ಸುದ್ದಿ

ಟೈಮ್ ಪಾಸ್ ಮತ್ತು ವಿಶ್ರಾಂತಿಗಾಗಿ ಸ್ಮಾರ್ಟ್ ಫೋನ್ ನೋಡುತ್ತೀದ್ದಿರಾ?, ಆರೋಗ್ಯಕ್ಕೆ ಅದು ಒಳ್ಳೆಯದಲ್ಲ!

48

ಮೆಲ್ಬೋರ್ನ್: ಟೈಮ್ ಪಾಸ್ ಮಾಡುವುದಕ್ಕೆ ಅಥವಾ ವಿಶ್ರಾಂತಿ ತೆಗೆದುಕೊಳ್ಳುವುದಕ್ಕೂ ನೀವು ಸ್ಮಾರ್ಟ್ ಫೋನ್ ಮೊರೆ ಹೋಗುತ್ತೀರಿ ಎಂದಾದರೆ ಖಂಡಿತವಾಗಿಯೂ ನಿಮ್ಮ ಮಾನಸಿಕ ಆರೋಗ್ಯ ಸರಿ ಇಲ್ಲ ಎಂದು ಅರ್ಥ! ಹೀಗೆಂದು ಮಾನವ ವರ್ತನೆಗಳಲ್ಲಿ ಕಂಪ್ಯೂಟರ್ ಗಳು (Computers in Human Behavior) ಎಂಬ ನಿಯತಕಾಲಿಕೆಯ ಸಂಶೋಧನಾ ವರದಿ ಹೇಳುತ್ತಿದೆ. ಆಸ್ಟ್ರೇಲಿಯಾದ ಡೀಕಿನ್ ವಿಶ್ವವಿದ್ಯಾಲಯದ ಸಂಶೋಧಕರು ಸ್ಮಾರ್ಟ್ಫೋನ್ ನ ನಿರಂತರ ಬಳಕೆ ಮತ್ತು ಮಾನಸಿಕ ಯೋಗಕ್ಷೇಮದ ಬಗ್ಗೆ ಅಧ್ಯಯನ ನಡೆಸಿದ್ದಾರೆ.

ಮಾನಸಿಕ ಆರೋಗ್ಯದ ಮಟ್ಟ ಅತ್ಯುತ್ತಮವಾಗಿಲ್ಲದವರು, ನಕಾರಾತ್ಮಕ ಭಾವನೆಯುಳ್ಳವರು, ಸಂಯಮ ಕಡಿಮೆಯುಳ್ಳವರು, ಜೀವನದ ಉದ್ದೇಶವೇ ಕಳೆದುಕೊಂಡಿರುವಂತಾಗಿರುವವರು, ಸಾಮಾಜಿಕ ಒತ್ತಡವನ್ನು ನಿಯಂತ್ರಿಸುವ ಸಾಮರ್ಥ್ಯ ಕುಗ್ಗಿದವರು ಟೈಮ್ ಪಾಸ್, ವಿಶ್ರಾಂತಿಗಾಗಿ ಸ್ಮಾರ್ಟ್ ಫೋನ್ ನೋಡುತ್ತಿರುತ್ತಾರೆ ಎಂಬುದನ್ನು ಸಂಶೋಧಕರು ಮನಗಂಡಿದ್ದಾರೆ.

ಹಾಗಂತ ಸ್ಮಾರ್ಟ್ ಫೋನ್ ಸಂಪೂರ್ಣ ಕೆಟ್ಟದ್ದೂ ಅಲ್ಲ ಸಂವಹನದ ಮಟ್ಟ ಅಂದರೆ ಕರೆ, ಸಂದೇಶ ರವಾನೆ ಮಾಡುವುದಕ್ಕೆ ಸಂಬಂಧಪಟ್ಟಂತೆ ಸ್ಮಾರ್ಟ್ ಫೋನ್ ಗಳು ಮಾನಸಿಕ ಆರೋಗ್ಯಕ್ಕೆ ಸಕಾರಾತ್ಮಕವಾಗಿರಲಿದೆ ಎಂದು ಸಂಶೋಧಕರು ಹೇಳಿದ್ದಾರೆ.

