ಸುದ್ದಿ

ಕಾಶ್ಮೀರದಲ್ಲಿ ಯಾರೇ ಗನ್​​ ಹಿಡಿದರೂ, ಅವರನ್ನು ಖಂಡಿತಾ ಕೊಂದು ಹಾಕುತ್ತೇವೆ…ವಾರ್ನಿಂಗ್ ಕೊಟ್ಟ ಭಾರತೀಯ ಸೇನೆ…

144

ಪುಲ್ವಾಮ ಉಗ್ರ ದಾಳಿಯಾದ ಕೇವಲ 100 ಗಂಟೆಯೊಳಗೆ ಕಾಶ್ಮೀರದಲ್ಲಿ ಜೈಶ್ ಇ ಮೊಹಮದ್ ಉಗ್ರ ಸಂಘಟನೆಯ ನಾಯಕತ್ವವನ್ನೇ ನಿರ್ನಾಮ ಮಾಡಿದ್ದೇವೆ ಎಂದು ಭಾರತೀಯ ಸೇನೆ ಹೇಳಿದೆ. ಜೊತೆಗೆ ಶರಣಾಗಿ ಇಲ್ಲವೇ ಸಾಯಲು ಸಿದ್ಧರಾಗಿರಿ ಎಂದು ಹೇಳುವ ಮೂಲಕ ಕಾಶ್ಮೀರದ ಉಗ್ರರಿಗೆ ಭಾರತೀಯ ಸೇನೆ ಖಡಕ್ ಸಂದೇಶವನ್ನು ರವಾನಿಸಿದೆ.

ಸೇನಾಧಿಕಾರಿ ಕನ್ವಾಲ್ ಜೀತ್ ಸಿಂಗ್ ಧಿಲ್ಲಾನ್ ಅವರು, ಕಣಿವೆ ರಾಜ್ಯದಲ್ಲಿ ಯಾರೇ ಆದಾರೂ ಬಂದೂಕು ಮುಟ್ಟುವ ಮುನ್ನ ನೂರು ಬಾರಿ ಯೋಚಿಸಿ, ಏಕೆಂದರೆ ಬಂದೂಕು ಕೈಗೆತ್ತಿಕೊಂಡರೆ ನಾವು ನಿಮ್ಮನ್ನು ಖಂಡಿತಾ ಕೊಂದು ಹಾಕುತ್ತೇವೆ ಎಂದು ಹೇಳಿದ್ದಾರೆ. ಅಂತೆಯೇ ಉಗ್ರರಿಗೆ ಶರಣಾಗತಿಗೆ ಒಂದು ಅವಕಾಶ ನೀಡುತ್ತೇವೆ. ಉಗ್ರತ್ವ ಬಿಟ್ಟು ಶರಣಾಗತಿಯಾದರೆ ಬದುಕಲು ಒಂದು ಅವಕಾಶ ನೀಡುತ್ತೇವೆ. ಇಲ್ಲವಾದಲ್ಲಿ ನಿಮ್ಮನ್ನೂ ಕೊಂದು ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪುಲ್ವಾಮಾ ದಾಳಿಯ ಸಂಚುಕೋರನ ಹತ್ಯೆಯಾದ ಬಳಿಕ ಸೇನಾಧಿಕಾರಿಗಳು ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಯಾರೆಲ್ಲ ಸ್ಥಳೀಯ ಉಗ್ರರ ಜೊತೆ ಸೇರಿದ್ದಾರೋ ಅವರೆಲ್ಲರೂ ಶರಣಾಗಬೇಕು. ತಾಯಂದಿರು ಮಕ್ಕಳನ್ನು ಶರಣಾಗುವಂತೆ ಮಾಡಬೇಕು ಎಂದು ಸೇನಾ ಅಧಿಕಾರಿಗಳು ಈ ವೇಳೆ ಮನವಿ ಮಾಡಿದರು.

ಪಾಕಿಸ್ತಾನ ಮುಂದಾಳತ್ವದ ಭಯೋತ್ಪಾದಕ ಸಂಘಟನೆಗಳನ್ನು ಕಾಶ್ಮೀರದ ಕಣಿವೆಯಿಂದ ಸಂಪೂರ್ಣವಾಗಿ ನಾವು ನಿರ್ಮೂಲನೆ ಮಾಡುತ್ತೇವೆ. ದೇಶವೂ ಗನ್ ಹಿಡಿದ ಕಾಶ್ಮೀರಿ ಯುವಕರಿಗೆ ಶರಣಾಗುವ ಅವಕಾಶವನ್ನು ನೀಡಿದೆ. ಈ ಮೂಲಕ ಮತ್ತೆ ಸಮಾಜದ ಮುಖ್ಯವಾಹಿನಿಗೆ ಬಂದು ಜೀವನ ನಡೆಸಲು ಅವಕಾಶ ನೀಡಲಾಗಿದೆ ಎಂದು ಸೇನಾ ಲೆಫ್ಟಿನೆಂಟ್ ಕನ್ವಾಲ್ ಜೀತ್ ಸಿಂಗ್ ಧಿಲ್ಲೊನ್ ಹೇಳಿದರು.

