ಸುದ್ದಿ

ಪತಿಯ ರುಂಡ ಹಿಡಿದುಕೊಂಡು ಪೊಲೀಸ್ ಠಾಣೆಗೆ ಬಂದಂತಹ ಮಹಿಳೆ.. ಕಾರಣ?

146

ಮಹಿಳೆಯೊಬ್ಬಳು ಪತಿಯ ರುಂಡ ಕತ್ತರಿಸಿ, ಅದನ್ನು ಪ್ಲಾಸ್ಟಿಕ್ ಬ್ಯಾಗ್‍ನಲ್ಲಿ ಹಾಕಿಕೊಂಡು ಪೊಲೀಸ್ ಠಾಣೆಗೆ ಬಂದ ಘಟನೆ ಅಸ್ಸಾಂನಲ್ಲಿ ನಡೆದಿದೆ.ಸೋನಿಟ್‍ಪುರ್ ಜಿಲ್ಲೆಯ ಮಜ್ಗಾಂವ್‍ನ ನಿವಾಸಿ ಗುಣೇಶ್ವರಿ ಬರ್ಕಟಕಿ (48) ಕೊಲೆ ಮಾಡಿದ ಮಹಿಳೆ. ಮುಧಿರಾಮ್ ಕೊಲೆಯಾದ ಪತಿ. ಘಟನೆಯು ಮೇ 28ರಂದು ನಡೆದಿದ್ದು, ಮಹಿಳೆಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.

ಮುಧಿರಾಯ್ ಮದ್ಯ ವ್ಯಸನಿಯಾಗಿದ್ದು, ಮನೆಯಲ್ಲಿ ನಿತ್ಯವೂ ಪತ್ನಿ ಗುಣೇಶ್ವರಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದ. ಅಷ್ಟೇ ಅಲ್ಲದೆ ಕೊಡಲಿಯಿಂದ ಹಲ್ಲೆ ಕೂಡ ಮಾಡಿದ್ದ. ಹೀಗಾಗಿ ಪತಿಯಿಂದ ದೂರ ಇರಲು ಗುಣೇಶ್ವರಿ ನಿರ್ಧರಿಸಿದ್ದಳು. ಆದರೆ ಇಬ್ಬರು ಗಂಡು ಮಕ್ಕಳು ಹಾಗೂ ಮೂವರು ಹೆಣ್ಣ ಮಕ್ಕಳ ಭವಿಷ್ಯದ ಉದ್ದೇಶದಿಂದ ಪತಿಯ ಜೊತೆಗೆ ವಾಸವಾಗಿದ್ದಳು.

ಎಂದಿನಂತೆ ಮೇ 20ರಂದು ಮದ್ಯ ಸೇವಿಸಿ ಮನೆಗೆ ಬಂದಿದ್ದ ಮುಧಿರಾಯ್ ಪತ್ನಿಯ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದ. ಪತಿಯ ವರ್ತನೆ, ಕ್ರೂರತೆಯಿಂದ ಕೋಪಗೊಂಡ ಗುಣೇಶ್ವರಿ ಹಲ್ಲೆ ಮಾಡಿದ್ದಾಳೆ. ಬಳಿಕ ಪತಿಯ ರುಂಡವನ್ನು ಕತ್ತರಿಸಿ, ಪ್ಲಾಸ್ಟಿಕ್ ಬ್ಯಾಗ್‍ನಲ್ಲಿ ಹಾಕಿಕೊಂಡು ಬಂದಿದ್ದಳು ಎಂದು ಲಖಿಮ್ಪುರ್ ಠಾಣೆಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.ಮಂಡ್ಯದಲ್ಲಿ ಇಂತಹದ್ದೇ ಘಟನೆ ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ನಡೆದಿತ್ತು. ತಾಯಿಯನ್ನು ಬೈದಿದ್ದಕ್ಕೆ ಮಳವಳ್ಳಿ ತಾಲೂಕಿನ ಚಿಕ್ಕಬಾಗಿಲು ಗ್ರಾಮದ ಪಶುಪತಿ ತನ್ನ ಸ್ನೇಹಿತನ ರುಂಡ ಕತ್ತರಿಸಿದ್ದ. ಬಳಿಕ ಅದನ್ನು ಹಿಡಿದುಕೊಂಡು ಠಾಣೆಗೆ ಬಂದು ಪೊಲೀಸರಿಗೆ ಶರಣಾಗಿದ್ದ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸೌಂದರ್ಯ

