ಸುದ್ದಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳು ಖರೀದಿಗೆ ಆನ್ ಲೈನ್ ವೆಬ್ಸೈಟ್ ಆರಂಭ….!

164

ಇನ್ನು ಮುಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ಟ್ರಕ್ ಲೋಡ್ ಮರಳು ಖರೀದಿಸುವುದು ಬೇರೆ ವಸ್ತುಗಳನ್ನು ಖರೀದಿಸಿದಂತೆಯೇ ಸುಲಭ. ಆನ್ ಲೈನ್ ನಲ್ಲಿ ಆರ್ಡರ್ ಮಾಡಿದರಾಯಿತು. ಜನರು ಮತ್ತು ಸರ್ಕಾರಿ ಸಂಸ್ಥೆಗಳಿಗೆ ಸುಲಭವಾಗಿ ಮರಳು ಸಿಗುವಂತಾಗಲು ದಕ್ಷಿಣ ಕನ್ನಡ ಜಿಲ್ಲಾಡಳಿತ dksandbazaar.com ಎಂಬ ಆನ್ ಲೈನ್ ಪೋರ್ಟಲ್ ನ್ನು ಆರಂಭಿಸಿದೆ.


ಈ ಆನ್ ಲೈನ್ ಪೋರ್ಟಲ್ ಆರಂಭವಾದ ಕೆಲವೇ ದಿನಗಳಲ್ಲಿ ಉತ್ತಮ ಪ್ರತಿಕ್ರಿಯೆ ಜನರಿಂದ ಸಿಕ್ಕಿದೆ. 50ಕ್ಕೂ ಹೆಚ್ಚು ಬುಕ್ಕಿಂಗ್ ಗಳನ್ನು ಈಗಾಗಲೇ ಕಂಡಿದೆ. ಜಿಲ್ಲಾಧಿಕಾರಿ ಎಸ್ ಶಶಿಕಾಂತ್ ಸೆಂತಿಲ್ ಅವರ ಕನಸಿನ ಕೂಸಾಗಿರುವ ಆನ್ ಲೈನ್ ಪೋರ್ಟಲ್ ದಕ್ಷಿಣ ಕನ್ನಡ ಜಿಲ್ಲೆಯನ್ನು ಮರಳು ಮಾಫಿಯಾ ದಂಧೆಯಿಂದ ಬಚಾವ್ ಮಾಡಲಿದೆ ಎಂಬ ನಂಬಿಕೆಯಿದೆ.


ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳು ಮಾಫಿಯಾ ವ್ಯಾಪಕವಾಗಿತ್ತು. ಮರಳಿನ ಕೊರತೆಯನ್ನು ಸೃಷ್ಟಿಸಿ ಜನರಿಗೆ ಹೆಚ್ಚಿನ ದರದಲ್ಲಿ ಮರಳನ್ನು ಮಾರಾಟ ಮಾಡುವ ದಂಧೆ ಎಗ್ಗಿಲ್ಲದೆ ನಡೆಯುತ್ತಿತ್ತು. ಈ ವೆಬ್ ಸೈಟ್ ಆರಂಭದಿಂದ ದಂಧೆಗೆ ಕಡಿವಾಣ ಹಾಕಲಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಚುನಾವಣೆ

    ಮೇ 3ನೇ ವಾರದಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ..?

    ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆ ಮೇ ತಿಂಗಳ 3ನೇ ವಾರದಲ್ಲಿ ನಡೆಸಲು ಕೇಂದ್ರ ಚುನಾವಣಾ ಆಯೋಗ ಸಿದ್ದತೆ ನಡೆಸಿದ್ದು, ಈ ಬಾರಿ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಚುನಾವಣೆಗೆ ಅಗತ್ಯವಿರುವ ಸಿದ್ದತೆಗಳು ಬಹುತೇಕ ಪೂರ್ಣ ಗೊಳಿಸಿರುವ ಆಯೋಗ ಏಪ್ರಿಲ್ ತಿಂಗಳ 2ನೇ ವಾರದಲ್ಲಿ ದಿನಾಂಕವನ್ನು ಘೋಷಣೆ ಮಾಡಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮತದಾರರ ಅಂತಿಮ ಪಟ್ಟಿಯನ್ನು ರಾಜ್ಯ ಮುಖ್ಯ ಚುನಾವಣಾಕಾರಿಗಳು ಪೂರ್ಣಗೊಳಿಸಿರುವುದು, ಇವಿಎಂ ಯಂತ್ರ ಉಪಯೋಗಿಸುವ ಕುರಿತಂತೆ ತರಬೇತಿ, ಭದ್ರತೆ ಸೇರಿದಂತೆ ಚುನಾವಣೆಗೆ ಬೇಕಿರುವ ಪ್ರಕ್ರಿಯೆಗಳು…

