ಸುದ್ದಿ

ಸೂರತ್ ಕೋಚಿಂಗ್ ಸೆಂಟರ್ಗೆ ಅಗ್ನಿ ಅವಘಡ; ಸಾವಿನ ಸಂಖ್ಯೆ 20ಕ್ಕೆ ಏರಿಕೆ, ತನಿಖೆ ಆರಂಭ….!

27

ಗುಜರಾತ್ ನ ಸೂರತ್ ನಲ್ಲಿ ನಡೆದ ಭೀಕರ ಕಟ್ಟಡ ಅಗ್ನಿ ಅಘಡದಲ್ಲಿ ಸಾವಿಗೀಡಾದವರ ಸಂಖ್ಯೆ 20ಕ್ಕೆ ಏರಿಕೆಯಾಗಿದ್ದು, ಹಲವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.ಸೂರತ್ ಸಾರ್ತನ ಪ್ರದೇಶದ ತಕ್ಷಶಿಲಾ ಆರ್ಕೇಡ್ ಕಟ್ಟಡದ ಮೂರನೇ ಮಹಡಿಯಲ್ಲಿದ್ದ ಕೋಚಿಂಗ್ ಸೆಂಟರ್ ನಲ್ಲಿ ಇಂದು ಮಧ್ಯಾಹ್ನ 3.30ರ ಸುಮಾರಿನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಈ ಅಗ್ನಿ ಅವಘಡ ಸಂಭವಿಸಿದೆ. ಮೂಲಗಳ ಪ್ರಕಾರ ಘಟನೆಯಲ್ಲಿ ಈ ವರೆಗೂ ಸುಮಾರು 20 ಮಂದಿ ಸಾವಿಗೀಡಾಗಿದ್ದು, ಮೃತರಲ್ಲಿ ಬಹುತೇಕರು ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ.


ಇನ್ನು ಅಗ್ನಿ ಅವಘಡ ಸಂದರ್ಭದಲ್ಲಿ ಹಲವು ಬೆಂಕಿಯ ಕೆನ್ನಾಲಿಗೆಯಿಂದ ತಪ್ಪಿಸಿಕೊಳ್ಳಲು ಮೇಲಿಂದಲೇ ಕೆಳಗೆ ಧುಮುಕಿದ್ದಾರೆ. ಈ ವೇಳೆ ಕೆಳಗಡೆ ನಿಂತಿದ್ದ ಜನಸ್ತೋಮ ಅವರನ್ನು ಹೆಚ್ಚಿನ ಅಪಾಯವಾಗದಂತೆ ರಕ್ಷಿಸಿದೆ. ಆದರೂ ಕೆಳಗೆ ಬಿದ್ದವರ ಪೈಕಿ ಹಲವರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಇನ್ನು ವಿದ್ಯಾರ್ಥಿಗಳು ಕೆಳಗೆ ಹಾರುತ್ತಿದ್ದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ

.
ಘಟನಾ ಸ್ಥಳಕ್ಕೆ 16 ಅಗ್ನಿಶಾಮಕ ವಾಹನಗಳು ಆಗಮಿಸಿ ತುರ್ತು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಅಂತೆಯೇ ಕಟ್ಟಡದಲ್ಲಿದ್ದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ರಕ್ಷಿಸಲಾಗಿದೆ. ಅಲ್ಲದೆ ಕಟ್ಟಡದಲ್ಲಿ ಇನ್ನೂ ಹಲವರು ಸಿಲುಕಿಕೊಂಡಿರುವ ಸಾಧ್ಯತೆ ಇದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.


ಕಟ್ಟಡದ ಮಾಲೀಕ ಪರಾರಿ
ಇನ್ನು ಕಟ್ಟಡದ ಅಗ್ನಿ ಅವಘಡ ವಿಚಾರಕ್ಕೆ ಸಂಬಂಧಿಸಿದಂತೆ ಸೂರತ್ ಪೊಲೀಸರು ತನಿಖೆ ಆರಂಭಿಸಿದ್ದು, ಪ್ರಾಥಮಿಕ ತನಿಖೆಯಲ್ಲಿ ಕಟ್ಟಡದಲ್ಲಿ ಯಾವುದೇ ರೀತಿಯ ಬೆಂಕಿ ನಿಯಂತ್ರಣ ವ್ಯವಸ್ಥೆ ಇರಲಿಲ್ಲ ಮತ್ತು ಅಗ್ನಿ ಅವಘಡದಂತಹ ಸಂದರ್ಭದಲ್ಲಿ ತುರ್ತಾಗಿ ಪರಾರಿಯಾಗಲು ಯಾವುದೇ ಪರ್ಯಾಯ ಮಾರ್ಗ ಕೂಡ ಇರಲಿಲ್ಲ. ಹೀಗಾಗಿ ಕಟ್ಟಡದ ಮಾಲೀಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಸ್ತುತ ಕಟ್ಟಡದ ಮಾಲೀಕ ಪರಾರಿಯಾಗಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ಮಂಗಳವಾರದ ನಿಮ್ಮ ರಾಶಿ ಭವಿಷ್ಯ ಮಂಗಳವಾಗಿದೆಯೇ ನೋಡಿ ತಿಳಿಯಿರಿ…ಶೇರ್ ಮಾಡಿ

