ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ರಾಜ್ಯದ 12 ಕಿರುಬಂದರುಗಳನ್ನು ಅಭಿವೃದ್ಧಿಪಡಿಸಿ ಆ ಮೂಲಕ ಉದ್ಯೋಗ ಸೃಜನೆಯನ್ನು ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಲೋಕೋಪಯೋಗಿ , ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕಾರವಾರ ಮತ್ತು ಮಂಗಳೂರು ಬಂದರುಗಳನ್ನು ಹೊರತುಪಡಿಸಿದರೆ ಉಳಿದ ಕಿರು ಬಂದರುಗಳಲ್ಲಿ ಹೆಚ್ಚಿನ ವಾಣಿಜ್ಯ ಚಟುವಟಿಕೆಗಳು ನಡೆಯಬೇಕು, ಮೀನುಗಾರಿಕೆ ಸೇರಿದಂತೆ ಇತರೆ ವಾಣಿಜ್ಯ ಚಟುವಟಿಕೆಗಳಿಗೂ ಆದ್ಯತೆ ನೀಡಿ ರಾಜ್ಯದ ಎಲ್ಲ ಬಂದರುಗಳ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮ್ಯಾರಿಟೈಮ್ ಮಂಡಳಿಗೆ ಶೀಘ್ರದಲ್ಲಿಯೇ ಅಧಿಕಾರಿಗಳನ್ನು ನೇಮಿಸಲಾಗುವುದು ಎಂದು ಮುಖ್ಯಮಂತ್ರಿಗಳು ಇದೇ ವೇಳೆ ಭರವಸೆ ನೀಡಿದರು. ಕಾರವಾರ ಬಂದರಿನ 2 ನೇ ಹಂತದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದ್ದು, ಬಂದರಿನ ಉತ್ತರಕ್ಕೆ 1258 ಮೀ. ಉದ್ದದ ಬರ್ತ್ ನ್ನು ವಿಸ್ತರಿಸಲು ವಿಸ್ಕೃತಾ ಯೋಜನಾ ವರದಿಯನ್ನು ತಯಾರಿಸಿದ್ದು, ಸರ್ಕಾರದ ಅನುಮೋದನೆಗೆ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.
ಸಾಗರಮಾಲಾ ಕೋಸ್ಟಲ್ ಬರ್ತ್ ಯೋಜನೆಯಡಿ ಪ್ರಸಕ್ತ ಕಾಲಿಗೆ 54.10 ಕೋಟಿ ರೂಪಾಯಿಗಳ ಅನುದಾನವನ್ನು ಒದಗಿಸಲಾಗಿದ್ದು, ತಡೆಗೋಡೆ ನಿರ್ಮಾಣ ಕಾಮಗಾರಿ ಕೈಗೊಳ್ಳಲು ಟೆಂಡರ್ ಕರೆದು ಕಾರ್ಯಾದೇಶ ನೀಡಲಾಗಿದೆ ಹಾಗೂ ಕಾರವಾರ ಕೋಸ್ಟಲ್ ಬರ್ತ್ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ ಎಂದು ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.
