ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬೆಂಗಳೂರು: ಬಿಜೆಪಿ ಸರ್ಕಾರವೇನೋ ಅಸ್ಥಿತ್ವಕ್ಕೆ ಬಂದಿದೆ. ಆದರೆ, ನೂತನ ಸಿಎಂ ಯಡಿಯೂರಪ್ಪ ಈಗ ಪ್ರಮುಖ 2 ಸವಾಲುಗಳಿವೆ. ಒಂದು ಬಹುಮತಸಾಬೀತು, ಮತ್ತೊಂದು ಸಂಪುಟ ರಚನೆ. ಇದು ಬಿಜೆಪಿ ನಾಯಕರಲ್ಲೂ ತಳಮಳ ಸೃಷ್ಟಿಸಿದೆ. ಮುಂದಿನ ವಾರ ನೂತನ ಸರ್ಕಾರ ಬಹುಮತ ಸಾಬೀತು ಮಾಡುವ ಸಾಧ್ಯತೆ ಇದೆ. 4ನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅಧಿಕಾರಕ್ಕೇರಿದ್ದಾರೆ. 14 ತಿಂಗಳ ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನ ಬಳಿಕ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬಂದಿದೆ. ಬಹುಮತ ಸಾಬೀತು ಈಗ ಯಡಿಯೂರಪ್ಪ ಮುಂದಿರುವ ಮೊದಲ ಹಾಗೂ ಪ್ರಮುಖ ಸವಾಲು. ವಿಧಾನಸಭಾ ಚುನಾವಣೆ ಫಲಿತಾಂಶ ನಂತರ ಪ್ರಮಾಣವಚನ ಸ್ವೀಕರಿಸಿ, ಬಹುಮತ ಸಾಬೀತುಪಡಿಸಲು ಸಾಧ್ಯವಾಗದೇ ಮೂರೇ ದಿನಕ್ಕೆ ರಾಜೀನಾಮೆ ಕೊಟ್ಟಿದ್ದರು. ಈಗಲೂ ಆಗುತ್ತಾ..? ಅಥವಾ ಆಗಲ್ವಾ..? ಎಂಬ ಕುತೂಹಲ ಮೂಡಿದೆ.

224 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 105 ಸದಸ್ಯ ಬಲ ಹೊಂದಿದೆ. ಕಾಂಗ್ರೆಸ್, ಜೆಡಿಎಸ್‌ನ 16 ಶಾಸಕರು ರಾಜೀನಾಮೆ ಕೊಟ್ಟು ಮುಂಬೈನಲ್ಲಿ ಠಿಕಾಣಿ ಹೂಡಿದ್ದಾರೆ. ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಮತ್ತು ಆರ್.ಶಂಕರ್ ಅನರ್ಹ ನಂತರ ವಿಧಾಸನಭೆ ಬಲ 221ಕ್ಕೆ ಕುಸಿದಿದೆ. ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರ ಅಥವಾ ಅನರ್ಹ ಆದರೆ ಬಿಜೆಪಿಗೆ ತೊಂದರೆ ಇಲ್ಲ. ಒಂದು ವೇಳೆ ಅವರು ಕೊನೆ ಕ್ಷಣದಲ್ಲಿ ನಿಷ್ಠೆ ಬದಲಿಸಿ ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ವಾಪಸ್ಸಾದರೆ ಬಿಜೆಪಿ ಸರ್ಕಾರಕ್ಕೆ ಆಪತ್ತು ತಪ್ಪಿದ್ದಲ್ಲ. ಈ ಆತಂಕವೇ ಬಿಜೆಪಿ ವರಿಷ್ಠ ಅಮಿತ್ ಶಾಗೆ ಕಾಡ್ತಿದೆ.

