ಸುದ್ದಿ

ನೀವು ಇನ್ಸೂರೆನ್ಸ್ ಬಳಕೆದಾರರೇ? ಆಗದರೆ ತಪ್ಪದೇ ಇದನ್ನು ಒಮ್ಮೆ ಓಧಿ…..!

55

ಆಕಸ್ಮಿಕ ದುರ್ಘಟನೆಗಳು ಹಾಗೂ ಸಂಭವನೀಯ ಹಾನಿಗಳಿಂದ ಪಾರಾಗುವ ಮುಂಜಾಗ್ರತಾ ಕ್ರಮವಾಗಿ ವಿಮಾ ಸುರಕ್ಷೆಯನ್ನು ಬಳಸಲಾಗುತ್ತದೆ. ಜೀವ ವಿಮೆ, ಆಸ್ತಿ ವಿಮೆ, ಆರೋಗ್ಯ ವಿಮೆ ಹೀಗೆ ಹಲವಾರು ರೀತಿಯ ವಿಮಾ ಸುರಕ್ಷೆಯ ಪಾಲಿಸಿಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ.

ಹಣಕಾಸು ಉತ್ಪನ್ನಗಳಿಗೆ ಸಹ ವಿಮೆ ಸುರಕ್ಷೆ ಇರುತ್ತದೆ ಎಂಬುದು ಬಹುತೇಕರಿಗೆ ಈವರೆಗೂ ತಿಳಿದಿಲ್ಲ. ಕೆಲ ಹಣಕಾಸು ಉತ್ಪನ್ನಗಳಿಗೆ ಉಚಿತ ವಿಮಾ ಸುರಕ್ಷೆ ಇದ್ದರೆ ಇನ್ನು ಕೆಲವಕ್ಕೆ ಅತಿ ಕಡಿಮೆ ಹಣ ಪಾವತಿಸುವುದರ ಮೂಲಕ ವಿಮಾ ಸೌಲಭ್ಯ ಪಡೆಯಬಹುದು. ಯಾವೆಲ್ಲ ಹಣಕಾಸು ಉತ್ಪನ್ನಗಳಿಗೆ ವಿಮಾ ಸೌಲಭ್ಯವಿದೆ ಹಾಗೂ ಅವನ್ನು ಪಡೆದುಕೊಳ್ಳುವುದು ಹೇಗೆ ಎಂಬ ಬಗ್ಗೆ ವಿವರವಾಗಿ ತಿಳಿಯೋಣ.

ವಿಮೆಗಳ ಬಗ್ಗೆ ಮೇಲ್ನೋಟಕ್ಕೆ ತಿಳಿಯುವ ಬದಲು ಆಳವಾಗಿ ಕೂಡ ಅಭ್ಯಸಿಸಬೇಕಾಗುತ್ತದೆ. ನಿಮಗೆ ಗೊತ್ತಿರದ ಕೆಲ ಪ್ರಮುಖ ಉಚಿತ ಅಂತರ್ಗತ ವಿಮಾ ಸುರಕ್ಷತೆ-ಇನ್ಸೂರೆನ್ಸ್‌ ಕವರ್ ಬಗ್ಗೆ ತಿಳಿಯೋಣ ಬನ್ನಿ..

