ಸುದ್ದಿ

ಹುಟ್ಟುಹಬ್ಬಕ್ಕೆ ಸರ್ಕಾರಿ ಶಾಲೆ ದತ್ತು ಪಡೆದ ಪ್ರಜ್ವಲ್ ದೇವರಾಜ್ ಸಾಮಾಜಿಕ ಕಳಕಳಿ ಮೆಚ್ಚಿದ ದರ್ಶನ್…!

57

ನಟ ಪ್ರಜ್ವಲ್ ದೇವರಾಜ್ ಇಂದು (ಜುಲೈ 4) ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಅದ್ಧೂರಿ ಆಚರಣೆಗೆ ಬ್ರೇಕ್ ಹಾಕಿರುವ ಅವರು ಸಾಮಾಜಿಕ ಕೆಲಸಕ್ಕೆ ಮುಂದಾಗಿದ್ದಾರೆ. ಒಂದು ಸಂಸ್ಥೆಯ ಜೊತೆಗೆ ಕೈ ಜೋಡಿಸಿ ಒಂದು ಸರ್ಕಾರಿ ಶಾಲೆಯನ್ನು ಪ್ರಜ್ವಲ್ ದತ್ತು ಪಡೆದಿದ್ದಾರೆ. ಹೀಗಾಗಿ ಬರ್ತ್ ಡೇ ಗೆ ಗಿಫ್ಟ್ ಬದಲು ಶಾಲಾ ಮಕ್ಕಳಿಗೆ ಸಹಾಯ ಆಗುವಂತೆ ನೋಟ್ ಬುಕ್, ಪೆನ್ಸಿಲ್ ನೀಡಿ ಎಂದು ಮನವಿ ಮಾಡಿದ್ದರು.

ಪ್ರಜ್ವಲ್ ಅವರ ಈ ಕೆಲಸಕ್ಕೆ ನಟ ದರ್ಶನ್ ಖುಷಿಯಾಗಿದ್ದಾರೆ. “ನಮ್ಮ ಹುಡ್ಗ ಪ್ರಜ್ಜು ಒಂದು ಕನ್ನಡ ಸರ್ಕಾರಿ ಶಾಲೆಯನ್ನು ದತ್ತು ಪಡೆದಿರುವ ಸುದ್ಧಿ ಕೇಳಿ ತುಂಬಾನೇ ಖುಷಿಯಾಯ್ತು. ಇಂಥ ಸಾಮಾಜಿಕ ಕಳಕಳಿಯ ಕೆಲಸಗಳಲ್ಲಿ ಹೀಗೆ ಸದಾ ಎಂದು ಹಾರೈಸುತ್ತೇನೆ.” ಎಂದು ಟ್ವೀಟ್ ಮಾಡಿದ್ದಾರೆ.

ಪ್ರಜ್ವಲ್ ತಮ್ಮ ಹುಟ್ಟುಹಬ್ಬಕ್ಕೆ ಕೇಕ್, ಹಾರ, ಫ್ಲಾಕ್ಸ್, ಬ್ಯಾನರ್ ಅಂತ ಖರ್ಚು ಮಾಡುವ ಬದಲಿಗೆ ಅದೇ ಹಣದಲ್ಲಿ ನೋಟ್ ಬುಕ್ ನೀಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಪ್ರಜ್ವಲ್ ಕೆಲಸಕ್ಕೆ ಅಭಿಮಾನಿಗಳು ಹಾಗೂ ಚಿತ್ರರಂಗದ ಸ್ನೇಹಿತರ ಕಡೆಯಿಂದ ಬೆಂಬಲ ಸಿಕ್ಕಿದೆ. ಅಂದಹಾಗೆ, ಇತ್ತೀಚಿಗೆ ‘ಯಜಮಾನ’ ಸಿನಿಮಾದ ಹಾಡಿನಲ್ಲಿ ದರ್ಶನ್ ಜೊತೆಗೆ ಪ್ರಜ್ವಲ್ ದೇವರಾಜ್ ಕಾಣಿಸಿಕೊಂಡಿದ್ದರು.

ಪ್ರಜ್ವಲ್ ಅವರ ಹುಟ್ಟುಹಬ್ಬಕ್ಕೆ ಕುಟುಂಬದವರು ಸುಮಾರು 90 ಲಕ್ಷ ರೂ. ಬೆಲೆ ಬಾಳುವ ಕೆಂಪು ಬಣ್ಣದ ವೋಲ್ವೋ ಎಕ್ಸ್ ಸಿ – 90 ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಕಾರಿನ ಮುಂದೆ ಪ್ರಜ್ವಲ್ ಅವರ ತಂದೆ, ನಟ ದೇವರಾಜ್, ತಾಯಿ, ಪತ್ನಿ ರಾಗಿಣಿ ಹಾಗೂ ಸಹೋದರ ಜೊತೆ ನಿಂತು ಫೋಟೋಗೆ ಪೋಸ್ ಕೊಟ್ಟಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಪೊಲೀಸ್ ಠಾಣೆಯಲ್ಲಿ ಆರೋಪಿಯ ಬರ್ತ್‌ಡೇ ಸೆಲೆಬ್ರೇಷನ್….!