ಅಮಿತ್ ಶಾ ಷರತ್ತುಗಳಿಗೆ ಒಪ್ಪಿಕೊಂಡು ಸರ್ಕಾರ ರಚಿಸಿರುವ ಯಡಿಯೂರಪ್ಪ ಅವರ ಮುಂದೆ ಈಗ ಬಹುಮತ ಸಾಬೀತು ಸವಾಲು ಇದೆ. ಸೋಮವಾರ ಅಥವಾ ಮಂಗಳವಾರ ಸದನದಲ್ಲಿ ಬಹುಮತ ಸಾಬೀತು ಪಡಿಸುವ ಸಾಧ್ಯತೆ ಇದೆ.

ಇತ್ತ, ಬಿಜೆಪಿ ಸರ್ಕಾರ ರಚನೆಗೆ ಆಕ್ಷೇಪ ಎತ್ತಿರುವ ಕಾಂಗ್ರೆಸ್ -ಜೆಡಿಎಸ್, ಬಹುಮತ ಇಲ್ಲದೆ ಸರ್ಕಾರ ರಚನೆಗೆ ಹೇಗೆ ಸಾಧ್ಯ..? ಎಂದು ಪ್ರಶ್ನಿಸಿವೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿ ರಾಜ್ಯಪಾಲರ ಕ್ರಮ ಖಂಡಿಸಿವೆ. ಬಿಜೆಪಿಗೆ ಬಹುಮತ ಇಲ್ಲದಿದ್ದರೂ ರಾಜ್ಯಪಾಲರು ಯಾವುದೇ ಅನುಮಾನ ವ್ಯಕ್ತಪಡಿಸದೇ ಒಂದೇ ನಿಮಿಷದಲ್ಲಿ ಅನುಮತಿ ನೀಡಿದ್ದು, ಪ್ರಜಾಪ್ರಭುತ್ವದ ವಿರೋಧಿ ನಿರ್ಧಾರ ಎಂದು ಜೆಡಿಎಸ್ ಹೇಳಿದೆ. ದೇಶದ ಕುದುರೆ ವ್ಯಾಪಾರ ಪಕ್ಷವೊಂದು ಬಹುಮತ ಇಲ್ಲದಿದ್ದರೂ ಸರ್ಕಾರ ರಚಿಸುತ್ತಿದೆ ಎಂದು ಟೀಕಿಸಿದೆ.
ಪ್ರಜಾಪ್ರಭುತ್ವದ ಪ್ರಕಾರ ಬಿಜೆಪಿ ಸರ್ಕಾರ ರಚನೆ ಅಸಾಧ್ಯ. ಬಹುಮತ ಇಲ್ಲದಿದ್ದರೂ ಸರ್ಕಾರ ರಚಿಸುತ್ತಿರುವ ಬಿಜೆಪಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ ಎಂಬುದು ಇದರಿಂದ ಸಾಬೀತಾಗಿದೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಬಿಜೆಪಿಗೆ ಈಗ ಕೇವಲ 105 ಶಾಸಕರ ಸಂಖ್ಯ ಬಲವಷ್ಟೇ ಇದೆ. ಉಳಿದ 6 ಜನರಿಗೆ ಅವರು ಏನು ಮಾಡುತ್ತಾರೆ..? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.