  1. ಬ್ಯಾಂಕ್ ಡಿಪಾಸಿಟ್‌ಗಳು ; ಭಾರತದಲ್ಲಿ ಕಾರ್ಯನಿರ್ವಹಿಸುವ ಪ್ರಾದೇಶಿಕ, ಸಹಕಾರಿ ಹಾಗೂ ವಿದೇಶಿ ಬ್ಯಾಂಕುಗಳು ಸೇರಿದಂತೆ ಇತರ ಎಲ್ಲ ಬ್ಯಾಂಕುಗಳಲ್ಲಿನ ಫಿಕ್ಸೆಡ್ ಡಿಪಾಸಿಟ್ (ನಿಶ್ಚಿತ ಠೇವಣಿ) ಗಳಿಗೆ ಸರಕಾರದ ಡಿಪಾಸಿಟ್ ಇನ್ಸೂರೆನ್ಸ್ ಆಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಶನ್ (ಡಿಐಸಿಜಿಸಿ) ಯಿಂದ ವಿಮಾ ಸುರಕ್ಷತೆ ನೀಡಲಾಗಿರುತ್ತದೆ. ಒಂದೊಮ್ಮೆ ಯಾವುದೇ ಬ್ಯಾಂಕು ವಿಲೀನ ಅಥವಾ ಲೈಸೆನ್ಸ್ ರದ್ದತಿಯ ಕಾರಣದಿಂದ ಗ್ರಾಹಕರ ಫಿಕ್ಸೆಡ್ ಡಿಪಾಸಿಟ್ ಮೊತ್ತವನ್ನು ಮರುಪಾವತಿ ಮಾಡಲು ವಿಫಲವಾದಲ್ಲಿ ಹೂಡಿಕೆ ಮೊತ್ತ ಹಾಗೂ ಬಡ್ಡಿಯ ಮೇಲೆ 1 ಲಕ್ಷ ರೂ.ಗಳವರೆಗೆ ವಿಮಾ ಸುರಕ್ಷತೆ ಇರುತ್ತದೆ. ಆದರೆ ಒಂದು ವೇಳೆ ಎಫ್‌ಡಿ ಇಟ್ಟ ಗ್ರಾಹಕನು ಬ್ಯಾಂಕಿಗೆ ಯಾವುದಾದರೂ ಮೊತ್ತ ಪಾವತಿಸಬೇಕಿದ್ದಲ್ಲಿ ಡಿಐಸಿಜಿಸಿ ಮೊದಲಿಗೆ ಅದನ್ನು ಕಡಿತಗೊಳಿಸುತ್ತದೆ. ಇಂಥ ವಿಮೆಯ ಪಾಲಿಸಿ ಹಣವನ್ನು ಬ್ಯಾಂಕುಗಳೇ ಭರಿಸುತ್ತವೆ. ಉಳಿತಾಯ, ಚಾಲ್ತಿ ಖಾತೆ, ಫಿಕ್ಸೆಡ್ ಡಿಪಾಸಿಟ್ ಹಾಗೂ ರೆಕರಿಂಗ್ ಡಿಪಾಸಿಟ್ ಖಾತೆಗಳಿಗೆ ಡಿಐಸಿಜಿಸಿ ವಿಮಾ ಸುರಕ್ಷತೆ ಇರುತ್ತದೆ.
  2. ಗೃಹೋಪಕರಣಗಳಿಗೆ ವಿಮೆ ; ಫ್ರಿಜ್, ಟಿವಿ ಮತ್ತು ವಾಶಿಂಗ್ ಮಶೀನ್ ಸೇರಿದಂತೆ ಇನ್ನಿತರ ಇನ್ನೂ ಹಲವಾರು ಗೃಹೋಪಯೋಗಿ ಉಪಕರಣಗಳು ಎಲೆಕ್ಟ್ರಿಕ್ ಅಥವಾ ಮೆಕ್ಯಾನಿಕಲ್ ತೊಂದರೆಯಿಂದ ಹಾಳಾದಲ್ಲಿ ಅದಕ್ಕೆ ವಿಮಾ ಸುರಕ್ಷತೆ ಯೋಜನೆಯನ್ನು ಆಯಾ ಗೃಹೋಪಯೋಗಿ ವಸ್ತು ತಯಾರಿಕಾ ಕಂಪನಿಗಳು ನೀಡುತ್ತವೆ. ಈ ವಿಮಾ ಸೌಲಭ್ಯವನ್ನು ವಾರಂಟಿಯೊಂದಿಗೆ ತಳಕು ಹಾಕಿ ಗೊಂದಲ ಮಾಡಿಕೊಳ್ಳಬೇಡಿ. ಇವೆರಡೂ ಭಿನ್ನ ಸಂಗತಿಗಳಾಗಿವೆ. ಸಾಮಾನ್ಯವಾಗಿ ಹಬ್ಬದ ಸೇಲ್ ಸಂದರ್ಭಗಳಲ್ಲಿ ಇಂಥ ವಿಮಾ ಸೌಕರ್ಯಗಳನ್ನು ಹೆಚ್ಚುವರಿಯಾಗಿ ಕಂಪನಿಗಳು ಆಫರ್ ಮಾಡುತ್ತವೆ. ಈ ವಿಮೆಗೆ ನೀವು ನೇರವಾಗಿ ಯಾವುದೇ ಮೊತ್ತವನ್ನು ಪಾವತಿ ಮಾಡುವುದಿಲ್ಲವಾದರೂ ಕಂಪನಿಗಳೇ ತಮ್ಮ ಉಪಕರಣಗಳ ಬೆಲೆಯನ್ನು ಒಂದಿಷ್ಟು ಹೆಚ್ಚಿಸಿ ಅದರಿಂದ ವಿಮಾ ಖರ್ಚಿನ ಮೊತ್ತವನ್ನು ಭರಿಸುತ್ತವೆ.
