ಸುದ್ದಿ

ಯಾರಿಗೆ ಒಲಿಯುತ್ತೆ ಪ್ರಧಾನಿ ಪಟ್ಟ..?ಸಮೀಕ್ಷೆಯಲ್ಲಿ ಬಯಲಾಯ್ತು ಮತದಾರ ಪ್ರಭುವಿನ ಮನದಾಳ!ಈ ಸುದ್ದಿ ನೋಡಿ…

242

ಈಗ ಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೂ ಗಲ್ಲಿ ಗಲ್ಲಿಗಳಲ್ಲಿ ಲೋಕಸಭಾ ಚುನಾವಣೆಯದ್ದೇ ಮಾತುಕತೆ. ಅಷ್ಟೇ ಅಲ್ಲದೇ ಯಾವ ಪಕ್ಷ ಗೆಲ್ಲುತ್ತೆ? ಯಾರು ಈ ದೇಶದ ಚುಕ್ಕಾಣಿ ಹಿಡಿಯುತ್ತಾರೆ?ಯಾರಿಗೆ ಒಲಿಯಲಿದೆ ಪ್ರಧಾನಿ ಪಟ್ಟ ಎಂಬ ವಾದ ವಿವಾದಗಳು ಜೋರಾಗಿಯೇ ನಡೆಯುತ್ತಿವೆ.

ಈಗ ಹಾಲಿ ಪ್ರಧಾನ ಮಂತ್ರಿ ಆಗಿರುವ ನರೇಂದ್ರ ಮೋದಿಯವರೇ ಮತ್ತೆ ಪ್ರಧಾನಿ ಆಗ್ತಾರಾ ಅಥವಾ ಪ್ರಧಾನಿ ರೇಸ್ ನಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧೀ ಪ್ರಧಾನಿ ಆಗ್ತಾರ ಎಂಬುದರ ಬಗ್ಗೆ ಸಿ ವೋಟರ್–ಐ.ಎ.ಎನ್.ಎಸ್. ಸಮೀಕ್ಷೆ ನಡೆಸಿದ್ದು ಮತದಾರ ಪ್ರಭು ಏನು ಹೇಳಿದ್ದಾರೆ ನೋಡಿ..

ಸಿ ವೋಟರ್–ಐ.ಎ.ಎನ್.ಎಸ್. ಸಮೀಕ್ಷೆ ನಡೆಸಿದ್ದು, ಬಹುತೇಕ ವರ್ಗದ ಜನರಲ್ಲಿ ಪ್ರಧಾನಿ ಹುದ್ದೆಗೆ ಮೋದಿ ನೆಚ್ಚಿನ ಆಯ್ಕೆಯಾಗಿದ್ದಾರೆ. ಸಮೀಕ್ಷೆಯಲ್ಲಿ ಬಹಿರಂಗವಾದ ಮಾಹಿತಿಯಂತೆ, ಮೋದಿ ಅವರ ಪರವಾಗಿ ಶೇ.63.6 ರಷ್ಟು ನಿರುದ್ಯೋಗಿಗಳು ಬ್ಯಾಟಿಂಗ್ ಮಾಡಿದ್ದಾರೆ. ಶೇ. 26 ರಷ್ಟು ನಿರುದ್ಯೋಗಿಗಳು ರಾಹುಲ್ ಗಾಂಧಿ ಪ್ರಧಾನಿಯಾಗಲಿ ಎಂದು ಹೇಳಿದ್ದಾರೆ.

ಸರ್ಕಾರಿ ನೌಕರರ ಪೈಕಿ ಶೇ. 61.1 ರಷ್ಟು ಮಂದಿ ಮೋದಿ ಮತ್ತೆ ಪ್ರಧಾನಿಯಾಗಲಿ ಎಂದು ಹೇಳಿದ್ದು, ಶೇ. 26 ರಷ್ಟು ಮಂದಿ ಪ್ರಧಾನಿ ಹುದ್ದೆಗೆ ರಾಹುಲ್ ಗಾಂಧಿ ಸೂಕ್ತ ವ್ಯಕ್ತಿ ಎಂದು ತಿಳಿಸಿದ್ದಾರೆ. ಮಹಿಳೆಯರಲ್ಲಿ ಶೇ. 43 ರಷ್ಟು ಮಂದಿ ಮೋದಿಗೆ, ಶೇ. 37. 2 ರಷ್ಟು ಮಂದಿ ರಾಹುಲ್ ಗಾಂಧಿಗೆ ಬೆಂಬಲ ಸೂಚಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