ಸುದ್ದಿ

ಬೆಂಗಳೂರಲ್ಲಿ ಬಿದ್ದ ಮಳೆಗೆ, ಬಿದ್ದಿದ್ದು ಬರೋಬ್ಬರಿ 83 ಮರಗಳು…!

98

ಬೆಂಗಳೂರು, ಜೂನ್ 7: ಬೆಂಗಳೂರಿನಲ್ಲಿ ಗುರುವಾರ ರಾತ್ರಿ ಸುರಿದ ಅರ್ಧಗಂಟೆ ಮಳೆಗೆ ವಿವಿಧೆಡೆ ಒಟ್ಟು 83 ಮರಗಳು ಧರೆಗುರುಳಿವೆ. ರಾಜರಾಜೇಶ್ವರಿನಗರ ಹಾಗೂ ಬಸವನಗುಡಿಯಲ್ಲಿ ಅತಿ ಹೆಚ್ಚು ಮರಗಳು ಬಿದ್ದಿದೆ ಅತಿ ಹೆಚ್ಚು ಹಾನಿಯೂ ಉಂಟಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಎಲ್ಲಿ ನೋಡಿದರೂ ಮರ ಉರುಳಿರುವುದು, ಟ್ರಾನ್ಸ್‌ಫಾರ್ಮರ್ ವಾಹನಗಳ ಮೇಲೆ ಬಿದ್ದಿರುವುದು, ವಿದ್ಯುತ್ ಕಂಬಗಳು ಧರೆಗುರಳಿರುವುದು, ಟ್ರಾಫಿಕ್ ಜಾಮ್ ನೋಡಿ ಅರ್ಧ ಗಂಟೆ ಮಳೆ ಎಷ್ಟೊಂದು ಅವಾಂತರವನ್ನು ಸೃಷ್ಟಿಸಿದೆ. ಬಸವನಗಗುಡಿ, ಕೆಂಗೇರಿ, ರಾಜರಾಜೇಶ್ವರಿನಗರ, ಗಿರಿನಗರ ಪ್ರದೇಶದಲ್ಲಿ ಅತಿ ಹೆಚ್ಚು ಅನಾಹುತವಾಗಿದೆ. ರಾತ್ರಿ 1 ಗಂಟೆಗೆ ದೂರು ನೀಡಿದರೂ ಸ್ಪಂದಿಸಿದ ಬೆಸ್ಕಾಂ ಹೊಸಕೆರೆಹಳ್ಳಿಯಲ್ಲಿ ಕಳೆದ ಎರಡು ಗಂಟೆಯಿಂದ ವಿದ್ಯುತ್ ಇಲ್ಲ ಎಂದು ರಾತ್ರಿ 1 ಗಂಟೆಗೆ ಟ್ವಿಟ್ಟರ್ ಮೂಲಕ ದೂರು ನೀಡಿದರೂ ಕೂಡ ಆಗಲೇ ಸ್ಪಂದಿಸಿದ್ದಾರೆ. ದಿನದ 24 ಗಂಟೆಯೂ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ರಾತ್ರಿಇಡೀ ಕಾರ್ಯ ನಿರ್ವಹಿಸಿದ ಬೆಸ್ಕಾಂ ಸಿಬ್ಬಂದಿಗಳು ಬಸವನಗುಡಿ, ರಾಜರಾಜೇಶ್ವರಿನಗರ ಸೇರಿದಂತೆ ಹಲವು ಕಡೆಗಳಲ್ಲಿ ಸೇರಿ ಒಟ್ಟು 83 ಮರಗಳು ಧರೆಗುರುಳಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಮಳೆ ಸ್ವಲ್ಪ ಕಡಿಮೆಯಾದ ಬಳಿಕ ಗ್ರಾಹಕರ ದೂರು ಆಲಿಸಿ ಬಂದ ಬೆಸ್ಕಾಂ ಸಿಬ್ಬಂದಿಗಳು ಬೆಳಗ್ಗೆಯವರೆಗೂ ಕಾರ್ಯ ನಿರ್ವಹಿಸಿದ್ದಾರೆ. ರಾತ್ರಿ 1 , 2 ಗಂಟೆ ಸಮಯದಲ್ಲೂ ಕೂಡ ಮರಗಳನ್ನು ಕಡಿದು, ವಿದ್ಯುತ್ ತಂತಿಗಳನ್ನು ಸರಿಪಡಿಸುವ ಕಾರ್ಯದಲ್ಲಿ ತೊಡಗಿದ್ದರು. ಬೆಂಗಳೂರು ಜನತೆ ಇವರಿಗೆ ಧನ್ಯವಾದ ಹೇಳಲೇ ಬೇಕು.

