ಸುದ್ದಿ

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದಂತಹ ಘಟನೆ…!

136

ಉತ್ತರ ಪ್ರದೇಶದ ಅಲಿಗಢದಲ್ಲಿ ದಂಗಾಗಿಸುವ ಘಟನೆ ನಡೆದಿದೆ. ಕೇವಲ 5 ಸಾವಿರಕ್ಕಾಗಿ ಎರಡುವರೆ ವರ್ಷದ ಬಾಲಕಿ ಹತ್ಯೆ ನಡೆದಿದೆ. ಸಾಮಾನ್ಯ ಜನರಿಂದ ಸಿನಿಮಾ ತಾರೆಯರವರೆಗೆ ಎಲ್ಲರೂ ಈ ಘಟನೆ ಕೇಳಿ ದಂಗಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇದಕ್ಕೆ ವಿರೋಧ ವ್ಯಕ್ತವಾಗ್ತಿದೆ.

ಮೇ.31ರಂದು ಅಲಿಗಢದಲ್ಲಿ ಬಾಲಕಿಯೊಬ್ಬಳು ನಾಪತ್ತೆಯಾಗಿದ್ದಳು. ಬಾಲಕಿ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಐದು ದಿನಗಳ ನಂತ್ರ ಕಸದ ರಾಶಿಯಲ್ಲಿ ಮಗುವಿನ ಶವ ಪತ್ತೆಯಾಗಿದೆ. ಮಗುವಿನ ದೇಹ ಕೊಳೆತು ವಾಸನೆ ಬರುತ್ತಿತ್ತು ಎಂದು ಸ್ಥಳೀಯರು ಹೇಳಿದ್ದಾರೆ. ಬಾಲಕಿ ಕತ್ತು ಹಿಸುಕಿ ಕೊಲೆ ಮಾಡಲಾಗಿದೆಯಂತೆ. ಕಣ್ಣುಗಳು ಹೊರಗೆ ಬಂದಿದ್ದವು. ಕೈ ಕತ್ತರಿಸಲಾಗಿತ್ತು.

ಮರಣೋತ್ತರ ಪರೀಕ್ಷೆ ವರದಿ ಆಧಾರದ ಮೇಲೆ ಬಾಲಕಿ ಮೇಲೆ ಅತ್ಯಾಚಾರ ನಡೆದಿಲ್ಲವೆಂದು ಪೊಲೀಸರು ಹೇಳಿದ್ದಾರೆ. ಇದು ಪ್ರತಿಕಾರಕ್ಕೆ ನಡೆದ ಕೊಲೆ ಎಂದು ಪೊಲೀಸರು ಶಂಕಿಸಿದ್ದಾರೆ.

ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಬಾಲಕಿ ಕುಟುಂಬಸ್ಥರು 45 ಸಾವಿರ ರೂಪಾಯಿ ಸಾಲ ಪಡೆದಿದ್ದರಂತೆ. ಅದ್ರಲ್ಲಿ 35 ಸಾವಿರ ರೂಪಾಯಿ ವಾಪಸ್ ನೀಡಿದ್ದಾರೆ. ಉಳಿದ 5 ಸಾವಿರಕ್ಕೆ ಎರಡು ಕುಟುಂಬದ ಮಧ್ಯೆ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಮನರಂಜನೆ

    ನಂಗೆ ಹೊಟೆ ಹಸಿದಿದ್ದಾಗ ಊಟ ಹಾಕಿದ ಮೊದಲ ವ್ಯಕ್ತಿ ರೆಬೆಲ್ ಸ್ಟಾರ್ ಎಂದ ಬಿಗ್ ಬಾಸ್ ಸ್ಪರ್ಧಿ..!

    ಕನ್ನಡ ಚಿತ್ರರಂಗದ ಖ್ಯಾತ ನಟ ಅಂಬರೀಶ್ ವಿಧಿವಶರಾಗಿ ಈಗಾಗಲೇ ಹತ್ತು ದಿನಗಳು ಕಳೆದಿದ್ದು, ಕಿಚ್ಚ ಸುದೀಪ್ ನಿರೂಪಣೆಯ ‘ಬಿಗ್ ಬಾಸ್’ ಸ್ಪರ್ಧಿಗಳಿಗೆ ಮಾತ್ರ ಈ ವಿಷಯ ಶನಿವಾರ ತಿಳಿದಿದೆ.ಈ ವೇಳೆ ಸೋನು ಪಾಟೀಲ್ ಅಂಬರೀಶ್ ಬಗ್ಗೆ ಮಾತನಾಡುತ್ತಾ ಕಣ್ಣೀರು ಹಾಕಿದ್ದಾರೆ. ‘ಬಿಗ್ ಬಾಸ್’ ಮನೆಯ ಸದಸ್ಯರಿಗೆ ಹೊರ ಜಗತ್ತಿನ ಯಾವುದೇ ಸಂಪರ್ಕವಿರದ ಕಾರಣ, ನವೆಂಬರ್ 24ರ ಶನಿವಾರದಂದು ಅಂಬರೀಶ್ ಅವರು ಇಹಲೋಕ ತ್ಯಜಿಸಿದ್ದರೂ ವಾರದ ಬಳಿಕ ಬಿಗ್ ಬಾಸ್ ಸ್ಪರ್ಧಿಗಳಿಗೆ ಈ ವಿಷಯ ತಿಳಿದಿದೆ. ಭಾನುವಾರದ ಸಂಚಿಕೆಯಲ್ಲಿ…

  • ಸುದ್ದಿ

    ಕನ್ನಡಿಗರಿಗೆ ಹೆಚ್ಚು ಉದ್ಯೋಗ ಆದ್ಯತೆ ಸಿಎಂ ಯಡಿಯೂರಪ್ಪ ಭರವಸೆ…!

