆರೋಗ್ಯದಮೇಲೆ ಕೆಟ್ಟ ಪರಿಣಾಮ ಬೀರೋ ಪದಾರ್ಥಗಳು ಇರುತ್ತೆ. ಈ ವಸ್ತುಗಳನ್ನ ಪದೇ ಪದೇ ಬಳಸೋದ್ರಿಂದ ಒಂದಲ್ಲ ಒಂದು ರೀತಿಯ ಕ್ಯಾನ್ಸರ್ ಉಂಟುಮಾಡೋ ಈ ಪದಾರ್ಥಗಳು ನಮ್ಮ ದೇಹ ಸೇರಿಕೊಳುತ್ತೆ. ಅಂತಹ ಕೆಲವು ಪದಾರ್ಥಗಳ ಪಟ್ಟಿ ಇಲ್ಲಿದೆ.
ಪ್ರತಿ ವರ್ಷದಂತೆ ಜನವರಿ ತಿಂಗಳಿನಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕಿನ ಅಡಿಯಲ್ಲಿ ಅರ್ಜಿ ಆಹ್ವಾನಿಸಲಿದ್ದಾರೆ
ಮೊಟ್ಟೆ ಮೊದಲೋ ಕೋಳಿ ಮೊದಲೋ ಅಥವ ಮೊಟ್ಟೆ ಶಾಖಾಹಾರವೊ ಮಾಂಸಾಹಾರವೊ’ ಎನ್ನುವ ಚರ್ಚೆ ಬಹಳ ಹಿಂದಿನಿಂದಲೂ ಇದೆ. ಈ ಚರ್ಚೆಯ ಆಚೆಗೆ ಮೊಟ್ಟೆಯಲ್ಲಿರುವ ಪೌಷ್ಟಿಕಾಂಶಗಳು ಮನುಷ್ಯನಿಗೆ ಎಷ್ಟು ಉಪಯೋಗ ಅಥವ ಎಷ್ಟು ಹಾನಿಕರ ಎಂಬುದರ ಬಗ್ಗೆ ಒಂದು ನೋಟ.
ರಾಮ ಸೇತುವಿನ ಬಗ್ಗೆ ನಿಮಗೆ ತಿಳಿದೇ ಇದೆ. ರಾವಣ ಸೀತೆಯನ್ನು ಅಪಹರಿಸಿ ಲಂಕೆಯಲ್ಲಿಟ್ಟಾಗ ಆಕೆಯನ್ನು ಲಂಕೆಯಿಂದ ಕರೆದುಕೊಂಡು ಬರುವ ಸಲುವಾಗಿ ಭಾರತ ಮತ್ತು ಶ್ರೀಲಂಕಾದ ನಡುವೆ ರಾಮೇಶ್ವರದಲ್ಲಿ ನಿರ್ಮಾಣ ಮಾಡಿದ ರಾಮನ ಸೇತುವೆ ಇದಾಗಿದೆ. ಈ ಸೇತುವೆ ಸುಮಾರು 30 ಮೈಲು ಉದ್ದ ಇದೆ. ಈ ಹಿಂದೆ ಇದೆಲ್ಲಾ ಸುಳ್ಳು ಎಂದು ಹೇಳಲಾಗಿತ್ತು. ಆದರೆ ಈ ಸೇತುವೆಯ ಇರುವಿಕೆಯನ್ನು ನಾಸಾ ಸ್ಪಷ್ಟಪಡಿಸಿತ್ತು.
ಮುಂದಿನ ಕೆಲ ದಿನಗಳಲ್ಲಿ ಭಾರತಕ್ಕೆ 5ಜಿ ತಂತ್ರಜ್ಞಾನ ತರಲು Huawei ತುದಿಗಾಲಲ್ಲಿ ನಿಂತಿದೆ, ಭಾರತೀಯರು 4ಜಿ ತಂತ್ರಜ್ಞಾನದ ರುಚಿ ಸವಿಯುತ್ತಿರುವ ಬೆನ್ನಲ್ಲೇ ಇದೀಗ ೫ಜಿ ತಂತ್ರಜ್ಞಾನವು ಭಾರತಕ್ಕೆ ಬರುತ್ತಿರುವುದು ಕೌತುಕಕ್ಕೆ ಕಾರಣವಾಗಿದೆ.
ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಅವರನ್ನು ಆಂಧ್ರಪ್ರದೇಶ ಸರ್ಕಾರ ಡೆಪ್ಯೂಟಿ ಕಲೆಕ್ಟರ್ ಆಗಿ ನೇಮಕ ಮಾಡಿತ್ತು. ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ಅಪಾಯಿಂಟ್ಮೆಂಟ್ ಲೆಟರ್ ಅನ್ನು ಸಿಂಧುಗೆ ಹಸ್ತಾಂತರಿಸಿದ್ದರು. 30 ದಿನಗಳೊಳಗೆ ಡೆಪ್ಯೂಟಿ ಕಲೆಕ್ಟರ್ ಆಗಿ ಅಧಿಕಾರ ಸ್ವೀಕರಿಸುವಂತೆ ಆಂಧ್ರ ಸರ್ಕಾರ ಸಿಂಧುಗೆ ಸೂಚಿಸಿತ್ತು.