ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬೆಂಗಳೂರು: ಮಾಜಿ ಸಚಿವ, ಗಣಿಧಣಿ ಜನಾರ್ದನ ರೆಡ್ಡಿ ಅವರು ತಮ್ಮ ಪತ್ನಿ ಲಕ್ಷ್ಮಿ ಅರುಣಾ ಅವರಿಗಾಗಿ ಮಾವಿನ ಮರ ಏರಿದ ವಿಡಿಯೋವೊಂದನ್ನು ತಮ್ಮ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿ ಬಾಲ್ಯದ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಖಾಸಗಿ ಕಾರ್ಯಕ್ರಮವೊಂದರ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದಲ್ಲಿರುವ ತಮ್ಮ ಮಾವನ ಮನೆಗೆ ಜನಾರ್ದನ ರೆಡ್ಡಿ ಅವರು ತಮ್ಮ ಕುಟುಂಬದೊಡನೆ ತೆರೆಳಿದ್ದರು. ಈ ವೇಳೆ ಪತ್ನಿ ಜೊತೆಗೆ ಮಾವನವರ ತೋಟಕ್ಕೆ ಭೇಟಿ ನೀಡಿದ್ದರು. ಆಗ ಅಲ್ಲಿದ್ದ ಮಾವಿನ ಮರವನ್ನು ಹತ್ತಿ ಪತ್ನಿಗಾಗಿ ಮಾವಿನ ಕಾಯಿಯನ್ನು ಕಿತ್ತುಕೊಟ್ಟಿದ್ದಾರೆ. ಜೊತೆಗೆ ತಮ್ಮ ಬಾಲ್ಯದ ದಿನಗಳನ್ನು ನೆನೆದಿದ್ದಾರೆ. ಅಲ್ಲದೆ ಈ ಖುಷಿ ಕ್ಷಣಗಳ ವಿಡಿಯೋವನ್ನು ಸೆರೆಹಿಡಿದಿದ್ದು, ವಿಡಿಯೋಗೆ `ಸವಿ ಸವಿ ನೆನಪು’ ಎಂಬ ಮೈ ಆಟೋಗ್ರಾಫ್ ಚಿತ್ರದ ಹಾಡನ್ನು ಹಾಕಿ ತಮ್ಮ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ.

ನೆನಪಿಗೆ ಬಂದ ಆ ಬಾಲ್ಯದ ದಿನಗಳು. ನಿನ್ನೆ ಕುಟುಂಬದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಂಧ್ರಪ್ರದೇಶದಲ್ಲಿರುವ ನಮ್ಮ ಮಾವನವರ ಊರಿಗೆ ತೆರಳಿದ್ದೆ. ಅದೇ ಸಮಯದಲ್ಲಿ ನಮ್ಮ ಮಾವನವರ ತೋಟಕ್ಕೆ ನನ್ನ ಧರ್ಮಪತ್ನಿ ಲಕ್ಷ್ಮಿ ಅರುಣಾ ಜೊತೆಗೆ ಭೇಟಿ ಕೊಟ್ಟಿದ್ದೆ.

