ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕಾಶ್ಮೀರಿ ದ೦ಗೆಕೋರರು ಮತ್ತು ಪಾಕಿಸ್ತಾನ ಸರ್ಕಾರವು ಕಾಶ್ಮೀರಿ ಪ್ರಾ೦ತ್ಯದ ಮೇಲೆ ನಿತ೦ತ್ರಣವನ್ನು ಹೊ೦ದಲು ಹವಣಿಸುತ್ತಿದೆ.ಅ೦ತರಾಜ್ಯ ಸಮಸ್ಯೆಗಳ೦ತೆ, ಭಾರತ ಮತ್ತು ಪಾಕಿಸ್ತಾನ ನಡುವೆ ಕಾಶ್ಮೀರದ ಬಿಕ್ಕಟ್ಟು 1947 ರಿಂದ ಉದ್ಬವಿಸಿದ ಸಮಸ್ಯೆಯಾಗಿದೆ. ಕಾಶ್ಮೀರದಲ್ಲಿನ ಕೆಲವು ಕೋಮುವಾದಿಗಳು ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಸೇರಿಸುವ೦ತೆಯು,ಕೆಲವು ಕಾಶ್ಮೀರಿಗಳೂ ತಾವೇ ಸ್ವತ೦ತ್ರರಾಗಲು ಹವಣೀಸುತ್ತಿದ್ದಾರೆ. ಆದ ಕಾರಣ ಭಾರತ ಸರ್ಕಾರ ಕಾಶ್ಮೀರದ ಬಿಕ್ಕಟ್ಟನ್ನು ಪರಿಹರಿಸುವುದಕ್ಕಾಗಿಯೇ ಹಲವು ಕಾನೂನು ನಿಯಮಗಳನ್ನು ಜಾರಿಗೆ ತ೦ದಿದೆ.

ಭಾರತದ ರಾಜ್ಯವಾಗಿ ಕಾಶ್ಮೀರ ಗುರುತಿಸಿಕೊಂಡಿದ್ದರೂ, ಈ ರಾಜ್ಯಕ್ಕೆ ಪ್ರತ್ಯೇಕ ಸ್ಥಾನಮಾನವಿದೆ. ಭಾರತದ ಬೇರೆ ರಾಜ್ಯಗಳಿರುವ ಕಾನೂನು ಈ ರಾಜ್ಯಕ್ಕೆ ಸಂಭಂದಪಡುವುದಿಲ್ಲ.

ಯಾವುದೇ ಒಂದು ರಾಜ್ಯಕ್ಕೆ ತಾತ್ಕಾಲಿಕವಾಗಿ ವಿಶೇಷ ಸ್ಥಾನಮಾನ ಕಲ್ಪಿಸಲು ಭಾರತದ ಸಂವಿಧಾನದ 21ನೇ ಪರಿಚ್ಛೇದ ಅನ್ವಯವಾಗುತ್ತದೆ. ಪ್ರಾಂತೀಯ ಸರಕಾರಕ್ಕೆ ಸಾಕಷ್ಟು ಅಧಿಕಾರವನ್ನು ದಯಪಾಲಿಸುವ ವಿಧಿಯೇ 370. ಇದರ ಪ್ರಕಾರ ಒಂದು ಪ್ರಾಂತ್ಯಕ್ಕೆ ತಾತ್ಕಾಲಿಕವಾಗಿ (ಆ ಸಂದರ್ಭಕ್ಕೆ ಅಗತ್ಯವಿದ್ದಂತೆ) ವಿಶೇಷ ಸ್ಥಾನಮಾನವನ್ನು ಕಲ್ಪಿಸಬಹುದು. ಅಂತಹ ಸ್ಥಾನ ಪಡೆದ ರಾಜ್ಯ, ದೇಶದ ಎಲ್ಲ ರಾಜ್ಯಗಳಿಗೂ ಅನ್ವಯವಾಗುವ ಕಾನೂನಿನಿಂದ ಮುಕ್ತ. ಕೆಲವು ಕ್ಷೇತ್ರಗಳ ಹೊರತಾಗಿ ಉಳಿದೆಲ್ಲ ವಿಚಾರಗಳನ್ನು ಅಲ್ಲಿನ ವಿಧಾನಸಭೆಗೇ ಬಿಡಬೇಕು.

