ಸುದ್ದಿ

ಇಲ್ಲಿದೆ ಸಿಹಿ ಸುದ್ದಿ! ಪೆಟ್ರೋಲ್-ಡಿಸೇಲ್ ಬೆಲೆ ಇಳಿಕೆ…!

109

ಲೋಕಸಭಾ ಚುನಾಣಾ ಫಲಿತಾಂಶ ಬಂದ ನಂತರದ ದಿನಗಳಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯೆತ್ತ ಮುಖ ಮಾಡಿ, ರಾಜ್ಯದಲ್ಲಿ ಮೇ 23 ರಿಂದ 28ವರೆಗೆ ಕೇವಲ ಆರು ದಿನಗಳಲ್ಲಿ 72 ಪೈಸೆ ಪೇಟ್ರೊಲ್ ದರ ಏರಿಕೆ ಕಂಡಿತ್ತು. ಆದರೆ ಕಳೆದೆರಡು ದಿನಗಳಿಂದ ತೈಲ ದರ ಇಳಿಕೆಯೆತ್ತ ಮುಖ ಮಾಡಿರುವುದು ಗ್ರಾಹಕರಲ್ಲಿ ಸಂತಸ ಮೂಡಿಸಿದೆ. ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಕಂಡಾಗ ವಾಹನ ಸವಾರರ ಆಕ್ರೋಶ ಹೆಚ್ಚಾಗತ್ತೆ, ಇಳಿಕೆ ಕಂಡರೆ ಅವರ ಮೊಗದಲ್ಲಿ ಮಂದಹಾಸ ಮೂಡುತ್ತದೆ. ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯೆತ್ತ ಮುಖ ಮಾಡಿ ಸಾಗಿರುವುದು ವಾಹನ ಸವಾರರ ಕಳವಳಕ್ಕೆ ಕಾರಣವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಇಳಿಕೆಯಾದರೆ, ಅದಕ್ಕನುಗುಣವಾಗಿ ದೇಶೀ ಮಾರುಕಟ್ಟೆಯಲ್ಲೂ ತೈಲ ಬೆಲೆ ಇಳಿಕೆಯಾಗುತ್ತದೆ. ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿದ್ದು, ಡಾಲರ್ ಬೆಲೆ ಕುಸಿಯುತ್ತಿರುವ ಕಾರಣ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾಗುತ್ತಿದೆ.

ಕನ್ನಡಗುಡ್ ರಿಟರ್ನ್ಸ್.ಇನ್ ಮೂಲಕ ಪ್ರಮುಖ ನಗರಗಳಲ್ಲಿನ ಪೆಟ್ರೋಲ್, ಡೀಸೆಲ್ ದರಗಳ ಮಾಹಿತಿಯನ್ನು ಪ್ರತಿದಿನ ನೀಡಲಾಗುತ್ತದೆ. ಇವತ್ತೂ ಯಾವ ಯಾವ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ (petrol, diesel price) ಎಷ್ಟೆಷ್ಟು ಏರಿಳಿಕೆಯಾಗಿದೆ ಎಂಬುದನ್ನು ನೋಡೋಣ.. ತೈಲ ಬೆಲೆ ಏರಿಕೆಗೆ ಕಾರಣ ಸಾಮಾನ್ಯವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ-ಇಳಿಕೆ ಹಾಗು ಡಾಲರ್ ಎದುರು ರೂಪಾಯಿ ಮೌಲ್ಯಗಳ ಕುಸಿತ ಪೆಟ್ರೋಲ್ ಡೀಸೆಲ್ ದರಗಳ ಮೇಲೆ ಪರಿಣಾಮ ಬೀರುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಿನ ಪ್ರಭಾವದಿಂದಾಗಿ ತೈಲ ಬೆಲೆಗಳು ಏರಿಳಿತಕ್ಕೆ ಒಳಗಾಗುತ್ತವೆ.

ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಮೈಸೂರು, ಮಂಗಳೂರು, ಬೆಂಗಳೂರು: ಪೆಟ್ರೋಲ್: 74.01/ಲೀಟರ್ ಡೀಸೆಲ್: 68.57/ಲೀಟರ್ ಹುಬ್ಬಳ್ಳಿ: ಪೆಟ್ರೋಲ್: 74.00/ಲೀಟರ್ ಡೀಸೆಲ್: 68.57/ಲೀಟರ್ ಧಾರವಾಡ: ಪೆಟ್ರೋಲ್: 74.00/ಲೀಟರ್ ಡೀಸೆಲ್: 68.57/ಲೀಟರ್ ಮೈಸೂರು: ಪೆಟ್ರೋಲ್: 73.75/ಲೀಟರ್ ಡೀಸೆಲ್: 68.30/ಲೀಟರ್ ಮಂಗಳೂರು: ಪೆಟ್ರೋಲ್: 73.68/ಲೀಟರ್ ಡೀಸೆಲ್: 68.17/ಲೀಟರ್ ಬೆಳಗಾವಿ: ಪೆಟ್ರೋಲ್: 74.10/ಲೀಟರ್ ಡೀಸೆಲ್: 68.69/ಲೀಟರ್ ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ಮಂಡ್ಯ, ತುಮಕೂರು ಕೋಲಾರ: ಪೆಟ್ರೋಲ್: 73.94/ಲೀಟರ್ ಡೀಸೆಲ್: 68.492/ಲೀಟರ್ ರಾಮನಗರ: ಪೆಟ್ರೋಲ್: 74.21/ಲೀಟರ್ ಡೀಸೆಲ್: 68.77/ಲೀಟರ್ ಚಿಕ್ಕಬಳ್ಳಾಪುರ: ಪೆಟ್ರೋಲ್: 74.056/ಲೀಟರ್ ಡೀಸೆಲ್: 68.60/ಲೀಟರ್ ಮಂಡ್ಯ: ಪೆಟ್ರೋಲ್: 73.93/ಲೀಟರ್ ಡೀಸೆಲ್: 68.48/ಲೀಟರ್ ತುಮಕೂರು: ಪೆಟ್ರೋಲ್: 74.42/ಲೀಟರ್ ಡೀಸೆಲ್: 68.98/ಲೀಟರ್ ದಾವಣಗೆರೆ: ಪೆಟ್ರೋಲ್: 75.14/ಲೀಟರ್ ಡೀಸೆಲ್: 69.59/ಲೀಟರ್ ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಹಾಸನ, ಕಾರವಾರ, ಕೊಡಗು ಶಿವಮೊಗ್ಗ: ಪೆಟ್ರೋಲ್: 74.71/ಲೀಟರ್ ಡೀಸೆಲ್: 69.24/ಲೀಟರ್ ಚಿಕ್ಕಮಗಳೂರು: ಪೆಟ್ರೋಲ್: 74.89/ಲೀಟರ್ ಡೀಸೆಲ್: 69.31/ಲೀಟರ್ ಉಡುಪಿ: ಪೆಟ್ರೋಲ್: 73.59/ಲೀಟರ್ ಡೀಸೆಲ್: 68.097/ಲೀಟರ್ ಹಾಸನ: ಪೆಟ್ರೋಲ್: 73.94/ಲೀಟರ್ ಡೀಸೆಲ್: 68.36/ಲೀಟರ್ ಕಾರವಾರ: ಪೆಟ್ರೋಲ್: 75.02/ಲೀಟರ್ ಡೀಸೆಲ್: 69.56/ಲೀಟರ್ ಕೊಡಗು, ವಿರಾಜಪೇಟೆ: ಪೆಟ್ರೋಲ್: 74.49/ಲೀಟರ್ ಡೀಸೆಲ್: 68.95/ಲೀಟರ್ ಚಾಮರಾಜನಗರ: ಪೆಟ್ರೋಲ್: 74.21/ಲೀಟರ್ ಡೀಸೆಲ್: 68.77/ಲೀಟರ್ ಚಿತ್ರದುರ್ಗ, ಹಾವೇರಿ, ಬಿಜಾಪುರ, ಬಾಗಲಕೋಟೆ ಚಿತ್ರದುರ್ಗ: ಪೆಟ್ರೋಲ್: 75.23/ಲೀಟರ್ ಡೀಸೆಲ್: 69.68/ಲೀಟರ್ ಹಾವೇರಿ: ಪೆಟ್ರೋಲ್: 74.51/ಲೀಟರ್ ಡೀಸೆಲ್: 69.10/ಲೀಟರ್ ಬಿಜಾಪುರ: ಪೆಟ್ರೋಲ್: 74.0/ಲೀಟರ್ ಡೀಸೆಲ್: 68.63/ಲೀಟರ್ ಬಾಗಲಕೋಟೆ: ಪೆಟ್ರೋಲ್: 75.89/ಲೀಟರ್ ಡೀಸೆಲ್: 70.73/ಲೀಟರ್ ಬಾದಾಮಿ: ಪೆಟ್ರೋಲ್: 75.89/ಲೀಟರ್ ಡೀಸೆಲ್: 70.73/ಲೀಟರ್ ಹೈದರಾಬಾದ್ ಕರ್ನಾಟಕ ಗದಗ: ಪೆಟ್ರೋಲ್: 74.3/ಲೀಟರ್ ಡೀಸೆಲ್: 68.89/ಲೀಟರ್ ಬಳ್ಳಾರಿ: ಪೆಟ್ರೋಲ್: 75.32/ಲೀಟರ್ ಡೀಸೆಲ್: 69.93/ಲೀಟರ್ ಕೊಪ್ಪಳ: ಪೆಟ್ರೋಲ್: 74.73/ಲೀಟರ್ ಡೀಸೆಲ್: 69.32/ಲೀಟರ್ ರಾಯಚೂರು ಪೆಟ್ರೋಲ್: 74.15/ಲೀಟರ್ ಡೀಸೆಲ್: 68.747/ಲೀಟರ್ ಬೀದರ ಪೆಟ್ರೋಲ್: 74.714/ಲೀಟರ್ ಡೀಸೆಲ್: 69.32/ಲೀಟರ್ ಯಾದಗಿರಿ: ಪೆಟ್ರೋಲ್: 74.37/ಲೀಟರ್ ಡೀಸೆಲ್: 68.96/ಲೀಟರ್ ಗುಲ್ಬರ್ಗ ಪೆಟ್ರೋಲ್: 74.04/ಲೀಟರ್ ಡೀಸೆಲ್: 68.62/ಲೀಟರ್ ದೇಶದ ಪ್ರಮುಖ ನಗರಗಳು ಮುಂಬೈ: ಪೆಟ್ರೋಲ್: 77.28/ಲೀಟರ್ ಡೀಸೆಲ್: 69.58/ಲೀಟರ್ ದೆಹಲಿ: ಪೆಟ್ರೋಲ್: 71.62/ಲೀಟರ್ ಡೀಸೆಲ್: 66.36/ಲೀಟರ್ ಚೆನ್ನೈ: ಪೆಟ್ರೋಲ್: 74.39/ಲೀಟರ್ ಡೀಸೆಲ್: 70.19/ಲೀಟರ್ ಹೈದರಾಬಾದ್: ಪೆಟ್ರೋಲ್: 76.05/ಲೀಟರ್ ಡೀಸೆಲ್: 72.29/ಲೀಟರ್ ಕೊಲ್ಕತ್ತಾ: ಪೆಟ್ರೋಲ್: 73.74/ಲೀಟರ್ ಡೀಸೆಲ್: 68.21/ಲೀಟರ್ ಗುವಾಹಟಿ: ಪೆಟ್ರೋಲ್: 71.28/ಲೀಟರ್ ಡೀಸೆಲ್: 67.97/ಲೀಟರ್ ಗಾಂಧಿನಗರ (ಗುಜರಾತ) ಪೆಟ್ರೋಲ್: 69.25/ಲೀಟರ್ ಡೀಸೆಲ್: 69.62/ಲೀಟರ್ ಜೈಪುರ: ಪೆಟ್ರೋಲ್: 72.49/ಲೀಟರ್ ಡೀಸೆಲ್: 68.93/ಲೀಟರ್ ಪಣಜಿ: ಪೆಟ್ರೋಲ್: 65.15/ಲೀಟರ್ ಡೀಸೆಲ್: 65.57/ಲೀಟರ್ ಲಖನೌ: ಪೆಟ್ರೋಲ್: 71.03/ಲೀಟರ್ ಡೀಸೆಲ್: 65.26/ಲೀಟರ್