ನೇರ ಸಂಪರ್ಕ ಹೊಂದುವುದಕ್ಕೆ ಸ್ಮಾರ್ಟ್ ಫೋನ್ ಗಳನ್ನು ಬಳಕೆ ಮಾಡುವುದು ಒಳ್ಳೆಯದು ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಜನರು ಏನು ಮಾಡುತ್ತಿದ್ದಾರೆ ಎಂಬುದನ್ನು ನಿಷ್ಕ್ರಿಯವಾಗಿ ಗಮನಿಸುತ್ತಾ ಕೂರುವುದು ಮಾನಸಿಕ ಆರೋಗ್ಯಕ್ಕೆ ಒಳ್ಳೇಯದಲ್ಲ ಎಂಬುದು ಸಂಶೋಧಕರು ಕಂಡುಕೊಂಡಿರುವ ಅಂಶ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಮನೆ ಬಾಡಿಗೆ ಕೊಡುವ ಮುನ್ನ ಹೆಚ್ಚರಿಕೆಯಿಂದಿರಿ ; ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಎಚ್ಚರಿಕೆ ನೀಡಿದ್ದಾರೆ.ಯಾಕೆ ಗೊತ್ತಾ.?

    ಯಾವುದೇ ತರಹದ ಗುಂಪಿನ ದಾಖಲೆಗಳನ್ನು ಹೊಂದಿರದ ಅಕ್ರಮ ವಲಸಿಗರಿಗೆ ಬಾಡಿಗೆ ಮನೆ ಕೊಡಬಾರದು, ಕೊಟ್ಟರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಎಚ್ಚರಿಕೆ ನೀಡಿದ್ದಾರೆ.  ಮನೆ ಮಾಲೀಕರು ಬಾಡಿಗೆ ಮನೆಯನ್ನು ಕೊಡುವ ಮೊದಲು ಅವರ ಬಗ್ಗೆ ಸಂಪೂರ್ಣ  ಮಾಹಿತಿ              ತಿಳಿದುಕೊಂಡ ಬಳಿಕ ಮನೆ ಬಾಡಿಗೆಗೆ ಕೊಡಿ ,ಬಾಡಿಗೆದಾರ ಅಕ್ರಮವಾಗಿ ನೆಲೆಸಿರುವುದು ಕಂಡುಬಂದರೆ ಸಂಬಂಧಪಟ್ಟ ಮನೆ ಮಾಲೀಕರ ವಿರುದ್ಧ ಕ್ರಮ  ಕೈಗೊಳ್ಳಲಾಗುವುದು.  ಮತ್ತು…

  • Health

    ಮಂಡಿ ಮತ್ತು ಕೀಲು ನೋವು ಕಡಿಮೆ ಮಾಡುವ 9 ಆಹಾರಗಳು ಯಾವುದು ಗೊತ್ತಾ ,..!

    ಮಂಡಿನೋವು ಬಂದರೆ ಚಿಕಿತ್ಸೆ ಜತೆಗೆ ಆಹಾರಕ್ರಮದ ಬಗ್ಗೆ ಗಮನ ಹರಿಸಿದರೆ ಬೇಗನೆ ಗುಣಮುಖರಾಗಬಹುದು. ಇಲ್ಲಿ ಮಂಡಿ ನೋವು ಕಡಿಮೆ ಮಾಡುವ 9 ಆಹಾರಗಳ ಬಗ್ಗೆ ಹೇಳಿದ್ದೇವೆ, ಇವುಗಳನ್ನು ನಿಮ್ಮ ಡಯಟ್‌ನಲ್ಲಿ ಸೇರಿಸಿ ಆರೋಗ್ಯ ಮರಳಿ ಪಡೆಯಿರಿ.ಮಧ್ಯ ವಯಸ್ಸು ದಾಟುತ್ತಿದ್ದಂತೆ ಮಂಡಿ ನೋವು ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆಯಾಗಿದೆ. ಡೆಂಗೆ, ಚಿಕನ್‌ಗುನ್ಯಾ ಈ ರೀತಿಯ ಕಾಯಿಲೆಗಳು ಬಂದಾಗ ಕೂಡ ಮಂಡಿ ನೋವಿನ ಸಮಸ್ಯೆ ಕಾಡುವುದು. ಮಂಡಿ ನೋವಿನ ಸಮಸ್ಯೆ ಬಂದಾಗ ಚಿಕಿತ್ಸೆ ಜತೆ ಡಯಟ್‌ ಕಡೆ ಗಮನ ನೀಡಿದರೆ…