    ಮಂಗಳವಾರ, 24/04/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ಅನಿರೀಕ್ಷಿತ ಸಂಚಾರ. ಹೂವು ವ್ಯಾಪಾರಿಗಳಿಗೆ ಲಾಭ.ನಿರುದ್ಯೋಗಿಗಳಿಗೆ ಶುಭವಾರ್ತೆ. ಬಂದುಗಳ ಆಗಮನ. ಜೀವನದಲ್ಲಿ ಹೆಚ್ಚು ಧನಾತ್ಮಕ ಬದಲಾವಣೆಗಳನ್ನು ಪಡೆಯುತ್ತೀರಿ. ವೃಷಭ:- ಮನೆಯಲ್ಲಿ ದೇವತಾಕಾರ್ಯಗಳು ನಡೆಯಲಿವೆ. ಮನೆಯವರ ಹಾಗೂ ಸ್ನೇಹಿತರ ಸಹಕಾರ ಇರಲಿದೆ. ಹಣಕಾಸಿನ ವಿಷಯದಲ್ಲಿ  ಜಾಗ್ರತೆ ಇರಲಿ.ನಿಮ್ಮ ಹಣದ ಖರ್ಚಿನ ಬಗ್ಗೆ ಜಾಗ್ರತೆ ಇರಲಿ. ದೀರ್ಘ ಪ್ರಯಾಣ ಅನುಕೂಲಕರವಾಗಿರುತ್ತದೆ.ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ. ಮಿಥುನ:– ವ್ಯಾಪಾರ, ವ್ಯವಹಾರಗಳಲ್ಲಿ ಅಧಿಕ ಆದಾಯ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ.ವೃತ್ತಿರಂಗದಲ್ಲಿ…

  • ಸುದ್ದಿ

    ಮೈಸೂರಿನ ರೈತ ಸಮುದಾಯಕ್ಕೆ ಮತ್ತೊಂದು ಸಿಹಿ ಸುದ್ದಿ….!

    ಮೈಸೂರು ಜಿಲ್ಲೆಯಲ್ಲಿ ಪ್ರವಾಹದಿಂದ ಸಂತ್ರಸ್ತರಾದ ರೈತರ ಬ್ಯಾಂಕಿನ ಸಾಲ ಮರುಪಾವತಿ ಅವಧಿಯನ್ನು ಒಂದು ವರ್ಷ ವಿಸ್ತರಿಸಲಾಗಿದೆ. ಪ್ರವಾಹದಿಂದ ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ, ಟಿ. ನರಸೀಪುರ, ಪಿರಿಯಾಪಟ್ಟಣ, ನಂಜನಗೂಡು, ಹುಣಸೂರು ತಾಲ್ಲೂಕಿನ ರೈತರು ಬೆಳೆ ನಷ್ಟ ಅನುಭವಿಸಿದ್ದಾರೆ. ಇದರಿಂದ ಸಕಾಲಕ್ಕೆ ಬ್ಯಾಂಕ್ ಸಾಲವನ್ನು ಮರುಪಾವತಿಸಲು ಸಾಧ್ಯವಾಗಿಲ್ಲ. ಭಾರತೀಯ ರಿಸರ್ವ್ ಬ್ಯಾಂಕಿಗೆ ರಾಜ್ಯ ಸರ್ಕಾರ ಈ ಕುರಿತಾಗಿ ಮನವಿ ಸಲ್ಲಿಸಿದ್ದು‌, ಸರ್ಕಾರದ ಮನವಿ ಮೇರೆಗೆ ಭಾರತೀಯ ರಿಸರ್ವ್ ಬ್ಯಾಂಕ್ ರೈತರು ಪಡೆದ ಸಾಲ ಮರುಪಾವತಿ ಅವಧಿಯನ್ನು ಒಂದು ವರ್ಷದ…

  • ಆರೋಗ್ಯ

    ಸೌತೆಕಾಯಿಯ ಜೂಸ್ ಕುಡಿಯೋದ್ರಿಂದ, ನಮ್ಮ ದೇಹಕ್ಕೆ ಏನೆಲ್ಲಾ ಉಪಯೋಗಗಳು ಇವೆ ಗೊತ್ತಾ..?

    ದಿನನಿತ್ಯ ಬೆಳಗಿನ ಜಾವದಲ್ಲಿ ಖಾಲಿ ಹೊಟ್ಟೆಯಲ್ಲಿ ಒ೦ದು ಲೋಟದಷ್ಟು ತಾಜಾ ಸೌತೆಕಾಯಿಯ ರಸವನ್ನು ಕುಡಿಯಲು ಪ್ರಯತ್ನಿಸಿದರೆ ನಿಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು ಹಾಗು ನಿಮ್ಮ ಶರೀರದ ತೂಕನು ಕಡಿಮೆ ಮಾಡಿಕೊಳ್ಳಬಹುದು.

