ಸುದ್ದಿ

ಉದ್ಯೋಗದ ನಿರೀಕ್ಷೆಯಲ್ಲಿರುವ ಕನ್ನಡಿಗರಿಗೆ ಇಲ್ಲಿದೆ ಶುಭ ಸುದ್ದಿ, ಇನ್ಮುಂದೆ ಖಾಸಗಿ ವಲಯದಲ್ಲೂ ಮೀಸಲಾತಿ…!

85

ಉದ್ಯೋಗದ ನಿರೀಕ್ಷೆಯಲ್ಲಿದ್ದ ಕನ್ನಡಿಗರಿಗೆ ಶುಭ ಸುದ್ದಿ ಇಲ್ಲಿದೆ. ಖಾಸಗಿ ವಲಯದ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ಕುರಿತು ಅಧಿಸೂಚನೆ ಹೊರಬಿದ್ದಿದೆ.

ಸರೋಜಿನಿ ಮಹಿಷಿ ವರದಿಯನ್ನು ಪರಿಷ್ಕರಿಸಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಹಿಂದಿನ ಸರ್ಕಾರದ ಬಜೆಟ್ ನಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವ ಬಗ್ಗೆ ಘೋಷಣೆ ಮಾಡಲಾಗಿತ್ತು. ನಂತರದಲ್ಲಿ ಚರ್ಚೆಗಳು ನಡೆದು ಅಧಿಸೂಚನೆ ಹೊರಡಿಸಲಾಗಿದೆ.

ಅನೇಕ ಕೈಗಾರಿಕೋದ್ಯಮಿಗಳೊಂದಿಗೆ ಸರ್ಕಾರ ಈಗಾಗಲೇ ಚರ್ಚೆ ನಡೆಸಿದ್ದು, ಕರ್ನಾಟಕ ಕೈಗಾರಿಕಾ ಉದ್ಯೋಗ(ಸ್ಥಾಯಿ ಆದೇಶಗಳು) ನಿಯಮ 1969 ತಿದ್ದುಪಡಿ ತರುತ್ತಿದೆ. ಇದರ ಪ್ರಕಾರ ಸರ್ಕಾರದಿಂದ ವಿವಿಧ ಸೌಲಭ್ಯ, ತೆರಿಗೆ ಸೇರಿ ರಿಯಾಯಿತಿ ಪಡೆಯುತ್ತಿರುವ ಖಾಸಗಿ ಉದ್ದಿಮೆಗಳು ಅರ್ಹತೆ ಅನುಭವ ಹಾಗೂ ಇತರೆ ಅಗತ್ಯಗಳಿಗೆ ಒಳಪಟ್ಟು 15 ವರ್ಷಗಳಿಂದ ರಾಜ್ಯದಲ್ಲಿ ವಾಸವಾಗಿರುವ ಕನ್ನಡ ಓದಲು, ಬರೆಯಲು ಸಮರ್ಥವಾಗಿರುವವರನ್ನು ನೇಮಕಾತಿ ಮಾಡಿಕೊಳ್ಳಲು ತಿಳಿಸಲಾಗಿದೆ.

ವಿಕಲಚೇತನರಿಗೆ ಶೇ. 5ರಷ್ಟು ಮೀಸಲಾತಿ ನೀಡಲು ಅವಕಾಶವಿದೆ. ನಿಯಮವಳಿ ಸಿದ್ಧಪಡಿಸಿ ಸಾರ್ವಜನಿಕ ಆಕ್ಷೇಪಣೆ ಆಹ್ವಾನಿಸಿದ್ದು, 30 ದಿನಗಳ ಕಾಲಾವಕಾಶ ನೀಡಲಾಗಿದೆ. ಮುಂದಿನ ಅಧಿವೇಶನದಲ್ಲಿ ಇದನ್ನು ಮಂಡಿಸಲಾಗುವುದು ಎಂದು ಹೇಳಲಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ

    ರಾತ್ರಿ ಮಲಗುವ ಮುಂಚೆ ಏಲಕ್ಕಿ ತಿಂದು ಬಿಸಿ ನೀರು ಕುಡಿದರೆ ಆಗುವ ಪ್ರಯೋಜನೆಗಳು. ತಿಳಿದರೆ ಶಾಕ್!