    ಇಂಗ್ಲಿಷ್ ಸಂಬಳಕ್ಕಾದರೆ, ಕನ್ನಡ ಉಂಬಳಕ್ಕೆ ಎಂಬ ಮಾತು ನಾಡಿನಲ್ಲಿ ಪ್ರಚಲಿತದಲ್ಲಿದೆ. ಆದರೆ, ಕನ್ನಡ ನಮ್ಮ ಸಂಬಳ ಹಾಗೂ ಉಂಬಳ ಎರಡಕ್ಕೂ ಆಗಬೇಕು. ಈ ದಿಸೆಯಲ್ಲಿ ಸರ್ಕಾರ ಕಾರ್ಯೋನ್ಮುಖವಾಗಿದ್ದು, ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ದೊರಕಿಸಿಕೊಡುವ ದಿಸೆಯಲ್ಲಿ ಪ್ರಯತ್ನ ನಡೆಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ಎರಡು ಸಂಸ್ಥೆಗಳು ಸೇರಿ ವಿವಿಧ ಕ್ಷೇತ್ರಗಳ ಸಾಧಕರಿಗೆ ೨೦೧೯ನೇ ಸಾಲಿನ ‘ರಾಜ್ಯೋತ್ಸವ ಪ್ರಶಸ್ತಿ’ ಪ್ರದಾನ ಮಾಡಿ. ಮಾತನಾಡಿದ…

  • ಸುದ್ದಿ

    ಕೇವಲ 29 ದಿನಗಳಲ್ಲಿ ಪೆಟ್ರೋಲ್ ಇಳಿದಿದ್ದು 7.29 ರೂಪಾಯಿಗಳು!ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ…

    ಹಲವಾರು ವಾರಗಳ ಹಿಂದೆ ತೈಲ ಬೆಳೆಗಳ ದರ ಏಳ ಎಗ್ಗಿಲ್ಲದೆ ಏರುತ್ತಲೇ ಇತ್ತು. ಈಗ ಹಲವಾರು ದಿನಗಳಿಂದ ದಿನದಿಂದ ದಿನಕ್ಕೆ ಪೆಟ್ರೋಲ್ ದರ ಇಳಿಕೆಯಗುತ್ತಿದೆ.ಭಾನುವಾರವಷ್ಟೇ 20 ಪೈಸೆ ಯಷ್ಟು ಕಡಿಮೆಯಾಗಿದೆ.ಒಟ್ಟಾರೆಯಾಗಿ ಇಲ್ಲಿಯವರೆಗೆ 7 ರುಪಾಯಿ 29 ಪೈಸೆ ಕಡಿಮೆಯಾಗಿದೆ.ಇದು ಆಗಸ್ಟ್ ೧೬ಕ್ಕೆ ಇದ್ದ ದರಕ್ಕೆ ಈಗ ತಲುಪಿದೆ. ಇದರ ಜೊತೆಗೆ ಡೀಸೆಲ್ ಬೆಲೆ ಕೂಡ ಲೀಟರ್​ಗೆ 18 ಪೈಸೆ ಕಡಿಮೆಯಾಗಿದ್ದು 29 ದಿನಗಳಲ್ಲಿ ೩ರುಪಾಯಿ ೮೯ ಪೈಸೆ ಕಡಿಮೆಯಾಗಿದೆ. ಆಗಸ್ಟ್ ೧೫ಕ್ಕೆ ಹೋಲಿಸಿದ್ದಲ್ಲಿ ಆಗ ರಾಷ್ಟ್ರ ರಾಜಧಾನಿ…

  • ಆರೋಗ್ಯ

    ನೀವು ತಿಳಿದಿರದ ಕಮರಾಕ್ಷಿ ಮರದ ಉಪಯೋಗಗಳ ಬಗ್ಗೆ ತಿಳಿಯಲು ಈ ಲೇಖನ ಓದಿ..