ತೋಟದಲ್ಲಿ 27 ವರ್ಷಗಳ ಹಿಂದೆ ನೆಟ್ಟಿದ್ದ ಮಾವಿನ ಗಿಡಗಳು ಹೆಮ್ಮರವಾಗಿ ಬೆಳೆದು ಮಾವಿನ ಹಣ್ಣುಗಳಿಂದ ತುಂಬಿಕೊಂಡ ದೃಶ್ಯ ಮನ ಸೆಳೆಯಿತು. ಕೂಡಲೇ ನಾನೇ ಮರವನ್ನು ಹತ್ತಿ ಮಾವಿನ ಹಣ್ಣನ್ನು ಕಿತ್ತು ನನ್ನ ಶ್ರೀಮತಿಗೆ ನೀಡಿದೆ. ಮರವೇರಿ ಇಳಿದ ತಕ್ಷಣ ಬಾಲ್ಯದ ದಿನಗಳಲ್ಲಿ ಸ್ನೇಹಿತರೊಂದಿಗೆ ಸೇರಿ ಮರವೇರಿ ಆಡುತ್ತಿದ್ದ ಆಟಗಳು, ಜೊತೆಯಲ್ಲಿದ್ದ ಸ್ನೇಹಿತರು ನೆನಪಿಗೆ ಬಂದರು ಎಂದು ಬರೆದು ವಿಡಿಯೋದೊಂದಿಗೆ ಅಪ್ಲೋಡ್ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸಚಿವರೊಬ್ಬರು ಪ್ರಧಾನಿ ನರೇಂದ್ರ ಮೋದಿಯವರ ಸಮ್ಮುಖದಲ್ಲೇ ಮಹಿಳಾ ಸಹೋದ್ಯೋಗಿಯೊಬ್ಬರ ಸೊಂಟಕ್ಕೆ ಕೈ ಹಾಕಿ ಅನುಚಿತವಾಗಿ ವರ್ತಿಸಿರುವ ಶಾಕಿಂಗ್ ಘಟನೆ ಅಗರ್ತಾಲದಲ್ಲಿ ನಡೆದಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ತ್ರಿಪುರಾದ ಆಹಾರ ಮತ್ತು ನಾಗರಿಕ ಪೂರೈಕೆ ಸರಬರಾಜು ಸಚಿವ ಮನೋಜ್ ಕಾಂತಿ ದೇಬ್ ಇಂತಹ ಗುರುತರ ಆರೋಪಕ್ಕೆ ಒಳಗಾಗಿದ್ದು, ಶನಿವಾರದಂದು ಅಗರ್ತಾಲದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವೊಂದರ ವೇಳೆ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟನೆ ನೆರವೇರಿಸಿದ ಸಂದರ್ಭದಲ್ಲಿ ಸಚಿವ ಮನೋಜ್ ಕಾಂತಿ…
ಬರೋಬ್ಬರಿ 20 ವರ್ಷ ತ್ರಿಪುರಾ ರಾಜ್ಯದ ಪ್ರಾಮಾಣಿಕ ಮುಖ್ಯಮಂತ್ರಿಯಾಗಿ ತಮ್ಮ ಸೇವೆ ಸಲ್ಲಿಸಿದ್ದಾರೆ ಮಾಣಿಕ್ ಸರ್ಕಾರ್.ಅಂದ ಹಾಗೆ ಇಷ್ಟು ವರ್ಷ ಮುಖ್ಯಮಂತ್ರಿಯಾಗಿದ್ದರೂ ಇವರ ಹತ್ತಿರ ವಾಸಿಸಲು ಒಂದು ಸ್ವಂತ ಮನೆ ಕೂಡ ಇಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು 2018-19ನೇ ಸಾಲಿನ ಬಜೆಟ್ ಮಂಡಿಸಿದ್ದು,ಹಲವಾರು ಹೊಸ ಯೋಜನೆಗಳನ್ನು ಪ್ರಕಟಿಸಿದ್ದಾರೆ.ಇದರಲ್ಲಿ ರೈತರಿಗೂ ಹಲವಾರು ಯೋಜನೆಗಳನ್ನು ಪ್ರಕಟಿಸಿದ್ದು,ಕೃಷಿಗೆ ಹೆಚ್ಚು ಮಾನ್ಯತೆ ನೀಡಿದ್ದಾರೆ.