  3. ಮೊಬೈಲ್ ಫೋನುಗಳಿಗೆ ವಿಮೆ ; ಮೊಬೈಲ್ ತಯಾರಿಕಾ ಕಂಪನಿಗಳು ಮೊಬೈಲ್ ಫೋನುಗಳಿಗೆ ವಿಮಾ ಸೌಲಭ್ಯ ನೀಡುತ್ತಿವೆ. ಮೊಬೈಲ್ ಫೋನ್ ಕಳುವಾದಲ್ಲಿ ಅಥವಾ ಹಾನಿಗೀಡಾದಲ್ಲಿ ವಿಮಾ ಸುರಕ್ಷತೆ ಪಡೆಯಬಹುದು. ಉದಾಹರಣೆಗೆ ನೋಡುವುದಾದರೆ, ನೋಕಿಯಾ ಕಂಪನಿಯು ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿಯ ಸಹಯೋಗದಲ್ಲಿ ತನ್ನ ಕಂಪನಿಯ ಮೊಬೈಲ್ ಫೋನುಗಳಿಗೆ ವಿಮಾ ಸುರಕ್ಷತೆ ಒದಗಿಸುತ್ತಿದೆ. ಹಾಗೆಯೇ ಟೆಲಿನಾರ್ ಇಂಡಿಯಾ ಕಮ್ಯೂನಿಕೇಶನ್ ಕಂಪನಿ ತನ್ನ ಗ್ರಾಹಕರಿಗೆ ಸುಮಾರು 50 ಸಾವಿರ ರೂ.ಗಳವರೆಗೂ ವಿಮಾ ಸೌಲಭ್ಯ ನೀಡುತ್ತದೆ ಎಂಬುದು ಅನೇಕರಿಗೆ ಗೊತ್ತಿಲ್ಲ.
  4. ಎಲ್ಪಿಜಿ ವಿಮಾ ; ಸುರಕ್ಷೆ ಎಲ್ಲ ನೋಂದಾಯಿತ ಎಲ್ಪಿಜಿ ಗ್ರಾಹಕರು ಹಾಗೂ ಅವರ ಕುಟುಂಬಸ್ಥರಿಗೆ ಗ್ಯಾಸ್ ಸಿಲಿಂಡರ್‌ನಿಂದ ಉಂಟಾಗಬಹುದಾದ ಅಪಘಾತಗಳ ಸಂದರ್ಭದಲ್ಲಿ ವಿಮಾ ಸುರಕ್ಷತೆ ನೀಡಲಾಗುತ್ತದೆ. ಇಂಥ ಸಂದರ್ಭಗಳಲ್ಲಿ ಅಪಘಾತ ಪ್ರಕರಣದ ಬಗ್ಗೆ ಮೊದಲಿಗೆ ಹತ್ತಿರದ ಪೊಲೀಸ್ ಸ್ಟೇಷನ್‌ನಲ್ಲಿ ದೂರು ದಾಖಲಿಸಬೇಕು. ಈ ಬಗ್ಗೆ ಎಲ್ಪಿಜಿ ವಿತರಕರಿಗೆ ಸಹ ಲಿಖಿತವಾಗಿ ದೂರು ಸಲ್ಲಿಸಬೇಕಾಗುತ್ತದೆ. ಆದರೆ ಈ ರೀತಿಯ ವಿಮೆ ಪಡೆಯಬೇಕಾದರೆ ನೀವು ಮಾನ್ಯತೆ ಪಡೆದ ಐಎಸ್‌ಐ ಮಾರ್ಕಿನ ಗ್ಯಾಸ್ ಪೈಪ್ ಹಾಗೂ ಲೈಟರ್‌ಗಳನ್ನೇ ಉಪಯೋಗಿಸುತ್ತಿರಬೇಕು. ಹಾಗೆಯೇ ವಿತರಕರಲ್ಲಿ ನೋಂದಾಯಿತ ವಿಳಾಸದಲ್ಲಿಯೇ ಎಲ್ಪಿಜಿ ಸಂಪರ್ಕವನ್ನು ಬಳಸುತ್ತಿರಬೇಕು. ನೀವು ನೀಡಿದ ವಿಳಾಸ ಹಾಗೂ ಎಲ್ಪಿಜಿ ಕನೆಕ್ಷನ್ ಬಳಸುತ್ತಿರುವ ಸ್ಥಳ ಬೇರೆಯಾಗಿದ್ದಲ್ಲಿ ಈ ವಿಮೆ ಕ್ಲೇಮ್ ಮಾಡಲಾಗದು.
