ಸುದ್ದಿ

ಮಕ್ಕಳನ್ನು ಪೆಟ್ಟಿಗೆಯಲ್ಲಿಟ್ಟು ಉಸಿರುಗಟ್ಟಿಸಿ ಕೊಲೆ ಮಾಡಿದ ಮಹಾತಾಯಿ….!

206

ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳನ್ನು ಪೆಟ್ಟಿಗೆಯಲ್ಲಿಟ್ಟು ಉಸಿರುಗಟ್ಟಿಸಿ ಕೊಲೆ ಮಾಡಿದ ಅಮಾನವೀಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಭದೋಹಿಯ ಖಮಾರಿಯಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಹಥೇನ್ (6) ಮತ್ತು ಸಹೋದರ ಹಸನ್ (3) ಮೃತ ಬಾಲಕರು. ತಾಯಿ ಮಾನಸಿಕ ಅಸ್ವಸ್ಥೆಯಾಗಿದ್ದರಿಂದ ದುರ್ಘಟನೆ ನಡೆದಿದೆ ಎಂದು ವರದಿಯಾಗಿದೆ.

ಮೃತ ಬಾಲಕರ ತಂದೆ ಮಾಲು ಅನ್ಸಾರಿ ಖಮರಿಯಾದ ಕಾರ್ಪೆಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಗುರುವಾರ ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಬಂದು ಮಕ್ಕಳನ್ನು ನೋಡಿದ್ದಾರೆ. ಆದರೆ ಮಕ್ಕಳು ಕಾಣದಿದ್ದಾಗ ಗಾಬರಿಗೊಂಡು ಎಲ್ಲ ಕಡೆ ಹುಡುಕಿದ್ದಾರೆ. ಬಹಳ ಸಮಯದ ಬಳಿಕ ಬಟ್ಟೆ ಇಡಲು ಪೆಟ್ಟಿಗೆ ತೆರೆದಾಗ ಮಕ್ಕಳು ಅದರಲ್ಲಿ ಪತ್ತೆಯಾಗಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಯಾದವ್ವೇಂದ್ರ ಯಾದವ್ ಹೇಳಿದ್ದಾರೆ.

ಮಕ್ಕಳನ್ನು ತಪಾಸಣೆ ಮಾಡಿದ ವೈದ್ಯರು, ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಮಾನಸಿಕ ಅಸ್ವಸ್ಥ ತಾಯಿಯಿಂದ ಘಟನೆ ನಡೆದಿದೆ. ಈ ಸಂಬಂಧ ಕುಟುಂಬದವರು ಪೊಲೀಸರಿಗೆ ದೂರು ನೀಡಿಲ್ಲ. ಖಮಾರಿಯಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದರೂ, ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ವರದಿಯಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆಧ್ಯಾತ್ಮ, ಜ್ಯೋತಿಷ್ಯ

    ಮನೆಯಲ್ಲಿ ಶಿವಲಿಂಗ ಅಥ್ವಾ ಫೋಟೋವನ್ನು ಇಡಬಹುದಾ?

    ಸನಾತನ ಧರ್ಮದಲ್ಲಿ 33 ಕೋಟಿ ದೇವಾನುದೇವತೆಗಳಿವೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ದೇವಾನುದೇವತೆಗಳ ಫೋಟೋ ಹಾಕುವ ಮೊದಲು ಕೆಲವೊಂದು ವಿಷ್ಯಗಳ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಶಿವನ ಮೂರ್ತಿ ಅಥವಾ ಚಿತ್ರವನ್ನು ಮನೆಯಲ್ಲಿ ಸ್ಥಾಪನೆ ಮಾಡುವಾಗ ವಿಶೇಷ ಗಮನ ನೀಡಬೇಕಾಗುತ್ತದೆ. ಯಾವುದೇ ಹೊಸ ಫೋಟೋ ಅಥವಾ ಮೂರ್ತಿಯನ್ನಿಡುವಾಗ ಕೂಡ ದಿಕ್ಕು, ನಿಯಮವನ್ನು ಪಾಲನೆ ಮಾಡಬೇಕು. ಇಲ್ಲವಾದ್ರೆ ಲಾಭದ ಬದಲು ನಷ್ಟ ಅನುಭವಿಸಬೇಕಾಗುತ್ತದೆ. ಮನೆ ಅಥವಾ ಕಚೇರಿಯಲ್ಲಿ ಎಲ್ಲರ ಕಣ್ಣಿಗೆ ಬೀಳುವಂತೆ ಶಿವನ ಮೂರ್ತಿಯನ್ನು ಸ್ಥಾಪನೆ ಮಾಡಿ. ಭಗವಂತ ಶಿವನ…

  • ಮನರಂಜನೆ

    ಅನುಶ್ರೀಗೆ ಮರೆಯಲಾರದ ಗಿಫ್ಟ್ ಕೊಟ್ಟ ಹನುಮಂತಪ್ಪ..ಸಾರಿ ಕೇಳಿದ ಅನುಶ್ರೀ!

