ಸುದ್ದಿ

ದೇವಸ್ತಾನದಲ್ಲಿ ಪ್ರಸಾದ ಸೇವಿಸಿ ಬಾಲಕ ಸಾವು, 20ಕ್ಕೂ ಹೆಚ್ಚು ಮಂದಿ ಅನಾರೋಗ್ಯ…!

41

ತುಮಕೂರು: ಸುಳ್ವಾಡಿ ವಿಷ ಪ್ರಸಾದ ದುರಂತ ಮರೆಮಾಚುವ ಮುನ್ನವೇ ತುಮಕೂರು ಜಿಲ್ಲೆ ಅಂತಹದ್ದೇ ಘಟನೆ ಮರುಕಳಿಸಿದ್ದು, ಓರ್ವ ಬಾಲಕ ಸಾವನ್ನಪ್ಪಿದ್ದಾನೆ.

ಶಿರಾ ತಾಲೂಕಿನ ವೀರಭದ್ರ (16) ಮೃತ ಬಾಲಕ. ಗಂಗಾಧರ್, ತಿಪ್ಪೇಸ್ವಾಮಿ, ರುದ್ರೇಶ್, ನಾಗರತ್ನ, ಪವನ್, ಅರ್ಪಿತಾ, ವಿರೂಪಾಕ್ಷ ಸೇರಿದಂತೆ 20ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದಾರೆ. ಶಿರಾ ವ್ಯಾಪ್ತಿಯ ಜನರಿಗೆ ಶಿರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬೆಂಗಳೂರಿನಿಂದ ಬಂದಿದ್ದ ಭಕ್ತರಿಗೆ ಬೆಂಗಳೂರಿನಲ್ಲಿಯೇ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ.
ಆಗಿದ್ದೇನು?:

ಪಾವಗಡ ತಾಲೂಕಿನ ನಿಡಗಲ್ಲು ಗ್ರಾಮದ ವೀರಭಧ್ರಸ್ವಾಮಿ ದೇವಾಲಯದಲ್ಲಿ ಸೋಮವಾರ ವಿಶೇಷ ಪೂಜೆ ಮಾಡಲಾಗಿತ್ತು. ಈ ನಿಟ್ಟಿನಲ್ಲಿ ಶಿರಾ ಮೂಲದ ಭಕ್ತರು ದೇವಸ್ಥಾನಕ್ಕೆ ಬಂದಿದ್ದರು. ಆದರೆ ನೀರಿನ ಕೊರತೆಯಿಂದಾಗಿ ತೊಟ್ಟಿಯ ನೀರು ಬಳಸಿ ಹರಿಸೇವೆ ಪ್ರಸಾದ ತಯಾರಿಸಿದ್ದಾರೆ.

ಕರಿಕಡಬು, ಪಲ್ಯ, ಬೆಳೆಕಾಳು ಸಾರು, ಚಿತ್ರಾನ್ನ ಸೇವಿಸಿದ ಬಳಿಕ 20ಕ್ಕೂ ಹೆಚ್ಚು ಜನರಿಗೆ ವಾಂತಿ ಭೇದಿ ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನು ಶಿರಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಾಲಕ ವೀರಭದ್ರ ಸ್ಥಿತಿ ಚಿಂತಾಜನಕವಾಗಿತ್ತು. ಹೀಗಾಗಿ ಆತನನ್ನು ಬರಗೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಿದ್ದರಿಂದ ಬಾಲಕನನ್ನು ತುಮಕೂರಿನ ಜಿಲ್ಲಾಸ್ಪತ್ರೆಗೆ ಸಾಗಿಸುತ್ತಿತ್ತು. ಆದರೆ ಮಾರ್ಗ ಮಧ್ಯದಲ್ಲಿಯೇ ವೀರಭದ್ರ ಪ್ರಾಣ ಬಿಟ್ಟಿದ್ದಾನೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಇಂಡಿಯನ್ ರಿಯಾಲಿಟಿ ಶೋ ಮತ್ತು ಬಿಗ್ಬಾಸ್ ಖ್ಯಾತಿಯ ಸುನಾಮಿ ಕಿಟ್ಟಿಯನ್ನು, ಅರೆಸ್ಟ್ ಮಾಡಿದ್ದು ಏಕೆ ಗೊತ್ತಾ..?ತಿಳಿಯಲು ಈ ಲೇಖನ ಓದಿ…

    ಇಂಡಿಯನ್ ರಿಯಾಲಿಟಿ ಶೋ ವಿನ್ನರ್ ಮತ್ತು ಬಿಗ್ಬಾಸ್ ಖ್ಯಾತಿಯ ಸುನಾಮಿ ಕಿಟ್ಟಿ ಈಗ ಪೋಲೀಸರ ಅತಿಥಿಯಾಗಿದ್ದಾರೆ.

  • ಸುದ್ದಿ

    ಕುಮಾರಸ್ವಾಮಿಯವರು ಆಪರೇಷನ್ ಕಮಲಕ್ಕೆ ಬೆಚ್ಚಿಬಿದ್ರಾ..?ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದೇಕೆ..?