ಈ ಸೌಲಭ್ಯ ಜಾರಿಗೆ ಬಂದಿದ್ದು, 1947ರಲ್ಲಿ. ಆಗ ಶೇಖ್ ಅಬ್ದುಲ್ಲಾ ಎಂಬುವರನ್ನು ಜಮ್ಮು ಕಾಶ್ಮೀರದ ಪ್ರಧಾನಿಯಾಗಿ ಮಹಾರಾಜಾ ಹರಿಸಿಂಗ್ ಹಾಗೂ ಜವಾಹರಲಾಲ್ ನೆಹರು ನೇಮಿಸಿದ್ದರು. ಅಂದು ರಾಜ್ಯದ ಪ್ರಧಾನಿಯಾಗಿ ಹೊಂದಿದ್ದ ಸ್ವಾಯತ್ತತೆಯನ್ನು ಎಲ್ಲ ಸಮಯಕ್ಕೂ ಉಳಿಸಿಕೊಳ್ಳುವ ಉದ್ದೇಶ ಹೊಂದಿದ್ದ ಅಬ್ದುಲ್ಲಾ 370ನೇ ವಿಧಿಯನ್ನು ಶಾಶ್ವತಗೊಳಿಸಬೇಕೆಂದು ವಾದಿಸಿದ್ದ. ಆದರೆ, ಇದಕ್ಕೆ ಕೇಂದ್ರ ಸರ್ಕಾರ ಒಪ್ಪಿಕೊಂಡಿರಲಿಲ್ಲ.
1947ರ ಆಗಸ್ಟ್ 14, 15ರಂದು ಕ್ರಮವಾಗಿ ಭಾರತ ಮತ್ತು ಪಾಕಿಸ್ತಾನ ಸ್ವತಂತ್ರಗೊಂಡವು. ಆ ವೇಳೆ ಕಾಶ್ಮೀರವನ್ನು ಒಂದು ಸ್ವತಂತ್ರ ರಾಜ್ಯವನ್ನಾಗಿ ಘೋಷಿಸಲಾಗಿತ್ತು. ಆ ರಾಜ್ಯದ ಮೇಲೆ ಎರಡೂ ದೇಶಗಳು ದಾಳಿ ಮಾಡಬಾರದೆಂಬ ನಿರ್ಣಯ ಕೈಗೊಳ್ಳಲಾಯಿತು. ಆದರೆ ಪಾಕಿಸ್ತಾನ ಕಾಶ್ಮೀರವನ್ನು ತನ್ನದಾಗಿಸಿಕೊಳ್ಳಬೇಕೆಂಬ ಪ್ರಯತ್ನವನ್ನು ಕೈಬಿಡಲಿಲ್ಲ.

1947 ಅ. 6ರಂದು ಪಾಕ್ ಬೆಂಬಲಿತ ‘ಆಜಾದ್ ಕಾಶ್ಮೀರ್’ ಎಂಬ ಪಡೆಯು ಪಾಕ್ ಮೇಲೆ ಮುಗಿಬಿತ್ತು. ಆಗ ಕಾಶ್ಮೀರವನ್ನು ಆಳುತ್ತಿದ್ದ ಮಹಾರಾಜ ಹರಿಸಿಂಗ್ ತಮ್ಮ ರಾಜ್ಯವನ್ನು ರಕ್ಷಿಸುವಂತೆ ಭಾರತವನ್ನು ಕೋರಿದರು. ಕಾಶ್ಮೀರವನ್ನು ಭಾರತಕ್ಕೆ ಸಂಪೂರ್ಣವಾಗಿ ಒಪ್ಪಿಸಿದರೆ ನೆರವು ನೀಡುವುದಾಗಿ ಆಗ ಭಾರತ ಸರಕಾರ ಹೇಳಿತ್ತು. ಇದಕ್ಕೆ ಹರಿಸಿಂಗ್ ಸುತರಾಂ ಒಪ್ಪಲಿಲ್ಲ.