    ರಾತ್ರಿ ಮಲಗುವ ಸಮಯದಲ್ಲಿ ಒಂದು ಏಲಕ್ಕಿಯನ್ನ ತಿಂದು ಉಗುರು ಬೆಚ್ಚಗಿನ ನೀರನ್ನ ನಮ್ಮ ದೇಹಕ್ಕೆ ಎಷ್ಟು ಪ್ರಯೋಜನ ಅನ್ನುವುದು ಇನ್ನು ಹಲವು ಜನರಿಗೆ, ಹಾಗಾದರೆ ಒಂದು ಏಲಕ್ಕಿ ತಿಂದು ಉಗುರು ಬೆಚ್ಚಗಿನ ನೀರನ್ನ ಕುಡಿದರೆ ಏನಾಗುತ್ತದೆ ತಿಳಿಯೋಣ. ಸ್ನೇಹಿತರೆ ಸುಗಂಧ ದ್ರವ್ಯಗಳಲ್ಲಿ ಏಲಕ್ಕಿ ಪ್ರಧಾನವಾದದ್ದು ಎಂದು ಹೇಳಿದರೆ ತಪ್ಪಾಗಲ್ಲ, ಇನ್ನು ದೇಶದಲ್ಲಿ ದೊಡ್ಡ ಸುಗಂಧ ದ್ರವ್ಯಗಳು ದೊರೆಯುತ್ತದೆ ಮತ್ತು ಇದು ನಮ್ಮ ದೇಹಕ್ಕೆ ಮತ್ತು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಅನ್ನುವ ಉದ್ದೇಶದಿಂದ ಅದನ್ನ ಕೊಳ್ಳೆ ಹೊಡೆದುಕೊಂಡು ಹೋಗುವ ಸಲುವಾಗಿ…

  • ದೇವರು-ಧರ್ಮ

    ಪ್ರತಿಯೊಬ್ಬ “ಹಿಂದೂ ಧರ್ಮ”ದವರು ಕೂಡ ತಿಳಿಯಲೇಬೇಕಾದ ಈ ವಿಷಯಗಳು..!ಏನೆಂದು ತಿಳಿಯಬೇಕಾದ್ರೆ ಈ ಲೇಖನ ಓದಿ…

    ಹಿಂದೂ ಧರ್ಮವು ಭಾರತೀಯ ಉಪಖಂಡದ ಪ್ರಧಾನ ಧರ್ಮ. ಹಿಂದೂ ಧರ್ಮವು ಅದರ ಅನುಯಾಯಿಗಳಿಂದ ಹಲವುವೇಳೆ, “ಶಾಶ್ವತ ಧರ್ಮ” ಎಂಬ ಅರ್ಥವನ್ನು ಕೊಡುವ ಒಂದು ಸಂಸ್ಕೃತ ಪದಗುಚ್ಛವಾದ, ಸನಾತನ ಧರ್ಮವೆಂದು ನಿರ್ದೇಶಿಸಲ್ಪಡುತ್ತದೆ. ಸಂಕೀರ್ಣ ದೃಷ್ಟಿಗಳ ವೈವಿಧ್ಯಕ್ಕೆ ಸ್ಥಳಮಾಡಿಕೊಡಲು ಪ್ರಯತ್ನಿಸುವ ಹಿಂದೂ ಧರ್ಮದ ಜಾತಿ ವಿಶಿಷ್ಟವಾದ “ಪ್ರಕಾರಗಳು”, ಜಾನಪದ ಮತ್ತು ವೈದಿಕ ಹಿಂದೂ ಧರ್ಮದಿಂದ ವೈಷ್ಣವ ಪಂಥದಲ್ಲಿರುವ ಭಕ್ತಿ ಸಂಪ್ರದಾಯದವರೆಗೆ ವ್ಯಾಪಿಸುತ್ತವೆ.

