ಸುದ್ದಿ

ಆಂಧ್ರ ಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ಕಟ್ಟಿಸಿದ್ದ 8 ಕೋಟಿ ರೂ. ವೆಚ್ಚದ ಪ್ರಜಾ ವೇದಿಕೆ ಕಟ್ಟಡವನ್ನು ಧ್ವಂಸಗೊಳಿಸಲಾಗಿದೆ…ಕಾರಣ?

43

ಅಮರಾವತಿ: ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನಿರ್ಮಿಸಿದ್ದ 8 ಕೋಟಿ ರೂ. ವೆಚ್ಚದ ಪ್ರಜಾ ವೇದಿಕೆ ಕಟ್ಟಡವನ್ನು ಧ್ವಂಸಗೊಳಿಸಲಾಗಿದೆ.ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಚಂದ್ರಬಾಬು ನಾಯ್ಡು ಅವರು ನಿರ್ಮಿಸಿದ್ದ ಪ್ರಜಾ ವೇದಿಕೆ ಹೆಸರಿನ ಸರ್ಕಾರಿ ಕಟ್ಟಡವನ್ನು ರಾತ್ರೋರಾತ್ರಿ ಒಡೆದು ಹಾಕಲಾಗಿದೆ. 2 ದಿನಗಳಿಂದ ಇಲ್ಲಿದ್ದ ಎಲ್ಲಾ ಪೀಠೋಪಕರಣ ಮತ್ತು ಎಲೆಕ್ಟ್ರಾನಿಕ್ ವಸ್ತುಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿತ್ತು. ನಿನ್ನೆ 6 ಬುಲ್ಡೋಜರ್‍ಗಳು ಮತ್ತು 12 ಮಂದಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಕಟ್ಟಡವನ್ನು ಧ್ವಂಸಗೊಳಿಸಿದ್ದಾರೆ.

2017ರಲ್ಲಿ ಸಿಆರ್‍ಡಿಎ ಆಂದ್ರಪ್ರದೇಶದ ರಾಜಧಾನಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಈ ಕಟ್ಟಡವನ್ನು ನಿರ್ಮಾಣ ಮಾಡಿತ್ತು. 5 ಕೋಟಿ ವೆಚ್ಚದಲ್ಲಿ ಆರಂಭವಾಗಿದ್ದ ಈ ಕಟ್ಟಡ, ಕಾಮಗಾರಿ ಪೂರ್ಣಗೊಂಡಾಗ 8 ಕೋಟಿ ವೆಚ್ಚ ವ್ಯಯಿಸಲಾಗಿತ್ತು. ಚಂದ್ರ ಬಾಬು ಅವರು ಈ ಕಟ್ಟಡವನ್ನು ಅವರು ಪಕ್ಷದ ಕಾರ್ಯಕರ್ತರು ಮತ್ತು ಜನರನ್ನು ಭೇಟಿಯಾಗಲು ಉಪಯೋಗಿಸುತ್ತಿದ್ದರು. ಆದರೆ ಈ ಕಟ್ಟಡ ಅಕ್ರಮವಾಗಿದ್ದರಿಂದ ಜಗನ್ ಧ್ವಂಸಗೊಳಿಸಲು ಆದೇಶ ನೀಡಿದ್ದರು.

2017ರಲ್ಲಿ ನಾಯ್ಡು ಮನೆ ಸಮೀಪದಲ್ಲೇ 8 ಕೋಟಿ ರೂ. ವೆಚ್ಚದಲ್ಲಿ ಈ ವೇದಿಕೆ ನಿರ್ಮಿಸಿದ್ದರು. ಮುಖ್ಯಮಂತ್ರಿ ಆದ ನಂತರ ಜಗನ್ ಮೊದಲ ಬಾರಿಗೆ ಪ್ರಜಾ ವೇದಿಕೆಯಲ್ಲಿ ಜಿಲ್ಲಾಧಿಕಾರಿಗಳ ಜೊತೆ ಸಭೆಯನ್ನೂ ನಡೆಸಿದ್ದರು. ಈ ವೇಳೆ, ಇದೇ ಕೊನೇ ಸಭೆ. ಪಾರದರ್ಶಕತೆ ನಿಟ್ಟಿನಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಲಾಗಿರುವ ಈ ಕಟ್ಟಡವನ್ನು ಧ್ವಂಸಗೊಳಿಸಬೇಕು ಎಂದು ಹೇಳಿದ್ದರು.