ಈ ವಿಷಯದಲ್ಲಿ ಮಧ್ಯ ಪ್ರವೇಶಿಸಿದ ಅಂದಿನ ಪ್ರಧಾನಿ ಪಂಡಿತ್ ಜವಹರ್‌ಲಾಲ್ ನೆಹರೂ ಒಂದು ಒಪ್ಪಂದಕ್ಕೆ ಬಂದರು. ”ಭಾರತದೊಂದಿಗೆ ಜಮ್ಮು ಕಾಶ್ಮೀರ ವಿಲೀನವಾಗಬೇಕು, ಭಾರತದ ಸಂವಿಧಾನದ 370ನೇ ವಿಧಿ ಪ್ರಕಾರ ರಕ್ಷಣೆ, ವಿದೇಶಾಂಗ ಮತ್ತು ಸಂವಹನ ಕ್ಷೇತ್ರಗಳ ಹೊರತಾಗಿ ಇನ್ಯಾವುದೇ ವಿಷಯದಲ್ಲಿ ಭಾರತದ ಕಾನೂನುಗಳು ಕಾಶ್ಮೀರಕ್ಕೆ ಅನ್ವಯವಾಗುವುದಿಲ್ಲ.” ಆ ಕರಾರುಗಳಿಗೆ ಸಹಿ ಬಿದ್ದಾಗಿನಿಂದ ಜಮ್ಮು ಕಾಶ್ಮೀರಕ್ಕೆ 370ನೇ ವಿಧಿ ಅನ್ವಯವಾಗಿದೆ.

ಪ್ರತಿ ವಿಷಯದಲ್ಲಿಯೂ ಪ್ರತ್ಯೇಕ ಹೆಜ್ಜೆ ತುಳಿಯಲು ಕಾನೂನುಬದ್ಧ ಅಧಿಕಾರ ಹೊಂದಿರುವ ಕಾಶ್ಮೀರ ಈಗ ಕೈಲಿದ್ದರೂ ಇಲ್ಲದ ಸ್ಥಿತಿ. ಏಕೆಂದರೆ ಸಂವಿಧಾನದ 238ನೇ ವಿಧಿ ಬೇರೆಲ್ಲಾ ರಾಜ್ಯಗಳಿಗೆ ಅನ್ವಯವಾದರೂ ಜಮ್ಮು- ಕಾಶ್ಮೀರಕ್ಕಲ್ಲ. ಆ ರಾಜ್ಯಕ್ಕೆ ಅನ್ವಯವಾಗುವ ಕಾನೂನು ರೂಪಿಸುವ ಅಧಿಕಾರ ಸಂಸತ್‌ಗಿಲ್ಲ.
ಒಂದು ವೇಳೆ ಸಂಸತ್ ಈ ರಾಜ್ಯಕ್ಕೆ ಅನ್ವಯವಾಗುವ ಕಾನೂನು ರೂಪಿಸಲೇಬೇಕೆಂದಿದ್ದರೆ ಅದನ್ನು ರಾಷ್ಟ್ರಪತಿ ಮೂಲಕ ರಾಜ್ಯ ಸರಕಾರಕ್ಕೆ ಮುಟ್ಟಿಸಿ ಆ ರಾಜ್ಯದ ವಿಧಾನಸಭೆಯಲ್ಲಿ ಮಂಡನೆ ಮಾಡಬೇಕು. ಜತೆಗೆ ಕೆಲವು ಕಾನೂನುಗಳನ್ನು ಅಲ್ಲಿನ ಸರಕಾರದ ಅನುಮತಿ ಪಡೆದು ಸಂಸತ್‌ನಲ್ಲಿ ಮಂಡನೆ ಮಾಡಬಹುದು.