  • ಆರೋಗ್ಯ

    ಸೇಬು ಹಣ್ಣು ಪ್ರತಿದಿನ ತಿನ್ನುವುದರಿಂದ ಆಗುವ ಉಪಯೋಗಗಳೇನು ನಿಮಗೆ ಗೋತ್ತಾ..?ತಿಳಿಯಲು ಈ ಲೇಖನ ಓದಿ…

    ಆಪಲ್ ಪ್ರತಿದಿನ ತಿನ್ನುತ್ತಿದ್ದರೆ ವೈದ್ಯರಿಂದ ದೂರವಿರಬಹುದು ಎಂಬ ಮಾತಿದೆ. ಹೌದು ಆಪಲ್ ಅಂತಹ ಗುಣಗಳನ್ನ ಹೊಂದಿದೆ. ಆದರೆ ಆಪಲ್ ಬೀಜ ಸಿಪ್ಪೆ ತಿನ್ನುವುದು ಸರಿಯೇ…? ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿರುತ್ತದೆ.ಬೀಜವನ್ನ ನಾವು ಆಪಲ್ ತಿನ್ನುವಾಗ ಗೊತ್ತಾಗದೆ ಒಮ್ಮೊಮ್ಮೆ ತಿಂದುಬಿಡುತ್ತೇವೆ, ಸಿಪ್ಪೆಯನ್ನು ಸಹ ತಿನ್ನುತ್ತೆವೆ, ಸಿಪ್ಪೆಯೊಂದಿಗೆ ಆಪಲ್ ಸೇವಿಸುವುದು ಸಾಮಾನ್ಯ ಆದರೆ ಇನ್ನು ಮುಂದೆ ಇಂತಹ ತಪ್ಪನ್ನ ಅಪ್ಪಿ ತಪ್ಪಿಯೂ ಮಾಡಬೇಡಿ.

  • ಸುದ್ದಿ

    ಭಾರತದೊಂದಿಗೆ ಪಾಕ್ ವ್ಯಾಪಾರ ಬಂದ್…..!

    ಆರ್ಟಿಕಲ್ 370 ರದ್ದು ಪರಿಣಾಮ ಎಂಬಂತೆ ಪಾಕಿಸ್ತಾನ ವರ್ತಿಸತೊಡಗಿದೆ. ಪಾಕಿಸ್ತಾನವು ಬುಧವಾರ ಇಸ್ಲಾಮಾಬಾದ್ ನಲ್ಲಿ ಇರುವ ಭಾರತದ ರಾಯಭಾರಿಯನ್ನು ವಾಪಸ್ ಕಳುಹಿಸಿದೆ. ಇದರ ಜತೆಗೆ ಐದು ಅಂಶಗಳ ಯೋಜನೆಯನ್ನು ಸಹ ಘೋಷಿಸಿದೆ. ಭಾರತದ ಜತೆಗೆ ಸಂಬಂಧವನ್ನು ಕಡಿತಗೊಳಿಸಲು ನಿರ್ಧರಿಸಿದ್ದು ದ್ವಿಪಕ್ಷೀಯವ್ಯಾಪಾರ- ವ್ಯವಹಾರಗಳನ್ನು ಬಂದ್ ಮಾಡುತ್ತೇನೆ ಎಂದಿದೆ.ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದಕ್ಕೆ ಪಾಕಿಸ್ತಾನ ಮೊದಲು ಕ್ಯಾತೆ ತೆಗೆದಿತ್ತು. ಭಾರತದ ಹೈಕಮಿಷನರ್ ಆಗಿ ಅಜಯ್ ಬಿಸಾರಿಯಾ ಪಾಕಿಸ್ತಾನದಲ್ಲಿ ಇದ್ದರೆ, ಭಾರತಕ್ಕೆ ಪಾಕಿಸ್ತಾನದ ಹೈಕಮಿಷನರ್ ಆಗಿ ನೇಮಕ…