ಕೆಲ ವಾರಗಳ ಹಿಂದೆಯಷ್ಟೇ ಚಂದ್ರಬಾಬು ನಾಯ್ಡು ಅವರಿಗೆ ಸರ್ಕಾರ ನೀಡಿದ್ದ ಝಡ್ ಪ್ಲಸ್ ಭದ್ರತೆಯನ್ನು ಸರ್ಕಾರ ವಾಪಸ್ ಪಡೆಯಲಾಗಿತ್ತು. ಇತ್ತ ಜೂನ್ 4 ರಂದು ಪ್ರಜಾ ವೇದಿಕಾ ಬಳಿ ಇರುವ ಮನೆಯಲ್ಲೇ ಇರಲು ಅವಕಾಶ ಕೊಡುವಂತೆ ನಾಯ್ಡು ಸಿಎಂಗೆ ಪತ್ರ ಬರೆದು ಮನವಿ ಮಾಡಿದ್ದರು. ಅಲ್ಲದೇ `ಪ್ರಜಾ ವೇದಿಕಾ’ ಹಾಲ್ ಅನ್ನು ಪಕ್ಷದ ಕಾರ್ಯಗಳನ್ನು ನಡೆಸಲು ಬಳಕೆ ಮಾಡಲು ನೀಡಬೇಕೆಂದು ಪತ್ರದಲ್ಲಿ ಸರ್ಕಾರಕ್ಕೆ ಮನವಿ ಮಾಡಿದ್ದರು. ಜಗನ್ ಸರ್ಕಾರ ಕೃಷ್ಣ ನದಿಯ ತಟದಲ್ಲಿ ನಿರ್ಮಾಣ ಮಾಡಿರುವ ಈ ಮನೆಯೂ ಕೂಡ ನಿಯಮಗಳನ್ನು ಉಲ್ಲಂಘಿಸಿ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ಮಹಾಕಾಳೇಶ್ವರನ ಕೃಪೆಯಿಂದ ಈ ರಾಶಿಗಳಿಗೆ ಶುಭಯೋಗವಿದ್ದು ನಿಮ್ಮ ರಾಶಿಯೂ ಇದೆಯಾ ನೋಡಿ

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(11 ಮಾರ್ಚ್, 2019) ಇದು ಜೀವನದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಹಾಯ ಮಾಡುತ್ತದೆ ಮತ್ತು ಅಗತ್ಯವಿರುವ ಬೆಳಕನ್ನು ನೀಡುತ್ತದೆ….

  • ಕರ್ನಾಟಕ

    ವೈದ್ಯರ ಮುಷ್ಕರದ ಪರಿಣಾಮ ರೋಗಿಗಳ ಸಾವು..!ತಿಳಿಯಲು ಈ ಲೇಖನ ಓದಿ..

    ಖಾಸಗಿ ಆಸ್ಪತ್ರೆಗಳ ವೈದ್ಯರ ಮುಷ್ಕರದ ಪರಿಣಾಮ ಸಕಾಲದಲ್ಲಿ ಚಿಕಿತ್ಸೆ ಸಿಗದೆ ರಾಜ್ಯದ ವಿವಿಧೆಡೆ ಐವರು ಮಕ್ಕಳು ಸೇರಿ ಒಂಭತ್ತು ರೋಗಿಗಳು ಮೃತಪಟ್ಟಿದ್ದಾರೆ.ಖಾಸಗಿ ಆಸ್ಪತ್ರೆಗಳ ವೈದ್ಯರ ಮುಷ್ಕರದ ಪರಿಣಾಮ ಸಕಾಲದಲ್ಲಿ ಚಿಕಿತ್ಸೆ ಸಿಗದೆ ರಾಜ್ಯದ ವಿವಿಧೆಡೆ ಐವರು ಮಕ್ಕಳು ಸೇರಿ ಒಂಭತ್ತು ರೋಗಿಗಳು ಮೃತಪಟ್ಟಿದ್ದಾರೆ.

  • ಆಯುರ್ವೇದ, ಆರೋಗ್ಯ

    ಜೇನುತುಪ್ಪದ ಆರೋಗ್ಯಕರ ಗುಣಗಳು

    ಜೇನುತುಪ್ಪವನ್ನು ಯಾರು ತಾನೇ ಬೇಡ ಎನ್ನುತ್ತಾರೆ. ಪ್ರಪಂಚದಲ್ಲಿ ‘ಏಕ್ಸ್ಪಾರ್ ಡೇಟ್’ ಇಲ್ಲದೆ ಇರುವ ಏಕೈಕ ವಸ್ತು ಎಂದರೆ ಅದು ಈ ಜೇನು ತುಪ್ಪ. ಈ ಜೇನು ತುಪ್ಪವನ್ನು ಗಾಜಿನ ಬಾಟಲಿಯಲ್ಲಿ ಇಟ್ಟರೆ ಅದು ಎಷ್ಟೇ ವರ್ಷ ಹಳೆಯದಾದರೂ ಬಳಸಬಹುದು.ಇದನ್ನು ಫ್ರಿಜ್ ನಲ್ಲಿ ಮತ್ತು ಬಿಸಿಲಿನಲ್ಲಿ ಇರಬಾರದು. ಯಾರಿಗೆ ಜೇನು ತುಪ್ಪ ಇಷ್ಟ ಇಲ್ಲವೋ ಅಥವಾ ಅದರ ಬಗ್ಗೆ ಮಾಹಿತಿ ಇಲ್ಲವೋ, ಅವರು ಈ ಮಾಹಿತಿಯನ್ನು ಒಮ್ಮೆ ಓದಿ.ಇದನ್ನು ಎಲ್ಲಾ ವಯೋಮಾನದವರು ಬಳಸ ಬಹುದು. ಇದನ್ನು ರಕ್ತವರ್ಧಕ ಟಾನಿಕ್…

  • ಸಿನಿಮಾ

    ಬಿಚ್ಚಮ್ಮ ಸನ್ನಿ ಲಿಯೋನ್ ಮೇಲೆ ಎಫ್‍ಐಆರ್!ಅಸಲಿ ಕಾರಣ ಏನು ಗೊತ್ತಾ?

