ಸುದ್ದಿ

ಉಗ್ರರ ದಾಳಿಯ ನಂತರ ವೀರ ಯೋಧರಿಗಾಗಿ ಅತ್ಯಂತ ಮಹತ್ವದ ನಿರ್ಧಾರೆ ತೆಗೆದುಕೊಂಡ ಕೇಂದ್ರ ಸರ್ಕಾರ…

171

ಪುಲ್ವಾಮ ಭಯೋತ್ಪಾದಕ ದಾಳಿ ನಂತ್ರ ಭಾರತ ಸರ್ಕಾರ, ಯೋಧರ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ಮುಂದೆ ಜಮ್ಮು-ಕಾಶ್ಮೀರದಲ್ಲಿ ಗಡಿ ಕಾಯ್ತಿರುವ ಎಲ್ಲ ಭದ್ರತಾ ಸಿಬ್ಬಂದಿ ಶ್ರೀನಗರ ರಸ್ತೆಯಲ್ಲಿ ಪ್ರಯಾಣ ಬೆಳೆಸುವುದಿಲ್ಲ. ಭದ್ರತಾ ಸಿಬ್ಬಂದಿಯನ್ನು ವಾಯು ಮಾರ್ಗದ ಮೂಲಕ ಕರೆದೊಯ್ಯುವ ವ್ಯವಸ್ಥೆ ಮಾಡಲಾಗುವುದು.

ಬುಧವಾರ ಸಂಜೆ ಭದ್ರತಾ ದಳದ ಮುಖ್ಯಸ್ಥರು ಅಧಿಕೃತ ಹೇಳಿಕೆ ನೀಡಿದ್ದರು. ಗುರುವಾರದಿಂದಲೇ ಈ ಆದೇಶ ಜಾರಿಗೆ ಬಂದಿದೆ. ಅಸ್ಸಾಂ ರೈಫಲ್ಸ್, ಬಿಎಸ್ಎಫ್, ಸಿಆರ್ಪಿಎಫ್, ಐಟಿಬಿಪಿ, ಎಸ್ಎಸ್ಬಿ ಮತ್ತು ಎನ್ ಎಸ್ ಜಿಗೆ ಈ ಆದೇಶ ಅನ್ವಯಿಸಲಿದೆ.

ಕರ್ತವ್ಯ ಮುಗಿಸಿ ಬರ್ತಿರುವ, ವರ್ಗಾವಣೆಯಾಗಿರುವ, ಮನೆಗೆ ಬರ್ತಿರುವ ಅಥವಾ ಮನೆಯಿಂದ ವಾಪಸ್ ಆಗ್ತಿರುವ ಯೋಧರು ರಸ್ತೆ ಮಾರ್ಗದಲ್ಲಿ ಬರುವುದಿಲ್ಲ. ಎಲ್ಲರಿಗೂ ವಿಮಾನ ವ್ಯವಸ್ಥೆ ಕಲ್ಪಿಸಲಾಗುವುದು.

ಈ ಹಿಂದೆ ಹಿರಿಯ ಅಧಿಕಾರಿಗಳಿಗೆ ಮಾತ್ರ ವಿಮಾನದ ವ್ಯವಸ್ಥೆಯಿತ್ತು. ಈಗ ಎಲ್ಲ ಯೋಧರು ವಿಮಾನ ಪ್ರಯಾಣ ಬೆಳೆಸಬಹುದಾಗಿದೆ. ದೆಹಲಿಯಿಂದ ಶ್ರೀನಗರ, ಶ್ರೀನಗರದಿಂದ ದೆಹಲಿ, ಜಮ್ಮುವಿನಿಂದ ಶ್ರೀನಗರಕ್ಕೆ ತೆರಳಲು ವಿಮಾನ ವ್ಯವಸ್ಥೆ ಮಾಡಲಾಗಿದ್ದು, 7 ಲಕ್ಷ 8 ಸಾವಿರ ಯೋಧರು ಇದ್ರ ಲಾಭ ಪಡೆಯಲಿದ್ದಾರೆಂದು ಗೃಹ ಸಚಿವಾಲಯ ಟ್ವಿಟ್ ಮಾಡಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ಶಿವನನ್ನು ಭಕ್ತಿಯಿಂದ ಸ್ಮರಿಸಿ ಈ ದಿನದ ನಿಮ್ಮ ರಾಶಿ ಭವಿಷ್ಯವನ್ನು ನೋಡಿ.

    ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು)9901077772 call/ what ಮೇಷ ನಿಮ್ಮ ಅಪಾರ…

  • ಸಿನಿಮಾ

    ಬಹುಭಾಷಾ ನಟನಿಂದ ಮತ್ತೊಂದು ವಿವಾಧಾತ್ಮಕ ಹೇಳಿಕೆ!ಅಯ್ಯಪ್ಪ ಸ್ವಾಮೀ ದೇವರೇ ಅಲ್ಲ ಅಂದ್ರು ಪ್ರಕಾಶ್ ರೈ..!

    ಸುಪ್ರಿಂ ಕೋರ್ಟ್ ಮಹಿಳೆಯರಿಗೆ ಶಬರಿಮಲೆ ಆಯ್ಯಪ ಸ್ವಾಮಿ ದರ್ಶನಕ್ಕೆ ಮಹಿಳೆಯರಿಗೆ ಅವಕಾಶ ಮಾಡಿಕೊಟ್ಟ ಮೇಲೆ ಶಬರಿಮಲೈ ಕುರಿತಂತೆ ದಿನಕ್ಕೊಂದು ಸುದ್ದಿಗಳು ಕೇಳಿ ಬರುತ್ತಲೇ ಇವೆ.ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಿರುವ ಬಹುಭಾಷ ನಟ ಪ್ರಕಾಶ್ ರಾಯ್ ಮತ್ತೊಂದು ಹೇಳಿಕೆಯಿಂದ ಈಗ ಸುದ್ದಿಯಲ್ಲಿದ್ದಾರೆ.   ಶಬರಿ ಮಲೈ ಗೆ ಮಹಿಳೆಯರ ಪ್ರವೇಶ ಕುರಿತು ಸುಪ್ರಿಂ ಕೋರ್ಟ್ ಪ್ರವೇಶ ನೀಡಬೇಕೆಂದು ಆದೇಶ ಮಾಡಿದ್ದರೂ ಅಲ್ಲಿ ಮಹಿಳೆಯರಿಗೆ ಅವಕಾಶ ನೀಡುತ್ತಿಲ್ಲ. ಈ ಬಗ್ಗೆ ಮಾತನಡಿರುವ ಪ್ರಕಾಶ್ ರೈ ಹೆಣ್ಣು ಅಂದ್ರೆ ತಾಯಿ, ಭೂಮಿಯನ್ನು…

  • ವಿಚಿತ್ರ ಆದರೂ ಸತ್ಯ

    ಈ ಪ್ರದೇಶದಲ್ಲಿ ಮದುವೆಯಾದ ಮೊದಲ ರಾತ್ರಿಯೇ 8 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ..!ತಿಳಿಯಲು ಈ ಲೇಖನ ಓದಿ..

    ಯೆಮೆನ್ ನಲ್ಲಿ ಮದುವೆಯಾದ ಮೊದಲ ರಾತ್ರಿಯೇ 8 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ವಿಶ್ವದಾದ್ಯಂತ ಮಹಿಳಾ ಸಂಘಟನೆಗಳು ಇದರ ವಿರುದ್ಧ ತಿರುಗಿ ಬಿದ್ದಿವೆ. ಯೆಮೆನ್ ಕೆಟ್ಟ ಪದ್ಧತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿವೆ.