    ಟೊಮೊಟೋದಲ್ಲಿದೆ ಸನ್ ಟ್ಯಾನ್ ಕಡಿಮೆ ಮಾಡುವ ಗುಣಗಳು..!ತಿಳಿಯಲು ಈ ಲೇಖನ ಓದಿ…

    ಮಹಿಳೆಯರು ಹೆಚ್ಚಾಗಿ ಬಿಸಿಲಿಗೆ ಹೋಗುವಾಗ ಲೋಷನ್ ಹಚ್ಚಿಕೊಂಡು ಹಾಗೂ ಮುಖಕ್ಕೆ ಸ್ಕರ್ಫ್ಕ ಕಟ್ಟಿಕೊಂಡು ಹೋಗುತ್ತಾರೆ. ಹೀಗೆ ನಾವು ಕವರ್ ಮಡಿದ ಜಾಗವನ್ನ ಬಿಟ್ಟು ಬೇರೆ ಎಲ್ಲಾಕಡೆ ಸೂರ್ಯನ ಕಿರಣಗಳಿಂದ ನಮ್ಮ ಚರ್ಮ ಸುಟ್ಟು ಕಪ್ಪಾಗಿರುತ್ತದೆ. ಹೀಗೆ ಟ್ಯಾನ್ ಆಗಿರುವುದನ್ನ ತೆಗೆದು ಹಾಕಲು ನೀವು ಮನೆಯಲ್ಲಿರುವ ವಸ್ತುಗಳನ್ನೇ ಬಳಸಿಕೊಳ್ಳಬಹುದು.

  • ಸಿನಿಮಾ

    ಟ್ರೊಲ್ ಪೇಜ್ ಗಳಿಗೆ ಆಗ ತುತ್ತಾಗಿದ್ದಅಗ್ನಿಶಾಕ್ಷಿ ಈಗ ಪುಟ್ಟಗೌರಿ ಧಾರಾವಾಹಿ

    ಗೌರಿಯನ್ನ ಅತಿ ಎತ್ತರದ ಬೆಟ್ಟದಿಂದ ತಳ್ಳಲಾಗಿದೆ. ಹೀಗೆ, ಬೆಟ್ಟದಿಂದ ಬಿದ್ದ ಗೌರಿ ಸಾಯಲೇ ಇಲ್ಲ. ಅಲ್ಲಿಂದ ಆದ ಅದ್ಭುತಗಳು ಒಂದೆರಡಲ್ಲ. ಇದನ್ನ ಕಂಡು ಟ್ರೋಲ್ ಪೇಜ್ ಗಳು ಪುಟ್ಟಗೌರಿಯನ್ನ ಟ್ರೋಲ್ ಮಾಡಿದ್ದಾರೆ.

  • ಆರೋಗ್ಯ, ಉಪಯುಕ್ತ ಮಾಹಿತಿ

    ಈ ಸೊಪ್ಪು ತಿನ್ನೋದರಿಂದ ಆಗೋ ಪ್ರಯೋಜನಗಳನ್ನು ತಿಳಿದ್ರೆ, ನೀವ್ ತಿನ್ನದೇ ಸುಮ್ಮನೆ ಇರಲ್ಲ..!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