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಿಬ್ಬಂದಿಗಳಿಗೆ ಪೀಕಲಾಟ ಮುಂಗಾರು ಆರಂಭವಾಗುವ ಮೊದಲೇ ಇಡೀ ಬೆಂಗಳೂರು ಸಮೀಕ್ಷೆ ನಡೆಸಿ, ವಿದ್ಯುತ್ ತಂತಿಗಳ ಸಮೀಪ ಇರುವ ಬೀಳುವ ಹಂತದಲ್ಲಿರುವ ಮರದ ರೆಂಬೆಗಳನ್ನು ಕತ್ತರಿಸುವುದು, ಅಥವಾ ಹಳೆಯ ಮರಗಳನ್ನು ಕತ್ತರಿಸುವ ಕೆಲಸವನ್ನು ಬಿಬಿಎಂಪಿ ಹಾಗೂ ಬೆಸ್ಕಾಂ ಸೇರಿ ಮಾಡಬೇಕಿತ್ತು. ಇದೀಗ ಮಳೆ ಬಂದ ನಂತರ ಅನಾಹುತ ಸಂಭವಿಸಿದ ಮೇಲೆ ಬೆಸ್ಕಾಂ ಸಿಬ್ಬಂದಿಗಳಿಗೆ ಇದು ತಲೆನೋವು, ಅಧಿಕಾರಿಗಳು ನಿರ್ಲಕ್ಷ್ಯಕ್ಕೆ ಲೈನ್‌ಮೆನ್‌ಗಳು ದಂಡ ತೆರವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಜರಾಜೇಶ್ವರಿನಗರದ ಸ್ಥಿತಿ ನೋಡಿ ಹೇಗಿದೆ? ರಾಜರಾಜೇಶ್ವರಿನಗರದಲ್ಲಿ ಅತಿ ಹೆಚ್ಚು ಅವಾಂತರವಾಗಿದೆ, ಇಡೀ ರಸ್ತೆಯ ತುಂಬೆಲ್ಲಾ ವಿದ್ಯುತ್ ಕಂಬಗಳು, ಮರಗಳು, ವಿದ್ಯುತ್ ತಂತಿಗಳೇ ಕಾಣಿಸುತ್ತಿವೆ, ಇವುಗಳನ್ನು ಸರಿಪಡಿಸಲು ಬೆಸ್ಕಾಂ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಟಿಕ್ ಟಾಕ್ ಖಾತೆ ಡಿಲಿಟ್ ಮಾಡಿ ದೇಶಪ್ರೇಮ ತೋರಿದ ಚಾಲೆಂಜಿಂಗ್ ಸ್ಟಾರ್. ಅಭಿಮಾನಿಗಳು ಖಾತೆ ಡಿಲೀಟ್.

    ಕನ್ನಡದ ಹೆಮ್ಮೆಯ ನಟ, ಅಭಿಮಾನಿಗಳ ಡಿ.ಬಾಸ್ ಸ್ಯಾಂಡಲ್ ವುಡ್ ನ ಬ್ರಾಂಡ್ ಅಂತೆಲ್ಲ ಕರೆಸಿಕೊಳ್ಳುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು ಕೂಡ ಚೀನಾ ವಸ್ತು ಹಾಗೂ ಅಪ್ಲಿಕೇಷನ್ ಅನ್ನು ಬ್ಯಾನ್ ಮಾಡುವ ನಿರ್ಧಾರ ಕೈಗೊಂಡಿದ್ದು, ಈ ವಿಚಾರವಾಗಿ ದರ್ಶನ್ ಫ್ಯಾನ್ಸ್ ಮೊದಲು ಟಿಕ್ ಟಾಕ್ ಗೆ ಗುಡ್ ಬೈ ಹೇಳಿದ್ದಾರೆ. ಟಿಕ್ ಟಾಕ್ ನಲ್ಲಿಯೂ ಡಿಬಾಸ್ ಹೆಸರು ದಾಖಲೆ ನಿರ್ಮಿಸಿತ್ತು. ಆದರೆ ಇದ್ಯಾವುದನ್ನು ಲೆಕ್ಕಿಸದೆ ದರ್ಶನ್ ಅಭಿಮಾನಿಗಳು ಖಾತೆ ಡಿಲೀಟ್ ಮಾಡಿ ರಾಷ್ಟ್ರ ಪ್ರೇಮ ಮೆರೆದಿದ್ದಾರೆ….

