ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬೆಂಗಳೂರು: 70 ವರ್ಷದ ವೃದ್ಧನೋರ್ವ ತನ್ನ 65 ವರ್ಷದ ಪತ್ನಿಯನ್ನು ಕೊಂದು ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಆಘಾತಕಾರಿ ಘಟನೆಯೊಂದು ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.ಈ ಘಟನೆ ದೊಡ್ಡಬಳ್ಳಾಪುರ ಸಮೀಪದ ಚನ್ನಪುರ ಗ್ರಾಮದಲ್ಲಿ ನಡೆದಿದೆ. ವೃದ್ಧ ನಾರಾಯಣಪ್ಪ, ಪತ್ನಿ ಲಕ್ಷ್ಮಮ್ಮನ್ನು ಕೊಲೆ ಮಾಡಿದ್ದಾರೆ. ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಕುಟುಂಬದೊಂದಿಗೆ ನಡೆದ ವಾಗ್ವಾದವೇ ಈ ಘಟನೆಗೆ ಕಾರಣ ಎನ್ನಲಾಗುತ್ತಿದೆ.
ಪತಿ, ಪತ್ನಿ ಬೇರೆ ಬೇರೆಯಾದ ಬಳಿಕ ನಾರಾಯಣಪ್ಪ ಅವರು ತಮ್ಮ ಬಳಿ ಇದ್ದ 32 ಗುಂಟೆ ಜಮೀನನ್ನು ಕಳೆದ ವರ್ಷ ಮಾರಾಟ ಮಾಡಿದ್ದರು. ಈ ಬಗ್ಗೆ ಮಗ ಹಾಗೂ ಮಗಳು ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.ಇತ್ತ ಜಾಗ ಮಾರಿ ಹೋಗಿದ್ದ ನಾರಾಯಣಪ್ಪನ ಕೈಯಲ್ಲಿ ಹಣ ಖಾಲಿಯಾದ ಬಳಿಕ ಮತ್ತೆ ತಮ್ಮ ಗ್ರಾಮಕ್ಕೆ ವಾಪಸ್ಸಾಗಿದ್ದರು. ಈ ವೇಳೆ ಪತ್ನಿ, ಮಕ್ಕಳು ಸೇರಿ ನಾರಾಯಣಪ್ಪ ಅವರನ್ನು ಮನೆಯೊಳಗೆ ಸೇರಿಸಿಕೊಂಡಿಲ್ಲ. ಹೀಗಾಗಿ ಅವರು ಅದೇ ಗ್ರಾಮದಲ್ಲಿರುವ ತಮ್ಮ ಅಣ್ಣನ ಮನೆಯಲ್ಲಿ ನಾರಾಯಣಪ್ಪ ವಾಸಿಸುತ್ತಿದ್ದರು.
15 ದಿನಗಳ ಬಳಿಕ ಮತ್ತೆ ತನ್ನ ಮನೆಯತ್ತ ಬಂದ ನಾರಾಯಣಪ್ಪ, ನಿನ್ನ ಮಕ್ಕಳಲ್ಲಿ ಕೇಸ್ ಹಿಂತೆಗೆದುಕೊಳ್ಳಲು ಹೇಳು. ಇಲ್ಲವೆಂದಲ್ಲಿ ಕೊಲ್ಲುವುದಾಗಿ ಪತ್ನಿಗೆ ಬೆದರಿಕೆ ಹಾಕಿದ್ದಾರೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮಕ್ಕಳು ತನ್ನ ಕೇಸ್ ಹಾಕಲು ಪತ್ನಿಯೂ ಬೆಂಬಲ ನೀಡಿದ್ದಾಳೆ ಎಂದು ನಾರಾಯಣಪ್ಪಗೆ ಸಂಶಯ ಮೂಡಿತ್ತು. ಇದೇ ಸಿಟ್ಟಿನಲ್ಲಿ ನಾರಾಯಣಪ್ಪ ಶನಿವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಮನೆಯೊಳಗೆ ನುಗ್ಗಿದ್ದಾರೆ. ಅಲ್ಲದೆ ಹಾಲ್ ನಲ್ಲಿ ಮಲಗಿದ್ದ ಪತ್ನಿ ಮೇಲೆ ಸೀಮೆ ಎಣ್ಣೆ ಸುರಿದು, ಆಕೆ ಓಡಿ ಹೋಗುವ ಮುಂಚೆ ಬೆಂಕಿ ಹಚ್ಚಿದ್ದಾರೆ.
