ಸುದ್ದಿ

ಬೆಂಗಳೂರಿನಲ್ಲಿ ವಿದ್ಯುತ್‍ಗೆ ಮತ್ತೊಬ್ಬ ಯುವಕ ಬಲಿ

44

ಈಗಾಗಲೇ ನಗರದಲ್ಲಿ ವಿದ್ಯುತ್ ತಗಲಿ ಮಕ್ಕಳು ಸೇರಿದಂತೆ ವಯಸ್ಕರು ಮೃತಪಟ್ಟಿದ್ದಾರೆ. ಇಂದು ಕೂಡ ವಿದ್ಯುತ್ ತಗಲಿ ಮತ್ತೊಬ್ಬ ಬಾಲಕ ಮೃತಪಟ್ಟಿದ್ದಾನೆ.

ಬೆಂಗಳೂರಿನ ಜೆ.ಪಿ ನಗರದ ಜಂಬೂಸವಾರಿ ದಿಣ್ಣೆ ಬಳಿ ಶನಿವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮುನಿರಾಜು ಎಂಬವರ ಪುತ್ರ ಅಕ್ಷಯ್ (8) ಮೃತ ದುರ್ದೈವಿ. ಬಾಲಕ ಸೆಂಟ್ ಫ್ರಾನ್ಸಿಸ್ ಶಾಲೆಯಲ್ಲಿ ಸ್ನೇಹಿತರ ಜೊತೆ ಆಟವಾಡುತ್ತಿದ್ದನು.

ಈ ವೇಳೆ ಸ್ಟೇರ್ ಕೇಸ್ ಹತ್ತುವಾಗ ವಿದ್ಯುತ್ ಶಾಕ್ ಹೊಡೆದಿದೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅಕ್ಷಯ್ ಇಂದು ಮೃತಪಟ್ಟಿದ್ದಾನೆ. ಶಾಲಾ ಮಂಡಳಿ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಕುರಿತು ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಹಿಂದೆ ಬೆಸ್ಕಾಂ ನಿರ್ಲಕ್ಷ್ಯಕ್ಕೆ ಎಲ್‍ಆರ್ ಬಂಡೆಯಲ್ಲಿ ಆಟವಾಡುತ್ತಿದ್ದ ಬಾಲಕ ವಿಕ್ರಂ, ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದನು. ನಂತರ ಮತ್ತಿಕೆರೆಯ ನೇತಾಜಿ ಸರ್ಕಲ್ ಬಳಿ ವಿದ್ಯುತ್ ತಗುಲಿ ಲಿಖಿಲ್(14) ಮೃತಪಟ್ಟಿದ್ದನು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸ್ಪೂರ್ತಿ

    ಪಂಕ್ಚರ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ ಕುಸುಮ ಹಳ್ಳಿ ಹುಡುಗಿ ದ್ವಿತೀಯ ಪಿಯುಸಿನಲ್ಲಿ ರಾಜ್ಯಕ್ಕೆ ಪ್ರಥಮ..!

    ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಉಡುಪಿ ಮೊದಲ ಸ್ಥಾನ ಪಡೆದುಕೊಂಡಿದ್ದರೆ ಚಿತ್ರದುರ್ಗ ಕೊನೆಯ ಸ್ಥಾನ ಪಡೆದು ಕಳಪೆ ಫಲಿತಾಂಶ ಪಡೆದ ಜಿಲ್ಲೆಯಾಗಿದೆ. ಈ ಸಲದ ದ್ವಿತೀಯ ಪರೀಕ್ಷೆಯಲ್ಲಿ ಕೂಡ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಅದರಲ್ಲಿಯೂ ಪಂಕ್ಚರ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ ಕುಸುಮ ಎಂಬುವವರು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವುದು ವಿಶೇಷವಾಗಿದೆ. ಬಳ್ಳಾರಿಯ ಕೊಟ್ಟೂರಿನಲ್ಲಿ ಸೈಕಲ್ ಶಾಪ್‌ನಲ್ಲಿ ನಡೆಸುತ್ತಿದ್ದ ದೇವೇಂದ್ರಪ್ಪ ಮತ್ತು ಜಯಮ್ಮ ಎಂಬುವವರ ಪುತ್ರಿ ಕುಸುಮಾ ಸೈಕಲ್ ಶಾಪ್‌ನಲ್ಲಿ ಪಂಕ್ಚರ್ ಹಾಕುವ ಕೆಲಸ…

  • ಸುದ್ದಿ

    ಸಿಎಂ ಪರಿಹಾರ ನಿಧಿಗೆ ಎಂಟಿಬಿ ನಾಗರಾಜ್ ನೀಡಿದ ಹಣ ಎಷ್ಟು ಗೊತ್ತಾ…?