    ಲೋಕಸಭಾ ಚುನಾವಣೆಯವರೆಗೆ ತಣ್ಣಗಿದ್ದ ಆಪರೇಷನ್ ಕಮಲ ವಿಚಾರ ಮತದಾನ ಮುಗಿದ ಬಳಿಕ ತರೆಮರೆಯಲ್ಲಿ ಆರಂಭವಾಗಿದೆ ಎನ್ನಲಾಗಿದ್ದು, ಈಗ ಸಿಎಂ ಎಚ್‍ಡಿ ಕುಮಾರಸ್ವಾಮಿ ಅವರು ತಮ್ಮ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದಾರೆ. ರಮೇಶ್ ಜಾರಕಿಹೊಳಿ ರಾಜೀನಾಮೆ ಮಾತಿನ ಬೆನ್ನಲ್ಲೇ ಸಿಎಂ ಕುಮಾರಸ್ವಾಮಿ ಅವರಿಗೆ ಆತಂಕ ಶುರುವಾಗಿದೆ ಎನ್ನಲಾಗಿದ್ದು ಹೀಗಾಗಿ ಶಾಸಕರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಲು ಭಾನುವಾರ ಸಂಜೆ ಖಾಸಗಿ ಹೋಟೆಲ್‍ನಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಲೋಕಸಭೆ ಚುನಾವಣೆ ಬಳಿಕ ನಡೆಯಲಿರುವ ಮೊದಲ ಜೆಡಿಎಸ್ ಶಾಸಕಾಂಗ ಸಭೆ ಇದಾಗಿದೆ….

  • ಮನರಂಜನೆ

    ಬಿಗ್ ಬಾಸ್ ಮನೆಯಲ್ಲಿ ವಾಂಗಿಬಾತ್, ಚಿತ್ರಾನ್ನಕ್ಕಾಗಿ ದೀಪಿಕಾ ಚಂದನ್ ನಡುವೆ ಕಿತ್ತಾಟ.

    ಕನ್ನಡ ಬಿಗ್‍ಬಾಸ್ ಇನ್ನೇನು ಮೂರೂ ವಾರಗಳ ಕಾಲ ನಡೆಯಲ್ಲಿದ್ದು ಮುಕ್ತಾಯಗೊಳ್ಳಲಿದೆ. ಈಗ ಬಿಗ್ ಬಾಸ್ ಮನೆಯಲ್ಲಿ ಮತ್ತೊಂದು ಗಲಭೆ ಸೃಷ್ಟಿಯಾಗಿದೆ. ಹೌದು ಅಡುಗೆ ಮನೆಯಲ್ಲಿ ವಾಂಗಿಬಾತ್ ಮತ್ತು ಚಿತ್ರಾನ್ನಕ್ಕಾಗಿ ಚಂದನ್ ಆಚಾರ್ ಮತ್ತು ದೀಪಿಕಾ ದಾಸ್ ನಡುವೆ ಮಾತಿನ ಚಕಮುಕಿ ನಡೆದಿದೆ. ಅಡುಗೆ ಮನೆಯಲ್ಲಿ ಎಲ್ಲರೂ ಸೇರಿ ಅಡುಗೆ ಮಾಡುತ್ತಿದ್ದಾಗ, ದೀಪಿಕಾ ಮತ್ತು ಚಂದನ್ ನಡುವೆ ಅಡುಗೆ ಮಾಡುವ ವಿಚಾರಕ್ಕೆ ವಾಗ್ವಾದ ಸೃಷ್ಠಿಯಾಗಿದೆ. ದೀಪಿಕಾ ದಾಸ್ ಅವರು ಚಂದನ್ ಗೆ ನಾಳೆ ನೀವು ಅಡುಗೆ ಮಾಡಿ, ನಾಳಿದ್ದು…

  • ಸುದ್ದಿ

    ಕನ್ನಡದ ಕೋಟ್ಯಧಿಪತಿಯಲ್ಲಿ ಪುನೀತ್ ಬದಲು ಬೇರೆ ನಿರೂಪಕಿ! ಯಾರು?