ಪರಿಣಾಮ ಲಕ್ಷ್ಮಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂದರ್ಭದಲ್ಲಿ ಲಕ್ಷ್ಮಮ್ಮ ಮಗಳು ಮತ್ತು ಸೊಸೆ ಕೋಣೆಯಲ್ಲಿ ಮಲಗಿದ್ದರು. ಹೀಗಾಗಿ ಗಾಢ ನಿದ್ದೆಯಲ್ಲಿದ್ದ ಅವರಿಗೆ ಈ ವಿಚಾರ ಆ ಕೂಡಲೇ ತಿಳಿಯಲಿಲ್ಲ.ಇತ್ತ ಪತ್ನಿಯನ್ನು ಸಾಯಿಸಿದ ನಾರಾಯಣಪ್ಪ ತಾನೂ ವಿಷ ಸೇವಿಸಿ ಬಿದ್ದಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಾಯಿಸಿದರೂ ಅವರು ಅದಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.ದೊಡ್ಡಬಳ್ಳಾಪುರ ಗ್ರಾಮೀಣ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಮ್ಮ ಹಿರಿಯರು ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಬಾರದು ಎಂದು ನಮಗೆ ತಿಳಿಸುತ್ತಾರೆ. ಸಾಮಾನ್ಯವಾಗಿ ಪೂರ್ವ ದಿಕ್ಕಿಗೆ ಅಥವಾ ದಕ್ಷಿಣ ದಿಕ್ಕಿಗೆ ತಲೆ ಹಾಕಿ ಮಲಗಿಕೊಳ್ಳುವುದು ನಮ್ಮ ಹಿಂದೂ ಧರ್ಮದಲ್ಲಿ ವಾಡಿಕೆಯಾಗಿದೆ. ನಾವು ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಿದರೆ ಭೂತ ಪ್ರೇತಗಳು ನಮ್ಮನ್ನು ಆವರಿಸುತ್ತವೆ ಎಂಬ ಮೂಢನಂಬಿಕೆಗಳಿವೆ. ಅಲ್ಲದೆ ಪುರಾಣದಲ್ಲಿ ಗಣೇಶನಿಗೆ ತೊಡಿಸಿದ ಆನೆಯ ತಲೆಯನ್ನು ಕಡಿದಿದ್ದು ಸಹ ಅದು ಉತ್ತರಕ್ಕೆ ತಲೆ ಹಾಕಿ ಮಲಗಿದ್ದರಿಂದ. ಈ ಕಾರಣಕ್ಕೆ ನಾವು ಉತ್ತರಕ್ಕೆ ತಲೆ ಹಾಕಿ ಮಲಗಿದರೆ…
ನೀವು ರಾತ್ರಿಯಲ್ಲಿ ನಿದ್ರಾಹೀನತೆ ಸಮಸ್ಯೆ ಹೊಂದಿದ್ದರೆ, ಅರಿಶಿನ ಹಾಲು ನಿಮ್ಮ ನಿದ್ರೆಗೆ ಸಹಾಯಕವಾಗಬಹುದು. ರಾತ್ರಿ ಊಟದ ನಂತರ ಮಲಗುವ ಮುನ್ನ ಅರ್ಧ ಲೋಟ ಹಾಲನ್ನು ಅರಿಶಿನೊಂದಿಗೆ ಕುಡಿಯಿರಿ ಮತ್ತು ನಂತರ ನೀವು ರಾತ್ರಿಯಲ್ಲಿ ಹೇಗೆ ಮಲಗುತ್ತೀರಿ ಎಂಬುದನ್ನು ನೋಡಿ. ಅರಿಶಿನದ ಬಳಕೆ ದೇಹವನ್ನು ಹೊಳೆಯುವಂತೆ ಮಾಡುತ್ತದೆ. ಬೆಳಿಗ್ಗೆ ಒಂದು ಲೋಟ ಹಾಲಿನೊಂದಿಗೆ ಅರ್ಧ ಟೀ ಚಮಚ ಅರಿಶಿನ ಮಿಶ್ರಣ ಮಾಡಿ ಕುಡಿಯುವುದರಿಂದ ದೇಹವು ಹೊಳಪನ್ನು ಹೊಂದುತ್ತದೆ. ಈ ರೀತಿ ಪ್ರತಿದಿನ ಅರಿಶಿನ ಸೇವನೆಯೊಂದಿಗೆ ದೇಹದಲ್ಲಿ ಹೆಚ್ಚುವರಿ ಕೊಬ್ಬಿನ…
ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರಿಗೆ ಪ್ರಾಣಿ, ಪಕ್ಷಿ ಹಾಗೂ ಪರಿಸರದ ಮೇಲೆ ಇರುವ ಪ್ರೀತಿಯಿಂದ ಅರಣ್ಯ ಇಲಾಖೆ ನೆರವಿಗೆ ಮುಂದಾಗಿರುವುದು ಎಲ್ಲರಿಗೂ ತಿಳಿದಿದೆ. ಸದ್ಯ ದರ್ಶನ್ ಅವರ ಈ ಕಾರ್ಯಕ್ಕೆ ಹಾಸ್ಯ ನಟ ಚಿಕ್ಕಣ್ಣ ಅವರು ಕೂಡ ಕೈ ಜೋಡಿಸಿದ್ದಾರೆ. ಹೌದು, ದರ್ಶನ್ ಅವರು ತಮ್ಮ ಸಫಾರಿಯ ವೇಳೆ ಸೆರೆ ಹಿಡಿದಿದ್ದ ಫೋಟೋವನ್ನು ನಟ ಚಿಕ್ಕಣ್ಣ 1 ಲಕ್ಷ ರೂ. ನೀಡಿ ಖರೀದಿ ಮಾಡಿದ್ದಾರೆ. ಈ ಕುರಿತು ಮಾಹಿತಿ ನೀಡಿ ಟ್ವೀಟ್ ಮಾಡಿರುವ ದರ್ಶನ್, ‘ನಮ್ಮ…
ತರಕಾರಿಗಳಂತೆ ಕಾಳುಗಳಲ್ಲಿಯೂ ಸಹ ವಿಶೇಷವಾಗ ಪೋಷಕಾಂಶಗಳು ಇವೆ ಎಂಬುದು ನಮ್ಮೆಲ್ಲರಿಗೂ ತಿಳಿದಿರುವ ವಿಷಯ. ಕಾಳುಗಳನ್ನ ಮೊಳಕೆ ಕಟ್ಟಿ ತಿಂದರೆ ಇನ್ನು ಉತ್ತಮ. ಬನ್ನಿ ಹಾಗಾದರೆ ಮೊಳಕೆ ಕಾಳುಗಳಿಂದ ಏನೆಲ್ಲಾ ಪ್ರಯೋಜನಗಳು ನಮಗೆ ಲಭ್ಯ ಎಂಬುದನ್ನ ತಿಳಿದು ಕೊಳ್ಳೋಣ.
ಮೊಬೈಲ್ ಫೋನ್ ಬಳಕೆದಾರರು ತಮ್ಮ ಮೊಬೈಲ್ಗೆ ಬರುವ ಕರೆಯನ್ನು ಸ್ವೀಕರಿಸಲಿ ಅಥವಾ ಸ್ವೀಕರಿಸದಿರಲಿ. ಇನ್ಮುಂದೆ ಕೇವಲ 30 ಸೆಕೆಂಡ್ ರಿಂಗಣಿಸಲಿದೆ!ಅಂತೆಯೇ ಲ್ಯಾಂಡ್ಲೈನ್ ಫೋನ್ಗಳು 60 ಸೆಕೆಂಡ್ ರಿಂಗಣಿಸಲಿವೆ! ಅರೆ, ಇದೇನಿದು ಎಂದು ಹುಬ್ಬೇರಿಸಬೇಡಿ.ಮೊಬೈಲ್ ಫೋನ್ಗಳ ರಿಂಗಣವನ್ನು30 ಸೆಕೆಂಡ್ಗಳಿಗೆ ಮತ್ತು ಲ್ಯಾಂಡ್ಲೈನ್ ಫೋನ್ಗಳ ರಿಂಗಣವನ್ನು 60 ಸೆಕೆಂಡ್ಗಳಿಗೆ ಸೀಮಿತಗೊಳಿಸಿ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಆದೇಶ ಹೊರಡಿಸಿದೆ. ಒಳ ಬರುವ ಕರೆಗಳ ರಿಂಗಣ ಸಮಯವನ್ನು ಸೀಮಿತಗೊಳಿಸುವ ನಿಯಮದ ತಿದ್ದುಪಡಿಯಿಂದಾಗಿ ಮೊಬೈಲ್ಫೋನ್ ಮತ್ತು ಲ್ಯಾಂಡ್ಲೈನ್ ಗ್ರಾಹಕರಿಗೆ ನೀಡಲಾಗುವ ಸೇವೆಗಳ ಗುಣಮಟ್ಟವನ್ನು…
ಮಧ್ಯಪ್ರದೇಶ ಸರ್ಕಾರದ ಸಾಮಾಜಿಕ ನ್ಯಾಯ ಇಲಾಖೆ ,ವಿಧವೆಯರ ಬಾಳು ಬಂಗಾರಗೊಳಿಸುವ ಕಾರಣಕ್ಕಾಗಿ ಹೊಸ ಯೋಜನೆ ರೂಪಿಸಿದೆ.ಈ ಯೋಜನೆಯ ಪ್ರಕಾರ ವಿಧವೆಯನ್ನು ಪುನರ್ ವಿವಾಹವಾಗುವ ವ್ಯಕ್ತಿಗೆ, ಪ್ರೋತ್ಸಾಹ ಧನ ನೀಡಲಾಗುತ್ತದೆ.