    *ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಆಯುರ್ವೇದ ಪದ್ದತಿಯು ನಮ್ಮ ಹಿರಿಯರು ನಮಗೆ ನೀಡಿರುವ ಒಂದು ವರದಾನ. ವಿಶ್ವದಾದ್ಯಂತ ಈಗ ಆಯುರ್ವೇದಕ್ಕೆ ಅತ್ಯುತ್ತಮ ಹೆಸರಿದೆ ಅದಕ್ಕೆಕಾರಣ ಇಂಗ್ಲೀಷ್ ಔಷದೀಯ ಪದ್ದತಿಯಿಂದ ಹಲವಾರು ಅಡ್ಡಪರಿಣಾಮಗಳು ಉಂಟಾಗುವವು ಮತ್ತು ದೀರ್ಘಕಾಲಿಕ ಕಾಯಿಲೆಗಳು ಬರುವುದು. ಆಯುರ್ವೇದದ ಪ್ರಕಾರ ನಾವು ಅಡುಗೆಯಲ್ಲಿ ಬಳಸುವ ಪದಾರ್ಥಗಳು ಸೊಪ್ಪು, ತರಕಾರಿಗಳಲ್ಲಿರುವ ಪೋಷಕಾಂಶಗಳೇ ತುಂಬಾ ಕಾಯಿಲೆಗಳನ್ನು ವಾಸಿಮಾಡುತ್ತವೆ. ಅಂತಹ ಪೋಷಕ ಮೌಲ್ಯಗಳಿರುವ ಗಿಡ “ನುಗ್ಗೆಗಿಡ” ನುಗ್ಗೆ ಗಿಡಗಳ ಎಲೆಗಳಲ್ಲಿ, ಕಾಯಿಗಳಲ್ಲಿ, ಕಾಂಡದಲ್ಲಿ ಬಹಳ ಪೋಷಕಾಂಶಗಳಿರುತ್ತವೆ. ಬಹಳ ಜನರು ನುಗ್ಗೆಕಾಯಿಯ…

  • ಸುದ್ದಿ, ಸ್ಪೂರ್ತಿ

    ಕೇವಲ ಒಂದೇ ವಾರದಲ್ಲಿ ತನ್ನ ಊರಿಗೆ ಏಕಾಂಗಿಯಾಗಿ ರಸ್ತೆ ನಿರ್ಮಿಸಿದ ಮಾಂಜಿ..!

    ತನ್ನ ಹೆಂಡತಿಗಾಗಿ ರಸ್ತೆಯನ್ನೇ ನಿರ್ಮಿಸಿದ್ದ ಮಾಂಜಿಯ ಕಥೆ ನಮಗೆಲ್ಲಾ ಗೊತ್ತಿದೆ. ಇದೀಗ ಕೀನ್ಯಾದಲ್ಲೂ ಒಬ್ಬ ಮಾಂಜಿ ಇದ್ದಾರೆ. ಆದ್ರೆ, ಈತ ತನ್ನ ಹೆಂಡತಿಗಾಗಿ ಅಲ್ಲ, ಇಡೀ ಊರಿನ ಜನರಿಗೆ ನೆರವಾಗಲಿ ಅಂತ ತಾನೇ ರಸ್ತೆ ನಿರ್ಮಿಸಿ ಈಗ ಎಲ್ಲರ ದೃಷ್ಟಿಯಲ್ಲೂ ಹೀರೋ ಆಗಿದ್ದಾರೆ. ಕೀನ್ಯಾದ ಕಗಂಡಾ ಗ್ರಾಮದ ಬಳಿ ದಟ್ಟ ಅರಣ್ಯ ಪ್ರದೇಶವಿದೆ. ಅದರ ಬಳಿ ವಾಸಿಸುವ ಜನರಿಗೆ ಊರಿನ ಸಂಪರ್ಕ ಮಾಡೋಕೆ ಸರಿಯಾದ ರಸ್ತೆಯೇ ಇರಲಿಲ್ಲ. ಈ ಬಗ್ಗೆ ಗ್ರಾಮದ ನಿಕೋಲಸ್ ಮುಚಾಮಿ ಹಲವು ಬಾರಿ…

  • ಸುದ್ದಿ

    ಸದ್ಯದಲ್ಲೇ ಪೂರ್ತಿಗೊಲ್ಲಲಿದೆ ಜಗತ್ತಿನ ಅತ್ಯಂತ ಎತ್ತರದ ಶಿವನ ಪ್ರತಿಮೆ…!