    ರಚಿತಾ ರಾಮ್ ‘ಅನುಬಂಧ ಅವಾರ್ಡ್ಸ್2019’ರಲ್ಲಿ ಮೊದಲ ಬಾರಿಗೆ ನಿರೂಪಣೆಮಾಡುತ್ತಿದ್ದಾರೆ. ಚೆನ್ನಾಗಿದೆ ಅಂದ್ರೆ ಚೆನ್ನಾಗಿದೆ ಹೇಳಿ,ತಪ್ಪಿದ್ರೆ ಡಿಂಪಲ್ ನೋಡಿ ಕ್ಷಮಿಸಿಎಂದಿದ್ದರು. ಈಗ ಅವರು ಕೋಟ್ಯಧಿಪತಿಯಲ್ಲಿ ಪುನೀತ್ ಜಾಗವನ್ನು ಆಕ್ರಮಿಸಿಕೊಂಡರಾ? ಅಥವಾ ಅಪ್ಪು ಅವರೇಆ ಹುದ್ದೆ ಬಿಟ್ಟುಕೊಟ್ಟರಾ?ಎಂಬ ಪ್ರಶ್ನೆ ಮೂಡಬಹುದು. ಪುನೀತ್ ರಾಜ್‌ಕುಮಾರ್ ‘ಕನ್ನಡದ ಕೋಟ್ಯಧಿಪತಿ’ಯಲ್ಲಿ ನಿರೂಪಕರಾಗಿ ಜವಾಬ್ದಾರಿ ಹೊತ್ತಿದ್ದಾರೆ. ಆದರೆ ರಚಿತಾ ರಾಮ್ ಅಪ್ಪು ಜಾಗದಲ್ಲಿ ಕೂತು ಅಪ್ಪುಗೆ ಪ್ರಶ್ನೆ ಕೇಳುತ್ತಾರೆ, ಅದರ ಜೊತೆಗೆ ನಾಲ್ಕು ಆಪ್ಶನ್ ಕೊಡ್ತಾರೆ. ಹಾಟ್‌ಸೀಟ್‌ ಅಲ್ಲಿ ಕುಳಿತುಕೊಳ್ಳುವ ಸ್ಪರ್ಧಿಗಳಿಗೆ ಹೇಗೆ ಪ್ರಶ್ನೆಗಳನ್ನು ಕೇಳಲಾಗುತ್ತದೆಯೋ ಅದೇ…

  • ಸುದ್ದಿ

    ಕೊಟ್ಟ ಮಾತಿನಂತೆ ನಡೆದುಕೊಂಡ ನಟ ರಜನಿಕಾಂತ್‍,.ಇಷ್ಟಕ್ಕೂ ಆ ಮಾತಾದರೂ ಏನು ಗೊತ್ತಾ ,.??

    ಸೂಪರ್ ಸ್ಟಾರ್ ರಜನಿಕಾಂತ್ ಎಂದರೆ  ಯಾರಿಗೆ ತಾನೇ ಇಷ್ಟ ಇರಲ್ಲ ಹೇಳಿ ಅಂತವರು ತಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುವುದಕ್ಕಾಗಿ ತಮ್ಮ ಮಾತಿನಂತೆ ತಮಿಳುನಾಡಿನ ನೆರೆ ಸಂತ್ರಸ್ತರಿಗೆ ಮನೆಯನ್ನು ನೀಡುವ ಮೂಲಕ  ಸಹಾಯವನ್ನು ಮಾಡಿದ್ದಾರೆ  ಕಳೆದ ವರ್ಷ ತಮಿಳುನಾಡಿನಲ್ಲಿ ಸಂಭವಿಸಿದ ಸೈಕ್ಲೋನ್‍ ಬಗ್ಗೆ ನಿಮಗೆ ತಿಳಿದೇ  ಇದೆ  ಜನರು ತತ್ತರಿಸಿ ಹೋಗಿದ್ದು, ನೂರಾರು ಜನರು ಮನೆ, ಆಸ್ತಿ ಎಲ್ಲವನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದರು. ಈ ವೇಳೆ ಅನೇಕ ನಟರು ಅವರಿಗಾಗಿ ತಮ್ಮ ಕೈಲಾದ ಧನ ಸಹಾಯವನ್ನು ಮಾಡಿದ್ದರು. ಆದರೆ ರಜನಿಕಾಂತ್…

  • ಕ್ರೀಡೆ

    RCB ಸೋಲಿಗೆ ಕಾರಣವಾಗಿದ್ದು ಅದೊಂದು ಬಾಲ್.!ಆಕ್ರೋಶ ಹೊರಹಾಕಿದ ವಿರಾಟ್…

    ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್.ಸಿ.ಬಿ.) ತಂಡ 5 ರನ್ ನಿಂದ ಸೋಲು ಕಂಡಿದೆ. 1 ನೋಬಾಲ್ ನಿಂದಾಗಿ ಆರ್.ಸಿ.ಬಿ. ಪಂದ್ಯ ಕಳೆದುಕೊಳ್ಳುವಂತಾಗಿದ್ದು, ತಂಡದ ನಾಯಕ ವಿರಾಟ್ ಕೊಹ್ಲಿ ಆಕ್ರೋಶ ಹೊರಹಾಕಿದ್ದಾರೆ. ಮುಂಬೈ ತಂಡ ನೀಡಿದ 187 ರನ್ ಗೆಲುವಿನ ಗುರಿ ಬೆನ್ನತ್ತಿದ್ದ ಆರ್.ಸಿ.ಬಿ.ಗೆ ಕೊನೆಯ ಓವರಿನಲ್ಲಿ 17 ರನ್ ಗಳಿಸುವ ಅವಶ್ಯಕತೆ ಇತ್ತು. ಲಸಿತ್ ಮಾಲಿಂಗ ಎಸೆದ ಕೊನೆಯ ಓವರ್ ನ ಮೊದಲ ಎಸೆತದಲ್ಲಿ…