ತೈಲ ಆಮದು ನಿಷೇಧ ಎಫೆಕ್ಟ್? ಅಮೆರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಇರಾನ್‌ನಿಂದ ತೈಲ ಆಮದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವಂತೆ ಸೂಚನೆ ನೀಡಿದ್ದಾರೆ. ಇರಾನ್‌ನಿಂದ ತೈಲ ಆಮದು ಸ್ಥಗಿತಗೊಂಡರೆ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ದರ ಏರಿಕೆಯಾಗಬಹುದು. ಮೆಕ್ಸಿಕೊದಿಂದ 7 ಲಕ್ಷ ಟನ್‌ ಕಚ್ಚಾ ತೈಲ, ಸೌದಿ ಅರೇಬಿಯಾದಿಂದ 20 ಲಕ್ಷ ಟನ್‌ ತೈಲ ಖರೀದಿಸುವ ಆಯ್ಕೆಗಳನ್ನು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಹೊಂದಿದೆ ಎನ್ನಲಾಗಿದೆ. ಅಲ್ಲದೇ ಕುವೈತ್ ನಿಂದ 15 ಲಕ್ಷ ಟನ್‌, ಯುಎಇಯಿಂದ 10 ಲಕ್ಷ ಟನ್‌ ಖರೀದಿಸಲಿದೆ. ಇರಾನ್‌ನಿಂದ ತೈಲ ಆಮದು ಸ್ಥಗಿತಗೊಳಿಸಿದರೆ ಭಾರತ ಇತರ ರಾಷ್ಟ್ರಗಳಿಂದ ಆಮದು ಹೆಚ್ಚಿಸಬೇಕಾಗುತ್ತದೆ. ತೈಲ ಆಮದು ವೆಚ್ಚ ಏರಿಕೆಯಾಗಲಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ, ಸ್ಪೂರ್ತಿ