    : ಹೊಸಕೋಟೆ ಕ್ಷೇತ್ರದ ಕಾಂಗ್ರೆಸ್​​ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಅವರು ಉತ್ತರ ಕರ್ನಾಟಕದ ನೆರೆ ಪೀಡಿತ ಪ್ರದೇಶಗಳಿಗೆ ಪರಿಹಾರ ಧನ ನೀಡಿದ್ದಾರೆ. ಮುಖ್ಯಮಂತ್ರಿ ಪರಿಹಾರ ನಿಧಿಗೆ ಎಂಟಿಬಿ ನಾಗರಾಜ್ ಅವರು 1 ಕೋಟಿ ರೂಪಾಯಿ ಚೆಕ್​ ನೀಡುವ ಮೂಲಕ ಪರಿಹಾರವನ್ನು ನೀಡಿದ್ದಾರೆ. ಪ್ರವಾಹದಿಂದಾಗಿ ರಾಜ್ಯದಲ್ಲಿ ರೈತರ ಬೆಳೆ ನಾಶ, ಜಾನುವಾರುಗಳು, ಮನೆ, ಸಾವು-ನೋವು ಮತ್ತಿತರ ಸಮಸ್ಯೆಯನ್ನು ಎದುರಿಸುತ್ತಿರುವವರಿಗೆ ನೆರವಾಗಲಿ ಎಂಬ ಕಾರಣಕ್ಕೆ ಪರಿಹಾರವನ್ನು ಕೊಟ್ಟಿದ್ದಾರೆ. ಕಳೆದ ವಾರಗಳಿಂದ ಉತ್ತರ ಕರ್ನಾಟಕ ಭಾಗ, ಮಲೆನಾಡು ಪ್ರದೇಶ ಹಾಗೂ ಕರಾವಳಿ…

  • ಸುದ್ದಿ

    ಕರ್ನಾಟಕಕ್ಕೆ ಆಘಾತ, ತಮಿಳುನಾಡಿಗೆ ಕಾವೇರಿ ನೀರು ಬಿಡಲು ಆದೇಶ…….!

    ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಕೇಂದ್ರ ಜಲ ಆಯೋಗದ ಕಚೇರಿಯಲ್ಲಿಂದು ನಡೆದ ಈ ಜಲ ವರ್ಷದ ಅಂತಿಮ ಸಭೆಯಲ್ಲಿ ಕರ್ನಾಟಕಕ್ಕೆ ಆಘಾತಕಾರಿ ಸುದ್ದಿ ಬಂದಿದೆ. ತಮಿಳುನಾಡಿಗೆ ನಿಗದಿಯಂತೆ ಕಾವೇರಿ ನದಿ ನೀರು ಬಿಡುವಂತೆ ಕೇಂದ್ರ ಜಲ ಆಯೋಗದ ಮುಖ್ಯಸ್ಥ ಮಸೂದ್ ಹುಸೇನ್ ಆದೇಶಿಸಿದ್ದಾರೆ. ಈ ಮೂಲಕದ ತಮಿಳುನಾಡಿನ ಬೇಡಿಕೆಗೆ ಕಾವೇರಿ ನದಿ ಪ್ರಾಧಿಕಾರ ಮಣಿದಿದೆ. ತಮಿಳುನಾಡಿಗೆ 9.19 ಟಿಎಂಸಿ ನೀರು ಬಿಡಲು ಆದೇಶಿಸಲಾಗಿದೆ.ಜೂನ್ ತಿಂಗಳ ಕೋಟಾ 9.25 ಟಿಎಂಸಿ ನೀರು ಬಿಡಬೇಕಾಗಿತ್ತು. ಆದರೆ, ಬಹುತೇಕ ಎಲ್ಲಾ…

  • ಆಧ್ಯಾತ್ಮ

    ಹಿಂದೂ ಧರ್ಮದಲ್ಲಿ ಯಾರಾದ್ರು ಸತ್ತಾಗ ಕೇಶ ಮುಂಡನ ಮಾಡುತ್ತಾರೆ, ಏಕೆ ಗೊತ್ತಾ?