ಅಂದರೆ, ಭಾರತದ ಸಂವಿಧಾನವೇ ಒಂದಾದರೆ ಕಾಶ್ಮೀರಕ್ಕೇ ಪ್ರತ್ಯೇಕ ಸಂವಿಧಾನ. ಅದರ ತಿದ್ದುಪಡಿಯಾಗುವುದೂ ಆ ರಾಜ್ಯದ ವಿಧಾನಸಭೆಯಲ್ಲಿ. ಅಲ್ಲಿ ಕೈಗೊಳ್ಳಲಾಗವ ನಿರ್ಧಾರಗಳನ್ನು ಆ ರಾಜ್ಯ ಸರಕಾರದ ಅನುಮತಿ ಪಡೆದು ರಾಷ್ಟ್ರಪತಿ ಸಹಿ ಹಾಕಬೇಕಾಗುತ್ತದೆ. ಈ ರೀತಿ ಪ್ರತ್ಯೇಕ ಸಂವಿಧಾನ ಹೊಂದಿರುವ ಏಕೈಕ ರಾಜ್ಯ ಜಮ್ಮು ಕಾಶ್ಮೀರ. 1957ರ ಜನವರಿ 26ರಂದು ಅಲ್ಲಿನ ವಿಧಾನಸಭೆ ಪ್ರತ್ಯೇಕ ಸಂವಿಧಾನವನ್ನು ಅಂಗೀಕರಿಸಿತು.

ಸಂವಿಧಾನದ ವಿಧಿ 360ರ ಪ್ರಕಾರ ಕೇಂದ್ರ ಸರಕಾರ ದೇಶಾದ್ಯಂತ ಆರ್ಥಿಕ ತುರ್ತುಸ್ಥಿತಿ ಘೋಷಿಸುವ ವಿಶೇಷ ಅಧಿಕಾರ ಹೊಂದಿರುತ್ತದೆ. ಆದರೆ, ಆರ್ಥಿಕ ತುರ್ತುಸ್ಥಿತಿಯನ್ನು ಈ ರಾಜ್ಯದಲ್ಲಿ ಘೋಷಿಸುವಂತಿಲ್ಲ. ಹೊರ ದೇಶಗಳು ಅತಿಕ್ರಮಣ ನಡೆಸಿದಾಗ ಇಲ್ಲವೇ ಯುದ್ಧದ ಸಮಯದಲ್ಲಿ ಮಾತ್ರ ತುರ್ತುಸ್ಥಿತಿ ಘೊಷಿಸಬಹುದು.
ದೇಶದಲ್ಲಿ ಆಂತರಿಕ ಸಮಸ್ಯೆಗಳು ತಲೆದೋರಿದ ಸಮಯದಲ್ಲಿ ಜಮ್ಮು ಕಾಶ್ಮೀರ ತುರ್ತುಸ್ಥಿತಿಯಂತಹ ಸನ್ನಿವೇಶದಿಂದ ಮುಕ್ತವಾಗಿರುತ್ತದೆ. ಹಾಗೊಂದು ವೇಳೆ ಈ ರಾಜ್ಯದಲ್ಲಿ ತುರ್ತುಸ್ಥಿತಿ ಘೋಷಣೆಯಾಗಲೇಬೇಕೆಂದರೆ ಅದಕ್ಕೆ ಅಲ್ಲಿನ ರಾಜ್ಯ ಸರಕಾರದ ಅನುಮತಿ ಬೇಕು. ರಾಷ್ಟ್ರಪತಿಯಾದವರು ಆ ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಘೋಷಿಸಬೇಕೆಂದು ಅಲ್ಲಿನ ಸರಕಾರಕ್ಕೆ ಕೋರಿಕೆ ಸಲ್ಲಿಸಬೇಕು.