  5. ರೈಲು ಪ್ರಯಾಣ ; ರೈಲಿನಲ್ಲಿ ಪ್ರಯಾಣಿಸುವ ವೇಳೆ ನಿಮ್ಮ ಲಗೇಜ್‌ಗಳು ಕಳುವಾದಲ್ಲಿ ಅದಕ್ಕೆ ವಿಮಾ ಸೌಲಭ್ಯ ಸಿಗುತ್ತದೆ ಎಂಬುದು ಬಹಳಷ್ಟು ಜನರಿಗೆ ತಿಳಿದಿಲ್ಲ. ನೀವು ಇ-ಟಿಕೆಟ್ ಬುಕ್ ಮಾಡಿದಾಗಲೇ ಐಆರ್‌ಸಿಟಿಸಿ ಈ ವಿಮೆ ನೀಡಿರುತ್ತದೆ. ಪ್ರಯಾಣ ಮಾಡುವಾಗ ಬ್ಯಾಗ್ ಅಥವಾ ಲಗೇಜು ಕಳುವಾದಲ್ಲಿ ಈ ವಿಮಾ ಸೌಲಭ್ಯವನ್ನು ಕ್ಲೇಮ್ ಮಾಡಬಹುದು. ಮೊಬೈಲ್ ಫೋನ್, ಲ್ಯಾಪಟಾಪ್ ಹಾಗೂ ಇನ್ನಿತರ ಯಾವುದೇ ಬೆಲೆಬಾಳುವ ವಸ್ತುಗಳಿಗೂ ಈ ವಿಮೆ ಅನ್ವಯಿಸುತ್ತದೆ.
  6. ಜೀರೊ ಲಯಾಬಿಲಿಟಿ ; ಕಾರ್ಡ್ಸ್ (ಶೂನ್ಯ ಹೊಣೆಗಾರಿಗೆ ಕಾರ್ಡ್) ವೀಸಾ ಹಾಗೂ ಮಾಸ್ಟರಕಾರ್ಡ್ ಕಾರ್ಡುಗಳನ್ನು ಹೊಂದಿದ ಗ್ರಾಹಕರಿಗೆ ಹಲವಾರು ಬ್ಯಾಂಕುಗಳು ಜೀರೊ ಲಯಾಬಿಲಿಟಿ ಇನ್ಸೂರೆನ್ಸ್ ಕವರೇಜ್ ನೀಡುತ್ತವೆ. ತಮ್ಮ ಕಾರ್ಡುಗಳ ಮೇಲೆ ನಡೆಯುವ ಯಾವುದೇ ಅನಧಿಕೃತ ವ್ಯವಹಾರಗಳಿಗೆ ಬ್ಯಾಂಕುಗಳು ವಿಮಾ ಸುರಕ್ಷೆ ನೀಡುತ್ತವೆ. ಕಾರ್ಡ್ ಕಳೆದು ಹೋದ ಸಂದರ್ಭದಲ್ಲಿ ತಕ್ಷಣ ಬ್ಯಾಂಕಿಗೆ ತಿಳಿಸಿದಲ್ಲಿ ಆ ಕಾರ್ಡ್‌ನಿಂದ ಮಾಡಲಾಗುವ ಯಾವುದೇ ಅನಧಿಕೃತ ವ್ಯಹಹಾರಗಳ ಹಾನಿಯನ್ನು ಬ್ಯಾಂಕುಗಳೇ ಭರಿಸುತ್ತವೆ. ಹಾಗೆಯೇ ಡೆಬಿಟ್ ಕಾರ್ಡ್ ಕಳೆದು ಹೋದ ಸಂದರ್ಭದಲ್ಲಿ ಗ್ರಾಹಕರಿಗೆ ಉಂಟಾಗುವ ಹಾನಿಯನ್ನು ಬ್ಯಾಂಕುಗಳು ಮರುಪಾವತಿಸುತ್ತವೆ.
  7. ಪ್ರಧಾನ ಮಂತ್ರಿ ಜನ ಧನ ಯೋಜನೆ ; ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯಡಿ ಬ್ಯಾಂಕಿನಲ್ಲಿ ಖಾತೆ ಹೊಂದಿದ ಗ್ರಾಹಕರಿಗೆ ಜೀರೋ ಬ್ಯಾಲೆನ್ಸ್ ಅಕೌಂಟ್ ಸೌಲಭ್ಯದೊಂದಿಗೆ ರುಪೇ ಡೆಬಿಟ್ ಕಾರ್ಡ್ ನೀಡಲಾಗುತ್ತದೆ. ಈ ಕಾರ್ಡ್ ಹೊಂದಿದವರಿಗೆ ಕ್ರಮವಾಗಿ 1 ಲಕ್ಷ ರೂ.ವರೆಗೆ ವೈಯಕ್ತಿಕ ಅಪಘಾತ ವಿಮೆ ಹಾಗೂ 30 ಸಾವಿರ ರೂ.ಗಳವರೆಗೆ ಜೀವ ವಿಮಾ ಸುರಕ್ಷತೆ ಇರುತ್ತದೆ.