ಸೋಮವಾರ ನಡೆದ 16 ಗಂಟೆಗಳ ಎನ್​ಕೌಂಟರ್​ನಲ್ಲಿ ಹತ್ಯೆಯಾದವರನ್ನು ಕಮ್ರಾನ್, ಅಬ್ದುಲ್ ರಷೀದ್ ಅಲಿಯಾಸ್ ಘಾಜಿ ಹಾಗೂ ಹಿಲಾಲ್ ಎಂದು ಗುರುತಿಸಲಾಗಿದೆ. ಇವರ ಪೈಕಿ ಅಬ್ದುಲ್ ರಷೀದ್ ಎಂಬಾತ ಪುಲ್ವಾಮದ ಉಗ್ರ ದಾಳಿಯ ಸೂತ್ರಧಾರ ಎನ್ನಲಾಗಿದೆ. ಇನ್ನು, ಅಬ್ದುಲ್ ರಷೀದ್ ಮತ್ತು ಕಮ್ರಾನ್ ಇಬ್ಬರೂ ಕೂಡ ಜೈಷೆ ಮೊಹಮ್ಮದ್ ಸಂಘಟನೆಯ ಡಿವಿಷನಲ್ ಕಮಾಂಡರ್ ಆಗಿದ್ದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ವೆಂಕಟೇಶ್ವರ ಸ್ವಾಮಿ ಯನ್ನು ನೆನೆಯುತ್ತಾ ನಿಮ್ಮ ರಾಶಿಗಳ ಶುಭಫಲಗಳನ್ನು ತಿಳಿಯಿರಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(3 ಮಾರ್ಚ್, 2019) ನೀವು ಸ್ವಲ್ಪ ಹೆಚ್ಚುವರಿ ಹಣ ಮಾಡಲು ಯೋಜಿಸುತ್ತದ್ದಲ್ಲಿ ಸುಭದ್ರ ಆರ್ಥಿಕ ಯೋಜನೆಗಳಲ್ಲಿ ಹೂಡಿಕೆ…

  • ಸುದ್ದಿ

    ಈ ವರ್ಷ ಭಾರತೀಯರು ಗೂಗಲ್ ನಲ್ಲಿ ಅತೀ ಹೆಚ್ಚಾಗಿ ಸರ್ಚ್ ಮಾಡಿ ನೋಡಿದ್ದು ಏನ್ ಗೊತ್ತಾ..?

    ಗೂಗಲ್ ನಲ್ಲಿ ಏನು ಸಿಗಲ್ಲ ಹೇಳಿ? ಪ್ರತಿಯೊಂದು ವಿಷ್ಯದ ಬಗ್ಗೆಯೂ ಗೂಗಲ್ ನಲ್ಲಿ ಮಾಹಿತಿ ಸಿಗುತ್ತದೆ. ಸಣ್ಣಗೆ ಕಾಲು ನೋವು ಬಂದ್ರೂ ಜನರು ಗೂಗಲ್ ನಲ್ಲಿ ಹುಡುಕಾಟ ನಡೆಸ್ತಾರೆ. ಪ್ರತಿಯೊಂದು ರೋಗ, ಅದ್ರ ಲಕ್ಷಣ, ಚಿಕಿತ್ಸೆ ಬಗ್ಗೆ ಗೂಗಲ್ ನಲ್ಲಿ ಮಾಹಿತಿ ಲಭ್ಯವಿದೆ. 2018ರಲ್ಲಿ ಗೂಗಲ್ ನಲ್ಲಿ ಯಾವ ರೋಗದ ಬಗ್ಗೆ ಹೆಚ್ಚು ಸರ್ಚ್ ಮಾಡಲಾಗಿದೆ ಎಂಬ ವರದಿ ಈಗ ಹೊರಬಿದ್ದಿದೆ. 2018ರಲ್ಲಿ ಗೂಗಲ್ ನಲ್ಲಿ ಭಾರತೀಯರು ಅತಿ ಹೆಚ್ಚು ಬಾರಿ ಕ್ಯಾನ್ಸರ್ ಬಗ್ಗೆ ಹುಡುಕಾಟ ನಡೆಸಿದ್ದಾರೆ….

  • ಜೀವನಶೈಲಿ

    ನಿಮ್ಮ ಗಡ್ಡ ಚೆನ್ನಾಗಿ ಬೇಗ ಬೆಳೆಯಬೇಕಂದ್ರೆ, ಈ ಲೇಖನಿಯಲ್ಲಿ ಕೊಟ್ಟಿರುವ ಕ್ರಮಗಳನ್ನು ಅನುಸರಿಸಿ…

    ಗಡ್ಡ ಬಿಡುವುದು ಇಂದಿನ ಯುವಕರ ಫ್ಯಾಷನ್ ಆಗಿ ಹೋಗಿದೆ. ಹಿಗಂತೂ ಗಡ್ಡ ಬಿಡುವ ಸ್ಟೈಲ್ ಚೇಂಜ್ ಆಗಿದೆ.ವಿವಿದ ರೀತಿಯಲ್ಲಿ ಗಡ್ಡವನ್ನು ಬಿಡುತ್ತಾರೆ. ಅಂದ ಹಾಗೆ ಸಿನೆಮಾ ಸೆಲೆಬ್ರೆಟಿಗಳನ್ನು ಅನು ಕರಿಸುವುದು ಸಹ ಟ್ರೆಂಡ್ ಆಗಿದೆ.