ದೇವರ ಪೂಜೆಗೆ, ಅಡುಗೆ ತಯಾರಿಕೆಗೆ, ವಾಮಾಚಾರಕ್ಕೆ, ಶುಭ ಕಾರ್ಯಗಳಿಗೆ, ಅಶುಭ ಕಾರ್ಯಗಳಿಗೆ ಬಹುತೇಕ ಎಲ್ಲಾ ಕೆಲಸಗಳಿಗೂ ನಿಂಬೆ ಹಣ್ಣು ಬೇಕೇ ಬೇಕು.ನಿಂಬೆಹಣ್ಣಿನ ಉಪಯೋಗ ಕೇವಲ ಅಡುಗೆ ಮಾಡಲಿಕ್ಕೆ, ಇಲ್ಲವೇ ಮಾಟ ಮಂತ್ರ ಮಾಡಲಿಕ್ಕೆ ಮಾತ್ರ ಸೀಮಿತವಲ್ಲ.
ನುಗ್ಗೆಯಲ್ಲಿ ಬಿಸುಡಲು ಏನಿಲ್ಲ. ಅದರ ಕಾಯಿ ಮಾತ್ರವಲ್ಲ; ಎಲೆ, ಬೇರು, ಹೂ, ತೊಗಟೆ ಎಲ್ಲವೂ ಬಳಕೆಯ ದೃಷ್ಟಿಯಿಂದ ಮಹತ್ವ ಪಡೆದಿವೆ. ಇದರ ಮರವನ್ನು ಕೆತ್ತಿದಾಗ ಒಸರುವ ಅಂಟನ್ನು ಹಾಲಿನಲ್ಲಿ ಬೆರೆಸಿ ಲೇಪಿಸಿದರೆ ತಲೆಶೂಲೆ ಶೀಘ್ರ ಶಮನವಾಗುತ್ತದೆ ಎಂದಿದೆ ವೈದ್ಯಗ್ರಂಥ. ನುಗ್ಗೆ ಎಲೆಗಳನ್ನು ಹಲವಾರು ಬಗೆಯ ಅಡುಗೆಗಳಲ್ಲಿ ಬಳಸಲಾಗುತ್ತದೆ. ಈ ಎಲೆಗಳಲ್ಲಿ ಅಮೂಲ್ಯ ಖನಿಜಗಳು, ವಿಟಮಿನ್ನುಗಳು ಹಾಗೂ ಪ್ರೋಟೀನುಗಳೂ ಇವೆ. ಸಾಮಾನ್ಯವಾಗಿ ಈ ಎಲೆಗಳನ್ನು ದಾಲ್, ಸಾಂಬಾರ್ ಅಥವಾ ಕೆಲವು ಸೂಪ್ಗಳಲ್ಲಿ ಬಳಸಲಾಗುತ್ತದೆ. ಆದರೆ ಈ ಎಲೆಗಳ ಸೇವನೆಯಿಂದ…
ಹಲವರಲ್ಲಿ ನಿಶ್ಯಕ್ತಿ ಸಿಕ್ಕಾಪಟ್ಟೆ ಕಾಟ ಕೊಡ್ತಿರುತ್ತೆ. ಸ್ವಲ್ಪನೇ ಕೆಲಸ ಮಾಡಿದ್ರು ಜಾಸ್ತಿ ಸುಸ್ತಾಗೋವಂತ ತುಂಬಾ ಜನ ನಮ್ಮ ಮಧ್ಯನೇ ಇದಾರೆ. ಸುಸ್ತು ಖಾಯಿಲೆಯ ಗುರುತಾಗಿರಬಹುದು.ಥೈರಾಯಿಡ್ ಸಮಸ್ಯೆ, ಅಜೀರ್ಣ, ಮಲಬದ್ಧತೆ, ಮಧುಮೇಹ, ಅಧಿಕ ರಕ್ತದೊತ್ತಡ, ಅಪೌಷ್ಟಿಕತೆ, ರಕ್ತಹೀನತೆ, ಮಾನಸಿಕ ಒತ್ತಡ ಇತರೆ ಹತ್ತು ಹಲವು ಸಮಸ್ಯೆಗಳು ನಿಶ್ಯಕ್ತಿಗೆ ಮೂಲ ಕಾರಣವಾಗಿರಬಹುದು.