ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕಾಲ ಕಾಲಕ್ಕೆ ಬದಲಾಗುವ ವಾತಾವರಣದ ಜೊತೆಗೆ ಆರೋಗ್ಯದ ಹೊಂದಾಣಿಕೆ ಮಾಡಿಕೊಳ್ಳುವುದು ಸಾಹಸವೇ ಸರಿ. ಬೇಸಿಗೆ ಕಾಲದಲ್ಲಿ ಬಿಸಿಲಿನ ಬೇಗೆಯಿಂದ ಶರೀರದಿಂದ ಒಸರುವ ಬೆವರು ನೀಡುವ ಬಾಧೆಯಂತು ಹೇಳತೀರದು.
ಅದರಲ್ಲೂ ದೇಹದಿಂದ ಹೊರಸೂಸುವ ವಾಸನೆ ಕಚೇರಿಯಲ್ಲಿ, ಬಸ್ಸಿನಲ್ಲಿ ಮದುವೆ ಸಮಾರಂಭಗಳಲ್ಲಿ ಹಿಂಸೆ ನೀಡಿದರೆ, ಕಂಕುಳ ದುರ್ವಾಸನೆಯಿಂದ ಬಹಳಷ್ಟು ಮಂದಿ ಮುಜುಗರಪಡುವುದು ಸಾಮಾನ್ಯವೇ ಆಗಿದೆ.
ಆದರೆ ಇವುಗಳಿಗೆಲ್ಲ ಸುಲಭ ಪರಿಹಾರ ಕಂಡುಕೊಳ್ಳುವ ಬದಲು. ರಸಾಯನಿಕಗಳಿಂದ ತಯಾರಿಸಿದ ವಸ್ತುಗಳ ಮೇಲೆ ಮಾರು ಹೋಗಿ ಹಣ ವ್ಯರ್ಥ ಮಾಡುವುದರ ಜೊತೆಗೆ ಚರ್ಮದ ಕಾಂತಿಯನ್ನು ಕಳೆದುಕೊಳ್ಳುವ ಅಪಾಯಗಳಿಗೂ ಸಿಲುಕುವ ಬದಲು ಸುಲಭ ಪರಿಹಾರಗಳನ್ನು ಹುಡುಕುವುದು ಉತ್ತಮ.
ಕಂಕುಳ ದುರ್ವಾಸನೆಯಿಂದ ಮುಕ್ತರಾಗಲು ನೀವು ಈ ಕೆಳಗೆ ನೀಡಿರುವ ಸುಲಭ ಪರಿಹಾರೋಪಾಯಗಳನ್ನು ಅನುಸರಿಸಿದರೆ ನೀವು ಸುಲಭವಾಗಿ ಪರಿಹಾರ ಕಂಡುಕೊಳ್ಳ ಬಹುದಾಗಿದೆ.
ಬೇಸಿಗೆ ಕಾಲದಲ್ಲಿ ದೇಹವಿಡೀ ಬೆವರುವುದು ಸಾಮಾನ್ಯವಾಗಿದೆ. ಇಂತಹ ಸಂದರ್ಭದಲ್ಲಿ ಆ್ಯಂಟಿ ಬ್ಯಾಕ್ಟೀರಿಯಾ ಸಾಬೂನಿನಿಂದ ಹಾಗೂ ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ, ಮುಖ್ಯವಾಗಿ ಕಂಕುಳಗಳನ್ನು ಚೆನ್ನಾಗಿ ತೊಳೆಯಿರಿ. ಸಾಧ್ಯವಾದರೆ ದಿನಕ್ಕೆರಡು ಬಾರಿ ಸ್ನಾನ ಮಾಡುವುದರಿಂದ ಬ್ಯಾಕ್ಟೀರಿಯಾಗಳಿಂದ ದೂರವಿದ್ದು, ಶುಚಿತ್ವ ಹಾಗೂ ನೈರ್ಮಲ್ಯತೆಯನ್ನು ಕಾಪಾಡಿಕೊಳ್ಳಿ. ರೇಷ್ಮೆಯಂತಹ ನೈಸರ್ಗಿಕ ನಾರುಗಳಿಂದ ತಯಾರಿಸಲ್ಪಟ್ಟ ವಸ್ತ್ರಗಳು ತೇವಾಂಶವನ್ನು ಹೀರಿ ಚರ್ಮವನ್ನು ತೇವರಹಿತವಾಗಿಡುತ್ತದೆ.
ನಮ್ಮ ದೈನಂದಿನ ಆಹಾರಗಳಲ್ಲಿಯೂ ಸಾಧ್ಯವಾದಷ್ಟು ಮಟ್ಟಿಗೆ ಗಮನಹರಿಸಬೇಕಾಗಿದೆ. ಕಾಫೀ, ಖಾರದ ತಿನಿಸುಗಳು, ಕೊಬ್ಬಿನಾಂಶವಿರುವ ಆಹಾರಗಳು ಹಾಗೂ ಧೂಮಪಾನದಿಂದ ದೂರವಿದ್ದು, ಕಂಕುಳದ ವಾಸನೆಯಿಂದ ದೂರವಿರಬಹುದು.