ಬೇರೆ ರಾಜ್ಯದಿಂದ ಬಂದವರು ಈ ರಾಜ್ಯದಲ್ಲಿ ಆಸ್ತಿ ಖರೀದಿಸುವಂತಿಲ್ಲ. ಆದರೆ, ಈ ರಾಜ್ಯದವರು ಭಾರತದ ಬೇರೆ ರಾಜ್ಯಗಳಲ್ಲಿ ಆಸ್ತಿ ಖರೀದಿಸಬಹುದು.ಈ ನಿಯಮವೇ ಜಮ್ಮು ಕಾಶ್ಮೀರವು ಭಾರತದಿಂದ ಬೇರೆ ಎಂಬ ಭಾವನೆ ಬೆಳೆಯಲು ಕಾರಣವಾಗಿದೆ. ಅಲ್ಲಿನವರಿಗೆ ಕೂಡ ತಾವು ಸಂಪೂರ್ಣ ಭಾರತೀಯರು ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ರಾಜ್ಯದ ಹೊರತಾಗಿ ಬೇರೆಯವರು ಬಂಡವಾಳ ತೊಡಗಿಸಲು ಅವಕಾಶವಿಲ್ಲದ ಕಾರಣ ಇಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಇದಕ್ಕಾಗಿಯೇ ಸ್ಥಳೀಯರು ಶಸ್ತ್ರ ಕೈಗೆತ್ತಿಕೊಂಡು ಉಗ್ರರಾಗುತ್ತಿದ್ದಾರೆಂದು ವರದಿ ಹೇಳುತ್ತದೆ.

ಸ್ವಾತಂತ್ರ್ಯ ಬಂದಾಗಿನಿಂದ ಶಿಕ್ಷಣದ ಹಕ್ಕನ್ನು ಬಿಟ್ಟರೆ ಇನ್ಯಾವ ಹಕ್ಕೂ ಈ ರಾಜ್ಯದಲ್ಲಿ ಜಾರಿಯಾಗಿಲ್ಲ. ಮತ್ತೊಂದು ವಿಚಾರವೆಂದರೆ ಈ ರಾಜ್ಯದ ನಾಗರಿಕನಾದವನು ತೆರಿಗೆ ಕಟ್ಟಬೇಕಾಗಿಲ್ಲ. ದೇಶದ ಎಲ್ಲಾ ಹೈಕೋರ್ಟುಗಳು ಸಂವಿಧಾನದ ವಿಧಿ 226ರ ಪ್ರಕಾರ ಕಾನೂನು ತಿದ್ದುಪಡಿ ಮಾಡುವ ಅಧಿಕಾರವನ್ನು ಹೊಂದಿವೆ. ಆದರೆ, ಜಮ್ಮು ಕಾಶ್ಮೀರ ಹೈಕೋರ್ಟ್ ಮಾತ್ರ ಇದರಿಂದ ಮುಕ್ತ.

ಯಾವ ಕಾನೂನುಗಳನ್ನೂ ಅಸಾಂವಿಧಾನಿಕ ಎಂದು ಘೋಷಿಸುವ ಹಕ್ಕೇ ಇಲ್ಲಿನ ಕೋರ್ಟ್‌ಗೆ ಇಲ್ಲ. ಈ ರಾಜ್ಯದ ಶಾಶ್ವತ ನಾಗರಿಕರು ಮಾತ್ರ ರಾಜ್ಯ ಸರಕಾರದ ಸೇವೆಗಳಿಗೆ ಅರ್ಹರು. ಶಾಶ್ವತ ನಾಗರಿಕರಿಗೆ ಮಾತ್ರ ಆಸ್ತಿ ಖರೀದಿಸುವ ಹಕ್ಕಿದೆ. ವಿದ್ಯಾರ್ಥಿವೇತನ, ಹಿಂದುಳಿದ ವರ್ಗದವರಿಗೆ ಮೀಸಲಾತಿ ಈ ಎಲ್ಲ ವಿಚಾರದಲ್ಲಿ ಜಮ್ಮು ಕಾಶ್ಮೀರ ವಿಧಾನಸಭೆ ನಿರ್ಣಯವೇ ಅಂತಿಮ. ಒಂದು ವೇಳೆ ರಾಷ್ಟ್ರಪತಿ ಆಡಳಿತ ಹೇರಬೇಕೆಂದರೂ, ರಾಷ್ಟ್ರಪತಿ ಜಮ್ಮು ಕಾಶ್ಮೀರದ ಗವರ್ನರ್ ಅನುಮತಿ ಪಡೆಯಬೇಕು.