ಮಹಾರಾಷ್ಟ್ರದ ವಿವಿದೆಡೆ ಬೀಡುಬಿಟ್ಟಿರುವ ಅತೃಪ್ತ ಶಾಸಕರು ಯಡಿಯೂರಪ್ಪ ಬಹುಮತ ಸಾಬೀತು ಮಾಡುವವರೆಗೆ ಅಲ್ಲಿಯೇ ಠಿಕಾಣಿ ಹೂಡಲಿದ್ದಾರೆ. ಯಾವತ್ತು ಬಿಎಸ್‌ವೈ ಸದನದಲ್ಲಿ ಬಹುಮತ ಸಾಬೀತು ಮಾಡ್ತಾರೋ ಅಂದು ಕರ್ನಾಟಕಕ್ಕೆ ವಾಪಸ್ ಆಗಲಿದ್ದಾರೆ ಎಂದು ತಿಳಿದುಬಂದಿದೆ. ಅತೃಪ್ತರು ಬಹುಮತ ಸಾಬೀತು ದಿನ ಗೈರಾಗುವ ಮೂಲಕ ಸದನದ ಮ್ಯಾಜಿಕ್ ನಂಬರ್ 111 ಕುಸಿಯುವಂತೆ ಮಾಡ್ತಾರೆ. ಆಗ ಯಡಿಯೂರಪ್ಪ ಸುಲಭವಾಗಿ ಬಹುಮತ ಸಾಬೀತು ಮಾಡಬಹುದು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹಾರ್ಟ್ ಅಟ್ಯಾಕ್ ಯಾರಿಗೆ ಯಾವಾಗ ಆಗುತ್ತೋ ಗೊತ್ತಿಲ್ಲ.ಇದ್ದಕ್ಕಿದ್ದಂತೆ ಹಾರ್ಟ್ ಅಟ್ಯಾಕ್ ಆಗಿ ಹೋಗಿಬಿಟ್ಟ ಎಂದು ಹೇಳುವ ಮಾತನ್ನ ಕೇಳಿರುತ್ತೇವೆ. ಹಾರ್ಟ್ ಅಟ್ಯಾಕ್ ಆಗುವುದೇ ಹಾಗೆ.
ಹೆಚ್ಚಿನವರ ಮನೆಯಲ್ಲಿ ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸದೇ ಇರುವುದಿಲ್ಲ. ಆದರೆ ಉಳಿದ ತಿಂಡಿಗಳನ್ನು ಪ್ಲಾಸ್ಟಿಕ್ ವಸ್ತುಗಳಲ್ಲಿ ಹಾಕುವ ಮುನ್ನ ಯೋಚಿಸಿ.
ಹೆಬ್ಬಾವು ಸುತ್ತಿ, ಉಸಿರುಗಟ್ಟಿ ಮಹಿಳೆಯೊಬ್ಬರು ಸಾವಿಗೀಡಾಗಿದ್ದು, ಅವರ ಮನೆಯಲ್ಲಿ 140 ಹಾವುಗಳು ಪತ್ತೆಯಾಗಿ ಅಚ್ಚರಿ ಮೂಡಿಸಿದೆ. ಅಮೆರಿಕದ ಇಂಡಿಯಾನಾ ಎಂಬಲ್ಲಿ 36 ವರ್ಷ ವಯಸ್ಸಿನ ಲಾರಾ ಹರ್ಸ್ಟ್ ಎಂಬ ಮಹಿಳೆಯ ದೇಹವನ್ನುಹೆಬ್ಬಾವು ಸುತ್ತಿಕೊಂಡಿತ್ತು. ಅವರು ಅದರಿಂದ ತಪ್ಪಿಸಿಕೊಳ್ಳಲುಎಷ್ಟು ಪ್ರಯತ್ನ ನಡೆಸಿದರೂ ಸಾಧ್ಯವಾಗಿರಲಿಲ್ಲ.ಹಾಗೇ ಉಸಿರುಗಟ್ಟಿ ಅವರು ಅಸುನೀಗಿದ್ದರು. ಈ ಸಂದರ್ಭದಲ್ಲಿ ಮಹಿಳೆಯಿದ್ದ ಮನೆಯಲ್ಲಿ 140 ಹಾವಿದ್ದಿದ್ದು ಬೆಳಕಿಗೆ ಬಂದಿದೆ. ಈ ಹಾವುಗಳನ್ನು ಡಾನ್ ಮುನ್ಸನ್ ಎಂಬುವವರು ಸಾಕಿದ್ದರು. ಅವರ ಬಳಿ ಲಾರಾ ಅವರು ಇಪ್ಪತ್ತಕ್ಕೂ ಹೆಚ್ಚು ಹಾವುಗಳನ್ನು ಸಾಕಲು…