    ನಮ್ಮ ದೇಶದಲ್ಲಿ ಹಣ್ಣಿನ ತೋಟಗಳು, ಕೈತೋಟಗಳು, ಸಸ್ಯೋದ್ಯಾನ, ದೊಡ್ಡ ಕಟ್ಟಡಗಳ ಪೌಳಿಗೋಡೆಯ ಆವರಣ, ಸಾಲುಮರವಾಗಿ, ತೋಟಗಾರಿಕೆ ಸಸಿಮಡಿಗಳು ಮುಂತಾದೆಡೆ ಈ ಹಣ್ಣಿನ ಮರವನ್ನು ಕಾಣಬಹುದು.ಒಂದು ರಸವತ್ತಾದ ಮೃದು ಹಣ್ಣು. ನಮ್ಮಲ್ಲಿ ಇದನ್ನು ಇತರ ದೇಶಗಳಲ್ಲಿದ್ದಂತೆ ವಾಣಿಜ್ಯವಾಗಿ ಯಾರೂ ಬೆಳೆಯುತ್ತಿಲ್ಲ. ಕ್ಯಾಲಿಫೋರ್ನಿಯಾ, ಹವಾಯ್‌, ಚೀನಾ ತೈವಾನ್‌, ಕ್ವೀನ್ಸ್‌ಲ್ಯಾಂಡ್‌ ಮುಂತಾದೆಡೆ ಕಮರಾಕ್ಷಿಯ ಮರಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ.

  • ರಾಜಕೀಯ

    ಚುನಾವಣಾ ಹತ್ತಿರವಾಗುತ್ತಿದ್ದಂತೆ ಬಿಜೆಪಿಗೆ ಬಿಗ್ ಶಾಕ್ ಕೊಟ್ಟ ಕಾಂಗ್ರೆಸ್..!?

    ಲೋಕಸಭಾ ಚುನಾವಣೆಗೆ ಕೌಂಟ್‍ ಡೌನ್‍ ಶುರುವಾಗಿದೆ. ಇಂತಹ ಸಂದರ್ಭದಲ್ಲಿ ಗದಗ ರಾಜಕಾರಣದಲ್ಲಿ ಬಿಜೆಪಿಗೆ ಬಿಗ್ ಶಾಕ್‍ ಸಿಕ್ಕಿದೆ. ಗದಗದಲ್ಲಿ ರಾತ್ರೋ ರಾತ್ರಿ ಕಾಂಗ್ರೆಸ್ ನಾಯಕರು ಆಪರೇಷನ್ ಹಸ್ತ ನಡೆಸಿದ್ದು, ಮಾಜಿ ಸಚಿವ ಹೆಚ್.ಕೆ. ಪಾಟೀಲ್‍, ಪ್ರಭಾವಿ ಲಿಂಗಾಯತ ಮುಖಂಡರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಮಾಜಿ ಶಾಸಕ ಮತ್ತು ಪ್ರಭಾವಿ ಲಿಂಗಾಯತ ಮುಖಂಡ ಶ್ರೀಶೈಲಪ್ಪ ಬಿದರೂರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹೆಚ್‍.ಕೆ. ಪಾಟೀಲ್ ಜೊತೆ ಶ್ರೀಶೈಲಪ್ಪ ಮಾತುಕತೆ ನಡೆಸಿರುವ…

  • ಸುದ್ದಿ

    ‘ಇಂಟರ್ ನ್ಯಾಷನಲ್ ರೆಲಿಜಿಯಸ್ ಫ್ರೀಡಂಅವಾರ್ಡ್’ ತನ್ನದಾಗಿಸಿಕೊಂಡ 83 ವರ್ಷದ ಅಬೂಬಕರ್ ಅಬ್ದುಲ್ಲಹಿ….!

    ದಾಳಿಕೋರರಿಂದ ನೂರಾರು ಕ್ರೈಸ್ತರನ್ನು ರಕ್ಷಿಸಿದ ಮುಸ್ಲಿಂ ಧರ್ಮಗುರುವಿಗೆ ಅತ್ಯುನ್ನತ ಪ್ರಶಸ್ತಿ ನೀಡಿದ ಅಮೆರಿಕಾಲಾಗೊಸ್, ನೈಜೀರಿಯಾ, ಜು.19:  ಮಧ್ಯ ನೈಜೀರಿಯಾದಲ್ಲಿ ದಾಳಿಯೊಂದರ ಸಂದರ್ಭ ತನ್ನ ನಿವಾಸ ಹಾಗೂ ಮಸೀದಿಯಲ್ಲಿ 262 ಕ್ರೈಸ್ತರಿಗೆ ಆಶ್ರಯವೊದಗಿಸಿದ 83 ವರ್ಷದ ಮುಸ್ಲಿಂ ಧರ್ಮಗುರು ಇಮಾಮ್ ಅಬೂಬಕರ್ ಅಬ್ದುಲ್ಲಾಹಿ ಎಂಬವರನ್ನು  ಅಮೆರಿಕಾ ಸರಕಾರ ಗೌರವಿಸಿದೆ. ಅಬ್ದುಲ್ಲಾಹಿ ಅವರ ಜತೆ ಸುಡಾನ್, ಇರಾಕ್, ಬ್ರೆಝಿಲ್ ಹಾಗೂ ಸೈಪ್ರಸ್ ದೇಶಗಳ ನಾಲ್ಕು ಮಂದಿ ಇತರ ಧಾರ್ಮಿಕ ನಾಯಕರಿಗೆ  2019ನೇ ವರ್ಷದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಪ್ರಶಸ್ತಿ (ಇಂಟರ್…