  • ಕ್ರೀಡೆ

    ಈ ಭಾರಿಯ ಐಪಿಎಲ್ ವಿದೇಶದಲ್ಲೋ? ಅಥವಾ ಭಾರತದಲ್ಲೋ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..

    ಈ ಬಾರಿಯ ಐಪಿಎಲ್ ಕ್ರಿಕೆಟ್ ಸರಣಿ ವಿದೇಶದಲ್ಲಿ ನಡೆಯುತ್ತದೆ ಎಂಬ ಸುದ್ಧಿ ಎಲ್ಲೆಡೆ ಹರಡಿತ್ತು. ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿರುವ ಬಿಸಿಸಿಐ ಈ ಬಾರಿಯ ಐಪಿಎಲ್ ಎಲ್ಲಿ ನಡೆಯುತ್ತದೆ ಎಂಬುದನ್ನು ಸ್ಪಷ್ಟ ಪಡಿಸಿದೆ. ಭಾರತದಲ್ಲಿ ಲೋಕಸಭಾ ಚುನಾವಣೆ ಇರುವ ಕಾರಣ ವಿದೇಶದಲ್ಲಿ ಐಪಿಎಲ್ ನಡೆಯಲಿದೆ ಎನ್ನಲಾಗಿತ್ತು. 2009 ದಿಲ್ಲಿ ಭಾರತದಲ್ಲಿ ಲೋಕಸಭಾ ಚುನಾವಣೆ ಇದ್ದ ಕಾರಣ ದಕ್ಷಿಣ ಆಫ್ರಿಕಾದಲ್ಲಿ ಐಪಿಎಲ್ ನಡೆಸಲಾಗಿತ್ತು. ಈ ಬಾರಿಯೂ ಸಹ ವಿದೇಶದಲ್ಲಿ ಸರಣಿ ನಡೆಯಲಿದೆ ಎಂಬ ಮಾತುಗಳು ಕೇಳಿ ಬಂದಿದ್ದವು.ಆದರೆ ಈ…

  • ಶ್ರದ್ಧಾಂಜಲಿ

    ಖ್ಯಾತ ನಟ ನಂದಮೂರಿ ತಾರಕರತ್ನ ನಿಧನ

    ಬೆಂಗಳೂರು: ಟಾಲಿವುಡ್​ ಖ್ಯಾತ ನಟ ನಂದಮೂರಿ ತಾರಕರತ್ನ (Nandamuri Taraka Ratna) ನಿಧನರಾಗಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಇಂದು(ಫೆ.18) ಬೆಂಗಳೂರಿನ ನಾರಾಯಣ ಹೃದಯಾಲದಲ್ಲಿ ತಾರಕರತ್ನ(39) ಕೊನೆಯುಸಿರೆಳೆದಿದ್ದಾರೆ.  ಜನವರಿ 27ರಂದು ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಕುಪ್ಪಂ ಬಳಿ ಟಿಡಿಪಿ ಪಾದಯಾತ್ರೆ ವೇಳೆ ಕುಸಿದುಬಿದ್ದಿದ್ದರು. ಆ ವೇಳೆ ತಾರಕರತ್ನಗೆ ಹೃದಯಸ್ತಂಭನವಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಬೆಂಗಳೂರಿನ ನಾರಾಯಣ ಹೃದಯಾಲಕ್ಕೆ ಶಿಫ್ಟ್​ ಮಾಡಲಾಗಿತ್ತು.  23 ದಿನಗಳಿಂದ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತಾರಕರತ್ನ ಅವರಿಗೆ, ಬೆಂಗಳೂರಿನ ನಾರಾಯಣ ಆಸ್ಪತ್ರೆಯಲ್ಲಿ ನುರಿತ…

  • ನೆಲದ ಮಾತು

    ಪಾಕ್ ಗಡಿಗೆ ಸಂಬಂದಿಸಿ,ಭಾರತೀಯ ಸೇನೆಯಿಂದ ಮತ್ತೊಂದು ಸರ್ಜಿಕಲ್ ಸ್ಟ್ರೈಕ್..!ತಿಳಿಯಲು ಇದನ್ನು ಓದಿ..

    ಭಾರತೀಯ ಸೇನೆ ಮತ್ತೊಮ್ಮೆ ಉಗ್ರರ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ನಡೆಸಿದೆ ಎಂದು ವರದಿಯಾಗಿದೆ.ಕದನ ವಿರಾಮ ಉಲ್ಲಂಘಿಸಿ ಭಾರತದ ತಾಳ್ಮೆ ಕೆಣಕುತ್ತಿರುವ ಪಾಕಿಸ್ತಾನಕ್ಕೆ ಭಾರತೀಯ ಸೇನೆ ಮತ್ತೊಮ್ಮೆ ತಕ್ಕ ತಿರುಗೇಟು ನೀಡಿದೆ.