    ಇತ್ತೀಚೆಗಷ್ಟೇ ಜೂನಿಯರ್ ಇಂಜಿನಿಯರ್ ಲಿಸ್ಟ್ ನಲ್ಲಿ ಟಾಪರ್ ಆಗಿ ಆಯ್ಕೆ ಆಗಿದ್ದ ಸನ್ನಿ ಲಿಯೋನ್ ವಿರುದ್ಧ ಈಗ ಎಫ್‍ಐಆರ್ ದಾಖಲಾಗಿದೆ. ಆದರೆ ಈ ಬಗ್ಗೆ ಸನ್ನಿ ಲಿಯೋನ್ ಅಭಿಮಾನಿಗಳು ಬೇಸರಗೊಳ್ಳುವ ಅಗತ್ಯವಿಲ್ಲ. ಏಕೆಂದರೆ ಕೇಸ್ ದಾಖಲಾಗಿರುವುದು “ಸನ್ನಿ ಲಿಯೋನ್” ಹೆಸರಿನಲ್ಲಿ ನಕಲಿ ದಾಖಲೆ ಸಲ್ಲಿಸಿ ಆಯ್ಕೆ ಆಗಿರುವ ಅಭ್ಯರ್ಥಿ ಮೇಲೆ. ಬಿಹಾರದ ಪಬ್ಲಿಕ್ ಹೆಲ್ತ್ ಇಂಜಿನಿಯರಿಂಗ್ ಡಿಪಾರ್ಟ್‍ಮೆಂಟ್ (ಪಿಎಚ್‍ಇಡಿ)ನ ಜೂನಿಯರ್ ಇಂಜಿನಿಯರ್ ಮೆರಿಟ್ ಲಿಸ್ಟ್ ನಲ್ಲಿ ಸನ್ನಿ ಲಿಯೋನ್ ಹೆಸರು ಟಾಪರ್ ಸ್ಥಾನದಲ್ಲಿತ್ತು. ಆಕೆ ಶೇ. 98.50…

  • ಉಪಯುಕ್ತ ಮಾಹಿತಿ, ಗ್ಯಾಜೆಟ್

    ಈ ಅಪಾಯಕಾರಿ ಆಪ್ಸ್ ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿವೆಯೇ.?ಇದ್ರೆ ಈ ಕೂಡಲೆ ತೆಗೆದುಬಿಡಿ.!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ ಉಪಯೋಗವಾಗಲಿ…

    *ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಆಂಡ್ರಾಯ್ಡ್ ಟ್ಯಾಬ್ಲೆಟ್ ಅಥವಾ ಸ್ಮಾರ್ಟ್‌ಫೋನ್ ಯಾವುದೇ ಆಗಿರಲಿ ಅದರಲ್ಲಿ ಗೂಗಲ್ ಪ್ಲೇಸ್ಟೋರ್ ಇದ್ದೇ ಇರುತ್ತದೆ. ಅಲ್ಲಿಂದಲೇ ಬಳಕೆದಾರರೆಲ್ಲ ಆಪ್ಸ್, ಗೇಮ್ಸ್ ಡೌನ್‌ಲೋಡ್ ಮಾಡಿಕೊಳ್ಳುತ್ತಾರೆ. ಇದು ಗೂಗಲ್ ಅಧಿಕೃತ ಸ್ಟೋರ್ ಆದ ಕಾರಣ ಅದರಲ್ಲಿರುವ ಆಪ್ಸ್ ಎಲ್ಲವೂ ಸುರಕ್ಷಿತವಾದವು ಎಂದೇ ಭಾವಿಸುತ್ತಾರೆ. ಆದರೆ ಅದು ತಪ್ಪು. ಯಾಕೆಂದರೆ ಪ್ಲೇಸ್ಟೋರ್‌ನಲ್ಲೂ ಹಲವು ಮಾಲ್‌ವೇರ್, ವೈರಸ್ ಇರುವ ಆಪ್ಸ್ ಇವೆಯಂತೆ. ಒಂದು ಪ್ರಮುಖ ಐಟಿ ಸೆಕ್ಯುರಿಟಿ ಕಂಪೆನಿ ಈ ವಿಷಯವನ್ನು ಬಯಲುಮಾಡಿದೆ. ಗೂಗಲ್…