ರೆಸಿಪಿ

ಚಳಿಗಾಲಕ್ಕೆ ಬಿಸಿ ಬಿಸಿ ಹಳ್ಳಿ ಶೈಲಿಯ ಚಿಕನ್ ಚಾಪ್ಸ್ ಮಾಡಿ ತಿನ್ನಿ.. ಮಾಡುವ ವಿಧಾನ ನೋಡಿ…

1444

ಈಗಂತೂ ಚಳಿಗಾಲ. ಏನಾದರೂ ಸ್ಪೈಸಿ ಸ್ಪೈಸಿ ತಿನ್ನಲೇ ಬೇಕು ಅನ್ನಿಸದೆ ಇರೋದಿಲ್ಲ. ಅದರಲ್ಲೂ ನಾನ್ವೆಜ್ ತಿನ್ನುವವರು ಚಿಕನ್ ನಲ್ಲಿ ವಿಧ ವಿಧವಾದ ಸ್ಪೈಸಿಯಾದ ಕಬಾಬ್, ಚಿಕನ್ ಫ್ರೈ ಮಾಡಿ ತಿನ್ನುತ್ತಾರೆ.
ಆದರೆ ಇನ್ನೂ ಏನಾದರೂ ಸ್ಪೆಷಲ್ ಮಾಡಬೇಕು ಎನ್ನಿಸಿದರೆ ಈ ಚಳಿಗಾಲದಲ್ಲಿ ಅದೂ ಹಳ್ಳಿ ಶೈಲಿಯಲ್ಲಿ ಚಿಕನ್ ಚಾಪ್ಸ್ ಮಾಡಿ ತಿನ್ನಿ.. ಆದರೆ ಮಾಡೋದು ಹೇಗೆ ಗೊತ್ತಿಲ್ಲ ಎಂದರೆ ಚಿಕನ್ ಚಾಪ್ಸ್ ಮಾಡುವ ವಿಧಾನ ಇಲ್ಲಿದೆ ನೋಡಿ…

ಚಿಕನ್ ಚಾಪ್ಸ್ ಮಾಡಲು ಬೇಕಾಗುವ ಸಾಮಾಗ್ರಿಗಳು

ಈರುಳ್ಳಿ – 1 ದಪ್ಪದ್ದು, ಪುದಿನ ಸೊಪ್ಪು – ಸ್ವಲ್ಪ, ಕೊತ್ತಂಬರಿ ಸೊಪ್ಪು – ಸ್ವಲ್ಪ
ತೆಂಗಿನ ತುರಿ – 2 ಚಮಚ, ಬೆಳ್ಳುಳ್ಳಿ – ಒಂದು ಗೆಡ್ಡೆ, ಹಸಿರು ಮೆಣಸಿನಕಾಯಿ – 3
ಶುಂಠಿ – ಸ್ವಲ್ಪ, ಚಕ್ಕೆ-ಲವಂಗ – 2-3, ಚಿಕನ್ – 1/2 ಕೆ.ಜಿ, ಎಣ್ಣೆ -3-4 ಚಮಚ
ಉಪ್ಪು ರುಚಿಗೆ ತಕ್ಕಷ್ಟು, ದನಿಯಾ ಪುಡಿ – 1 ಚಮಚ, ಮೆಣಸಿನ ಪುಡಿ – 1 ಚಮಚ
ಮೊದಲು ಮಸಲಾ ರುಬ್ಬಿಕೊಳ್ಳಿ. ತೆಂಗಿನ ತುರಿ, ಶುಂಠಿ, ಬೆಳ್ಳುಳ್ಳಿ, ಚಕ್ಕೆ, ಲವಂಗ್, ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಪುದಿನ ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಿ.(ತುಂಬಾ ನುಣ್ಣಗೆ ಬೇಡ ಸ್ವಲ್ಪ ತುರಿಯಾಗಿ ರುಬ್ಬಿಕೊಳ್ಳಿ).