    ಕುರಿಗಾಯಿ ಹನುಮಂತ ಅವರು ಜೀ ಕನ್ನಡ ವಾಹಿನಿಯ ‘ಸರಿಗಮಪ’ ಕಾರ್ಯಕ್ರಮದಲ್ಲಿ ಹಾಡುವ ಮೂಲಕ ವೀಕ್ಷಕರ ಮನಗೆದ್ದಿದ್ದಾರೆ. ತಮ್ಮದೇ ಶೈಲಿಯಲ್ಲಿ ಹಾಡುವ ಮೂಲಕ ಹನುಮಂತ ಅವರು ಮನೆ ಮಾತಾಗಿದ್ದಾರೆ. ಅವರಿಗೆ ಸಿನಿಮಾದಲ್ಲಿ ಹಾಡುವ ಅವಕಾಶ ಕೊಡುವುದಾಗಿ ನಿರ್ದೇಶಕ ಯೋಗರಾಜ ಭಟ್ ಈಗಾಗಲೇ ಭರವಸೆ ನೀಡಿದ್ದಾರೆ. ‘ಸರಿಗಮಪ’ ಕಾರ್ಯಕ್ರಮದ ನಿರೂಪಕಿ ಅನುಶ್ರೀ ಲಂಬಾಣಿ ಉಡುಗೆ ತಂದುಕೊಡುವಂತೆ ಕೇಳಿಕೊಂಡಿದ್ದರಂತೆ. ಹನುಮಂತ ಅವರ ತಾಯಿ ಲಂಬಾಣಿ ಉಡುಗೆ ತಂದುಕೊಟ್ಟಿದ್ದು, ಅದನ್ನು ಧರಿಸಿ ಸಂತಸ ಹಂಚಿಕೊಂಡ ಅನುಶ್ರೀ ಕ್ಷಮೆ ಕೂಡ ಕೇಳಿದ್ದಾರೆ. ‘ತಮ್ಮ ಹನುಮಂತ…

  • ಸುದ್ದಿ

    ಮದ್ಯಪಾನ ಮಾರಾಟದಲ್ಲಿ ಈ ಬಾರಿ ದಾಖಲೆ ನಿರ್ಮಿಸಿದ ಮಂಡ್ಯ…..!

    ಮಂಡ್ಯ ಅಂದ್ರೆ ಇಂಡಿಯಾ, ಇಂಡಿಯಾ ಅಂದ್ರೆ ಮಂಡ್ಯ ಅಂತಾ ಕರೆಸಿಕೊಳ್ಳುವ ಮಂಡ್ಯ ಜಿಲ್ಲೆಯ ಜನ ಬೆಚ್ಚಿಬೀಳುವಂತಹ ಸುದ್ದಿ ಇದು. ಕೃಷಿ ಪ್ರಧಾನ ಮಂಡ್ಯ ಜಿಲ್ಲೆಯಲ್ಲಿ ಒಂದೆಡೆ ಬರಗಾಲ. ಮತ್ತೊಂದೆಡೆ ನಾಲೆಗಳಲ್ಲಿ ಕಾಣಿಸದ ನೀರು. ಮಗದೊಂದು ಕಡೆ ರಾಜಕೀಯದ ಅಬ್ಬರ. ಇದರ ನಡುವೆ ಮದ್ಯದ ಹೊಳೆಯೇ ಜೋರಾಗಿ ಅಬ್ಬರಿಸುವಂತೆ ರಭಸವಾಗಿ ಹರಿಯುತ್ತಿದೆ. ಇದೆಲ್ಲದಕ್ಕಿಂತ ಹೆಚ್ಚಾಗಿ ಹದಿಹರೆಯದ ಹುಡುಗರು ಎಣ್ಣೆ ಮಬ್ಬಲ್ಲಿ ಸುತ್ತಾಡೋದು. ಇದನ್ನೆಲ್ಲ ನಿಲ್ಲಿಸಬೇಕಿದ್ದ ನಾಯಕರುಗಳೆಲ್ಲ ಇಂಥಹ ಹದಿಹರಿಯದ ಹುಡುಗರಿಗೆ ಮತ್ತಷ್ಟು ಎಣ್ಣೆ ಸುರಿದು ಅವರನ್ನೆಲ್ಲ ಕುಡುಕರನ್ನಾಗಿ ಮಾಡುತ್ತಿದ್ದಾರೆ….