ಮೂಲ:
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಒಂದೆಕರೆ ಕ್ಷಣದಲ್ಲೇ ಪರಿಹಾರಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು 9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ:- ನಿಮ್ಮದೇ ಆದ ಭಾವನಾಲೋಕದಲ್ಲಿರುವ ನಿಮಗೆ ವ್ಯವಹಾರ, ವಹಿವಾಟುಗಳು ಕೆಲವು ರೀತಿಯಲ್ಲಿ ತೊಂದರೆಯನ್ನುಂಟು ಮಾಡುವ ಸಾಧ್ಯತೆ ಇದೆ. ಪರಾಕ್ರಮದ ಕೆಲಸ ಅಥವಾ ಸಂವಹನ ಕಾರ್ಯಗಳಲ್ಲಿ ಹಿನ್ನಡೆ ಅನುಭವಿಸಬೇಕಾಗುವುದು..ನಿಮ್ಮ ಸಮಸ್ಯೆಏನೇಇರಲಿ ಎಷ್ಟೇ ಕಠಿಣವಾಗಿರಲಿ…
ಪ್ರತಿಯೊಂದು ದೇಶವೂ ಕೂಡ ತನ್ನ ದೇಶದ ಭೌಗೋಳಿಕ ಸಂಪತ್ತನ್ನು ಹುಡುಕುವ ಪ್ರಯತ್ನವನ್ನು ಯಾವಾಗಲೂ ಕೂಡ ಮಾಡುತ್ತಲೇ ಇರುತ್ತದೆ. ಅದೇ ರೀತಿಯಲ್ಲಿ ಭಾರತದಲ್ಲಿ ಕೂಡ ಅದೆಷ್ಟೋ ಭಾಗಗಲ್ಲಿ ಚಿನ್ನದ ಗಣಿಯನ್ನು ಹುಡುಕುವ ಅದೆಷ್ಟೋ ಪ್ರಯತ್ನಗಳು ನಡೆದಿದ್ದವು. ಆದರೆ ಯಾವುದು ಕೂಡ ಅಷ್ಟೊಂದು ದೊಡ್ಡ ಮಟ್ಟದ ಯಶಸ್ಸು ನೀಡಿರಲಿಲ್ಲ. ಆದರೆ ಸದ್ಯಕ್ಕೆ ಈಗ ಭಾರತದಲ್ಲಿ ಇರುವ ಒಟ್ಟಾರೆ ಚಿನ್ನದ ನಿಕ್ಷೇಪಕ್ಕಿಂತ ಐದು ಪಟ್ಟು ಹೆಚ್ಚು ಚಿನ್ನದ ಗಣಿ ಪತ್ತೆಯಾಗಿದೆ ಎನ್ನುವ ಸುದ್ದಿಯೊಂದು ಇದ್ದಕಿದ್ದಂತೆ ದೇಶದ ಎಲ್ಲ ಮಾಧ್ಯಮಗಳು ಈ ಸುದ್ದಿ…
ಸರಕು ಸೇವಾ ತೆರಿಗೆ (GST) ಜಾರಿಗೆ ಬಂದಲ್ಲಿ ಬಿಂದಾಸ್ ಆಗಿ ಒಳ್ಳೆಯ ಊಟ, ಉಪಾಹಾರ ನೀವು ತೃಪ್ತಿಯಾಗುವಷ್ಟು ಮಾಡಬಹುದು. ಹಾಗೂ ಒಂದು ಸಿನೆಮಾ ನೋಡಿದ ಮೇಲೂ ಮತ್ತೊಂದು ನೋಡಿಯೇ ಬಿಡೋಣ ಎನ್ನುವ ಧೈರ್ಯ ಬಂದರೂ ಬರಬಹುದು.
ಗಿನ್ನಿಸ್ ಬುಕ್ ಸೇರಲು ಜನರು ಏನೆಲ್ಲ ಕಸರತ್ತು ಮಾಡ್ತಾರೆ. ಒಬ್ಬೊಬ್ಬರು ಒಂದೊಂದು ಸಾಧನೆ ಮಾಡಿ ಗಿನ್ನಿಸ್ ಬುಕ್ ಸೇರ್ತಾರೆ. ಚೀನಾದ ಕ್ಸೀ ಕ್ಯುಪಿಂಗ್ ಜಗತ್ತಿನ ಅತೀ ಉದ್ದ ಕೂದಲು ಉಳ್ಳ ಮಹಿಳೆ ಎಂಬ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಹೊಂದಿದ್ದಾಳೆ.