    ಕೇವಲ ಒಂದೇ ವಾರದಲ್ಲಿ ತನ್ನ ಊರಿಗೆ ಏಕಾಂಗಿಯಾಗಿ ರಸ್ತೆ ನಿರ್ಮಿಸಿದ ಮಾಂಜಿ..!

    ತನ್ನ ಹೆಂಡತಿಗಾಗಿ ರಸ್ತೆಯನ್ನೇ ನಿರ್ಮಿಸಿದ್ದ ಮಾಂಜಿಯ ಕಥೆ ನಮಗೆಲ್ಲಾ ಗೊತ್ತಿದೆ. ಇದೀಗ ಕೀನ್ಯಾದಲ್ಲೂ ಒಬ್ಬ ಮಾಂಜಿ ಇದ್ದಾರೆ. ಆದ್ರೆ, ಈತ ತನ್ನ ಹೆಂಡತಿಗಾಗಿ ಅಲ್ಲ, ಇಡೀ ಊರಿನ ಜನರಿಗೆ ನೆರವಾಗಲಿ ಅಂತ ತಾನೇ ರಸ್ತೆ ನಿರ್ಮಿಸಿ ಈಗ ಎಲ್ಲರ ದೃಷ್ಟಿಯಲ್ಲೂ ಹೀರೋ ಆಗಿದ್ದಾರೆ. ಕೀನ್ಯಾದ ಕಗಂಡಾ ಗ್ರಾಮದ ಬಳಿ ದಟ್ಟ ಅರಣ್ಯ ಪ್ರದೇಶವಿದೆ. ಅದರ ಬಳಿ ವಾಸಿಸುವ ಜನರಿಗೆ ಊರಿನ ಸಂಪರ್ಕ ಮಾಡೋಕೆ ಸರಿಯಾದ ರಸ್ತೆಯೇ ಇರಲಿಲ್ಲ. ಈ ಬಗ್ಗೆ ಗ್ರಾಮದ ನಿಕೋಲಸ್ ಮುಚಾಮಿ ಹಲವು ಬಾರಿ…

  • ಸುದ್ದಿ

    ಸ್ಯಾಂಡಲ್ ವುಡ್ ಮಾಸ್ಟರ್ ಥ್ರಿಲ್ಲರ್ ಮಂಜು ಅವರಿಗೆ ಡಾಕ್ಟರೇಟ್ ಗೌರವ. ಈ ನ್ಯೂಸ್ ನೋಡಿ.

    ಕನ್ನಡ ಮಾತ್ರವಲ್ಲದೇ ಪರಭಾಷೆಗಳಲ್ಲೂ ಕೂಡಾ ಸಾಹಸ ನಿರ್ದೇಶನ ಮಾಡಿ, ಸಿನಿಮಾ ರಂಗದಲ್ಲಿ ತನ್ನದೇ ಆದಂತಹ ಹೆಸರು, ಖ್ಯಾತಿ ಮತ್ತು ಸ್ಥಾನವನ್ನು ಪಡೆದಿರುವ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಅವರು. ದಶಕಗಳಿಂದ ಚಿತ್ರರಂಗದಲ್ಲಿ ಸಾಹಸ ನಿರ್ದೇಶನ ಮಾಡಿರುವ ಅವರು ನಟ ಹಾಗೂ ನಿರ್ದೇಶಕನಾಗಿ ಕೂಡಾ ಹೆಸರು ಮಾಡಿದ್ದಾರೆ. ಥ್ರಿಲ್ಲರ್ ಮಂಜು ಅವರ ಸಿನಿಮಾ ರಂಗದ ಈ ಸಾಧನೆ, ಅವರ ಶ್ರಮ ಹಾಗೂ ಪರಿಶ್ರಮಕ್ಕೆ ತಕ್ಕ ಫಲವಾಗಿ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಸತ್ಕರಿಸಲಾಗಿದೆ. ಥ್ರಿಲ್ಲರ್ ಮಂಜು ಅವರಿಗೆ ಸಂದಿರುವ…

  • ಸೌಂದರ್ಯ

    ನೀವು ನಿಜವೆಂದು ನಂಬಿರುವ ಸೌಂದರ್ಯದ 5 ಟಿಪ್ಸ್ ಶುದ್ಧ ಸುಳ್ಳು,..ಅದೇನೆಂದು ತಿಳಿಯಿರಿ ..?