ಸಿನಿಮಾ ರಂಗದಲ್ಲಿ ‘ನವರಸನಾಯಕ’ ಜಗ್ಗೇಶ್ ಅವರಿಗೆ 40 ವರ್ಷಗಳ ಅನುಭವ ಇದೆ. ಅವರಿಗೆ ಸಿನಿಮಾ ಬಗ್ಗೆ ಸಾಕಷ್ಟು ಅನುಭವವಿದೆ. ಸೋಲು-ಗೆಲುವು ಕಂಡ ಅವರು 75 ಲಕ್ಷ ರೂಪಾಯಿ ನಷ್ಟ ಮಾಡಿಕೊಂಡಿದ್ದರು. ಈ ಸಾಲ ತೀರಿಸಲು ಮನೆ ಮಾರಿದ್ದರಂತೆ. ಇದರ ಬಗ್ಗೆ ಜಗ್ಗೇಶ್ ಹೇಳಿದ್ದೇನು? ‘ನವರಸನಾಯಕ’ ಜಗ್ಗೇಶ್ ನಟನೆ, ಮಿಮಿಕ್ರಿ, ಹಾಡುಗಾರಿಕೆಯಲ್ಲಿ ತೊಡಗಿಕೊಂಡವರು. ಬಹುತೇಕ ಎಲ್ಲ ವಿಚಾರಗಳ ಬಗ್ಗೆಯೂ ಅವರು ಮಾತನಾಡುತ್ತಾರೆ, ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುವ ಅವರು ಸಿನಿಮಾ ಮಾಡಲು ಹೋಗಿ 70 ಲಕ್ಷ ರೂಪಾಯಿ ಕಳೆದುಕೊಂಡ…
ಬಾಳೆ ಹಣ್ಣು ತಿನ್ನೋದ್ರಿಂದ ಸಾಕಷ್ಟು ಪ್ರಯೋಜನವಿದೆ ಎಂಬುದನ್ನು ಸಂಶೋಧನೆ ಕೂಡ ಹೇಳಿದೆ. ದಿನಕ್ಕೆ ಮೂರು ಸಣ್ಣ ಬಾಳೆಹಣ್ಣು ತಿನ್ನೋದ್ರಿಂದ 90 ನಿಮಿಷ ವ್ಯಾಯಾಮ ಮಾಡಿದಾಗ ಸಿಗುವಷ್ಟು ಶಕ್ತಿ ಸಿಗುತ್ತದೆಯಂತೆ. ಬರೀ ಶಕ್ತಿ ಮಾತ್ರವಲ್ಲ ದೇಹ ಫಿಟ್ ಆಗಿರುವ ಜೊತೆಗೆ ಆರೋಗ್ಯ ಕೂಡ ಸುಧಾರಿಸುತ್ತದೆ.
ಸದ್ಯ ಭಾರತದಲ್ಲಿ ಅನ್ ಲಿಮಿಟೆಡ್ ಕಾಲಿಂಗ್ ಮತ್ತು ಅನ್ ಲಿಮಿಟೆಡ್ ಡಾಟಾ ಆಫರ್ ನೀಡವ ಮೂಲಕ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಸಂಚಲನ ಮೂಡಿಸಿತ್ತು ರಿಲಯನ್ಸ್ ಜಿಯೋ ಸಂಸ್ಥೆ. ತನ್ನ ಜನಪ್ರಿಯ ಯೋಜನೆಯಾದ ಅನ್ ಲಿಮಿಟೆಡ್ ವಾಯ್ಸ್ ಕಾಲ್ ಗೆ ಬ್ರೇಕ್ ಹಾಕಿ, ಇನ್ಮೇಲೆ ಜಿಯೋ ಫ್ರೀ ವಾಯ್ಸ್ ಕಾಲ್ ಅನ್ನು