    ನಮ್ಮ ಹಿಂದೂ ಧರ್ಮದಲ್ಲಿ ಇರುವಷ್ಟು ಸಂಪ್ರದಾಯಗಳು ಬೇರೆ ಯಾವುದೇ ಧರ್ಮದಲ್ಲಿ ಇಲ್ಲವೆಂದರೆ ತಪ್ಪಾಗಲಾರದು. ಯಾಕೆಂದರೆ ಹುಟ್ಟಿನಿಂದ ಸಾವಿನ ತನಕ ಹಿಂದೂಗಳು ಹಲವಾರು ರೀತಿಯ ಸಂಪ್ರದಾಯಗಳನ್ನು ಪಾಲಿಸಿಕೊಂಡು ಹೋಗುತ್ತಾರೆ. ಹುಟ್ಟಿದ ಮಗುವಿಗೆ ನಾಮಕರಣದಿಂದ ಹಿಡಿದು ಸತ್ತ ವ್ಯಕ್ತಿಗೆ ಪಿಂಡ ಬಿಡುವ ತನಕ ಪ್ರತಿಯೊಂದು ಸಂಪ್ರದಾಯಗಳು ಹಿಂದೂಗಳಲ್ಲಿ ಇದೆ.

  • ಸುದ್ದಿ

    ಗರ್ಭಿಣಿಯ ಹೊಟ್ಟೆಗೆ ಒದ್ದು ಗರ್ಭಪಾತವಾಗುವಂತಹ ಪಾಪದ ಕರ್ಮ ಮಾಡಿದ ಮಹಿಳಾ ಐಪಿಎಸ್‌ ಅಧಿಕಾರಿ, ಇದಕ್ಕೆ ಕಾರಣವಾದರೂ ಏನು ?

    ಹೆಣ್ಣಾಗಿದ್ದುಕೊಂಡ ಆ ಅಧಿಕಾರಿ ಗರ್ಭಿಣಿಯ ಹೊಟ್ಟೆಗೆ ಒದ್ದು ಗರ್ಭಪಾತವಾಗುವಂತಹ ಪಾಪದ ಕರ್ಮ ಮಾಡಿದ್ದಾರೆ.ಹಾಗಂತ ಈಕೆಯೇನೂ ಅನಕ್ಷರಸ್ಥರಲ್ಲ. ಐಪಿಎಸ್ ಪಾಸ್ ಮಾಡಿಕೊಂಡು ಹಿರಿಯ ಪೊಲೀಸ್ ಅಧಿಕಾರಿಯಾಗಿರುವವರು. ಅಧಿಕಾರದ ಮದವನ್ನು ನೆತ್ತಿಗೇರಿಸಿಕೊಂಡು ಈ ಕೆಲಸ ಮಾಡಿದ್ದಾರೆ. ಈ ಘಟನೆ ಒಡಿಶಾದಲ್ಲಿ ನಡೆದಿದೆ. ಕಳೆದ ಜುಲೈ 3 ರಂದು ಕನಿಕಾ ಗ್ರಾಮದಲ್ಲಿ ವೇಗವಾಗಿ ಬಂದ ಎಸ್.ಯು.ವಿ. ವಾಹನ 19 ವರ್ಷದ ಯುವಕನ ಮೇಲೆ ಹರಿದ ಪರಿಣಾಮ ಆತ ಮೃತಪಟ್ಟಿದ್ದ. ಇದನ್ನು ಖಂಡಿಸಿ ಕನಿಕಾ ಗ್ರಾಮಸ್ಥರು ಪ್ರತಿಭಟನೆ ನಡೆಸಿ ತಪ್ಪಿತಸ್ಥರನ್ನು ಬಂಧಿಸುವಂತೆ ಆಗ್ರಹಿಸಿದ್ದರಲ್ಲದೇ ಈ…

  • ಜ್ಯೋತಿಷ್ಯ, ಭವಿಷ್ಯ

    ದಿನ ಭವಿಷ್ಯ ಶನಿವಾರ, ಈ ದಿನದ ರಾಶಿ ಭವಿಷ್ಯದ ಜೊತೆಗೆ ನಿಮ್ಮ ಅದೃಷ್ಟದ ಸಂಖ್ಯೆ ಯಾವುದೆಂದು ತಿಳಿಯಿರಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಆಧ್ಯಾತ್ಮಿಕಚಿಂತಕರು 9663218892ನಿಮ್ಮ ಜೀವನದ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಿಕ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಹಾಗೂ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892 ಮೇಷ(5 ಜನವರಿ, 2019) ನಿಮ್ಮಲ್ಲಿ ಸಾಮರ್ಥ್ಯದ ಕೊರತೆಯಿರದೇ ಇಚ್ಛಾಶಕ್ತಿಯ ಕೊರತೆಯಿದೆಯೆಂದು ನೀವು ಅರ್ಥಮಾಡಿಕೊಳ್ಳಬೇಕು….