ವ್ಹಾವ್…ಇಂತಹ ದೃಶ್ಯಗಳು ಎಲ್ಲಾ ಕಡೆ ಕಾಣಿಸುವುದಿಲ್ಲ, ಎಲ್ಲರ ಮನಸ್ಸನ್ನು ಸೆಳೆಯುವ ನೋಟ… ನೋಡಿದ ಅರೆಕ್ಷಣದಲ್ಲಿಯೇ ಮನಸ್ಸು ಹಕ್ಕಿಯಂತೆ ಹಾರುತ್ತದೆ ಎಂದರೆ ತಪ್ಪೇನಿಲ್ಲ… ಅಂತಹ ಮನಮೋಹಕ ದೃಶ್ಯವಿದು… ತಕ್ಷಣಕ್ಕೆ ನೀರು ಹಾಲ್ನೊರೆಯುನ್ನುಕ್ಕಿಸಿ ಧುಮ್ಮಿಕ್ಕುವಂತೆ ಕಾಣುತ್ತದೆ. ಆದರೆ, ನಿಜವಾಗಿಯೂ ಇದು ಜಲಪಾತವೇ ಅಲ್ಲ…! ನಮ್ಮ ಕಣ್ಣನ್ನೇ ನಂಬದಂತೆ ಮಾಡುವ ಇಂತಹ ಅದ್ಭುತ ದೃಶ್ಯ ಸೆರೆಯಾಗಿದ್ದು ಮಿಜೋರಾಂನ ಐಜಾಲ್ ನಗರದಲ್ಲಿ. ಮಿಜೋರಾಂ ಪ್ರಕೃತಿಯ ರಮಣೀಯ ತಾಣಗಳಲ್ಲಿ ಒಂದು. ಇಲ್ಲಿನ ಬೆಟ್ಟ ಗುಡ್ಡಗಳನ್ನು ನೋಡುವುದೆಂದರೆ ಕಣ್ಣಿಗದು ಹಬ್ಬ. ಇದೇ ಬೆಟ್ಟದ ನಡುವೆ ಕಂಡದ್ದು…
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆಗಳು ಹೆಚ್ಚುತ್ತಿವೆ. ಒಬ್ಬ ವ್ಯಕ್ತಿ ಎರಡು, ಮೂರು ಫೇಸ್ ಬುಕ್ ಖಾತೆ ಓಪನ್ ಮಾಡಿಕೊಂಡಿದ್ದಾರೆ. ನಕಲಿ ಫೇಸ್ಬುಕ್ ಖಾತೆಗಳಿಂದ ಸಾಕಷ್ಟು ವಂಚನೆ ಪ್ರಕರಣಗಳು ಬೆಳಕಿಗೆ ಬಂದಿವೆ. ಇದನ್ನು ತಡೆಯಲು ಫೇಸ್ ಬುಕ್ ಸೇರಿ ಇತರೆ ಸಾಮಾಜಿಕ ಜಾಲತಾಣ ಬಳಕೆದಾರರ ಪ್ರೊಫೈಲ್ಗೆ ಆಧಾರ್ ಸಂಖ್ಯೆ ಜೋಡಣೆ ಮಾಡಬೇಕು ಎಂದು ಮದ್ರಾಸ್, ಬಾಂಬೆ ಹಾಗೂ ಮಧ್ಯ ಪ್ರದೇಶದ ಹೈಕೋರ್ಟ್ನಲ್ಲಿ ಸಲ್ಲಿಕೆಯಾಗಿರೋ ಆರ್ಜಿಗಳನ್ನು ಸುಪ್ರೀಂಕೋರ್ಟ್ಗೆ ವರ್ಗಾಯಿಸಲು ಕೋರಿರುವ ಅರ್ಜಿ ವಿಚಾರಣೆಗೆ ಸರ್ವೋಚ್ಚ ನ್ಯಾಯಾಲಯ ಸಮ್ಮತಿಸಿದೆ. ಈ…