    ಇಲ್ಲಿನ ವಿದ್ಯಾರಣ್ಯ ಪೊಲೀಸ್ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ, ಆತನ ಬರ್ತ್‌ಡೇ ಪಾರ್ಟಿ ಆಚರಿಸಿದ್ದಾರೆ. ತಾನು ಪೊಲೀಸ್ ಎಂದು ಯಾಮಾರಿಸುತ್ತಿದ್ದ ಆರೋಪಿಯನ್ನು ಬಂಧಿಸಿ, ಠಾಣೆಗೆ ಕರೆದೊಯ್ದ ವಿದ್ಯಾರಣ್ಯಪುರ ಪೊಲೀಸರು, ಠಾಣೆಯಲ್ಲಿ ಕೇಕ್ ಕತ್ತರಿಸಿ, ಆತನ ಬರ್ತ್‌ಡೇ ಸೆಲೆಬ್ರೇಟ್ ಮಾಡಿದ್ದಾರೆ. ಅಭಿಷೇಕ್ (25) ಬಂಧಿತ ಆರೋಪಿಯಾಗಿದ್ದು, ಪದವಿಧರನಾಗಿದ್ದಾನೆ. ಈತ ತಾನು ವಿದ್ಯಾರಣ್ಯಪುರ ಕ್ರೈಂ ಪಿಸಿ ಎಂದು ಹೇಳಿಕೊಂಡಿದ್ದ. ಎನಕೌಂಟರ್‌ಗೆ ಹುಬ್ಬಳ್ಳಿ ಮತ್ತು ಗೋವಾಗೆ ಹೋಗ್ಬೇಕು ಗಾಡಿಲಿ ಎಸಿ ಇಲ್ಲ ಎಂದು ಐಡಿ ಕಾರ್ಡ್ ತೋರಿಸಿ ನಂಬಿಸಿದ್ದ. ಈತನ ಮಾತು…

  • ಸಂಬಂಧ

    ಮೊದಲ ಬಾರಿಗೆ ಹುಡುಗ ಹುಡುಗಿಯ ಕೈ ಹಿಡಿದ್ರೆ :ಆಕೆಯ ಮನಸ್ಸು ಏನನ್ನುತ್ತೆ?ತಿಳಿಯಲು ಈ ಲೇಖನ ಓದಿ..

    ಪ್ರೀತಿಸುವ ಹುಡುಗ ಹುಡುಗಿಯ ಕೈಯನ್ನು ತನ್ನ ಕೈಗಳಲ್ಲಿ ಬಂಧಿಸಿದಾಗ ಉಂಟಾಗುವ ಅನುಭವವೇ ಮಧುರವಾಗಿರುತ್ತದೆ. ಆ ಒಂದು ಹಿಡಿತದಲ್ಲಿ ಹುಡುಗನ ಹೃದಯದ ಮಾತು ಅರ್ಥವಾಗುತ್ತದೆ. ಪ್ರೀತಿಯ ಮಹತ್ವ ಏನು ಎಂಬುದು ಆ ಹಿಡಿತವು ತಿಳಿಸುತ್ತದೆ.

  • ಸುದ್ದಿ

    ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ!ಪರೀಕ್ಷೆ ಬರೆಯುವ ವಿಧ್ಯಾರ್ಥಿಗಳಿಗೆ ಇದು ಉಚಿತ…

    ಪ್ರಸಕ್ತ ಸಾಲಿನಲ್ಲಿ ಪರೀಕ್ಷೆ ಬರೆಯುತ್ತಿರುವ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬಸ್ಸಿನಲ್ಲಿ ಉಚಿತ ಪ್ರಯಾಣ ಕಲ್ಪಿಸುವ ಮೂಲಕ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಮಾರ್ಚ್ 1 ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ಸರ್ಕಾರಿ ಬಸ್ ಗಳಲ್ಲಿ ಪರೀಕ್ಷಾ ಕೇಂದ್ರಗಳಿಗೆ ಉಚಿತವಾಗಿ ಪ್ರಯಾಣಿಸಲು ಕೆಎಸ್‍ಆರ್ ಟಿಸಿ ಅವಕಾಶ ಕಲ್ಪಿಸಿದೆ. ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣ ಸಂಸ್ಥೆಗಳಲ್ಲದೆ ಬೇರೆ ಬೇರೆ ಶಿಕ್ಷಣ ಸಂಸ್ಥೆಗಳ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗೆ ವ್ಯವಸ್ಥೆ ಮಾಡಿರುವುದಾಗಿ ಪದವಿಪೂರ್ವ ಶಿಕ್ಷಣ ಇಲಾಖೆ…

