ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಐಎಸ್ಸಿ ಪರೀಕ್ಷೆಯಲ್ಲಿ ದೇಶಕ್ಕೆ 4ನೇ ಸ್ಥಾನ ಪಡೆದ ವಿದ್ಯಾರ್ಥಿನಿ ಒಬ್ಬಳಿಗೆ ಒಂದು ದಿನದ ಮಟ್ಟಿಗೆ ಕೊಲ್ಕತ್ತಾ ಡಿಸಿಪಿ ಆಗುವ ಯೋಗ ಒದಗಿ ಬಂದಿದೆ.
ಈ ಸಾಧನೆ ಮಾಡಿರುವ ವಿಧ್ಯಾರ್ಥಿನಿಯ ಹೆಸರು ರೀಚಾ ಸಿಂಗ್ ಎಂದು. ಈ ಪ್ರತಿಭಾನ್ವಿತ ವಿಧ್ಯಾರ್ಥಿನಿಯ ಸಾಧನೆಯನ್ನು ಶ್ಲಾಘಿಸುವ ಸಲುವಾಗಿ ಒಂದು ದಿನದ ಮಟ್ಟಿಗೆ ಕೊಲ್ಕತ್ತಾ ಉಪ ಪೊಲೀಸ್ ಕಮಿಷನರ್ ಆಗುವ ಅವಕಾಶ ನೀಡಲಾಗಿತ್ತು.
ಕೊಲ್ಕತ್ತಾದ ಜಿ.ಡಿ. ಬಿರ್ಲಾ ಸೆಂಟರ್ ಫಾರ್ ಎಜುಕೇಷನ್ನಲ್ಲಿ ವಿಧ್ಯಾಭ್ಯಾಸ ಮಾಡಿರೋ ರಿಚಾ, ಪ್ಲಸ್ 2 ಪರೀಕ್ಷೆಯಲ್ಲಿ ಶೇ. 99.25 ರಷ್ಟು ಫಲಿತಾಂಶ ಪಡೆದಿದ್ದಾರೆ. ಆದ್ದರಿಂದಲೇ ನಿನ್ನೆ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ರಿಚಾ ಕೊಲ್ಕತ್ತಾ ಆಗ್ನೇಯ ವಿಭಾಗದ ಡಿಸಿಪಿ ಕುರ್ಚಿಯನ್ನ ಅಲಂಕರಿಸಿದ್ರು. ವಿಶೇಷ ಅಂದ್ರೆ ರೀಚಾ ತಂದೆ ಗರಿಯಾಹತ್ ಪೊಲೀಸ್ ಠಾಣೆಯ ಹೆಚ್ಚುವರಿ ಉಸ್ತುವಾರಿ ಅಧಿಕಾರಿಯಾಗಿದ್ದಾರೆ.
ಆಗ್ನೇಯ ವಿಭಾಗದ ಡಿಸಿ ಕಲ್ಯಾಣ್ ಮುಖರ್ಜಿ ಹಾಗೂ ವಿವಿಧ ಪೊಲೀಸ್ ಠಾಣೆಗಳ ಉಸ್ತುವಾರಿ ಅಧಿಕಾರಿಗಳ ಜೊತೆಗೆ, ರಿಚಾ ತಂದೆ ರಾಜೇಶ್ ಸಿಂಗ್, ಗರಿಯಾಹತ್ ಪೊಲೀಸ್ ಠಾಣೆಯ ಹೆಚ್ಚುವರಿ ಉಸ್ತುವಾರಿ ಅಧಿಕಾರಿ ಹಾಗೂ ತಂದೆಯೂ ಆಗಿರುವ ರಾಜೇಶ್ ಸಿಂಗ್ ನಿನ್ನೆ ಮಗಳನ್ನ ಸನ್ಮಾನಿಸಿದ್ರು.
ಇನ್ನು ಒಂದು ದಿನದ ಮಟ್ಟಿಗೆ ತನ್ನ ತಂದೆಗೆ ಮೇಲಾಧಿಕಾರಿಯಾಗಿರುವ ವಿಧ್ಯಾರ್ಥಿನಿ ರೀಚಾರನ್ನು, ನಿಮ್ಮ ತಂದೆಗೆ ಏನಾದರೂ ಆದೇಶ ಮಾಡುತ್ತೀರಾ ಎಂದು ಕೇಳಿದಾಗ, ಬೇಗ ಮನೆಗೆ ಬನ್ನಿ ಎಂದು ಆದೆಶಿಸುತ್ತೇನೆ ಎಂದು ರೀಚಾ ಸಿಂಗ್ ಹೇಳಿದ್ದಾರೆ. ಇಡೀ ದೇಶದಲ್ಲಿಯೇ ೪ ನೇ ರ್ಯಾಂಕ್ ತೆಗೆದುಕೊಂಡಿರುವ ರೀಚಾ ಮುಂದೆ ಇತಿಹಾಸ ಹಾಗೂ ಸಮಾಜಶಾಸ್ತ್ರದಲ್ಲಿ ವ್ಯಾಸಂಗ ಮುಂದುವರೆಸಿ, ಯುಪಿಎಸ್ಸಿ ಪರೀಕ್ಷೆ ತೆಗೆದುಕೊಳ್ಳುವ ಪ್ಲಾನ್ ಹೊಂದಿದ್ದರೆ ಎಂದು ಹೇಳಿದ್ದಾರೆ.