ಮಾಡುವ ವಿಧಾನ ಹೇಗೆಂದು ತಿಳಿಯಿರಿ…

  • ಮೊದಲಿಗೆ ಚಿಕನ್ ಚೆನ್ನಾಗಿ ತೊಳೆದು ಚಿಟಿಕೆ ಅರಿಶಿಣ ಮತ್ತು ಚಿಟಿಕೆ ಉಪ್ಪನ್ನು ಹಾಕಿ ನೆನೆಸಿಡಿ.
  • ಈಗ ಒಂದು ಬಾಣಲಿಗೆ ಎಣ್ಣೆ ಹಾಕಿ, ಬಿಸಿಯಾದ ಬಳಿಕ 2 ಬೆಳ್ಳುಳ್ಳಿ ಮತ್ತು ಈರುಳ್ಳಿ ಹಾಕಿ ಫ್ರೈ ಮಾಡಿ.(ಸ್ಟವ್ ಮೀಡಿಯಮ್ ನಲ್ಲಿ ಇರಲಿ)
  • ಸ್ವಲ್ಪ ಈರುಳ್ಳಿ ಫ್ರೈ ಆದ ಮೇಲೆ ತೊಳೆದಿಟ್ಟಿದ್ದ ಚಿಕನ್, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚಿಕನ್ ಚೆನ್ನಾಗಿ ಫ್ರೈ ಮಾಡಿ.ಚಿಕನ್ ಹಾಕಿದ ನಂತರ ನೀರಿನಾಂಶ ಬಿಟ್ಟುಕೊಳ್ಳುತ್ತದೆ. ಆದ್ದರಿಂದ ನೀರು ಸಂಪೂರ್ಣವಾಗಿ ಪಂಗೋವರೆಗೂ (ನೀರಿನ ಅಂಶ ಕಡಿಮೆ ಆಗುವವರೆಗೆ) ಚಿಕನ್ ಫ್ರೈ ಮಾಡಿಕೊಳ್ಳಿ.
  • ಈ ನೀರು ಪಂಗಿದ ನಂತರ 1 ಚಮಚ ದನಿಯಾ ಪುಡಿ ಮತ್ತು 1 ಚಮಚ ಮೆಣಸಿನ ಪುಡಿ ಹಾಕಿ ಫ್ರೈ ಮಾಡಿ.
  • ರುಬ್ಬಿದ ಮಸಾಲೆ ಹಾಕಿ, ಸ್ವಲ್ಪ ನೀರು ಹಾಕಿ ಲಿಡ್ ಮುಚ್ಚಿ 10 ನಿಮಿಷ ಬೇಯಲು ಬಿಡಿ(ಆಗಾಗ ಲಿಡ್ ತೆಗೆದು ತಿರುಗಿಸುತ್ತೀರಿ)
  • ಈಗ ಸ್ಟವ್ ಆಫ್ ಮಾಡಿದರೆ ಚಿಕನ್ ಚಾಪ್ಸ್ ತಿನ್ನಲು ಸಿದ್ಧ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸಿನಿಮಾ

    ಹುಚ್ಚ ವೆಂಕಟ್ ಸ್ವಂತ ಹೊಸ ಪಕ್ಷ ಶುರು ಮಾಡ್ತಾರಂತೆ ,ನನ್ಮಗಂದ್ ಪ್ರಧಾನಿ ಆಗ್ತಾರಂತೆ..!ತಿಳಿಯಲು ಈ ಲೇಖನ ಓದಿ..

    ಚಿತ್ರ ನಟ ಹುಚ್ಚ ವೆಂಕಟ್ ತಮ್ಮ ಗುರಿಯನ್ನು ಬಹಿರಂಗ ಮಾಡಿದ್ದಾರೆ. “ನಾನೇ ರಾಜಕೀಯ ಪಕ್ಷವೊಂದನ್ನು ಆರಂಭಿಸುತ್ತೇನೆ. ಈ ದೇಶದ ಪ್ರಧಾನ ಮಂತ್ರಿ ಆಗ್ತೀನಿ” ಎಂದು ಹೇಳಿದ್ದಾರೆ ವೆಂಕಟ್.