  • ಆಧ್ಯಾತ್ಮ

    ದೀಪಗಳ ಹಬ್ಬದ ಹಿನ್ನಲೆ ಏನು ಗೊತ್ತಾ?ಪಟಾಕಿ ಹೊಡೆಯುವವರಿಗೆ ಇಲ್ಲಿವೆ, ಕೆಲವು ಸಲಹೆಗಳು…ತಿಳಿಯಲು ಇದನ್ನು ಓದಿ…

    ಅಜ್ಞಾನವೆಂಬ ಕತ್ತಲನ್ನು ಕಳೆದು ಬದುಕಲ್ಲಿ ಸುಜ್ಞಾನವೆಂಬ ಜ್ಯೋತಿಯನ್ನು ಬೆಳಗಿಸುವ ಹಬ್ಬ ದೀಪಾವಳಿ. ಮಕ್ಕಳಿಗಂತೂ ದೀಪಾವಳಿ ಎಂದರೆ ಬಲು ಅಚ್ಚು ಮೆಚ್ಚು. ಪಟಾಕಿ ದೀಪಾವಳಿಯ ಪ್ರಧಾನ ಆಕರ್ಷಣೆ. ದೀಪ +ಅವಳಿ ಎಂದರೆ ಜೋಡಿ ದೀಪ ಅಥವಾ ದೀಪಗಳ ಸಾಲು ಎಂದರ್ಥ. ಸಾಲು ಸಾಲು ದೀಪ ಹಚ್ಚುವ ಈ ಹಬ್ಬಕ್ಕೆ ದೀಪಾವಳಿ ಎಂದೇ ಹೆಸರು ಬಂದಿದೆ.

  • Animals, India, National, tourism

    ಇದು ಒಂಟೆಗಳ ಜಾತ್ರೆ !

    ರಂಗು ರಂಗಾದ ನಮ್ಮ ದೇಶದಲ್ಲಿ ನಾನಾ ವಿಧಗಳ ಜಾತ್ರೆ, ಮೇಳಗಳು ಆಯೋಜನೆಗೊಳ್ಳುವುದು ಸಾಮಾನ್ಯ. ಅಷ್ಟೆ ಏಕೆ, ಪ್ರಾಣಿಗಳಿಗೆಂದು ಸಮರ್ಪಿತವಾದ ಉತ್ಸವಗಳೂ ಕೂಡ ನಮ್ಮಲ್ಲಿ ಕಂಡುಬರುತ್ತವೆ. ಇಂದಿನ ಈ ಲೇಖನದಲ್ಲಿ ಒಂಟೆಗಳ ಉತ್ಸವದ ಕುರಿತು ತಿಳಿಯಿರಿ. ಇದೊಂದು ವಿಶಿಷ್ಟ ಉತ್ಸವವಾಗಿದ್ದು ರಾಜಸ್ಥಾನ ರಾಜ್ಯದಲ್ಲಿ ಈ ಮೇಳವು ಕಂಡುಬರುತ್ತದೆ ರಾಜಸ್ತಾನಲ್ಲಿ ಪ್ರತಿವರ್ಷ ಪುಷ್ಕರ್‌ ಮೇಳ ನಡೆಯುತ್ತದೆ. ಈ ಮೇಳವೇ ಒಂಟೆಗಳಿಗಾಗಿ ಸ್ಪರ್ಧೆಯನ್ನು ಇಟ್ಟಿರುವಂತಹದ್ದು. ಈ ಮೇಳವು ನೋಡಲೂ ತುಂಬಾ ಸುಂದರವಾಗಿರುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಈ ಮೇಳದಲ್ಲಿ ಭಾಗವಹಿಸುತ್ತಾರೆ. ಪುಷ್ಕರ್…