  8. ರುಪೇ ಕಾರ್ಡ್ ; ರುಪೇ ಎಂಬುದು ಮಾಸ್ಟರ್ ಕಾರ್ಡ್ ಹಾಗೂ ವೀಸಾ ಕಾರ್ಡುಗಳ ಬದಲಿಗೆ ಭಾರತೀಯ ಕಾರ್ಡ್ ಕಂಪನಿಯಾಗಿದೆ. ಇದನ್ನು ಎಟಿಎಂಗಳಲ್ಲಿ, ಅಂಗಡಿಗಳಲ್ಲಿ ಹಾಗೂ ಇ-ಕಾಮರ್ಸ್ ವೆಬ್ಸೈಟ್‌ಗಳಲ್ಲಿ ಬಳಸಬಹುದು. ಈ ಕಾರ್ಡ್ ಹೊಂದಿದವರಿಗೆ ವೈಯಕ್ತಿಕ ಅಪಘಾತ ಮರಣ ಅಥವಾ ಶಾಶ್ವತ ಅಂಗವೈಕಲ್ಯ ಸಂದರ್ಭಗಳಲ್ಲಿ 2 ಲಕ್ಷ ರೂ.ಗಳವರೆಗೆ ಉಚಿತ ವಿಮಾ ಸುರಕ್ಷತೆ ಇರುತ್ತದೆ ಎಂಬುದು ಅನೇಕರಿಗೆ ತಿಳಿದಿಲ್ಲ.
  9. ಎಂಪ್ಲಾಯೀಸ್ ಡಿಪಾಸಿಟ್ ಲಿಂಕ್ಡ್ ಇನ್ಸೂರೆನ್ಸ್ (ಇಡಿಎಲ್‌ಐ) ಇಪಿಎಫ್ (ಕಾರ್ಮಿಕ ಭವಿಷ್ಯ ನಿಧಿ) ; ಸದಸ್ಯರಿಗೆ 6 ಲಕ್ಷ ರೂ. ಮೊತ್ತದ ವಿಮಾ ಸುರಕ್ಷತೆ ಇರುತ್ತದೆ. ಇಪಿಎಫ್ ಸದಸ್ಯನೋರ್ವ ಮರಣ ಹೊಂದಿದಲ್ಲಿ ಆತನ ಕುಟುಂಬಕ್ಕೆ ವಿಮಾ ಸುರಕ್ಷತೆ ನೀಡಲಾಗುತ್ತದೆ. ಎಲ್ಲ ಇಪಿಎಫ್ ಸದಸ್ಯರು ಇಡಿಎಲ್‌ಐ ವಿಮಾ ಸುರಕ್ಷತೆ ಪಡೆದಿರುತ್ತಾರೆ. ಇಪಿಎಫ್ ಹೊಂದಿದ ಕಾರ್ಮಿಕನ ಒಟ್ಟು ವಂತಿಗೆಯಲ್ಲಿ ಶೇ 0.5 ರಷ್ಟು ಮೊತ್ತವನ್ನು ಇಡಿಎಲ್‌ಐಗೆ ಪ್ರೀಮಿಯಂ ಮೊತ್ತವಾಗಿ ಪಾವತಿಸಲಾಗಿರುತ್ತದೆ.
  10. ಮ್ಯೂಚುವಲ್ ಫಂಡ್‌ಗಳಿಗೆ ವಿಮಾ ಸುರಕ್ಷೆ ಬಿರ್ಲಾ ಸನ್ ಲೈಫ್; ಐಸಿಐಸಿಐ ಪ್ರುಡೆನ್ಷಿಯಲ್ ಮತ್ತು ರಿಲಯನ್ಸ್ ಕ್ಯಾಪಿಟಲ್ ಸೇರಿದಂತೆ ಇನ್ನೂ ಹಲವಾರು ಮ್ಯೂಚುವಲ್ ಫಂಡ್ ಕಂಪನಿಗಳು ತಮ್ಮ ಸಿಪ್ (SIP) ಹೂಡಿಕೆದಾರರಿಗೆ ಜೀವ ವಿಮಾ ಸೌಲಭ್ಯ ನೀಡುತ್ತಿವೆ. ಈ ಯೋಜನೆಯಡಿ ಫಂಡ್ ಹೂಡಿಕೆದಾರ ಅನಿರೀಕ್ಷಿತವಾಗಿ ಸಾವನ್ನಪ್ಪಿದಲ್ಲಿ ಫಂಡ್ ಕಂಪನಿ ತಾನಾಗಿಯೇ ಪ್ರೀಮಿಯಂ ಪಾವತಿ ಜಾರಿಯಲ್ಲಿಡುತ್ತದೆ. ಫಂಡ್ ಮ್ಯಾಚುರಿಟಿ ನಂತರ ನಾಮಿನಿಗೆ ಮೊತ್ತ ಪಾವತಿಸಲಾಗುತ್ತದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ದೇಶ-ವಿದೇಶ