  • ಸುದ್ದಿ

    ರಜನಿಕಾಂತ್‌ ಬಳಿ ಇರುವ ಆಸ್ಥಿಯ ಮೌಲ್ಯವೆಷ್ಟು ಗೊತ್ತಾ?

    ಟಾಲಿವುಡ್‌ ಸ್ಟಾರ್‌ ರಜಿನಿಕಾಂತ್‌ ಎಲ್ಲರೂ ಮೆಚ್ಚುವ ಬಹುದೊಡ್ಡ ಕಲಾವಿದ. ಅವರು ಚಿತ್ರರಂಗ ಕಾಲಿಟ್ಟ ದಿನದಿಂದ ಇಂದಿನವರೆಗೂ ಅದೇ ಪ್ರಾಮುಖ್ಯತೆಯನ್ನೂ ಮುಂದುವರೆಸಿಕೊಡೇ ಬಂದಿದ್ದಾರೆ. 1975ರಲ್ಲಿ ತೆರೆಕಂಡ ಅಪೂರ್ವ ರಾಗಂಗಳ್ ಚಿತ್ರದಿಂದ ಇದುವರೆಗೂ 150 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಹಿಂದೆ ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿದ್ದ ಅವರು ಸೂಪರ್ ಸ್ಟಾರ್ ಆಗಿದ್ದೇ ಒಂದು ಅದ್ಭುತ ಸ್ಟೋರಿ. 45 ವರ್ಷಗಳ ಕಾಲ ಚಿತ್ರರಂಗದಲ್ಲಿ ಮೆರೆದ ರಜಿನಿಕಾಂತ್ ಅವರ ಚಿತ್ರಗಳು ಅನೇಕ ಬಾರಿ ವಿವಾದಗಳಿಗೂ ಕಾರಣವಾಗಿವೆ. ರಜನಿಕಾಂತ್‌ ತಮ್ಮ ನಾಲ್ಕು ದಶಕಗಳ ಚಿತ್ರರಂಗದ…

  • ಸುದ್ದಿ

    ಧರ್ಮಸ್ಥಳದ ಧರ್ಮಾದಿಕಾರಿಗಳಾದ, ಡಾ.ವೀರೇಂದ್ರ ಹೆಗಡೆರವರು ನೂತನವಾಗಿ ನಿರ್ಮಿಸಿರುವ ಮನೆ ಹೇಗಿದೆ ಗೊತ್ತಾ..?ಈ ಲೇಖನ ನೋಡಿ…

    ಧರ್ಮಸ್ಥಳದ ಪರಮ ಪೂಜ್ಯ ಧರ್ಮಾದಿಕಾರಿಗಳಾದ ಡಾ.ವೀರೇಂದ್ರ ಹೆಗಡೆರವರು, ಧರ್ಮಸ್ಥಳದಲ್ಲಿ ನೂತನವಾಗಿ ನಿರ್ಮಿಸಿರುವ ಮನೆ ಗೃಹಪ್ರವೇಶದ ಅದ್ಭುತ ಫೋಟೋಗಳು ನಿಮಗಾಗಿ…

  • ಸುದ್ದಿ

    ಮಾತ್ರೆಯಿಲ್ಲದೆ ತಲೆನೋವು ಮಾಯವಾಗಲು ಹೀಗೆ ಮಾಡಿ..!