  • ಸುದ್ದಿ

    ಜಗತ್ತಿನಲ್ಲೇ ಅತಿ ದುಬಾರಿ ಡೈವೋರ್ಸ್; ಪತ್ನಿಗೆ 2.4 ಲಕ್ಷ ಕೋಟಿ ರೂ ಪರಿಹಾರ ಕೊಟ್ಟಿದ್ದು ಯಾರು ಗೊತ್ತೇ.??

    ವಿಶ್ವದ ಅತೀದೊಡ್ಡ  ಶ್ರೀಮಂತ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದ ಅಮೇಜಾನ್​​​​ ಸಂಸ್ಥಾಪಕ ಹಾಗೂ ಸಿಇಒ ಜೆಫ್​​​ ಬೆಜೋಸ್ ಈ ಬಾರಿ 2ನೇ ಸ್ಥಾನಕ್ಕಿಳಿದಿದ್ದಾರೆ. 2019-20 ವರ್ಷದ ಮೂರನೇ ತ್ರೈಮಾಸಿಕದಲ್ಲಿ ಅಮೇಜಾನ್ ಕಂಪನಿಯ ನಿವ್ವಳ ಲಾಭಾಂಶ ಕಡಿಯಾಗಿದೆ. ಹಾಗಾಗಿ ಜೆಫ್​​​ ಬೆಜೋಸ್ ಒಟ್ಟು ಆಸ್ತಿ ಮೌಲ್ಯ 103.9 ಬಿಲಿಯನ್ ಡಾಲರ್​​ಗೆ ಇಳಿಕೆಯಾಗಿದ್ದು, 2ನೇ ಸ್ಥಾನಕ್ಕಿಳಿದಿದ್ದಾರೆ. ಇದೀಗ ವಿಶ್ವದ ಅತ್ಯಂತ ದೊಡ್ಡ ಶ್ರೀಮಂತ ಸ್ಥಾನವನ್ನು ಮತ್ತೆ ಮೈಕ್ರೋಸಾಫ್ಟ್​​​ ಸಹ ಸಂಸ್ಥಾಪಕ ಬಿಲ್​​ ಗೇಟ್ಸ್​ ಅಲಂಕರಿಸಿದ್ದಾರೆ. ಫೋರ್ಬ್ಸ್​​​ ಬಿಡುಗಡೆ ಮಾಡಿರುವ ಜಗತ್ತಿನ ಶ್ರೀಮಂತರ…

  • ಸುದ್ದಿ

    ಟ್ರಾಫಿಕ್ ಪೊಲೀಸ್ ಹಾಕಿದ ದುಬಾರಿ ದಂಡ ಕೇಳಿ ತನ್ನ ಬೈಕನ್ನೇ ಸುಟ್ಟ ಸವಾರ…!