  • ವಿಸ್ಮಯ ಜಗತ್ತು

    256 ವರ್ಷ ಬದುಕಿದ ವ್ಯಕ್ತಿ ಎಷ್ಟು ಪತ್ನಿಯರ ಅಂತ್ಯ ಸಂಸ್ಕಾರ ಮಾಡಿದ್ದ ಗೊತ್ತಾ? ತಿಳಿಯಲು ಈ ಲೇಖನ ಓದಿ ..

    ಮನುಷ್ಯ ಹೆಚ್ಚು ಅಂದ್ರೆ 100, 150 ವರ್ಷ ಬದುಕಿರುವ ಸುದ್ದಿಗಳನ್ನು ನಾವು ಕೇಳಿದ್ದೇವೆ. 150 ವರ್ಷದ ವ್ಯಕ್ತಿ ಇನ್ನೂ ಬದುಕಿದ್ದಾನೆ ಎಂದ್ರೆ ಎಲ್ಲರೂ ಆಶ್ಚರ್ಯಪಡ್ತೇವೆ. ಆದ್ರೆ ಚೀನಾದಲ್ಲೊಬ್ಬ ವ್ಯಕ್ತಿ 256 ವರ್ಷ ಬದುಕಿದ್ದ.

  • ಉಪಯುಕ್ತ ಮಾಹಿತಿ

    ನಿಮ್ಮ ಪಾನ್‌ಕಾರ್ಡ್‌ ಆಧಾರ್‌ ಜೊತೆ ಲಿಂಕ್ ಆಗಿದೆಯೇ? ತಿಳಿಯೋದು ಹೇಗೆ? ಇಲ್ಲಿದೆ ವಿವರ

    ಸರ್ಕಾರ ನಿಗದಿಪಡಿಸಿದ ಸಮಯದ ಒಳಗೆ ಪಾನ್ಅನ್ನು ಆಧಾರ್ ಜೊತೆ ಲಿಂಕ್ ಮಾಡದಿದ್ದರೆ ಅದು ನಿಷ್ಕ್ರೀಯವಾಗುತ್ತದೆ. 31 ಮಾರ್ಚ್ 2022ರ ವರೆಗೆ ಇದ್ದ ಅವಧಿಯನ್ನು ಸರ್ಕಾರ ಮಾರ್ಚ್ 2023ರವರೆಗೆ ವಿಸ್ತರಿಸಿದೆ. ಆದ್ದರಿಂದ  (ಏಪ್ರಿಲ್ 1ರಿಂದ) ಲಿಂಕ್ ಮಾಡುವವರಿಗೆ ಶುಲ್ಕ ಅಪ್ಲೈ ಆಗಲಿದೆ. ಅಂದರೆ ದಂಡ ಶುಲ್ಕ  1000 ರೂಪಾಯಿ ತನಕ ಬೀಳಲಿದೆ. ಹೀಗಾಗಿ ನೀವು ಈಗಾಗಲೇ ಪಾನ್ ಲಿಂಕ್ ಮಾಡಿದ್ದರೆ ಅದು ಯಶಸ್ವಿಯಾಗಿದೆಯೇ? ಇಲ್ಲವೇ ಅನ್ನೋದನ್ನು ತಿಳಿಯೋದು ಹೇಗೆ? ಇಲ್ಲಿದೆ ವಿವರ. ಆದಾಯ ತೆರಿಗೆ ಕಾಯ್ದೆ 139 ಎಎ…

  • ಸುದ್ದಿ

    750 ಕೋಟಿ ರೂ. ವೆಚ್ಚದಲ್ಲಿ ಕಲಬುರಗಿಗೆ ಶಾಶ್ವತ ಕುಡಿಯವ ನೀರು ಯೋಜನೆ…!