    ಜೈಪುರ: ಜಗತ್ತಿನ ಅತೀ ಎತ್ತರದ ಏಕತಾ ಪ್ರತಿಮೆ (ಸ್ಟಾಚು ಆಫ್ ಯುನಿಟಿ) ಬಳಿಕ ಭಾರತ ಇನ್ನೊಂದು ಅತೀ ಎತ್ತರದ ಪ್ರತಿಮೆ ನಿರ್ಮಾಣಕ್ಕೆ ಕೈ ಹಾಕಿದ್ದು, ಜಗತ್ತಿನ ಅತೀ ಎತ್ತರದ ಶಿವನ ಪ್ರತಿಮೆಯನ್ನು ರಾಜಸ್ಥಾನದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಏಕತಾ ಪ್ರತಿಮೆ ನಿರ್ಮಿಸಿ ಭಾರತ ವಿಶ್ವಮಟ್ಟದಲ್ಲಿ ಖ್ಯಾತಿ ಗಳಿಸಿದೆ. ಜಗತ್ತಿನಲ್ಲಿಯೇ ಅತ್ಯಂತ ಎತ್ತರದ ಪ್ರತಿಮೆ ಎಂದು ಬಿರುದು ಪಡೆದಿದೆ. ಈಗ ರಾಜಸ್ಥಾನದ ನಾಥದ್ವಾರದ ಗಣೇಶ್ ತೆಕ್ರಿ ಪ್ರದೇಶದಲ್ಲಿ ಪ್ರಪಂಚದ ಅತೀ ಎತ್ತರದ…

  • ಆರೋಗ್ಯ

    ನೇರಳೆ ಹಣ್ಣು ತಿನ್ನುವುದರಿಂದ ಆಗುವ ಲಾಭಗಳನ್ನ ತಿಳಿದರೆ ನೀವು ಆಶ್ಚರ್ಯ ಪಡುತ್ತೀರಾ, ಈ ಉಪಯುಕ್ತ ಮಾಹಿತಿ ನೋಡಿ.

    ನೇರಳೆ ಹಣ್ಣಿನಲ್ಲಿ ಪ್ರೊಟೀನ್, ಫೈಬರ್ ಮತ್ತು ಆರ್ಗಾನಿಕ್ ಹೆಚ್ಚಾಗಿ ಇರುವುದರಿಂದ ಇದು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಸ್ನೇಹಿತರೆ ನೇರಳೆ ಹಣ್ಣಿನಲ್ಲಿ ಕಬ್ಬಿಣದ ಅಂಶ ಬಹಳ ಹೆಚ್ಚಾಗಿ ಇರುವುತ್ತದೆ ಮತ್ತು ಈ ಹಣ್ಣು ರಕ್ತವನ್ನ ಶುದ್ದಿ ಮಾಡುವಲ್ಲಿ ಪ್ರಮುಖವಾದ ಪಾತ್ರವನ್ನ ವಹಿಸುತ್ತದೆ ಮತ್ತು ರಕ್ತ ಶುದ್ಧ ಆಗುವುದರಿಂದ ನಮ್ಮ ಮುಖದ ತ್ವಚೆ ಕಾಂತಿಯುತವಾಗಿ ಕಾಣುತ್ತದೆ. ಇನ್ನು ಈ ಹಣ್ಣಿನ ಬೀಜವನ್ನ ಜಜ್ಜಿ ಮುಖಕ್ಕೆ ಹಚ್ಚುವುದರಿಂದ ಅಮ್ಮ ಮುಖದಲ್ಲಿನ ಮೊಡವೆಯ ಸಮಸ್ಯೆ ನಿವಾರಣೆ ಆಗುತ್ತದೆ, ಇನ್ನು ಅಜೀರ್ಣ, ಭೇದಿ…