    ಟ್ರಾಫ್ರಿಕ್ ನಿಯಮ ಉಲ್ಲಂಘಿಸಿ,  ದುಬಾರಿ ದಂಡ ಕಟ್ಟಲು ಸಾಧ್ಯವಾಗದೇ ಗೋಗೆರೆದ, ಮನವಿ ಮಾಡಿದ, ಪೊಲೀಸರಿಂದ ತಪ್ಪಿಸಿಕೊಂಡು ಹೋದ ಘಟನೆಗಳು ವರಿದಿಯಾಗಿದೆ. ಆದರೆ ದಂಡ ಮೊತ್ತ ಕೇಳಿ ತನ್ನ ಬೈಕನ್ನೇ ಸುಟ್ಟ ಘಟನೆ ನಡೆದಿದೆ. ಹೆಲ್ಮೆಟ್ ಹಾಕದೆ, ಸಿಗ್ನಲ್ ನೋಡದೆ, ಒನ್ ವೇ, ಪಾರ್ಕಿಂಗ್ ಗಮನಿಸದೆ, ನಾವು ನಡೆದಿದ್ದೇ ದಾರಿ ಎಂದು ಸವಾರಿ ಮಾಡುತ್ತಿದ್ದ ವಾಹನ ಸವಾರರು ಇದೀಗ ಟ್ರಾಫಿಕ್ ನಿಯಮ ಪಾಲಿಸುವಂತಾಗಿದೆ. ಒಂದೆರಡು ಸಿಗ್ನಲ್ ಜಂಪ್ ಮಾಡಿದರೆ ಸಾಕು ದಂಡ 20,000 ರೂಪಾಯಿ ದಾಟಿರುತ್ತೆ. ಹೀಗೆ ನಿಯಮ…

  • ಸುದ್ದಿ

    ಪತ್ನಿಗೆ ಬೆಂಕಿ ಹಚ್ಚಿ ತಾನೂ ವಿಷ ಸೇವಿಸಿದ 70 ವಯಸ್ಸಿನ ವೃದ್ಧ..!

    ಬೆಂಗಳೂರು: 70 ವರ್ಷದ ವೃದ್ಧನೋರ್ವ ತನ್ನ 65 ವರ್ಷದ ಪತ್ನಿಯನ್ನು ಕೊಂದು ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಆಘಾತಕಾರಿ ಘಟನೆಯೊಂದು ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.ಈ ಘಟನೆ ದೊಡ್ಡಬಳ್ಳಾಪುರ ಸಮೀಪದ ಚನ್ನಪುರ ಗ್ರಾಮದಲ್ಲಿ ನಡೆದಿದೆ. ವೃದ್ಧ ನಾರಾಯಣಪ್ಪ, ಪತ್ನಿ ಲಕ್ಷ್ಮಮ್ಮನ್ನು ಕೊಲೆ ಮಾಡಿದ್ದಾರೆ. ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಕುಟುಂಬದೊಂದಿಗೆ ನಡೆದ ವಾಗ್ವಾದವೇ ಈ ಘಟನೆಗೆ ಕಾರಣ ಎನ್ನಲಾಗುತ್ತಿದೆ. ಪತಿ, ಪತ್ನಿ ಬೇರೆ ಬೇರೆಯಾದ ಬಳಿಕ ನಾರಾಯಣಪ್ಪ ಅವರು ತಮ್ಮ ಬಳಿ ಇದ್ದ…

  • ಆರೋಗ್ಯ

    10ನೇ ತರಗತಿ ಬಾಲಕನ, ಈ ಸಾಧನೆ ಬಗ್ಗೆ ಕೇಳಿದ್ರೆ ನೀವು ಖಂಡಿತಾ ಶಾಕ್ ಆಗ್ತೀರಾ! ತಿಳಿಯಲು ಈ ಲೇಖನಿ ಓದಿ…

    ಹಾರ್ಟ್ ಅಟ್ಯಾಕ್ ಇದು ಮನುಷ್ಯನಿಗೆ ದೊಡ್ಡ ಸವಾಲಾಗಿರುವ ಕಾಯಿಲೆ.ಯಾಕೆಂದ್ರೆ ಇದು ಬರುವ ಮುನ್ಸೂಚನೆ ಯಾರಿಗೂ ಗೊತ್ತಾಗೊದಿಲ್ಲಾ. ಹಾರ್ಟ್ ಅಟ್ಯಾಕ್ ಯಾವಾಗ ಇಲ್ಲಿ ಆಗುತ್ತೆ ಅಂತ ಹೇಳೋದಕ್ಕೆ ಬರೋದಿಲ್ಲ.