  • ಉಪಯುಕ್ತ ಮಾಹಿತಿ, ಸುದ್ದಿ

    2 ಎಕರೆ ಜಾಗದಲ್ಲಿ 22 ಲಕ್ಷ ಗಳಿಸುತ್ತಿರುವ ರೈತ, ಈ ರೈತನ ಸಕತ್ ಉಪಾಯ ನೋಡಿ .

    ನಾನು ಒಬ್ಬ ರೈತ ಎಂದು ಹೇಳಿಕೊಳ್ಳಲು ತುಂಬಾ ಜನ ಹಿಂದೆ ಮುಂದೆ ನೋಡುತ್ತಾರೆ ಮತ್ತು ಇದಕ್ಕೆ ಕಾರಣ ನಮ್ಮ ಸಮಾಜ ಎಂದು ಹೇಳಬಹುದು, ರೈತ ಅಂದರೆ ಆತನ ಬಳಿ ಹಣ ಇರುವುದಿಲ್ಲ ಅನ್ನುವ ಭಾವನೆ ಎಲ್ಲರ ಮನದಲ್ಲಿ ಇದೆ ಮತ್ತು ಇಷ್ಟೇ ಅಲ್ಲದೆ ನಾನು ರೈತ ಅಂದರೆ ಹೆಣ್ಣು ಮಗಳನ್ನ ಕೊಟ್ಟು ಮದುವೆ ಮಾಡಿಕೊಡಲು ಕೂಡ ಹಿಂದೆ ಮುಂದೆ ನೋಡುತ್ತಾರೆ ಜನರು. ಇನ್ನು ನಮ್ಮ ಸಮಾಜಕ್ಕೆ ತಿಳಿಯದ ಇನ್ನೊಂದು ವಿಚಾರ ಏನು ಅಂದರೆ ಪ್ರತಿಯೊಬ್ಬ ರೈತ ಕೂಡ…

  • KOLAR NEWS PAPER

    ಕೆಎಂಎಫ್ ನಂದಿನಿ ಅಮುಲ್ ಜತೆ ವಿಲೀನದ ಪ್ರಸ್ತಾಪಕ್ಕೆ ಖಂಡನೆ

    ಕೋಲಾರ;- ಕೋಟ್ಯಾಂತರ ರೈತರ ಆಸ್ತಿಯಾಗಿರುವ ನಂದಿನಿಯನ್ನು ಯಾವುದೇ ಕಾರಣಕ್ಕೂ ಅಮುಲ್ ಜೊತೆ ವಿಲೀನ ಮಾಡಬಾರದೆಂದು ರೈತಸಂಘದಿOದ ಕೋಮುಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ನೀಡಿ ಆಗ್ರಹಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ರೈತರು ನೆಲ ಜಲ ನುಡಿಯ ಮೇಲೆ ಸದಾ ತಮ್ಮ ಪ್ರತಾಪವನ್ನು ತೋರಿಸುತ್ತಿರುವ ಕೇಂದ್ರ ಸರ್ಕಾರ ಈಗ ರಾಜ್ಯದಲ್ಲಿ ತನ್ನದೇ ಆದ ಪ್ರಾಬಲ್ಯ ಅಸ್ತಿತ್ವವನ್ನು ಹೊಂದಿರುವ ನಂದಿನಿ ಹಾಲಿನ ಮೇಲೆ ಗುಜರಾತಿನ ಹುಳಿ ಇಂಡಲು ಮುಂದಾಗಿರುವುದು ಖಂಡನೀಯ, ಕೇಂದ್ರ ಗೃಹ ಸಚಿವ ಅಮಿತ್ ಶಾ ಕನ್ನಡಿಗರ ತಾಳ್ಮೆಯನ್ನೇ ಕೆಣಕಲು…