ಇನ್ನು ತನ್ನ ಮಗಳ ಸಾಧನೆ ಬಗ್ಗೆ ಮಾತನಾಡಿದ ರಾಜೇಶ್ ಸಿಂಗ್, ನನಗೆ ಎಷ್ಟು ಖುಷಿಯಾಗ್ತಿದೆ ಅಂತ ಹೇಳಿಕೊಳ್ಳಲು ಆಗ್ತಿಲ್ಲ. ಒಂದು ದಿನದ ಮಟ್ಟಿಗೆ ನನ್ನ ಮಗಳು ನನಗೇ ಹಿರಿಯ ಅಧಿಕಾರಿಯಾಗಿದ್ದಾಳೆ. ಮನೆಗೆ ಬೇಗ ಬರುವಂತೆ ನನಗೆ ಆದೇಶಿಸಿದ್ದಾಳೆ. ಇವತ್ತು ಅದನ್ನ ಪಾಲಿಸುತ್ತೇನೆ ಅಂತ ಹೇಳಿದ್ರು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇಂದು ಶುಕ್ರವಾರ, 23/02/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…
ಉತ್ತರಪ್ರದೇಶದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ವಾತಿ ಸಿಂಗ್ ಅವರು ಬಿಯರ್ ಬಾರ್ವೊಂದನ್ನು ಉದ್ಘಾಟಿಸಿದ ಫೋಟೋಗಳು ದೇಶಾದ್ಯಂತ ವೈರಲ್ ಆಗಿದ್ದು, ನೂತನ ಬಿಜೆಪಿ ಸರ್ಕಾರ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ತೀವ್ರ ಮುಜುಗರ
ಎಲ್ಲ ಪ್ರಮುಖ ರೈಲ್ವೆ ನಿಲ್ದಾಣಗಳು, ಬಸ್ ಡಿಪೋಗಳು, ಏರ್ಪೋರ್ಟ್ಗಳು ಮತ್ತು ಮಾಲ್ಗಳಲ್ಲಿ ನೀವು ‘ಟೀ’ಯನ್ನು ಮಣ್ಣಿನ ಲೋಟಗಳಲ್ಲಿ(ಕುಲ್ಹಾದ್) ಕುಡಿಯುವ ಅವಕಾಶ ಸದ್ಯದಲ್ಲೇ ಸಿಗಲಿದೆ. ಇಂಥದ್ದೊಂದು ವ್ಯವಸ್ಥೆ ಜಾರಿಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಒಲವು ತೋರಿಸಿದ್ದಾರೆ. ಇದೇ ವೇಳೆ ಕೇಂದ್ರ ಸಚಿವ ನಿತಿನ್ ಗಡ್ಕರಿ, ಬೇಡಿಕೆಗೆ ಅನುಗುಣವಾಗಿ ಮಣ್ಣಿನ ಲೋಟಗಳ ಉತ್ಪಾದನೆಯನ್ನು ದೊಡ್ಡ ಪ್ರಮಾಣದಲ್ಲಿ ಮಾಡುವಂತೆ ಖಾದಿ ಮತ್ತು ಗ್ರಾಮೋದ್ಯಮ ಆಯೋಗಕ್ಕೂ ನಿರ್ದೇಶನ ನೀಡಿದ್ದಾರೆ ಮಣ್ಣಿನ ಲೋಟಗಳನ್ನು ಬಳಸುವ ಪರಿಸರಸ್ನೇಹಿ ವ್ಯವಸ್ಥೆಯನ್ನು ದೇಶದ ಪ್ರಮುಖ100 ರೈಲ್ವೆ…