ಕರಾವಳಿ ಪ್ರದೇಶದಲ್ಲಿ ಕಡಲು ಕೊರೆತ ಪದೇ ಪದೇ ಉಂಟಾಗಿ ಸ್ಥಳೀಯರಿಗೆ ತೊಂದರೆಯಾಗುತ್ತಿದ್ದು, ಈ ಬಗ್ಗೆ ಧೀರ್ಘಾವಧಿ ಪರಿಹಾರ ಕಂಡುಕೊಳ್ಳಬೇಕು, ಕಡಲ ಬದಿಯಲ್ಲಿರುವ ಜನರಿಗೆ ಪುನವರ್ಸತಿ ಕಲ್ಪಿಸುವ ಬಗ್ಗೆ ಪರಿಶೀಲಿಸುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕೊಲದೇವಿ ಗ್ರಾಮವೂ ಐತಿಹಾಸಿಕ ಹಿನ್ನೆಲೆ ಇರುವ ಗರುಡ ದೇವಸ್ಥಾನ ಹೊಂದಿರುವ ಗ್ರಾಮ. ಮುಳಬಾಗಿಲು ತಾಲೂಕು ಕೇಂದ್ರದಿಂದ 14 ಕೀ.ಮೀ. ದೂರದಲ್ಲಿ ಕೊಲದೇವಿ ಗ್ರಾಮ ಸಿಗುತ್ತದೆ. ಈ ದೇವಾಲಯ ಸಾವಿರ ವರ್ಷಗಳ ಹಿಂದೆ ರಾಮಾನುಜಾಚಾರ್ಯರಿಂದ ಪ್ರತಿಷ್ಠಾಪನೆ ಆಗಿದೆ. ಹಾಗು ದ್ರಾವಿಡ ಶೈಲಿಯಲ್ಲಿ ದೇವಾಲಯ ನಿರ್ಮಾಣ ಮಾಡಲಾಗಿದೆ. ಇಲ್ಲಿಯ ಗರುಡ ದೇವರು ಒಂದು ಕೈಯಲ್ಲಿ ನಾರಾಯಣ, ಇನ್ನೊಂದು ಕೈಯಲ್ಲಿ ಲಕ್ಷ್ಮೀಯನ್ನು ಹೊಂದಿರುವುದನ್ನು ಕಾಣಬಹುದು. ಈ ಗ್ರಾಮ ರಾಮಾಯಣ ಮತ್ತು ಮಹಾಭಾರತದ ಮಹಾಕಾವ್ಯಗಳ ಹಿನ್ನೆಲೆ ಹೊಂದಿರುವ…
ಹಳ್ಳಿ ಯುವಕ ರವಿ ಗೌಡರವರು ಸಣ್ಣ ರೈತ ಕುಟುಂಬದಲ್ಲಿ ಜನಿಸಿದ್ದರೂ, ಜೀವನದಲ್ಲಿ ಏನಾದ್ರೂ ಸಾಧನೆ ಮಾಡಬೇಕೆಂಬ ಹಂಬಲದಿಂದ, ಏನು ಮಾಡಬೇಕೆಂದು ಯೋಚಿಸುತ್ತಿದ್ದರು. ಇಂತಹ ಸಮಯದಲ್ಲಿ, ರವಿ ಗೌಡರ ಮಾವನವರಾದ ಚನ್ನನ ಗೌಡರವರು ಸಾಂಪ್ರದಾಯಿಕ ಪದ್ದತಿಯಲ್ಲಿ ಸಂಗ್ರಾಣಿ ಕಲ್ಲು ಎತ್ತುವುದನ್ನು ಅದೇ ಊರಿನ ಗರಡಿ ಮನೆಯಲ್ಲಿ ಅಭ್ಯಾಸ ಮಾಡುತ್ತಿದ್ದರು.
ಬಾಳೆ ಹಣ್ಣು ತಿನ್ನೋದ್ರಿಂದ ಸಾಕಷ್ಟು ಪ್ರಯೋಜನವಿದೆ ಎಂಬುದನ್ನು ಸಂಶೋಧನೆ ಕೂಡ ಹೇಳಿದೆ. ದಿನಕ್ಕೆ ಮೂರು ಸಣ್ಣ ಬಾಳೆಹಣ್ಣು ತಿನ್ನೋದ್ರಿಂದ 90 ನಿಮಿಷ ವ್ಯಾಯಾಮ ಮಾಡಿದಾಗ ಸಿಗುವಷ್ಟು ಶಕ್ತಿ ಸಿಗುತ್ತದೆಯಂತೆ. ಬರೀ ಶಕ್ತಿ ಮಾತ್ರವಲ್ಲ ದೇಹ ಫಿಟ್ ಆಗಿರುವ ಜೊತೆಗೆ ಆರೋಗ್ಯ ಕೂಡ ಸುಧಾರಿಸುತ್ತದೆ.