    ಸುಂದರವಾಗಿ ಕಾಣಲು ಎಲ್ಲರು ಇಷ್ಟಪಡ್ತಾರೆ. ಅದಕ್ಕಾಗಿ ಎಲ್ಲರೂ ಒಂದಲ್ಲಾ ಒಂದು ಟಿಪ್ಸ್ ಫಾಲೋ ಮಾಡ್ತಾರೆ. ಆದರೆ ಸರಿಯಾದ ಜ್ಞಾನವಿಲ್ಲದೇ ಜನರು ಈ 5 ಟಿಪ್ಸ್ ಅನ್ನು ನಂಬಿ ಇದನ್ನು ಅನುಸರಿಸುತ್ತಾರೆ. ಆದರೆ ಈ 5 ಟಿಪ್ಸ್ ಈಗ ಶುದ್ಧ ಸುಳ್ಳು ಎಂದು ತಿಳಿದುಬಂದಿದೆ. 1.ನಿಮ್ಮಸ್ಕಿನ್ ನನ್ನು ನಿಂಬೆಹಣ್ಣಿನಿಂದ ಉಜ್ಜುವುದು:  ಜನರು ಪಿಂಪಲ್ ಫ್ರೀ ತ್ವಚೆ ಪಡೆಯಲು ನಿಂಬೆಹಣ್ಣಿನಿಂದ ಸ್ಕ್ರಬ್ಬಿಂಗ್ ಮಾಡಿಕೊಳ್ಳುತ್ತಾರೆ. ಆದರೆ ಈ ರೀತಿ ಮಾಡುವುದರಿಂದ ನಿಮ್ಮ ತ್ವಚೆಗೆ ಹಾನಿಯಾಗುತ್ತದೆ. ಏಕೆಂದರೆ ನಿಂಬೆಹಣ್ಣಿನಲ್ಲಿ ಸಿಟ್ರಿಕ್ ಆ್ಯಸಿಡ್ ಇರುತ್ತದೆ….

  • ಸುದ್ದಿ

    ಬಿಗ್ ನ್ಯೂಸ್: ಖಡಕ್ ಐಪಿಎಸ್ ಅಧಿಕಾರಿ ರಾಜೀನಾಮೆ ನಿಡಿದ ಅಣ್ಣಾಮಲೈ…..!

    ಕರ್ನಾಟಕದ ಸಿಂಗಂ ಎಂದೇ ಖ್ಯಾತರಾಗಿದ್ದ ಖಡಕ್ ಐಪಿಎಸ್ ಅಧಿಕಾರಿ ಅಣ್ಣಾಮಲೈ ತಮ್ಮ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆಂಬ ವದಂತಿ ಇಂದು ಬೆಳಗಿನಿಂದಲೂ ಹರಿದಾಡುತ್ತಿದ್ದು, ಇದೀಗ ಬಂದ ಮಾಹಿತಿಯಂತೆ ಅಣ್ಣಾಮಲೈ ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವುದು ಖಚಿತವಾಗಿದೆ. ಐಜಿ-ಡಿಜಿಪಿಗೆ ತಮ್ಮ ರಾಜೀನಾಮೆ ಪತ್ರವನ್ನು ರವಾನಿಸಿರುವ ಅಣ್ಣಾಮಲೈ, ಕಳೆದ ತಮ್ಮ ಹತ್ತು ವರ್ಷಗಳ ಸೇವಾವಧಿಯಲ್ಲಿ ಕುಟುಂಬದ ಜೊತೆಗೆ ಕಾಲ ಕಳೆಯಲು ಸಾಧ್ಯವಾಗದ ಕಾರಣ, ತಮ್ಮ ರಾಜೀನಾಮೆ ಸ್ವೀಕೃತಗೊಂಡ ಬಳಿಕ ಕುಟುಂಬ ಸದಸ್ಯರೊಂದಿಗೆ ಇರಲಿದ್ದಾರೆ ಎಂದು ಹೇಳಲಾಗಿದೆ. ಆ ಬಳಿಕ ಅಣ್ಣಾಮಲೈ ರಾಜಕೀಯ…

  • ಸುದ್ದಿ

    ಚಿಕಿತ್ಸೆ ಹೆಸರಿನಲ್ಲಿ ವೈದ್ಯ ಮಾಡ್ತಿದ್ದ ಕೊಳಕು ಕೆಲಸ…!