    ಸೇನೆಯ ಮೇಲೆ ಕಲ್ಲು ತೂರಾಟ, ನಡೆಸಿದ ಯುವಕನಿಗೆ 10 ಲಕ್ಷ ಪರಿಹಾರ..!

    ಕಲ್ಲು ತೂರಾಟಗಾರರ ಹಣಿಯಲು, ಕಲ್ಲು ತೂರಾಟಗಾರರ ನಾಯಕನನ್ನು ಸೇನಾ ವಾಹನಕ್ಕೆ ಗುರಾಣಿಯಾಗಿ ಕಟ್ಟಿದ, ಪ್ರಕರಣ ಸಂಭಂದ ಸಂತ್ರಸ್ತ ಯುವಕನಿಗೆ ಜಮ್ಮುಕಾಶ್ಮೀರ ಮಾನವ ಹಕ್ಕುಗಳ ಆಯೋಗ 10 ಲಕ್ಷ ರೂ. ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

  • ಸಂಬಂಧ

    ಈ ಮಹಿಳೆ ತನ್ನ ತಾಯಿಯ ಚಿತಾಭಸ್ಮ ತಿನ್ನುತ್ತಾಳೆ ..!ಕಾರಣ ತಿಳಿಯಲು ಈ ಲೇಖನ ಓದಿ…

    ನೀವೆಂದೂ ಕಂಡು ಕೇಳಿರದಂತಹ ವಿಚಿತ್ರ ಘಟನೆ ಇದು. 41 ವರ್ಷದ ಡೆಬ್ರಾ ಪಾರ್ಸನ್ಸ್ ಎಂಬ ಮಹಿಳೆ ಕಳೆದ ಮೇ ತಿಂಗಳಿನಲ್ಲಿ ತನ್ನ ತಾಯಿಯನ್ನು ಕಳೆದುಕೊಂಡಿದ್ಲು.

  • ಸಿನಿಮಾ

    ಶಂಕರ್ ನಾಗ್, ಧೋನಿ, ಮೋದಿಯವರು ನನಗೆ ಸ್ಫೂರ್ತಿ ಎಂದ ನಟ ರಾಕಿಂಗ್ ಸ್ಟಾರ್ ಯಶ್.