ಡಿಯೋಡ್ರಂಟ್ ಬದಲು ಹತ್ತಿಯನ್ನು ಆ್ಯಪಲ್ ಸೈಡರ್ ವಿನೆಗರ್ ನಿಂದ ಒದ್ದೆ ಮಾಡಿ ಕಂಕುಳಕ್ಕೆ ಹಚ್ಚಿರಿ.
ಬ್ಯಾಕ್ಟೀರಿಯಾಗಳನ್ನು ಹೊಡೆದೋಡಿಸುವಲ್ಲಿ ನಿಂಬೆ ಹಣ್ಣು ಕೂಡಾ ಪ್ರಭಾವಶಾಲಿಯಾಗಿದೆ. ನಿಂಬೆ ಹಣ್ಣು ನ್ನು ಎರಡು ಭಾಗ ಮಾಡಿ, ಒಂದು ಭಾಗವನ್ನು ಕಂಕುಳಕ್ಕೆ ಉಜ್ಜಿ ಅದರ ರಸವು ಕಂಕುಳದಲ್ಲಿಯೇ ಒಣಗಲು ಬಿಡಿ. ಸಂಪೂರ್ಣವಾಗಿ ಒಣಗಿದ ನಂತರ ಸ್ನಾನ ಮಾಡಿ. ಕಂಕುಳದ ವಾಸನೆ ಸಂಪೂರ್ಣವಾಗಿ ಮಾಯವಾಗುವ ತನಕ ಪ್ರತಿದಿನಕ್ಕೊಂದು ಬಾರಿ ಮಾಡಿರಿ.
ಬ್ಯಾಕ್ಟೀರಿಯಾಗಳನ್ನು ಶಮನ ಮಾಡುವುದರಲ್ಲಿ ನಮ್ಮ ಪರಿಸರದಲ್ಲಿ ಸಾಮಾನ್ಯವಾಗಿ ಲಭ್ಯವಿರುವ ತುಳಸಿ ಮತ್ತು ಬೇವು ಬಹಳ ಪರಿಣಾಮಕಾರಿಯಾಗಿದೆ. ಸ್ವಲ್ಪ ತುಳಸಿ ಹಾಗೂ ಬೇವಿನ ಸೊಪ್ಪನ್ನು ಅರೆದು ಪೇಸ್ಟ್ ತರ ಮಾಡಿ ಕಂಕುಳಗಳಿಗೆ ಹಚ್ಚಿರಿ. ಸ್ವಲ್ಪ ಸಮಯದ ನಂತರ ಸ್ನಾನ ಮಾಡಿ. ಇದನ್ನು ವಾರಕ್ಕೆ ಮೂರು ಸಲ ಮಾಡಿದಲ್ಲಿ ಪರಿಣಾಮ ಕಾಣಬಹುದು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕಂಡಕ್ಟರ್ ಇಲ್ಲದ KSRTC ಒಡೆಯನಿಲ್ಲದ ಮನೆಯಂತಿತ್ತು.
ನಿಮ್ಮ ಮನೆಯಲ್ಲಿ ಗುಲಾಬಿ ಗಿಡಗಳು ಇವೆಯಲ್ಲಾ ಆ ಗಿಡಗಳಿಗೆ ಕಸಿ ಮಾಡುವುದರಿಂದ ಕೊಂಬೆಗೊಂದೊಂದು ಬಣ್ಣದ ಹೂಗಳನ್ನೂ ಸಹ ಪಡೆಯಬಹುದು.ಕಸಿ ಎಂದರೆ ನಿಮಗೆ ತಿಳಿಯದ್ದೇನಲ್ಲ ಆದರೆ ಈ ಮೊದಲಿನ ಸಾಂಪ್ರದಾಯಿಕ ಕಸಿ ಪದ್ಧತಿಯಂತೆ ಗಿಡದ ಕೊಂಬೆಯನ್ನೇ ಕತ್ತರಿಸಿ ಮತ್ತೊಂದು ಗಿಡಕ್ಕೆ ಜೋಡಿಸಿದ ನಂತರ ಅದೇನಾದರೂ ನೆಟ್ಟದೆ ಬೆಳೆಯದೆ ಹಳ್ಳ ಹಿಡಿದು ಮಕಾಡೆ ಮಲಗಿತೆಂದರೆ ಸಾಕು .