  • ಜ್ಯೋತಿಷ್ಯ

    ಯುಗಾದಿ ಹೊಸ ವರ್ಷದ ಈ ದಿನ ನಿಮ್ಮ ರಾಶಿ ಭವಿಷ್ಯದ ಜೊತೆಗೆ ಅದೃಷ್ಟದ ಸಂಖ್ಯೆ ತಿಳಿಯಿರಿ

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(6 ಏಪ್ರಿಲ್, 2019) ಗಾಳಿಯಲ್ಲಿ ಮನೆ ಕಟ್ಟುವುದು ನಿಮಗೆ ಸಹಾಯ ಮಾಡಲಾರದು. ನೀವು ಕುಟುಂಬದ ನಿರೀಕ್ಷೆಗಳನ್ನು ಪೂರ್ಣಗೊಳಿಸಲು…

  • ಜ್ಯೋತಿಷ್ಯ

    ನರಸಿಂಹ ಸ್ವಾಮಿಯ ಕೃಪೆಯಿಂದ ಶುಭಯೋಗವಿದ್ದು ನಿಮ್ಮ ರಾಶಿಯೂ ಇದೆಯಾ ನೋಡಿ

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(9 ಮಾರ್ಚ್, 2019) ನೀವು ಪ್ರೀತಿಸುವವರಿಂದ ಉಡುಗೊರೆಗಳನ್ನು ಪಡೆಯಲು ಹಾಗೂ ನೀಡಲು ಪವಿತ್ರವಾದ ದಿನ. ಪ್ರೇಮ ಜೀವನ…

  • ಸುದ್ದಿ

    ಸದನದಲ್ಲಿ ಪತ್ನಿಯನ್ನು ಹೊಗಳಿ, ಸಾಮಾಜಿಕ ತಾಣಕ್ಕೆ ಛೀ ತೂ ಅಂದ ಎಚ್‌ಡಿ ಕುಮಾರಸ್ವಾಮಿ…!

    ಬೆಂಗಳೂರು: ಸಿಎಂ ಕುಮಾರಸ್ವಾಮಿ ಕಲಾಪದಲ್ಲಿ ಮಾಡಿದ ಭಾಷಣದಲ್ಲಿ ತಮ್ಮ ಪತ್ನಿ ಅನಿತಾ ಕುಮಾರಸ್ವಾಮಿ ಅವರನ್ನು ಹೊಗಳಿದ್ದಾರೆ. ಆಕೆ ಪ್ರತಿ ಹಂತದಲ್ಲೂ ನನ್ನ ಜತೆಯಲ್ಲಿದ್ದಾಳೆ ಎಂದು ಹೇಳಿದರು.  ಪತ್ನಿ ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ ಅವರನ್ನು ಉಸ್ತುವಾರಿ ಸಿಎಂ ಸದನದಲ್ಲಿ ಕೊಂಡಾಡಿದ್ದಾರೆ. ಇನ್ನೊಂದೆಡೆ ಸಾಮಾಜಿಕ ಜಾಲತಾಣಗಳ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲವಾಗಿದ್ದಾರೆ.  ವಿಶ್ವಾಸಮತ ಯಾಚನೆ ನಿರ್ಣಯದ ಚರ್ಚೆಗೆ ಉತ್ತರಿಸುವ ವೇಳೆ, ನಾನು ಉದ್ದೇಶ ಪೂರ್ವಕವಾಗಿ ರಾಜಕೀಯಕ್ಕೆ ಬಂದವನಲ್ಲ. ರಾಜಕೀಯದಲ್ಲಿ ಇರುವವರನ್ನು ನಾನು ಮದುವೆಯಾಗುವುದಿಲ್ಲ ಎಂದಿದ್ದಳು ನನ್ನ ಪತ್ನಿ. ಆದರೆ ಈಗ ಅವರೂ ನನ್ನ…