  • ಸುದ್ದಿ

    ಚಳಿಗಾಲದಲ್ಲಿಯೂ ಸಹ ನೀವು ಬೆಚ್ಚಗಿನ ವಾತಾವರಣದಲ್ಲಿರಲು ಬಯಸುವಿರಾ, ಹಾಗಾದರೆ ನೀವು ಇಲ್ಲಿಗೆ ಒಮ್ಮೆ ಭೇಟಿ ನೀಡಿ…

    ದೇಶದ ವಿವಿಧ ಜಾಗಗಳಲ್ಲಿ ಚಳಿಗಾಲವು ಈಗಾಗಲೇ  ಆರಂಭವಾಗಿದೆ. ಚಳಿಯಿ೦ದ ಕೂಡಿದ  ರಾತ್ರಿಯನ್ನು ಕಳೆದ ಬಳಿಕ, ಇಬ್ಬನಿ ಬೀಳುವ ಮು೦ಜಾವಿನ ವೇಳೆಗೇ ಎದ್ದೇಳಲು ಎಲ್ಲರೂ ಬಯಸುವುದಿಲ್ಲ. ಒಳ್ಳೆಯದು, ತನ್ನ ಶೀತಲವಾದ ಹವಾಮಾನಕ್ಕಷ್ಟೇ ಅಲ್ಲದೇ ಉಷ್ಣವಲಯದ ಹಾಗೂ ತೇವಾ೦ಶವಿರುವ ಹವಾಮಾನಕ್ಕೂ ಚಿರಪರಿಚಿತವಾಗಿರುವ ಹಲವಾರು ಸ್ಥಳಗಳು ಭಾರತದಲ್ಲಿವೆ. ಬಾನೆತ್ತರದ ಶಿಖರಗಳು, ವಿಶಾಲವ್ಯಾಪ್ತಿಯ ಕರಾವಳಿ ತೀರಗಳು, ಮರುಭೂಮಿಗಳು, ಹಾಗೂ ಇನ್ನಿತರ ಸೋಜಿಗವನ್ನು೦ಟುಮಾಡುವ ಭೂಭಾಗಗಳ ತವರೂರಾಗಿದೆ ಭಾರತ. ವಿಶೇಷವಾಗಿ ಶೀತಲ ಹವಾಮಾನವು ಚಾಲ್ತಿಯಲ್ಲಿರುತ್ತದೆ ಎ೦ಬ ಕಾರಣಕ್ಕಾಗಿಯೇ ನಮ್ಮಲ್ಲಿ ಬಹುತೇಕರು ಗಿರಿಧಾಮದತ್ತ ಹೆಜ್ಜೆ ಹಾಕಲು ಬಯಸುವ೦ತಹ…

  • ಸುದ್ದಿ

    ಪ್ರೇಯಸಿಯಾ ತಂದೆಗೆ ಗುಂಡು ಹಾರಿಸಿದ ಯೋಧ!

    ಪ್ರೀತಿಯ ವಿಚಾರವಾಗಿ ಯೋಧನೊಬ್ಬ ತನ್ನ ಪ್ರಿಯತಮೆಯ ತಂದೆ ಮೇಲೆ ಗುಂಡು ಹಾರಿಸಿರುವ ಘಟನೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬಿದರಘಟ್ಟೆ ಗ್ರಾಮದಲ್ಲಿ ನಡೆದಿದೆ. ದೇವರಾಜ್ (27) ಗುಂಡು ಹಾರಿಸಿದ ಯೋಧ. ದೇವರಾಜ್ ಅದೇ ಗ್ರಾಮದ ಪ್ರಕಾಶ್ ಎಂಬವರ ಮಗಳನ್ನು ಪ್ರೀತಿಸುತ್ತಿದ್ದರು. ಯೋಧ ಕೆಲವು ದಿನಗಳ ಹಿಂದೆ ರಜೆ ಮೇಲೆ ಗ್ರಾಮಕ್ಕೆ ಬಂದಿದ್ದರು. ಈ ವೇಳೆ ಪ್ರೀತಿಯ ವಿಚಾರವಾಗಿ ಯುವತಿಯ ತಂದೆ ಪ್ರಕಾಶ್ ಹಾಗೂ ದೇವರಾಜ್ ನಡುವೆ ವಾಗ್ವಾದ ನಡೆದಿದೆ. ಜಗಳದಲ್ಲಿ ಕೋಪಗೊಂಡ ದೇವರಾಜ್, ಯುವತಿಯ ತಂದೆ ಪ್ರಕಾಶ್ ಮೇಲೆ…