ಬಿಟಾ-ಕೆರೋಟಿನ್, ವಿಟಾಮಿನ್ ಇ,ಸಿ ಮತ್ತು ಬಿ-6, ಪೊಟ್ಯಾಷಿಯಂ ಮತ್ತು ಕಬ್ಬಿಣವನ್ನು ಪುಷ್ಕಳವಾಗಿ ಹೊಂದಿರುವ ಗೆಣಸು ಬಟಾಟೆಗೆ ಹೋಲಿಸಿದರೆ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ನ್ನು ಹೊಂದಿದೆ. ಹೀಗಾಗಿ ಅದು ಮಧುಮೇಹಿಗಳ ಸ್ನೇಹಿತನಾಗಿದೆ. ನಾವು ಸೇವಿಸುವ ಆಹಾರದಲ್ಲಿನ ಕಾರ್ಬೊಹೈಡ್ರೇಟ್ಗಳು ರಕ್ತದಲ್ಲಿನ ಸಕ್ಕರೆಯ ಮಟ್ಟದ ಮೇಲೆ ಬೀರುವ ಪ್ರಮಾಣವನ್ನು ತಿಳಿಯಲು ಗ್ಲೈಸೆಮಿಕ್ ಇಂಡೆಕ್ಸ್ ಮಾನದಂಡವಾಗಿದೆ.
ಆನ್ಲೈನ್ ನಲ್ಲಿ ಹುಡುಗಿ ಸಿಗುತ್ತಾಳೆ ಎಂದು ಹುಡುಗರು ಚಾಟ್ ಮಾಡುತ್ತಾ ಸ್ವಲ್ಪ ಯಾಮಾರಿದ್ರೂ ಲಕ್ಷ ಲಕ್ಷ ಹಣ ದೋಚುವವರು ಇದ್ದಾರೆ. ಇಂತಹ ಆನ್ಲೈನ್ ದೋಖಾ ಪ್ರಕರಣಗಳ ಉದಾಹರಣೆಗಳು ಸಾಕಷ್ಟಿದ್ದರೂ ಮತ್ತೆ ಕೆಲವರು ಆನ್ಲೈನ್ ನಲ್ಲಿ ಪರಿಚಯವಾದವರಿಂದ ಪದೇ ಪದೇ ಮೋಸ ಹೋಗುತ್ತಿರುತ್ತಾರೆ.
ಬಳ್ಳಾರಿ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಭಾರೀ ಅಂತರದಲ್ಲಿ ಜಯ ಸಾಧಿಸಿದ್ದಾರೆ.ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿ ವಿ.ಎಸ್. ಉಗ್ರಪ್ಪ ಭಾರಿ ಅಂತರದ ಗೆಲುವು ಸಾಧಿಸಿದ್ದಾರೆ. ಉಗ್ರಪ್ಪ ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಶಾಂತಾ ಅವರಿಗಿಂತ ಒಂದೂವರೆ ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಜಯ ಸಾಧಿಸಿದ್ದು, ಹೊಸ ದಾಖಲೆ ಬರೆದಿದ್ದಾರೆ. ಬಳ್ಳಾರಿ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಚುನಾವಣಾ ಆಯೋಗ ಅಧಿಕೃತವಾಗಿ ಫಲಿತಾಂಶ ಪ್ರಕಟಿಸಬೇಕಿದೆ.ಇದೇ…
ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದು,ಮಾಜಿ ಸಿಎಂ ಯಡಿಯೂರಪ್ಪ ಹೇಳಿದಂತೆ ರಾಜ್ಯದ 22 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಳ್ಳುತ್ತಿದೆ. ಅಲ್ಲದೆ ಕಾಂಗ್ರೆಸ್ 4 ಕ್ಷೇತ್ರದಲ್ಲಿ ಲೀಡ್ನಲ್ಲಿದ್ದರೆ, ಜೆಡಿಎಸ್ 1 ಕ್ಷೇತ್ರದಲ್ಲಿ ಮುನ್ನಡೆಯಲ್ಲಿದೆ. ಇತ್ತ ಒಟ್ಟಾರೆಯಾಗಿ ಬಿಜೆಪಿ 340 ಕ್ಷೇತ್ರದಲ್ಲಿ ಲೀಡ್ನಲ್ಲಿ ಇದೆ. ದೇಶದ ಬಹುತೇಕ ಕ್ಷೇತ್ರಗಳಲ್ಲೂ ಬಿಜೆಪಿ ಭರ್ಜರಿಯಾಗಿ ಬಹುಮತ ಪಡೆಯುವ ಮೂಲಕ ಮುನ್ನಡೆ ಸಾಧಿಸುತ್ತಿದೆ. ಅದೇ ರೀತಿ ಕರ್ನಾಟಕದಲ್ಲೂ ಬಿಜೆಪಿ ಮುನ್ನಡೆ ಸಾಧಿಸುತ್ತಿದೆ. ಈ ಮೂಲಕ ಮತ್ತೆ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಹೋಗಲು ರೆಡಿಯಾಗುತ್ತಿದ್ದಾರ ಎನ್ನುವ ಪ್ರಶ್ನೆ…