ರಾಷ್ಟ್ರಪಿತ ಮಹಾತ್ಮಗಾಂಧಿಯವರ ಕನಸಿನಂತೆ ಅವರ 150ನೇ ಜಯಂತಿ ಅಂಗವಾಗಿ ಅವರ ತತ್ವ ಸಿದ್ದಾಂತಗಳನ್ನು ದೃಷ್ಠಿಯಲ್ಲಿಟ್ಟುಕೊಂಡು ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ನಿಷೇಧಿಸಬೇಕು ಮತ್ತು ಅವರ ಕನಸಿನಂತೆ ನೈರ್ಮಲ್ಯ, ಹಸಿರು, ಆರೋಗ್ಯ, ಕಸಮುಕ್ತ ಭಾರತ ಸೃಷ್ಠಿಸುವ ಉದ್ದೇಶದಿಂದ ಜನ ಜಾಗೃತಿಮೂಡಿಸುವ ಅಂಗೀಕಾರ ಆಂದೋಲನಕ್ಕೆ ಮಾಜಿ ಸಚಿವ, ಶಾಸಕ ವೆಂಕಟರಾವ ನಾಡಗೌಡ ಪ್ರಮಾಣ ವಚನ ಬೋಧಿಸುವ ಮೂಲಕ ಚಾಲನೆ ನೀಡಿದರು. ನಗರದಲ್ಲಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ನಿಷೇದಿಸಲಾಗಿದೆ ಯಾವುದೇ ಅಂಗಡಿ, ಬಾರ್ ರೆಸ್ಟೋರೆಂಟ್, ಯಾವುದೇ ವಾಣಿಜ್ಯ ಮಳಿಗೆಗಳಲ್ಲಿ ಪ್ಲಾಸ್ಟಿಕ್ ಮಾರಾಟ ಮಾಡುವಂತಿಲ್ಲ ಮಾರಾಟ…
ಸಾಧಿಸುವವನಿಗೆ ಛಲ ಹಾಗು ಶ್ರಮ ಇದ್ರೆ ತಮ್ಮ ಗುರು ಮುಟ್ಟದೆ ಇರೋದಿಲ್ಲ ಅನ್ನೋದಕ್ಕೆ ಈ ಮಹಿಳೆ ಒಂದೊಳ್ಳೆ ಉದಾಹರಣೆಯಾಗಿದ್ದಾರೆ, ನಿಜಕ್ಕೂ ಇವರ ಈ ಸಾಧನೆಯ ಹಾದಿಯನ್ನು ತಿಳಿದರೆ ನಾವು ಜೀವನದಲ್ಲಿ ಯಾವುದೇ ಕಷ್ಟಗಳಿಗೆ ನೋವುಗಳಿಗೆ ಕುಗ್ಗದೆ ಏನನ್ನ ಬೇಕಾದರೂ ಸಾಧಿಸಬೇಕು ಅನ್ನೋ ಹಠ ನಿಮ್ಮಲ್ಲಿ ಬೆಳೆಯುತ್ತದೆ. ಅಷ್ಟಕ್ಕೂ ಈ ಮಹಿಳೆಯ ಸಾಧನೆಯ ಹಿಂದಿನ ದಾರಿ ಹೇಗಿತ್ತು ಇವರು ಐಎಎಸ್ ಅಧಿಕಾರಿಯಾಗಲು ಹೇಗೆಲ್ಲ ಶ್ರಮ ಪಟ್ಟಿದ್ದಾರೆ ಅನ್ನೋದ ಅನ್ನೋ ಸ್ಪೋರ್ತಿದಾಯಕ ಮಾತುಗಳಿಗಾಗಿ ಮುಂದೆ ನೋಡಿ. ಹೆಸರು ಕೋಮಲ್ ಗಣಾತ್ರ…
ಸಹಜವಾಗಿ ಎಲ್ಲರಲ್ಲೂ ಕಾಣಿಸಿಕೊಳ್ಳುವ ಹಲವಾರು ಸೌಂದರ್ಯ ಸಮಸ್ಯೆಗಳಿಗೆ ಬೆಟ್ಟದ ನೆಲ್ಲಿಕಾಯಿ ರಾಮಬಾಣ ಎಂದರೆ ಹೇಳಿದರೆ ತಪ್ಪಾಗಲಾರದು. ವಿಟಮಿನ್ ಸಿ ಸಮೃದ್ಧವಾಗಿರುವ ನೆಲ್ಲಿಕಾಯಿಯನ್ನು ನೈಸರ್ಗಿಕ ಸೌಂದರ್ಯ ವರ್ಧಕ ಎನ್ನಬಹುದು. ಚರ್ಮ ಮತ್ತು ಕೂದಲಿನ ಸಮಸ್ಯೆಗಳಿಗೆ ನೆಲ್ಲಿಕಾಯಿ ಮನೆಮದ್ದು ಎಂದರೆ ತಪ್ಪಾಗಲಾರದು . ಹೀಗೆ ಹಲವಾರು ಗುಣಗಳಿರುವ ಬೆಟ್ಟದ ನೆಲ್ಲಿಕಾಯಿಂದ ಸಿಗುವ ಇನ್ನಷ್ಟು ಪ್ರಯೋಜನಗಳು ಯಾವುವು ಎಂಬುದನ್ನು ಇಲ್ಲಿ ತಿಳಿಸಲಾಗಿದೆ. ತ್ವಚೆಯ ಸೌಂದರ್ಯವನ್ನು ಸಹ ಹೆಚ್ಚಿಸುತ್ತದೆ: ವಾರದಲ್ಲಿ ಮೂರರಿಂದ ನಾಲ್ಕು ಬಾರಿ ನೆಲ್ಲಿಕಾಯಿಯ ನೀರಿನಿಂದ ತ್ವಚೆಯನ್ನು ಆರೈಕೆ ಮಾಡಿಕೊಳ್ಳುವುದರಿಂದ ಚರ್ಮವು…