    ಕನ್ನಡ ನಿರ್ದೇಶಕ ಮತ್ತು ನಟ ಶಂಕರ್ ನಾಗ್ ಅವರು, ಕ್ರಿಕೆಟರ್ ಧೋನಿ ಅವರ ಮತ್ತು ಪ್ರಧಾನ ಮಂತ್ರಿ ಮೋದಿ ಅವರು ನನಗೆ ಸ್ಫೂರ್ತಿಯಾಗಿದ್ದಾರೆ ಎಂದು ನಟ ರಾಕಿಂಗ್ ಸ್ಟಾರ್ ಯಶ್ ಹೇಳಿದ್ದಾರೆ. ಸೋಮವಾರ ಸಂಜೆ ಮುಂಬೈನಲ್ಲಿ ನಡೆದ ಜಿಕ್ಯೂ 50 ಅತ್ಯಂತ ಪ್ರಭಾವಶಾಲಿ ಯುವ ಭಾರತೀಯರ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದು ನಂತರ ಜಿಕ್ಯೂ ಇಂಡಿಯಾ ಸಂದರ್ಶನದಲ್ಲಿ ಮಾತನಾಡಿದ ಅವರು, ನಿಮ್ಮ ಸಕ್ಸಸ್ ಮಂತ್ರ ಯಾವುದು ಎಂದು ಕೇಳಿದಾಗ, ನಾನು ನನಗೆ ಇಷ್ಟವಾದ ಕೆಲಸ ಮಾಡುತ್ತೇನೆ. ಆಗ…

  • ಸುದ್ದಿ

    ಕಬ್ಬಿನ ಹಾಲು ಕುಡಿಯುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ ,.!

    ಬಿಸಿಲ ಬೇಗೆಯನ್ನು ತಣಿಸಲುಜನರು ಸಾಮಾನ್ಯವಾಗಿ ತಂಪು ಪಾನೀಯಗಳ ಮೊರೆಹೋಗುತ್ತಾರೆ. ಅದರಲ್ಲೂ ಬಿಸಿಲ ಬೇಗೆತಣಿಸಿಕೊಳ್ಳಲು ಬಹುತೇಕ ಮಂದಿ ರಸ್ತೆಬದಿಯಲ್ಲಿ ಸಾಮಾನ್ಯವಾಗಿ ಸಿಗುವ ಎಳನೀರು ಹಾಗೂಕಬ್ಬಿನ ಹಾಲನ್ನು ಕುಡಿಯಲು ಇಷ್ಟಪಡುತ್ತಾರೆ.ಆದರೆ ಕಬ್ಬಿನ ಹಾಲಿನ ಅದ್ಭುತಆರೋಗ್ಯಕರ ಪ್ರಯೋಜನ ಹಲವರಿಗೆ ತಿಳಿದಿಲ್ಲ.ಕಬ್ಬಿನ ಹಾಲು ಕೇವಲ ದಣಿವುನಿವಾರಣೆಯಾಗುವುದಲ್ಲದೆ ಹಲವು ಆರೋಗ್ಯ ಸಮಸ್ಯೆಗಳನ್ನೂಸಹ ನಿವಾರಿಸುವ ಗುಣಗಳನ್ನೂ ಹೊಂದಿದೆ. ಸಕ್ಕರೆ ಹಾಗೂ ಬೆಲ್ಲವನ್ನು ತಯಾರಿಸಲೆಂದು ಭಾರತದಲ್ಲಿ ಹೆಚ್ಚಾಗಿ ಕಬ್ಬು ಬೆಳೆಯುವ ಕಾರಣ ಇಂದು ಭಾರತ ಜಗತ್ತಿನ ಅತಿಹೆಚ್ಚು ಕಬ್ಬು ಬೆಳೆಯುವ ದೇಶವಾಗಿದೆ. ನಮ್ಮ ದೇಶದ ಪ್ರತಿ ಊರಿನಲ್ಲಿಯೂ…

  • ಜ್ಯೋತಿಷ್ಯ

    ದಿನ ಭವಿಷ್ಯ ಮಂಗಳವಾರ, ನಿಮ್ಮ ರಾಶಿ ಭವಿಷ್ಯದಲ್ಲಿ ಏನಿದೆ ನೋಡಿ

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(19 ಫೆಬ್ರವರಿ, 2019) ಹೆಚ್ಚುವರಿ ಹಣವನ್ನು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಬೇಕು. ಬೇಕಷ್ಟು ಮೊದಲೇ ಯೋಜಿಸಿದ ಪ್ರಯಾಣದ…