  • ಸುದ್ದಿ

    ಮೂತ್ರ ವಿಸರ್ಜನೆ ಮಾಡುವುದಕ್ಕಾಗಿ ಚಲಿಸುತ್ತಿದ್ದ ರೈಲನ್ನೇ ನಿಲ್ಲಿಸಿದ ಚಾಲಕ- ಕ್ರಮಕ್ಕೆ ಆಗ್ರಹ….!

    ಮೂತ್ರ ವಿಸರ್ಜನೆ ಮಾಡಲು ಚಾಲಕನೊಬ್ಬ ರೈಲನ್ನೇ ನಿಲ್ಲಿಸಿದ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ. ಚಾಲಕ ಲೋಕಲ್ ರೈಲನ್ನು ನಿಲ್ಲಿಸಿ ಎಂಜಿನ್ ಮುಂದೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಜನರು ತಮ್ಮ ಮೊಬೈಲಿನಲ್ಲಿ ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ರೈಲು ಚಾಲಕ ಮುಂಬಯಿಗೆ ಪ್ರಯಾಣಿಸುತ್ತಿದ್ದ ರೈಲನ್ನು ಉಲ್ಲಾಸನಗರದಿಂದ ವಿತಲ್‌ವಾಡಿಗೆ ಸಂಚರಿಸುವ ದಾರಿ ಮಧ್ಯೆ ನಿಲ್ಲಿಸಿ, ರೈಲಿನಿಂದ ಕೆಳಗಿಳಿದು ಮೂತ್ರ ವಿಸರ್ಜಿಸಿದ್ದಾನೆ. ಸ್ಥಳೀಯ ಮಾಧ್ಯಮವೊಂದರಲ್ಲಿ ಕೆಲಸ ಮಾಡುತ್ತಿದ್ದ ಸೋನು…

  • inspirational

    ಆಸ್ಪತ್ರೆಯಲ್ಲಿ ಬಿಲ್ ಪಾವತಿಸದೇ ಇರದ ಕಾರಣ ಪ್ರಭಾಕರ್ ಅವರ ಮೃತದೇಹವನ್ನು ಹೊರಗೆ ಬಿಟ್ಟಿರಲಿಲ್ಲ, ಆಗ ಬಂದವರು ಯಾರು ಗೊತ್ತಾ?

    ಟೈಗರ್ ಪ್ರಭಾಕರ್, ದಕ್ಷಿಣ ಭಾರತದಲ್ಲಿ ಈ ಸ್ಟಾರ್ ನಟ ಯಾರಿಗೆ ಗೊತ್ತಿಲ್ಲ ಹೇಳಿ, ಎಷ್ಟೋನಟರಿಗೆ ಆದರ್ಶ, ಚಿತ್ರರಂಗದಲ್ಲಿ ಘರ್ಜಿಸಿದ ನಟ, ಆದರೆ ಪ್ರಭಾಕರ್ ಅವರ ಕೊನೆಯ ದಿನಗಳು ಜನರು ಊಹಿಸಿದಷ್ಟು ಸುಂದರವಾಗಿರಲಿಲ್ಲ, ಅತಿಯಾದ ಅನಾರೋಗ್ಯದಿಂದ ಕೈಯಲ್ಲಿದ್ದ ಕಾಸು ಖಾಲಿ ಆಗಿತ್ತು. 25 ಮಾರ್ಚ್ 2001 ರಂದು ಟೈಗರ್ ಪ್ರಭಾಕರ್ ಅವರು ಬಹು ಅಂಗಾಂಗ ವೈಪಲ್ಯದಿಂದ ಇಹಲೋಕ ತ್ಯಜಿಸಿದರು, ಈ ಸುದ್ದಿ ಕೇಳಿ ಕಣ್ಣೀರು ಹಾಕಿದ ಲಕ್ಷಾಂತರ ಅಭಿಮಾನಿಗಳು, ಕೊನೆಯದಾಗಿ ಟೈಗರ್ ಪ್ರಭಾಕರ್ ಅವರ ಅಂತಿಮ ದರ್ಶನ ಪಡೆಯಲು…