    ಕಲಬುರಗಿ ಮಹಾನಗರಕ್ಕೆ ಶಾಶ್ವತ ಕುಡಿಯವ ನೀರು ಕಲ್ಪಿಸುವ ಸಂಬಂಧ 750 ಕೋಟಿ ರೂ.ಗಳ ವೆಚ್ಚದ ಯೋಜನೆಗೆ ಮುಂದಿನ ಮೂರು ತಿಂಗಳಲ್ಲಿ ಚಾಲನೆ ನೀಡಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಅವರು ಘೋಷಿಸಿದ್ದಾರೆ. ಕಲಬುರಗಿ ಪಾಲಿಕೆಯ ಸ್ಮಾರಕ ಭವನ (ಟೌನ್‍ಹಾಲ್) ದಲ್ಲಿ ಮಂಗಳವಾರ ಜನಸ್ಪಂದನ ಕಾರ್ಯಕ್ರಮದ ಬಳಿಕ ಪತ್ರಕರ್ತರನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಮುಂದಿನ 5 ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದ್ದು, ಭೀಮಾ ನದಿ, ಬೆಣ್ಣೆತೊರಾವಲ್ಲದೆ, ನಗರದ ಕಲ್ಯಾಣಿಗಳು, ಬಾವಿಗಳು ಮುಂತಾದ ನೀರಿನ ಮೂಲಗಳನ್ನು ಪತ್ತೆ ಹಚ್ಚಿ ಯೋಜನೆ…

  • ಸುದ್ದಿ

    ಬಸ್ ನ ಚಕ್ರ ಸ್ಫೋಟಗೊಂಡು 34 ಮಂದಿ ಪ್ರಯಾಣಿಕರಿದ್ದ ಬಸ್ ಪಲ್ಟಿ…!

    ಚಿಕ್ಕೋಡಿ: ಚಕ್ರ ಸ್ಫೋಟಗೊಂಡು ಚಲಿಸುತ್ತಿದ್ದ ಬಸ್ ಪಲ್ಟಿಯಾದ ಪರಿಣಾಮ ಸುಮಾರು 10ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ರಕ್ಷಿ ಗ್ರಾಮದಲ್ಲಿ ನಡೆದಿದೆ. ಸಾರಿಗೆ ಬಸ್ ಗೋಕಾಕ್‍ನಿಂದ ಸಂಕೇಶ್ವರ ಪಟ್ಟಣದತ್ತ ಹೋಗುತಿತ್ತು. ಬಸ್ಸಿನಲ್ಲಿ ಸುಮಾರು 34 ಮಂದಿ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು. ಬೆಳಗಾವಿ ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದ ಪರಿಣಾಮ ಬಸ್ ಚಾಲಕನ ನಿಯಂತ್ರಣ ತಪ್ಪಿ ಅಡ್ಡದಿಡ್ಡಿ ಹೋಗುತಿತ್ತು. ಬಸ್ ರಕ್ಷಿ ಗ್ರಾಮದ ಹೊರವಲಯದ ಯರಗಟ್ಟಿ – ಸಂಕೇಶ್ವರ ರಾಜ್ಯ ಹೆದ್ದಾರಿ ಮೇಲೆ ಬರುತ್ತಿದ್ದಂತೆ ಏಕಾಏಕಿ…

  • ಜ್ಯೋತಿಷ್ಯ

    ದಿನ ಭವಿಷ್ಯ ಶನಿವಾರ, ಈ ದಿನದ ರಾಶಿ ಭವಿಷ್ಯದ ಜೊತೆಗೆ ನಿಮ್ಮ ಅದೃಷ್ಟದ ಸಂಖ್ಯೆ ಯಾವುದೆಂದು ತಿಳಿಯಿರಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 9663218892 Raghavendrastrology@gmail.com ಮೇಷ(15 ಡಿಸೆಂಬರ್, 2018) ದಿನದಲ್ಲಿ ನಂತರಹಣಕಾಸು ಪರಿಸ್ಥಿತಿಗಳು ಸುಧಾರಿಸುತ್ತವೆ. ಸಂಬಂಧಗಳೊಂದಿಗಿನ ಸಂಬಂಧಗಳು ಹಾಗೂ ಬಂಧಗಳ ನವೀಕರಣದ ಒಂದು ದಿನ. ನಿಮ್ಮಪ್ರಿಯತಮೆಯ ಜೊತೆ…