ರೇಲ್ವೆ ಪ್ರಯಾಣ ಎಂದರೆ ಎಂತಹವರಿಗೂ ಒಂದು ರೀತಿ ರೋಮಾಂಚನ.ಅದರಲ್ಲೂ ಬೆಟ್ಟ ಗುಡ್ಡಗಳ ನಡುವೆ,ದಟ್ಟವಾದ ಕಾಡುಗಳ ನಡುವೆ ಹೊರಟಾಗ ರೈಲಿನ ಕಿಟಕಿಯಿಂದ,ಬಾಗಿಲಿನಲ್ಲಿ ಕುಳಿತು ಆ ಪ್ರಕೃತಿ ಸೌಂದರ್ಯವನ್ನು ನೋಡುವಾಗ ಎಂತಹವರಿಗೂ ಮೈ ಮನ ರೋಮಾಂಚನಗೊಳ್ಳುವುದರಲ್ಲಿ ಸಂದೇಹವೇ ಇಲ್ಲ.
ಹಾವುಗಳನ್ನು ಕಂಡ್ರೆ ಎಂತಹವರಿಗೂ ಎದೆ ಜಲ್ ಅನ್ನುವ ಅನುಭವ ಆಗ್ತದೆ. ಆಗಂತ ಹಾವಿಗೆ ಭಯ ಇಲ್ದೆ ಇರಲ್ಲ. ಆದ್ರೆ ಹಾವನ್ನು ಸಾಯಿಸಬೇಕಾದ್ರೆ ಅರ್ಧ ಪ್ರಾಣ ಹೋಗಿ ಅರ್ಧ ಪ್ರಾಣ ಉಳಿಯುವಂತೆ ಸಾಯಿಸಬೇಡಿ ಅಂತ ಹೇಳುವುದು ವಾಡಿಕೆ. ಯಾಕಂದ್ರೆ ಅಂತಹವರನ್ನು ಏಟು ತಿಂದ ಹಾವುಗಳು ಸುಮ್ಮನ್ನೇ ಬಿಡೋದಿಲ್ಲ ಅಂತ ಹೇಳ್ತಾರೆ.
ಸಿಲಿಕಾನ್ ಸಿಟಿಯ ಕೆಂಗೇರಿ ರೈಲ್ವೆ ನಿಲ್ದಾಣದಲ್ಲಿ ಹೂವು ಮಾರುತ್ತಿದ್ದ ಬಾಲಕಿಯನ್ನು ವಸತಿ ಶಾಲೆಗೆ ಸೇರಿಸಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕಾರ್ಮಿಕ ಇಲಾಖೆ ಅಧಿಕಾರಿಗಳು ಸಂಗೀತಾಳ ತಂದೆ, ತಾಯಿಯ ಮನವೊಲಿಸಿ ಕೊನೆಗೂ ಬಾಲಕಿಗೆ ಶಿಕ್ಷಣ ಕಲ್ಪಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಬಾಲಕಿ ರಾಮನಗರದ ಕೈಲಾಂಚದಲ್ಲಿರುವ ವಸತಿ ಶಾಲೆಯಲ್ಲಿ 7ನೇ ತರಗತಿಗೆ ದಾಖಲಾತಿ ಪಡೆದಿದ್ದಾಳೆ. ಮನೆಯಲ್ಲಿ ಕಡು ಬಡತನವಿರುವ ಕಾರಣಕ್ಕೆ ತಂದೆ ತಾಯಿ ಇದ್ದರೂ ಕೆಂಗೇರಿ ರೈಲ್ವೆ ನಿಲ್ದಾಣದಲ್ಲಿ ಸಂಗೀತಾ ಹೂವು ಮಾರುತ್ತಿದ್ದಳು. ಸಂಗೀತ ತಂದೆ…