    ಮುಂಬೈನ ಓಶಿವಾರ ಪೊಲೀಸರು ವೈದ್ಯನೊಬ್ಬನನ್ನು ಬಂಧಿಸಿದ್ದಾರೆ. ಚಿಕಿತ್ಸೆ ಸ್ಥಳದಲ್ಲಿ ವೈದ್ಯ ಕ್ಯಾಮರಾ ಇಟ್ಟಿದ್ದನೆಂದು ಮಹಿಳೆ ಆರೋಪ ಮಾಡಿದ್ದಾಳೆ. ಮಹಿಳೆ ಕೂದಲು ತೆಗೆಸಿಕೊಳ್ಳಲು ಮುಂದಾಗಿದ್ದಳಂತೆ. ಇದೇ ಕಾರಣಕ್ಕೆ ಆಸ್ಪತ್ರೆಗೆ ಹೋಗಿದ್ದಾಳೆ. ಚಿಕಿತ್ಸಾ ಸ್ಥಳದಲ್ಲಿ ವೈದ್ಯರ ಜೊತೆ ಮೂವರು ಸಹಾಯಕರು ಇದ್ದರು ಎನ್ನಲಾಗಿದೆ. ಚಿಕಿತ್ಸೆ ವೇಳೆ ಮಹಿಳೆ ಬಟ್ಟೆ ಬಿಚ್ಚುತ್ತಿದ್ದಂತೆ ಮುಂದಿದ್ದ ಕ್ಯಾಮರಾ ಕಣ್ಣಿಗೆ ಬಿದ್ದಿದೆ. ತಕ್ಷಣ ಆ ಕ್ಯಾಮರಾ ಫೋಟೋವನ್ನು ಸೆರೆ ಹಿಡಿದ ಮಹಿಳೆ ಅಲ್ಲಿಂದ ಹೊರಗೆ ಬಂದಿದ್ದಾಳೆ. ಹದಿನೈದು ದಿನಗಳಿಗೊಮ್ಮೆ ಕ್ಯಾಮರಾದಲ್ಲಿರುವ ತುಣುಕುಗಳು ಸ್ವಯಂಚಾಲಿತವಾಗಿ ಅಳಿಸಿ ಹೋಗುತ್ತವೆ…

  • ಸ್ಪೂರ್ತಿ

    ಪಂಕ್ಚರ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ ಕುಸುಮ ಹಳ್ಳಿ ಹುಡುಗಿ ದ್ವಿತೀಯ ಪಿಯುಸಿನಲ್ಲಿ ರಾಜ್ಯಕ್ಕೆ ಪ್ರಥಮ..!

    ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಉಡುಪಿ ಮೊದಲ ಸ್ಥಾನ ಪಡೆದುಕೊಂಡಿದ್ದರೆ ಚಿತ್ರದುರ್ಗ ಕೊನೆಯ ಸ್ಥಾನ ಪಡೆದು ಕಳಪೆ ಫಲಿತಾಂಶ ಪಡೆದ ಜಿಲ್ಲೆಯಾಗಿದೆ. ಈ ಸಲದ ದ್ವಿತೀಯ ಪರೀಕ್ಷೆಯಲ್ಲಿ ಕೂಡ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಅದರಲ್ಲಿಯೂ ಪಂಕ್ಚರ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ ಕುಸುಮ ಎಂಬುವವರು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವುದು ವಿಶೇಷವಾಗಿದೆ. ಬಳ್ಳಾರಿಯ ಕೊಟ್ಟೂರಿನಲ್ಲಿ ಸೈಕಲ್ ಶಾಪ್‌ನಲ್ಲಿ ನಡೆಸುತ್ತಿದ್ದ ದೇವೇಂದ್ರಪ್ಪ ಮತ್ತು ಜಯಮ್ಮ ಎಂಬುವವರ ಪುತ್ರಿ ಕುಸುಮಾ ಸೈಕಲ್ ಶಾಪ್‌ನಲ್ಲಿ ಪಂಕ್ಚರ್ ಹಾಕುವ ಕೆಲಸ…