    ತಲೆ ನೋವು ಕಾಣಿಸಿಕೊಳ್ಳಲು ಕಾರಣ ಒಂದಾ ಅಥವಾ ಎರಡ ಅನೇಕ ಕಾರಣಗಳಿವೆ. ಅದರಲ್ಲಿಯೂ ಅಧಿಕ ಒತ್ತಡ ಉಂಟಾದಾಗ ಹೆಚ್ಚಾಗಿ ತಲೆನೋವು ಕಾಣಿಸಿಕೊಳ್ಳುತ್ತಾದೆ ಇಂತಹ ಸಂದರ್ಭದಲ್ಲಿ ಮಾತ್ರೆ ಬಳಸದೆ ಮುಕ್ತಿ ಪಡೆಯಬಹುದು. ಮಾತ್ರೆಯಿಲ್ಲದೆ ತಲೆನೋವು ಮಾಯವಾಗಲು 10 ಸುಲಭ ಪರಿಹಾರಗಳು 1) ನಿದ್ದೆ ಕಡಿಮೆಯಾಗಿ ತಲೆನೋವು ಬಂದಿದ್ದರೆ ಬಸಳೆ ಸೊಪ್ಪಿನ ರಸವನ್ನು ತಲೆಗೆ ಲೇಪನ ಮಾಡಿಕೊಳ್ಳಬೇಕು ನಂತರ ನಿದ್ದೆ ಮಾಡಿ, ತಲೆನೋವು ಸರಿ ಹೋಗುತ್ತಾದೆ. 2) ಜಾಯಿಕಾಯಿಯ ಪುಡಿಯನ್ನು ತಣ್ಣಗಿನ ನೀರಲ್ಲಿ ಕಲಸಿ ಅದನ್ನು ದಿನದಲ್ಲಿ ಮೂರು ಭಾರೀ ಕುಡಿಯುವುದರಿಂದ ತಲೆನೋವು…

  • ಆರೋಗ್ಯ, ಉಪಯುಕ್ತ ಮಾಹಿತಿ

    ಬಾಳೆಹಣ್ಣು ಮಾತ್ರವಲ್ಲ, ಬಾಳೆಹೂವು ಕೂಡ ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ..!ಹೆಚ್ಚಿನ ಮಾಹಿತಿಗೆ ಈ ಲೇಖನ ಓದಿ…

    ಮಹಿಳೆಯರ ಸೌಂದರ್ಯ ಹೆಚ್ಚಿಸುವ ಹೂವು, ಆರೋಗ್ಯಕ್ಕೂ ಒಳ್ಳೆಯದು. ಉತ್ತಮ ಆರೋಗ್ಯಕ್ಕೆ ಈ ಹೂವುಗಳನ್ನು ತಿನ್ನಿ…..ಆರೋಗ್ಯದಿಂದ ಇರುವುದನ್ನು ರೂಢಿಸಿಕೊಳ್ಳಿ. ಅಷ್ಟಕ್ಕೂ ಯಾವುದು ಈ ಹೂವು ಅಂತೀರಾ? ಬಾಳೆ ಹೂವು. ಬಾಳೆ ಹೂವಿನಲ್ಲಿ ಪ್ರೋಟೀನ್, ಫಾಸ್ಫರಸ್, ಐರನ್, ಕಾಪರ್, ಪೊಟಾಷಿಯಮ್, ಕ್ಯಾಲ್ಶಿಯಮ್, ಕಾರ್ಬೋಹೈಡ್ರೇಟ್ ಗಳಿವೆ. ಇದರ ಸಾಂಬಾರು ಮಾಡಿಕೊಂಡು ತಿಂದರೆ ಸಾಕಷ್ಟು ಪ್ರಯೋಜನಗಳಿವೆ. * ಬಾಳೆ ಹೂವಿನಲ್ಲಿರುವ ಇಥನಾಲ್ ಅಂಶ ಗಾಯವನ್ನು ಬೇಗ ಗುಣವಾಗುವಂತೆ ಮಾಡುತ್ತದೆ. ಹಾಗೂ ಇನ್ಫೆಕ್ಷನ್ ಕಡಿಮೆ ಮಾಡಲು ಸಹಾಯಕ. * ಬಾಳೆ ಹೂವಿನಲ್ಲಿರುವ ಆಂಟಿ ಆಕ್ಸಿಡೆಂಟ್,…