  • ಜ್ಯೋತಿಷ್ಯ

    ಮಂಗಳವಾರದ ನಿಮ್ಮ ರಾಶಿ ಭವಿಷ್ಯ ಮಂಗಳವಾಗಿದೆಯೇ ನೋಡಿ ತಿಳಿಯಿರಿ…ಶೇರ್ ಮಾಡಿ

    ಮಂಗಳವಾರ, 24/04/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ಅನಿರೀಕ್ಷಿತ ಸಂಚಾರ. ಹೂವು ವ್ಯಾಪಾರಿಗಳಿಗೆ ಲಾಭ.ನಿರುದ್ಯೋಗಿಗಳಿಗೆ ಶುಭವಾರ್ತೆ. ಬಂದುಗಳ ಆಗಮನ. ಜೀವನದಲ್ಲಿ ಹೆಚ್ಚು ಧನಾತ್ಮಕ ಬದಲಾವಣೆಗಳನ್ನು ಪಡೆಯುತ್ತೀರಿ. ವೃಷಭ:- ಮನೆಯಲ್ಲಿ ದೇವತಾಕಾರ್ಯಗಳು ನಡೆಯಲಿವೆ. ಮನೆಯವರ ಹಾಗೂ ಸ್ನೇಹಿತರ ಸಹಕಾರ ಇರಲಿದೆ. ಹಣಕಾಸಿನ ವಿಷಯದಲ್ಲಿ  ಜಾಗ್ರತೆ ಇರಲಿ.ನಿಮ್ಮ ಹಣದ ಖರ್ಚಿನ ಬಗ್ಗೆ ಜಾಗ್ರತೆ ಇರಲಿ. ದೀರ್ಘ ಪ್ರಯಾಣ ಅನುಕೂಲಕರವಾಗಿರುತ್ತದೆ.ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ. ಮಿಥುನ:– ವ್ಯಾಪಾರ, ವ್ಯವಹಾರಗಳಲ್ಲಿ ಅಧಿಕ ಆದಾಯ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ.ವೃತ್ತಿರಂಗದಲ್ಲಿ…

  • ಸಾಧನೆ

    ಒಂದು ಸಾಮಾನ್ಯ ಪುಟ್ಟ ಹಳ್ಳಿಯಿಂದ ಬಂದು ಕನಸನ್ನು ಕನಸಾಗಿ ಬಿಡದೆ ಸಾಧನೆ ಮಾಡಿದ ಮಹಿಳೆ!

    ಸಾಧಿಸುವವನಿಗೆ ಛಲ ಇದ್ರೆ ಖಂಡಿತ ಯಶಸ್ಸು ತನ್ನದಾಗಿಸಿ ಕೊಳ್ಳಬಹುದು ಹಾಗೂ ಅದಕ್ಕೆ ತಕ್ಕ ಪರಿಶ್ರಮ ಇದ್ರೆ ಖಂಡಿತ ಪ್ರತಿಫಲ ಸಿಕ್ಕೇ ಸಿಗುತ್ತದೆ ಅನ್ನೋದನ್ನ ಈ 23 ವಯಸ್ಸಿನ ಹೆಣ್ಣು ಮಗಳು ಸಾಧನೆ ಮಾಡಿ ತೋರಿಸಿದ್ದಾಳೆ. ಸಾಧನೆ ಅನ್ನೋದು ಬರಿ ಶ್ರೀಮಂತರಿಗೆ ಅಷ್ಟೇ ಅಲ್ಲ ಅನ್ನೋದನ್ನ ಕೂಡ ತೋರಿಸಿದ್ದಾಳೆ. ಈಕೆಯ ಸಾಧನೆಯ ದಾರಿ ಹೇಗಿತ್ತು ಹಾಗೂ ಇದರ ಇಂದಿನ ಪರಿಶ್ರಮ ಹೇಗಿತ್ತು ಅನ್ನೋದನ್ನ ಈ ಮೂಲಕ ತಿಳಿಸುತ್ತೇವೆ ಬನ್ನಿ. ಈಕೆಯ ಹೆಸರು ಅನುಪ್ರಿಯಾ ಲಾಕ್ರಾ ಎಂಬುದಾಗಿ ಒಬ್ಬ ಸಾಮಾನ್ಯ…