ಸ್ಪೂರ್ತಿ

ಬಸ್ ನಲ್ಲಿ ಸಿಕ್ಕ ಒಂದು ಲಕ್ಷವನ್ನು ಕಂಡಕ್ಟರ್ ಮಾಡಿದ್ದೇನು ಗೊತ್ತಾ..?

251

ಅಚಾನಕ್ಕಾಗಿ ಯಾರಾದರೂ ದುಡ್ ಸಿಕ್ರೆ ಏನ್ ಮಾಡ್ತಾರೆ? ಕಿಸೆಗೆ ಹಾಕಿಕೊಂಡು ನಡೆದೇ ಬಿಡ್ತಾರೆ. ಆದರೆ ಇಲ್ಲೊಬ್ಬ ಕಂಡಕ್ಟರ್ ತನ್ನ ಬಸ್ ನಲ್ಲಿ ಸಿಕ್ಕ ಒಂದು ಲಕ್ಷ ರೂ. ಹಣವನ್ನು ಸಂಬಂಧಪಟ್ಟವರಿಗೆ ತಲುಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಸುಭದ್ರ ಎಂಬ ಪ್ರಯಾಣಿಕರು ಎಸ್ಟೀಂ ಮಾಲ್ ಬಳಿ ಬಸ್ ಇಳಿಯುವಾಗ ಹಣದ ಬ್ಯಾಗ್ ಮರೆತು ಬಸ್ ನಲ್ಲಿ ಬಿಟ್ಟು ಇಳಿದಿದ್ದರು.ಅನಾಥವಾಗಿ ಬಿದ್ದಿದ್ದ ಬ್ಯಾಗನ್ನು ಪರಿಶೀಲಿಸಿದ ಕಂಡಕ್ಟರ್ ಯಲ್ಲಪ್ಪ ಬೆಟಗೇರಿ, ಪರಿಶೀಲನೆ ನಡೆಸಿದಾಗ ಅದರಲ್ಲಿ ಹಣ ಇರುವುದು ಕಂಡುಬಂದಿದೆ.

ಅಷ್ಟರಲ್ಲಾಗಲೇ ಆತಂಕಗೊಂಡಿದ್ದ ಸುಭದ್ರ ಅವರು ಬಿಎಂಟಿಸಿ ಹೆಲ್ಪ್ ಡೆಸ್ಕ್ ಮೂಲಕ ಯಲ್ಲಪ್ಪ ಅವರ ಮೊಬೈಲ್ ಸಂಖ್ಯೆಯನ್ನು ಪಡೆದುಕೊಂಡರು. ಅಷ್ಟರಲ್ಲಾಗಲೇ ಬಸ್ ಸಾಕಷ್ಟು ದೂರ ಸಂಚರಿಸಿದ್ದು, ಹೀಗಾಗಿ ಯಲ್ಲಪ್ಪ ಅವರು ಮುಂದಿನ ನಿಲ್ದಾಣದಲ್ಲಿ ಬ್ಯಾಗ್ ಬಗ್ಗೆ ಮಾಹಿತಿ ನೀಡಿ ಪಡೆದುಕೊಳ್ಳುವಂತೆ ಸುಭದ್ರ ಅವರಿಗೆ ಸೂಚಿಸಿದರು.

ಬ್ಯಾಗ್ ನಲ್ಲಿದ್ದ ಆಧಾರ್ ಕಾರ್ಡ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಆಧಾರದಲ್ಲಿ ಸುಭದ್ರ ಅವರಿಗೆ ಯಲ್ಲಪ್ಪ ಬ್ಯಾಗ್ ಹಸ್ತಾಂತರಿಸಿದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