  • ವ್ಯಕ್ತಿ ವಿಶೇಷಣ

    ಹುಟ್ಟಿದು ಹಿಟ್ಲರ್ ನೆಲದಲ್ಲಿ,ಕೊಟ್ಟಿದ್ದು ಕನ್ನಡ ಕೊಡುಗೆ..! ತಿಳಿಯಲು ಲೇಖನ ಓದಿ…

    ಮೊಟ್ಟಮೊದಲನೆಯದಾಗಿ ಕಿಟ್ಟೆಲ್ಲರು ಇಂದಿಗೂ ‘ಅವಿಸ್ಮರಣೀಯರಾಗಿರುವುದು’ ಅವರ ಕಿಟ್ಟೆಲ್ ಶಬ್ದಕೋಶದಿಂದ. ಸುಮಾರು ೨೦ ವರ್ಷಗಳಕಾಲ ಸತತವಾಗಿ ದುಡಿದಿದ್ದರ ಪರಿಣಾಮ – ಈ ಅಮರ ಕೃತಿಯ ನಿರ್ಮಾಣ. ಅವರು ೧೮೫೭ ರಲ್ಲಿ ಮೊದಲುಮಾಡಿ, ೧೮೯೩ ರಲ್ಲಿ ಹಸ್ತಪ್ರತಿ ತಯಾರಿಸಿದರು. ಅದನ್ನು ‘ಬಾಸೆಲ್ ಮಿಶನ್’ ನವರು ಪ್ರಕಟಿಸಿದರು.

  • ಸೌಂದರ್ಯ

    ಸೌತೆಕಾಯಿಯಲ್ಲಿದೆ ತೇವಾಂಶಭರಿತವಾದ ತ್ವಚೆಯ ಗುಟ್ಟು.! ತಿಳಿಯಲು ಈ ಲೇಖನ ಓದಿ..

    ಸೌತೆ ಕಾಯಿ ತೇವಾಂಶಭರಿತವಾದದ್ದು ಇದು ಎಲ್ಲಾರಿಗೂ ತಿಳಿದಿರುವ ವಿಷಯ. ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಹೆವಿಸುವುದು ಒಳ್ಳೆಯದು ಏಕೆಂದರೆ ಇದು ದೇಹದ ಉಷ್ಣಾಂಶವನ್ನ ಕಡಿಮೆ ಮಾಡುತ್ತದೆ. ಇದನ್ನ ಚಳಿಗಾಲದಲ್ಲಿ ತಿಂದರೆ ಶೀತವಾಗುತ್ತದೆ ಎಂದು ಎಲ್ಲರು ನಂಬುತ್ತಾರೆ, ಆದರೆ ಇದು ಚಳಿಗಾಲದಲ್ಲಿ ನಮ್ಮ ತ್ವಚೆಯಣ್ಣ ಕಾಪಾಡಿಕೊಳ್ಳಲು ಸಹಾಯಕವಾಗುತ್ತದೆ.

  • inspirational

    ಮಗನ ಟಿಕ್‌ಟಾಕ್ ಹುಚ್ಚು – ಸಾಸ್ ಚೆಲ್ಲಿ ಅಮ್ಮನಿಗೆ ಕಣ್ಣೀರು ಬರುವಂತೆ ಮಾಡಿದ ಪುತ್ರ..!

    ಟಿಕ್ ಟಾಕ್ ಮಾಡಲು ಹೋದ ಯುವಕನಿಗೆ ಮನೆಯವರು ಸಖತ್ ಗೂಸಾ ನೀಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಗುತ್ತಿದೆ. ಯುವಕನೊಬ್ಬ ಟಿಕ್ ಟಾಕ್ ಮಾಡಲು ನೆಲದ ಮೇಲೆ ಮಲಗಿ ರಕ್ತವಾಂತಿ ಮಾಡುವಂತೆ ನಟಿಸುತ್ತಿದ್ದನು. ಈ ವೇಳೆ ಸ್ಥಳಕ್ಕೆ ಬಂದ ತಾಯಿ ಮಗನ ಸ್ಥಿತಿನೋಡಿ ಗಾಬರಿಗೊಂಡು ಜೋರಾಗಿ ಕಿರುಚಾಡುತ್ತಾ ಮನೆಯ ಸದಸ್ಯರಿಗೆ ಕರೆಯಲು ಹೋಗುತ್ತಾರೆ. ಮಹಿಳೆ ಕಿರುಚಾಟದ ಶಬ್ದ ಕೇಳಿ ಮನೆಯವರು ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ನೆಲದ ಮೇಲೆ ಮಲಗಿಕೊಂಡು ನಟಿಸುತ್ತಿದ್ದ ಯುವಕ ನಗುತ್ತಾ ಎದ್ದುಕುಳಿತಿದ್ದಾನೆ. ಮಗನ…